ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಲ್ಲಿ ಗಲ್ಲಿಯಲ್ಲಿ ಬಳೆ ತೊಡಿಸುತ್ತಿದ್ದ ಬೆಳಗಾವಿ ಮಹಿಳೆಗೆ ಸೋಂಕು; ಜಿಲ್ಲಾಡಳಿತಕ್ಕೆ ಹೊಸ ಸವಾಲು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 4: ಪ್ರತಿ ದಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಬಳೆ ತೊಡಿಸುತ್ತಿದ್ದ 58 ವರ್ಷದ ಬಳೆಗಾರ ಮಹಿಳೆಗೂ ಕೊರೊನಾ ವೈರಸ್ ತಗಲಿದ್ದು, ಇದೀಗ ಈ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿ ಬಂದವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಸುಸ್ತಾಗಿ ಹೋಗಿದೆ.

ಬೆಳಗಾವಿ ನಗರ ಮಾಳಿ ಗಲ್ಲಿಯ 58 ವರ್ಷದ ಬಳೆಗಾರ ಮಹಿಳೆ ಪ್ರತಿ ದಿನ ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ 200ಕ್ಕೂ ಹೆಚ್ಚು ಮನೆಗಳ ಮಹಿಳೆಯರಿಗೆ ಬಳೆ ತೊಡಿಸಿದ್ದಾಳೆ ಎಂದು ತಿಳಿದುಬಂದಿದ್ದು, ಈ ಮಹಿಳೆಯ ಟ್ರಾವಲ್ ಹಿಸ್ಟರಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.

Coronavirus Positive Tested In Bangle Selling Woman In Belagavi

ಸೋಂಕು ತಗುಲಿರುವ ಈ ಮಹಿಳೆ ಸುತ್ತಾಡಿದ ಹಿನ್ನೆಲೆ ನೋಡಿ ಅಧಿಕಾರಿಗಳು ಯಾರನ್ನು ಕ್ವಾರಂಟೈನ್ ಮಾಡಬೇಕು ಎಲ್ಲಿ ಮಾಡಬೇಕು, ಈ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದಾದರೂ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಮಹಿಳೆಯಿಂದ ಬಳೆ ತೊಡಿಸಿಕೊಂಡ ನಗರದ ಮಹಿಳೆಯರಿಗೂ ಇದೀಗ ಆತಂಕ ಶುರುವಾಗಿದೆ.

ಬೆಳಗಾವಿ; ಕ್ವಾರಂಟೈನ್ ನಿಯಮ ಮುರಿದು ತಿರುಗಾಡಿದ 573 ಜನರ ವಿರುದ್ಧ ಕೇಸ್ಬೆಳಗಾವಿ; ಕ್ವಾರಂಟೈನ್ ನಿಯಮ ಮುರಿದು ತಿರುಗಾಡಿದ 573 ಜನರ ವಿರುದ್ಧ ಕೇಸ್

ಮೂವರು ಪೊಲೀಸರಿಗೂ ಸೋಂಕು; ನಿಪ್ಪಾಣಿಯ ಕುಗನೊಳ್ಳಿ, ರಾಯಬಾಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ ಮೂವರು ಪೊಲೀಸ್ ಪೇದೆಗಳಿಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಮೂವರನ್ನು ಐಸೊಲೇಟ್ ಮಾಡಲಾಗಿದೆ. ಸೋಂಕು ಪತ್ತೆಯಾದ ಮೂವರು ಡಿ ಆರ್ ಪೇದೆಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಕರ್ತವ್ಯ ನಿಭಾಯಿಸಿದ್ದು, ಬೆಳಗಾವಿ ನಗರದ ಪೊಲೀಸ್ ಹೆಡ್ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು.

ಈ ಮೂವರು ಪೊಲೀಸ್ ಪೇದೆಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪೊಲೀಸ್ ಹೆಡ್ ಕ್ವಾಟರ್ಸ ಪ್ರದೇಶದಲ್ಲೇ ಕ್ವಾರಂಟೈನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಲ್ಲಿಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

English summary
Woman who was selling bangles to houses tested coronavirus positive in belagavi today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X