ಕಾರ್ಟೂನ್ ಗೆ ಸರಕಾದ ರಾಹುಲ್ ರಿಯರ್ ವ್ಯೂ ಮಿರರ್ ಹೇಳಿಕೆ!
ಬೆಂಗಳೂರು, ಫೆಬ್ರವರಿ 13: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಂದೇ ಸಮೆನೆ ಟೀಕೆಯ ಸುರಿಮಳೆ ಸುರಿಸುತ್ತಿದ್ದಾರೆ. ತಮ್ಮ ಕರ್ನಾಟಕ ಪ್ರವಾಸವನ್ನು ಮೋದಿ ಕಾಲೆಳೆತಕ್ಕೆ ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕನ್ನಡಿಯಲ್ಲಿ ಹಿಂಬದಿಯ ವಾಹನ ನೋಡಿಕೊಂಡು ಗಾಡಿ ಓಡಿಸುತ್ತಾರೆ. ಆದರೆ ಸಿದ್ದರಾಮಯ್ಯ ಮುಂದೆ ನೋಡಿ ಗಾಡಿ ಓಡಿಸುತ್ತಾರೆ. ಅದಕ್ಕಾಗಿಯೇ ಕರ್ನಾಟಕ ಅಭಿವೃದ್ಧಿ ಹೊಂದಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕಾರ್ಟೂನಿಸ್ಟ್ ಗಳಿಗೆ ಒಳ್ಳೇ ಸರಕಾಗಿದೆ.
ಈ ಕುರಿತು ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಕಾರ್ಟೂನ್ ಅನ್ನು ನಿನ್ನೆ ತಾನೇ ಒನ್ ಇಂಡಿಯಾ ಪ್ರಕಟಿಸಿತ್ತು. ಇದೀಗ ಅವರದೇ ಮತ್ತೊಂದು ಕಾರ್ಟೂನ್ ನಿಮಗಾಗಿ ಇಲ್ಲಿದೆ.












Click it and Unblock the Notifications