ಕೊರಟಗೆರೆಯಲ್ಲಿ ಗೆಲುವು ಯಾರಿಗೆ? ಇದು ಟಾರೋ ಕಾರ್ಡ್ ಭವಿಷ್ಯ
Recommended Video

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಹೈವೊಲ್ಟೇಜ್ ಕ್ಷೇತ್ರಗಳಿವೆ. ಉದಾಹರಣೆಗೆ ಚಾಮುಂಡೇಶ್ವರಿ. ಅದೇ ರೀತಿ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭೆ ಕ್ಷೇತ್ರ. ಏಕೆಂದರೆ, ಈ ಬಾರಿ ಅಲ್ಲಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಕಳೆದ ಬಾರಿ ಇದೇ ಕ್ಷೇತ್ರದಿಂದ ಅವರು ಸೋತಿದ್ದರು.
ಪರಮೇಶ್ವರ ವಿರುದ್ಧ ಜಯ ಸಾಧಿಸಿ, ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದವರು ಜೆಡಿಎಸ್ ನ ಸುಧಾಕರ್ ಲಾಲ್. ಈ ಸಲ ಮತ್ತೆ ಅವರೇ ಪರಮೇಶ್ವರ್ ಗೆ ಎದುರಾಳಿ ಆಗಿದ್ದಾರೆ. ಹಾಗಿದ್ದರೆ ಪೈಪೋಟಿಯಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲ ಸಹಜ. ಅದಕ್ಕೆ ಟಾರೋ ಕಾರ್ಡ್ ಮೂಲಕ ಉತ್ತರ ಹೇಳುವ ಪ್ರಯತ್ನ ಇದು.

ಇದು ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರವಾಗಿ ಹೇಳುವ ಉದ್ದೇಶದಿಂದಲ್ಲ. ಟಾರೋ ಕಾರ್ಡ್ ನಲ್ಲಿ ಏನು ಬರುತ್ತದೋ ಅದನ್ನು ಹೇಳುವ ಪ್ರಯತ್ನ. ಈ ಸಲ ಕೂಡ ಡಾ.ಜಿ.ಪರಮೇಶ್ವರ್ ಅವರಿಗೆ ಈ ಕ್ಷೇತ್ರದಲ್ಲಿ ಹಿನ್ನಡೆ ಎಂಬುದೇ ಸೂಚಿಸುತ್ತಿದೆ. ಈ ಕ್ಷೇತ್ರದಲ್ಲಿ ಸುಧಾಕರ್ ಲಾಲ್ ಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಲಾಲ್ 72,229 ಮತಗಳನ್ನು ಪಡೆದು ವಿಜಯಿಯಾಗಿದ್ದರು. ಡಾ.ಜಿ.ಪರಮೇಶ್ವರ್ 54,074 ಮತಗಳನ್ನು ಪಡೆದಿದ್ದರು.












Click it and Unblock the Notifications