'ಆ ಮೂರು ಕ್ಷೇತ್ರ'ಗಳಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರು ಫೇವರಿಟ್?
Recommended Video

ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೂ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಯಾರಿಗೆ ಗೆಲುವು ಎಂಬುದು ಬಹು ಚರ್ಚಿತ ವಿಷಯ ಆಗಿದೆ. ಮಂಡ್ಯ ಆ ಪೈಕಿ ಮೊದಲ ಹೆಸರು. ಆ ನಂತರ ಹಾಸನ, ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿನ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ವಿಪರೀತವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸದ್ಯದ ಸ್ಥಿತಿಯಲ್ಲಿ ಅಥವಾ ಸನ್ನಿವೇಶದ ಆಧಾರದಲ್ಲಿ ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ಮೂರು ಪ್ರತಿಷ್ಠಿತ ಕ್ಷೇತ್ರದ ಬಗ್ಗೆ ಏನಾಗಬಹುದು ಎಂಬ ವಿಚಾರ ತೆರೆದಿಟ್ಟಿದ್ದಾರೆ. ಟಾರೋ ಕಾರ್ಡ್ ರೀಡಿಂಗ್ ಅನ್ನೋದು ಬಹಳ ಆಸಕ್ತಿಕರವಾದ ವಿಧಾನ. ಆ ಮೂಲಕ ಅವರು ಹೇಳಿರುವುದನ್ನು ನಿಮ್ಮೆದುರು ಇಡುತ್ತಿದ್ದೇವೆ.
ಮೊದಲಿಗೆ ಮಂಡ್ಯ. ಈ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ, ಜಿದ್ದಾಜಿದ್ದಿನ ಹೋರಾಟ ಆಗುತ್ತದೆ. ಮೇ ಇಪ್ಪತ್ಮೂರರ ಫಲಿತಾಂಶದ ದಿನವೇ ಅಂತಿಮವಾಗಿ ವಿಜೇತರು ಯಾರು ಎಂದು ಗೊತ್ತಾದರೆ ಅದು ಸುಮಲತಾ ಅವರಿಗೆ ಅನುಕೂಲಕರ ಸನ್ನಿವೇಶ ಇದೆ. ಒಂದು ವೇಳೆ ಫಲಿತಾಂಶ ಪ್ರಕಟ ಆಗುವುದು ಒಂದು ದಿನ ಮುಂದೆ ಹೋದರೂ ಯಾವುದಾದರೂ ಕಾರಣಕ್ಕೆ ಇಪ್ಪತ್ನಾಲ್ಕನೇ ತಾರೀಕಿನ ತನಕ ಹೋದರೆ ನಿಖಿಲ್ ಕುಮಾರಸ್ವಾಮಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ.

ಇನ್ನು ಹಾಸನದಲ್ಲಿ ಎಷ್ಟೇ ಪೈಪೋಟಿ ಕಂಡುಬಂದರೂ ತಕ್ಕಡಿ ಎ.ಮಂಜು ಅವರ ಪರವಾಗಿ ಹೆಚ್ಚು ವಾಲುತ್ತಿದೆ. ಈ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಎಷ್ಟೇ ಕಠಿಣ ಎನಿಸಬಹುದಾದರೂ ಎ.ಮಂಜುಗೆ ಸಾಧಕ ಆಗುವ ಅಂಶಗಳು ಹೆಚ್ಚಿವೆ ಎಂದು ಪ್ರಕಾಶ್ ದಳವಿ ಅಭಿಪ್ರಾಯ ಪಡುತ್ತಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಅದೇನೇ ಬಿಜೆಪಿ ಭದ್ರಕೋಟೆ ಅಂತ ಹೇಳಿದರೂ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಬಲಿಷ್ಠರಾಗುವ, ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಅನಿರೀಕ್ಷಿತ ಹಾಗೂ ಬಿಜೆಪಿ ಪಾಲಿಗೆ ಆಘಾತಕಾರಿ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಪ್ರಕಾಶ್ ದಳವಿ.












Click it and Unblock the Notifications