ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಅಂದ್ರೆ ಏನು? ವಿಶ್ವಕ್ಕೆ ಅದರ ಕೊಡುಗೆಯೇನು?

By Staff
|
Google Oneindia Kannada News


ಡಾ.ಕಲಾಂ ಈ ಮಾತನ್ನು ಹೇಳುತ್ತಿದ್ದರೆ ಜೋರಾದ ಚಪ್ಪಾಳೆ. ಒಂದು ವೇಳೆ ಈ ಮಾತನ್ನು ನಾವು ಇಲ್ಲಿ ಕೇಳಿಸಿಕೊಂಡಿದ್ದರೆ ನಮಗೆ ಅಂಥ ರೋಮಾಂಚನವಾಗುತ್ತಿರಲಿಲ್ಲ. ಆದರೆ ಐಸ್‌ಲ್ಯಾಂಡಿನ ವಿದ್ಯಾರ್ಥಿಗಳಿಗೆ ಭಾರತದ ಅಗಾಧತೆ, ವಿಸ್ತಾರ ಹೇಗೆ ಅರ್ಥವಾಗಬೇಕು? ಆ ದೇಶದ ಜನಸಂಖ್ಯೆಯೇ ಎರಡು ಲಕ್ಷ ತೊಂಬತ್ತು ಸಾವಿರ! ಒಂದು ಕುಮಟಾ, ಗೋಕಾಕ, ಬೀದರ್‌, ಕುಂದಾಪುರ, ಚಿಕ್ಕಮಗಳೂರು, ಸಾಗರ, ಗುಲ್ಬರ್ಗದಷ್ಟು ಜನಸಂಖ್ಯೆ ಇಡೀ ದೇಶದ್ದು. ಬೆಂಗಳೂರಿನ ಚಾಮರಾಜಪೇಟೆ ವಾರ್ಡೊಂದೇ ಸಾಕು, ಐಸ್‌ಲ್ಯಾಂಡಿನ ಜನಸಂಖ್ಯೆಯನ್ನು ಮೀರಿಸಲು. ಐಸ್‌ಲ್ಯಾಂಡಿನ ಅಧ್ಯಕ್ಷನಿಗಿಂತ ಚಾಮರಾಜಪೇಟೆ ವಾರ್ಡಿನ ಕಾರ್ಪೋರೇಟರ್‌ ಹೆಚ್ಚು ಜನರನ್ನು ಪ್ರತಿನಿಧಿಸುತ್ತಾನೆ. ಉತ್ತರಹಳ್ಳಿಯ ಶಾಸಕ ಐದು ಐಸ್‌ಲ್ಯಾಂಡ್‌ ಆಗುವಷ್ಟು ಜನರ ಪ್ರತಿನಿಧಿ. ಇಡೀ ಐಸ್‌ಲ್ಯಾಂಡಿನಲ್ಲಿ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಜಾತಿ, ಒಂದೇ ಉಡುಗೆ-ತೊಡುಗೆ, ಒಂದೇ ಸಂಸ್ಕೃತಿ. ತಮಾಷೆಯಲ್ಲ, ಇಂಥ ದೇಶವನ್ನು ನಮ್ಮೂರ ಗ್ರಾಮಪಂಚಾಯಿತಿ ಅಧ್ಯಕ್ಷನೂ ನಿಭಾಯಿಸಬಲ್ಲ. ಆ ರಾಷ್ಟ್ರದಲ್ಲಿ ಪೂರ್ತ ಲೆಕ್ಕ ಹಾಕಿದರೂ ರಾಜಕಾರಣಿಗಳ ಸಂಖ್ಯೆ ಮುನ್ನೂರನ್ನು ಮೀರುವುದಿಲ್ಲ. ನಮ್ಮ ದೇಶದ ಯಾವುದೇ ಊರಿಗೆ ಹೋದರೂ ಅಷ್ಟೊಂದು ನಾಯಕರು ಸಿಗುತ್ತಾರೆ. ಯುರೋಪಿನ ಯಾವುದೇ ದೇಶಕ್ಕೆ ಹೋಗಿ. ಅಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇದ್ದರೆ ಸ್ವಿಜರ್‌ಲೆಂಡ್‌ನ ಹಾಗಿರಬೇಕು ಅಂತೀವಲ್ಲ, ಅಂಥ ದೇಶದ ಜನಸಂಖ್ಯೆ 75ಲಕ್ಷ ದಾಟುವುದಿಲ್ಲ. ಹೆಚ್ಚೂ ಕಮ್ಮಿ ನಮ್ಮ ಬೆಂಗಳೂರಿನಷ್ಟು. ನಮ್ಮ ದೇಶದ ಒಂದು ನಗರದ ಜನಸಂಖ್ಯೆ ಅಲ್ಲಿನ ದೇಶಕ್ಕೆ ಸಮ. ಹೀಗಿರುವಾಗ ಅಂಥ ದೇಶವನ್ನು ನಿಭಾಯಿಸುವುದು ದೊಡ್ಡ ಮಾತಲ್ಲ. ಹೀಗಾಗಿ ಅಲ್ಲಿನ ರಸ್ತೆಗಳು ಸುಂದರವಾಗಿರುತ್ತವೆ, ಊರು ಸ್ವಚ್ಛವಾಗಿರುತ್ತದೆ. ಎಲ್ಲವೂ ಸುವ್ಯವಸ್ಥಿತ. ಅವುಗಳ ಮುಂದೆ ನಮ್ಮನ್ನು ಹೋಲಿಕೆ ಮಾಡಿಕೊಂಡು ನಮ್ಮದೂ ಒಂದು ದೇಶವಾ ಎಂದು ತೆಗಳುತ್ತೇವೆ. ನಮ್ಮ ಬಡ್ಗಿೇ ನಾವೇ ಅಸಹ್ಯಪಟ್ಟುಕೊಳ್ಳುತ್ತೇವೆ.

ಆದರೆ ಹೀಗೆ ಅಂದುಕೊಳ್ಳುವಾಗ ಭಾರತದ ಅಗಾಧತೆಯ ಭವ್ಯ ಸ್ವರೂಪ ನಮಗೆ ಅರ್ಥವೇ ಆಗುವುದಿಲ್ಲ. ನಮ್ಮ ದೇಶ ಸ್ವಿಜರ್‌ಲೆಂಡಿನಂತೆ, ಅಮೆರಿಕೆಯಂತೆ ಇಲ್ಲ ಎಂದು ವ್ಯಸನಪಟ್ಟುಕೊಳ್ಳುತ್ತೇವೆ. ಆಸಲಿ ಸಂಗತಿಯೆಂದರೆ ಆ ರಾಷ್ಟ್ರಗಳಂತೆ ಇರಲು ಸಾಧ್ಯವೇ ಇಲ್ಲ. ಸಿಂಗಾಪುರದಂಥ ಪುಟ್ಟ ದೇಶಕ್ಕಾಗೋದು ನಮ್ಮ ದೇಶಕ್ಕೇಕೆ ಆಗೋಲ್ಲ ಅಂತೇವೆ. ಆದರೆ ಸಿಂಗಾಪುರ ಒಂದು ದೇಶವೇ ಅಲ್ಲ. ಆತ್ಮವೇ ಇಲ್ಲದ, ಮನಸ್ಸೇ ಇಲ್ಲದ , ಕೇವಲ ಮೇಕಪ್‌ ಮಾಡಿಕೊಂಡು ನಿಂತ ಅಪ್ಸರೆ ಎಂಬ ಸತ್ಯ ಅಂಥವರಿಗೆ ಅರ್ಥವಾಗುವುದಿಲ್ಲ. ಸಿಂಗಾಪುರವೆನ್ನುವುದು ಯಾರೋ ನಾಲ್ಕು ಮಂದಿ ಸೇರಿ ಲ್ಯಾಬೊರೇಟರಿಯಲ್ಲಿ ಅಸ್ಥಿಪಂಜರಕ್ಕೆ ರಕ್ತ ಮಾಂಸ ಹೊಂದಿಸಿ, ಮೇಲೊಂದು ಸುಂದರ ಪೋಷಾಕು ತೊಡಿಸಿ ಅರಿವೆ ಅಂಗಡಿ ಮುಂದೆ ನಿಲ್ಲಿಸಿದ ಬೊಂಬೆಯೆಂಬುದು ಗೊತ್ತೆ ಆಗುವುದಿಲ್ಲ. ಅದನ್ನೇ ಅದ್ಭುತವೆಂದು ಕೊಳ್ಳುತ್ತೇವೆ. ನಮ್ಮನ್ನು ಕೀಳಾಗಿ ಭಾವಿಸಲಾರಂಭಿಸುತ್ತೇವೆ.

ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚೆಗೆ -ಖಜಛಿ ್ಕಜಿಠಛಿ ಚ್ಞಛ ಊಚ್ಝ್ಝ ಟ್ಛ ಈಛಿಞಟ್ಚ್ಟಚ್ಚಜಿಛಿಠ ಅ್ಟಟ್ಠ್ಞಛ ಠಿಜಛಿ ಎ್ಝಟಚಿಛಿ ಎಂಬ ಬಿಬಿಸಿ ಡಾಕ್ಯುಮೆಂಟರಿ ನೋಡುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆ ಆಚರಣೆಯಲ್ಲಿರುವ ದೇಶಗಳ ಪ್ರಮುಖ ನಾಯಕರ ಸಂದರ್ಶನ ಆಧರಿತ ಸಾಕ್ಷ್ಯಚಿತ್ರವದು. ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ನೆಲಕಚ್ಚಿದ್ದರೂ, ಮಿಲಿಟರಿ ಆಡಳಿತ ಜಾರಿಗೆ ಬಂದಿದ್ದರೂ, ಭಾರದಲ್ಲಿ ಮಾತ್ರ ಅದು ದಿನದಿಂದ ದಿನಕ್ಕೆ ಗಟ್ಟಿಗೊಳ್ಳುತ್ತಿದೆ. ಹತ್ತೊಂಬತ್ತು ತಿಂಗಳ ತುರ್ತು ಪರಿಸ್ಥಿತಿ ಅದೆಂಥ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿತ್ತೆಂದರೆ, ಮೊದಲಿನ ಪರಿಸ್ಥಿತಿ ಬಂದರೆ ಸಾಕು ಎನಿಸಿತು. ಈ ದೇಶದವನ್ನು ಹಿಡಿದಿಟ್ಟಿರುವುದು ಠಿಟ್ಝಛ್ಟಿಚ್ಞ್ಚಛಿ. ನಾವೆಲ್ಲ ಬೇರೆ ಮತ, ಅಭಿಮತ, ಧರ್ಮ ವಿಚಾರಗಳನ್ನು ಒಪ್ಪದಿರಬಹುದು. ಆದರೆ ಅದನ್ನು ಗೌರವಿಸುವ ಮನೋಭಾವ ಇಡೀ ದೇಶದಲ್ಲಿದೆ, ದೇಶವಾಸಿಗಳಲ್ಲಿದೆ.

ಹಿಂದೂ-ಮುಸ್ಲಿಂ ಸಾಮರಸ್ಯ ಭಾರದಲ್ಲಿರುವಷ್ಟು ನವಿರಾಗಿ ಬೇರೆ ಯಾವ ದೇಶಗಳಲ್ಲೂ ಕಾಣಲು ಸಾಧ್ಯವೇ ಇಲ್ಲ ಎಂದು ಜಾಗತೀಕರಣಕ್ಕೆ ಹೊಸ ಭಾಷ್ಯ ಬರೆದ ಖ್ಯಾತ ಪತ್ರಕರ್ತ ಥಾಮಸ್‌ ಫ್ರೀಡ್‌ಮನ್‌ ಹೇಳಿದ್ದಾನೆ. ಜಗತ್ತಿನಲ್ಲಿ ಮುಸ್ಲಿಮರೇ ಬಹುಸಂಖ್ಯಾತರಿರುವ ರಾಷ್ಟ್ರವೆಂದರೆ ಇಂಡೋನೇಷಿಯಾ. ಇದು ವಿಶ್ವದ ಮೂರನೆ ಅತಿದೊಡ್ಡ ಪ್ರಜಾಪ್ರಭುತ್ವವೂ ಹೌದು. ಈ ದೇಶವನ್ನಾಳಿದವರ ಹೆಸರುಗಳೆಲ್ಲ ಪರಿಚಿತ ಹಿಂದೂ ಪದಗಳೇ. ಪಾಕಿಸ್ತಾನದ ನಂತರ ಮುಸ್ಲಿಮರು ಹೆಚ್ಚಿರು ದೇಶ ಯಾವುದು ಇದ್ದಿರಬಹುದು? ಯೋಚಿಸಿ. ಸೌದಿ ಅರೇಬಿಯಾ? ಇಲ್ಲ. ಇರಾನ್‌? ಇಲ್ಲ ಇಲ್ಲ. ಈಜಿಪ್ಟ್‌ ಇದ್ದಿರಬಹುದಾ? ಉಹುಂ ಉಲ್ಲ. ಆಪ್ಘಾನಿಸ್ಥಾನ? ಉಹುಂ, ಅಲ್ಲವೇ ಅಲ್ಲ. ಹಾಗಾದರೆ ಮತ್ಯಾವ ದೇಶವಿದ್ದೀತು?

ಭಾರತ!

ನಮ್ಮ ದೇಶದ ಕೋಮುಸೌಹರ್ದದ ಮುಂದೆ ಯಾವ ದೇಶವಿದೆ? ರಾಜಕೀಯ ಕಾರಣಗಳಿಗಾಗಿ ಸಣ್ಣಪುಟ್ಟ ಕಲಹಗಳಾಗಬಹುದು. ಆದರೆ ಒಟ್ರಾಶಿ ಹೇಳುವುದಾರೆ, ನಮ್ಮದು ಪರಸ್ಪರ ವಿಶ್ವಾಸ, ಪ್ರೀತಿಯ ಬದುಕು. ಇಂಥ ಚ್ಚ್ಚಟಞಞಟಛಚಠಿಜಿಡಛಿ ಗುಣ ಭಾರತದಲ್ಲಿ ಮಾತ್ರ ಕಾಣಬಹುದೆಂದು ಫ್ರೀಡ್‌ಮನ್‌ ಹೇಳುತ್ತಾನೆ. 9/11 ದುರ್ಘಟನೆಗೆ ಮುಸ್ಲಿಂ ಭಯೋತ್ಪಾದಕರು ಕಾರಣರಿರಬಹುದು. ಆದರೆ ಅಲ್‌ಖಾಯಿದಾ ನಡೆಸುತ್ತಿರುವ ಭಯೋತ್ಪಾದನೆಯಲ್ಲಾಗಲಿ, ಇರಾನ್‌ನಲ್ಲಿನ ಜಿಹಾದ್‌ನಲ್ಲಾಗಲಿ ಯಾವುದೇ ಭಾರತೀಯ ಮುಸ್ಲಿಂ ಪಾಲ್ಗೊಂಡಿಲ್ಲವೆಂಬುದು ಗಮನಾರ್ಹ.

ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಭಯೋತ್ಪಾದಕರು, ನೀಚರು, ಸಮಾಜಘಾತುಕರು ಈ ದೇಶ, ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಇಂಥ ಎಲ್ಲ ಓರೆಕೋರೆ, ಅನಿ,್ಟಗಳನ್ನು ನುಂಗಿ ನೀರು ಕುಡಿದು ಏನೂ ಆಗಿಯೇ ಇಲ್ಲವೇನೋ ಎಂಬಂತೆ ಸುಮ್ಮನಿದ್ದುಬಿಡುವ ಜಾಯಮಾನ ನಮ್ಮದು.

ಯಾಕೆಂದರೆ ಈ ದೇಶದ ಮಣ್ಣಿನಲ್ಲಿಯೇ ಆ ಗುಣವಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X