ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ!
ಕರ್ನಾಟಕ ರಾಜ್ಯ ಕಳೆದೊಂದು ವಾರದಿಂದ ಹಲವು ರಾಜಕೀಯ ತಲ್ಲಣಗಳಿಗೆ ಸಾಕ್ಷಿಯಾಗಿದೆ. ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಆದ್ಯ ಗುರಿ ಏನು ಎಂಬುದನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.
"ರೈತ ದೇಶದ ಬೆನ್ನೆಲುಬು ಮರೆಯದಿರಿ ನಾಯಕರೇ, ಅವರಿಗಾಗಿ ಚಿಂತಿಸಿ" ಎಂದು ಬಡ ರೈತನೊಬ್ಬ ಮುಖ್ಯಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿರುವ ಈ ಚಿತ್ರ, ದೇಶದ ಅಭಿವೃದ್ಧಿಯಲ್ಲಿ ರೈತನ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಸಮರ್ಥವಾಗಿ ತೋರಿಸಿಕೊಟ್ಟಿದೆ.
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.













Click it and Unblock the Notifications