ಅಮೃತ ಮಹೋತ್ಸವ ಯೋಜನೆ ಅನುಷ್ಠಾನಕ್ಕೆ ಸಚಿವರ ನೇಮಿಸಿ ಸಿಎಂ ಬೊಮ್ಮಾಯಿ ಆದೇಶ!

ಬೆಂಗಳೂರು, ಸೆ. 11: ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ ಆಯ್ಕೆ ಮಾಡಲು ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಆ. 15 ರಂದು ವಿವಿಧ ಹೊಸ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದರು. ಆ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ ಆಯ್ಕೆ ಮಾಡಲು ನಡೆಯುವ ಸಭೆಯ ಅಧ್ಯಕ್ಷರನ್ನಾಗಿ ಮಂತ್ರಗಳನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದಾರೆ.

ಜಿಲ್ಲೆಗಳಲ್ಲಿ ಕೋವಿಡ್ ಮತ್ತು ನೆರೆ ಪರಿಹಾರ ಉಸ್ತುವಾರಿಗಾಗಿ ನೇಮಕ ಮಾಡಿರುವ ಸಚಿವರಿಗೇ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿಯನ್ನೂ ಮುಖ್ಯಮಂತ್ರಿಗಳು ವಹಿಸಿದ್ದಾರೆ. ಅಂದು ಘೋಷಣೆ ಮಾಡಿದ್ದ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈಗಾಗಲೇ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಅನುಷ್ಠಾನಕ್ಕಾಗಿ ಮಂತ್ರಿಗಳಿಗೆ ಉಸ್ತುವಾರಿ ವಹಿಸಲಾಗಿದೆ. ಉಳಿದಂತೆ ಯೋಜನೆಗಳು ಹಾಗೂ ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಗಳು ಎಂಬ ಮಾಹಿತಿ ಮುಂದಿದೆ.

ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ?

ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ?

1. ಬೆಳಗಾವಿ - ಗೋವಿಂದ ಕಾರಜೋಳ

2. ಶಿವಮೊಗ್ಗ - ಕೆ.ಎಸ್. ಈಶ್ವರಪ್ಪ

3. ಬೆಂಗಳೂರು ನಗರ - ಆರ್. ಅಶೋಕ್

4. ಚಿತ್ರದುರ್ಗ - ಬಿ. ಶ್ರೀರಾಮುಲು

5. ರಾಯಚೂರು - ವಿ. ಸೋಮಣ್ಣ

6. ಬಾಗಲಕೋಟೆ - ಉಮೇಶ್ ಕತ್ತಿ

7. ದಕ್ಷಿಣ ಕನ್ನಡ - ಎಸ್. ಅಂಗಾರ

8. ತುಮಕೂರು - ಜೆ.ಸಿ. ಮಾಧುಸ್ವಾಮಿ

9. ಚಿಕ್ಕಮಗಳೂರು - ಆರಗ ಜ್ಞಾನೇಂದ್ರ

10. ರಾಮನಗರ - ಡಾ. ಸಿ. ಎನ್. ಅಶ್ವಥ್ ನಾರಾಯಣ

11. ಗದಗ - ಸಿ.ಸಿ. ಪಾಟೀಲ್

12. ಬಳ್ಳಾರಿ ಮತ್ತು ವಿಜಯನಗರ - ಆನಂದ್ ಸಿಂಗ್

13. ಕೊಡಗು - ಕೋಟ ಶ್ರೀನಿವಾಸ ಪೂಜಾರಿ

14. ಬೀದರ್ - ಪ್ರಭು ಚೌಹಾಣ್

15. ಕಲಬುರಗಿ - ಮುರುಗೇಶ ನಿರಾಣಿ

16. ಉತ್ತರ ಕನ್ನಡ - ಅರಬೈಲ್ ಶಿವರಾಮ್ ಹೆಬ್ಬಾರ್

17. ಮೈಸೂರು ಮತ್ತು ಚಾಮರಾಜನಗರ - ಎಸ್.ಟಿ. ಸೋಮಶೇಖರ್

18. ಹಾವೇರಿ - ಬಿ.ಸಿ. ಪಾಟೀಲ್

19. ದಾವಣಗೆರೆ - ಬಿ. ಎ. ಬಸವರಾಜು

20. ಚಿಕ್ಕಬಳ್ಳಾಪುರ - ಡಾ. ಕೆ. ಸುಧಾಕರ್

21. ಕೆ. ಹಾಸನ - ಗೋಪಾಲಯ್ಯ

22. ವಿಜಯಪುರ - ಶಶಿಕಲಾ ಜೊಲ್ಲೆ

23. ಬೆಂಗಳೂರು ಗ್ರಾಮಾಂತರ - ಎಂ. ಟಿ. ಬಿ. ನಾಗರಾಜು

24. ಮಂಡ್ಯ - ಡಾ. ಕೆ. ಸಿ. ನಾರಾಯಣಗೌಡ

25. ಯಾದಗಿರಿ - ಬಿ. ಸಿ. ನಾಗೇಶ್

26. ಉಡುಪಿ - ವಿ. ಸುನೀಲ್ ಕುಮಾರ್

27. ಕೊಪ್ಪಳ - ಹಾಲಪ್ಪ ಆಚಾರ್

28. ಧಾರವಾಡ - ಶಂಕರ ಪಾಟೀಲ್ ಮುನೇನಕೊಪ್ಪ

29. ಕೋಲಾರ - ಮುನಿರತ್ನ

ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಹೊಸ ಯೋಜನೆಗಳು ಮುಂದಿವೆ.

ಗ್ರಾಮೀಣ ಭಾಗಕ್ಕೆ ಘೋಷಣೆ ಮಾಡಿರುವ 'ಅಮೃತ ಯೋಜನೆ'ಗಳು

ಗ್ರಾಮೀಣ ಭಾಗಕ್ಕೆ ಘೋಷಣೆ ಮಾಡಿರುವ 'ಅಮೃತ ಯೋಜನೆ'ಗಳು

1. ಅಮೃತ ಗ್ರಾಮ ಪಂಚಾಯತಿಗಳು: ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್‌ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ ಅನುಷ್ಠಾನ.

2. ಅಮೃತ ಗ್ರಾಮೀಣ ವಸತಿ ಯೋಜನೆ: ಜೊತೆಗೆ ಮನೆಯಿಲ್ಲದವರಿಗೆ, ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಅನುಷ್ಠಾನ.

3. ಅಮೃತ ರೈತ ಉತ್ಪಾದಕ ಸಂಸ್ಥೆಗಳು: ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ, ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ.

4. ಅಮೃತ ನಿರ್ಮಲ ನಗರ: ನಗರ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ. ನಂತೆ 75 ಕೋಟಿ ರೂ. ಗಳನ್ನು ಒದಗಿಸುವ ಘೊಷಣೆ.

5. ಅಮೃತ ಶಾಲಾ ಸೌಲಭ್ಯ ಯೋಜನೆ: ಅಮೃತ ಶಾಲಾ ಯೋಜನೆಯಡಿ ನಾಡಿನ ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು.

6. ಅಮೃತ ಅಂಗನವಾಡಿ ಕೇಂದ್ರಗಳು: ಅಮೃತ ಅಂಗನವಾಡಿ ಕೇಂದ್ರಗಳು ಯೋಜನೆಯಡಿ ಅಂಗನವಾಡಿಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ. ನಂತೆ ಒಟ್ಟು 7.5 ಕೋಟಿ ರೂ. ಹಣ ವಿನಿಯೋಗಿಸಲಾಗುವುದು.

ಸಣ್ಣ ಉದ್ಯಮ ಆರಂಭಿಸಲು ಹೊಸ ಯೋಜನೆ!

ಸಣ್ಣ ಉದ್ಯಮ ಆರಂಭಿಸಲು ಹೊಸ ಯೋಜನೆ!

7. ಅಮೃತ ಸ್ವಸಹಾಯ ಕಿರು ಉದ್ದಿಮೆಗಳು: ಸಣ್ಣ ಉದ್ಯಮಗಳನ್ನು ಆರಂಭಿಸಲು ಅಮೃತ ಸ್ವಸಹಾಯ ಕಿರು ಉದ್ದಿಮೆಗಳು ಯೋಜನೆಯಡಿ ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ (Micro Enterprises) ರೂಪಿಸಲು ತಲಾ 1 ಲಕ್ಷ ರೂ. ನಂತೆ 75 ಕೋಟಿ ರೂ. ಬೀಜ ಧನವನ್ನು (ಸೀಡ್‌ಮನಿ) ಒದಗಿಸಲಾಗುವುದು.

8. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ: ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ ಆಯ್ದ 750 ರಚನಾತ್ಮಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ಸಾಮುದಾಯಿಕ ಪ್ರೇರೇಪಿಸಲಾಗುವುದು. ಈ ಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ತೊಡಗಿಸಿಕೊಂಡು ಸಮುದಾಯದ ಅಭಿವೃದ್ಧಿ ಮಾಡುವುದು ಗುರಿ.

ಕ್ರೀಡಾ ಕ್ಷೇತ್ರಕ್ಕೆ ಹೊಸ ಯೋಜನೆ!

ಕ್ರೀಡಾ ಕ್ಷೇತ್ರಕ್ಕೆ ಹೊಸ ಯೋಜನೆ!

9. ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ: ಕೊರೊನಾ ವೈರಸ್ ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಲು ಸಿಎಂ ಬೊಮ್ಮಾಯಿ ತೀರ್ಮಾನಿಸಿದ್ದಾರೆ. ಹೀಗಾಗಿ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಡಿ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ.

10. ಅಮೃತ ಕೌಶಲ್ಯ ತರಬೇತಿ ಯೋಜನೆ: ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಯನ್ನು 12 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ.

11. ಅಮೃತ ಕ್ರೀಡಾ ದತ್ತು ಯೋಜನೆ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಗಮನಾರ್ಹವಾದುದು. ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮರ್ಥ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ.

ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿರುವ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡಲು ಈಗ ಮಂತ್ರಿಗಳಿಗೆ ಉಸ್ತುವಾರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+