ಸಾಡೇಸಾತಿ : ಶನಿರಾಜನ ಪೂಜಿಸುವುದು ಹೀಗೆ
ಶನಿರಾಜನು ಬೀರುವ ಪ್ರಭಾವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಶನಿದೇವನ ಪ್ರಕೋಪವನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಶನಿರಾಜನನ್ನು ಪೂಜಿಸುವುದರಿಂದ ಪಡೆದುಕೊಳ್ಳಬಹುದು. ಶನಿರಾಯನನ್ನು ಸಂಪ್ರೀತಿಗೊಳಿಸುವ ಪರಿಯನ್ನು ಪೇನ್ ಕಿಲ್ಲರ್‌ಗೆ ಹೋಲಿಸಬಹುದು. ದೇಹಕ್ಕೆ ನೋವಾದಾಗ ಪೇನ್ ಕಿಲ್ಲರ್ ತೆಗೆದುಕೊಂಡರೆ ನಮಗೆ ನೋವಿನ ಅನುಭವ ಗೊತ್ತಾಗಲ್ಲ. ಅದೇ ರೀತಿ ಮನಸಿಗೆ ನೋವಾಗಿದ್ದರೆ ಯಾವ ಪೇನ್ ಕಿಲ್ಲರ್ ತೆಗೆದುಕೊಳ್ಳಲು ಸಾಧ್ಯ? ಹೀಗಾಗಿ ಶನಿದೇವನ ಬಲವನ್ನು ಪಡೆದುಕೊಂಡಿದ್ದರೆ ಯಾವುದೇ ತರಹದ ನೋವಿದ್ದರೂ ಕಮ್ಮಿಯಾಗುತ್ತದೆ.
ಶನಿದೇವನನ್ನು ಸಂಪ್ರೀತಿ ಮಾಡಿಕೊಂಡಿರೆಂದರೆ, ದೊಡ್ಡ ಕಲ್ಲು ಮೈಮೇಲೆ ಬಿದ್ದರೂ ಹೂವು ಬಿದ್ದಂಗೆ ಭಾಸವಾಗುತ್ತದೆ! ಇದುವೇ ಶನಿ ಸಂಪ್ರೀತಿಯಿಂದಾಗುವ ಲಾಭ. ಅಷ್ಟಕ್ಕೂ ಜಾತಕದಲ್ಲಿನ ಭಾವ ಕುಂಡಲಿ ನೋಡಿದರೆ ಮಾತ್ರ ಶನಿದೇವನ ಸ್ಥಿತಿಗತಿ ಗೊತ್ತಾಗುತ್ತದೆ. ಜನ್ಮಜಾತಕದಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಭಾವ ಕುಂಡಲಿ ಮಾತ್ರ ನಿಖರವಾದ ಫಲಿತಾಂಶ ತಿಳಿಸುತ್ತದೆ.
ಇನ್ನು ಶನಿವಾರದಂದು ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ ಮತ್ತು ಎಳ್ಳೆಣ್ಣೆ ಬತ್ತಿ ಹಚ್ಚಬೇಕು. ಕೆಲವರು ತೆಂಗಿನಕಾಯಿ ಒಡೆಯುವುದು, ಊದಬತ್ತಿ ಹಚ್ಚುವುದು ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಇದ್ಯಾವುದು ಶನಿದೇವರಿಗೆ ಬೇಕಾಗಿಲ್ಲ. ಶನಿದೇವರ ದೇವಸ್ಥಾನಗಳು ಇಲ್ಲದಲ್ಲಿ ನವಗ್ರಹಗಳಲ್ಲಿರುವ ಶನಿದೇವರನ್ನು ಪೂಜಿಸಬೇಕು. ಕೆಲವರು ಶನಿದೇವರನ್ನು ಪೂಜಿಸಬಾರದು ಅಂತಾರೆ. ಹಾಗಾದರೆ ನವಗ್ರಹ ಪೂಜೆ ಮಾಡುವಾಗ ಕೂಡ ಅವರು ಶನಿದೇವರನ್ನು ಪೂಜಿಸಬಾರದು.

ಅಮವಾಸ್ಯೆ ದಿನದಂದು ಸಾಡೇಸಾತಿಯಲ್ಲಿನ ರಾಶಿಗಳವರು ತಪ್ಪಿಸದೇ ಈಶ್ವರನ ದೇವಸ್ಥಾನಕ್ಕೆ ಹೋಗಬೇಕು. ಏಕೆಂದರೆ ಶನಿದೇವನು ಈಶ್ವರನ ಪರಮ ಭಕ್ತ. ಜಗದೀಶ್ವರನ ದರ್ಶನದಿಂದ ಅಕಾಲಿಕ ಮರಣ, ಅಪಘಾತ ತಪ್ಪುತ್ತವೆ. ಈಶ್ವರನನ್ನೇ ಮರೆತರೆ ಶನೀಶ್ವರ ಗಂಟು ಬೀಳುತ್ತಾನೆ ಅಷ್ಟೆ.
ಶನೀಶ್ವರನನ್ನು ಸಾಮಾನ್ಯವಾಗಿ ಮನೆಯಲ್ಲಿ ಪೂಜಿಸುವುದಿಲ್ಲ. ಆದ್ದರಿಂದ ದೇವಸ್ಥಾನಗಳಲ್ಲಿಯೇ ಪೂಜಿಸಬೇಕಾಗುತ್ತದೆ. ಅಲ್ಲಿ ಪೂಜಿಸಲೆಂದೇ ಪಂಡಿತರು ಇರುತ್ತಾರೆ. ಆ ಸಮಯದಲ್ಲಿ ಎಳ್ಳೆಣ್ಣೆ ಅಭಿಷೇಕಕ್ಕೆ ಕೊಡಬೇಕು. ಅಭಿಷೇಕ ಮಾಡಿದ ಎಳ್ಳೆಣ್ಣೆಯನ್ನು ಪ್ರತಿ ಶನಿವಾರ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಕೈ-ಕಾಲು ನೋವಿದ್ದರೆ ಅಲ್ಲಿಗೂ ಹಚ್ಚಬೇಕು. ಪವಾಡ ಸದೃಶ ರೀತಿಯಲ್ಲಿ ನೋವು ಮಾಯವಾಗುತ್ತದೆ.
ಇನ್ನು ಶನಿದೇವನ ಕಾಡಾಟಕ್ಕೆ ಸೂಕ್ತವಾದ ಪರಿಹಾರ ತಿಳಿದುಕೊಳ್ಳದೆ ತಮಗೆ ತಿಳಿದಿದ್ದನ್ನೇ ಕೆಲವರು ಮಾಡುತ್ತಿರುತ್ತಾರೆ. ಇದೂ ಕೂಡ ಶನಿದೇವನನ್ನು ಉಗ್ರಗೊಳಿಸುತ್ತದೆ. ಆದ್ದರಿಂದ ಶನಿ ಕಾಡಾಟದಲ್ಲಿ ಜಾತಕ ಮೂಲಕ ಕರೆಕ್ಟ್ ಆಗಿರುವ ಪರಿಹಾರಗಳನ್ನು ತಿಳಿದುಕೊಳ್ಳಬೇಕು. ಕೆಲವರಿಗೆ ಶನಿದೇವರ ದೇವಸ್ಥಾನಕ್ಕೆ ಹೋಗಲೂ ಕೂಡ ಭಯ. ಇಂಥವರು ಗಣೇಶ, ಹನುಮನ ದೇವಸ್ಥಾನಕ್ಕೆ ಹೋಗಬಹುದು. ಆದರೆ ದೇವರಿಗೆ ಬೇಡಿಕೊಳ್ಳುವ ಪದ್ಧತಿ ಇದೆ. ಅದೇ ರೀತಿ ಬೇಕಾದ್ದನ್ನು ಪ್ರಾಮಾಣಿಕವಾಗಿ ದೇವರಲ್ಲಿ ಕೇಳಿಕೊಳ್ಳಬೇಕು.
ತಾಯಿಯೊಂದಿಗೆ ಮಕ್ಕಳು ಹಠ ಮಾಡುವ ತರಹ, ದೇವರಲ್ಲಿ ನಾವು ಹಠ ಮಾಡಬೇಕು. ಸತ್ಯವಂತ, ನ್ಯಾಯವಂತನಾಗಿರುವ ನನ್ನ ಸಮಸ್ಯೆಗಳನ್ನು ಪರಿಹಾರ ಮಾಡಲೇಬೇಕು ಎಂದು ದೇವರಲ್ಲಿ ಕೇಳಿಕೊಳ್ಳಬೇಕು. ಸತ್ಯವಂತ, ನ್ಯಾಯವಂತರಾಗಿದ್ದರೆ ಮಾತ್ರ ನಮಗೆ ಲಾಭ. ಇಲ್ಲವಾದರೆ ದೇವರ ಶಿಕ್ಷೆಯನ್ನು ಅನುಭವಿಸದೇ ವಿಧಿಯಿಲ್ಲ!
"ನಕ್ಷತ್ರಗಳಿಂದ ನಮ್ಮ ಭವಿಷ್ಯ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆಯ ಉತ್ತರ ಭಾಗಕ್ಕಿಂತ ದಕ್ಷಿಣದ ಭಾಗದಲ್ಲಿ ಸಸಿಗಳನ್ನು ನೆಡಬೇಕು.
ಶನಿದೇವನ ಕೃಪೆಗೆ : ಶನಿವಾರದಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications