Weekly Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಅಧಿಕ ಧನಲಾಭ..ಎಲ್ಲೆಲ್ಲೂ ಸಂಭ್ರಮ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಭಾದ್ರಪದ ಮಾಸದ ಬಹುಳ ದ್ವಾದಶಿಯಿಂದ ಶರದ್ ಋತು ಆಶ್ವಯುಜ ಮಾಸದ ಶುಕ್ಲ ಚೌತಿಯವರೆಗೆ.

ಈ ವಾರದ ಚಂದ್ರನ ಸಂಚಾರ ಮಖಾ ನಕ್ಷತ್ರದಿಂದ ವಿಶಾಖದವರೆಗೆ.

ವಾರದ ವಿಶೇಷ- 03/10/2024 ರಿಂದ ಶರನ್ನವರಾತ್ರಿ ಆರಂಭ.

29/09/2024-05/10/2024ರ ವಾರ ಭವಿಷ್ಯ

Weekly Horoscope In Kannada From September 29 To October 05 2024

ಮೇಷ ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ಉಚ್ಛ ಬುಧನ ಜೊತೆ ಕೇತು ಸೂರ್ಯ ಸೇರಿ ಒಂದು ರಾಜ ಯೋಗವಾಗಿದೆ. ಇದು ನಿಮ್ಮ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ನಿಮ್ಮ ದಾರಿ ಸುಗಮ ಮಾಡಿಕೊಡುತ್ತದೆ. ಎರಡರಲ್ಲಿ ಗುರು, ಹನ್ನೊಂದನೇ ಮನೆಯಲ್ಲಿ ಶನಿ ಸಮಯ ಬಹಳ ಚೆನ್ನಾಗಿದೆ. ‌ಹೊಸ ಕೆಲಸ ಅರ್ಹರಿಗೆ ವಿವಾಹ ಪ್ರಾಪ್ತಿ ಮೊದಲಾದ ಶುಭಸಂಗತಿಗಳು ನಡೆಯುತ್ತದೆ.

Weekly Horoscope In Kannada From September 29 To October 05 2024

ವೃಷಭ ರಾಶಿಯ ವಾರ ಭವಿಷ್ಯ

ಐದನೇ ಮನೆಯಲ್ಲಿ ಬುಧ, ಕೇತು, ಸೂರ್ಯ ಸೇರಿ ಒಂದು ರಾಜ ಯೋಗ ಆಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಲಾಭ, ಅವರ ಉನ್ನತ ವ್ಯಾಸಂಗದ ಕನಸು ನನಸಾಗುತ್ತದೆ. ಸಂತಾನ ಕ್ಕೆ ಶುಭ. ನಿಂತು ಹೋದ ಕೆಲಸಗಳು ಚಾಲನೆ ಪಡೆದುಕೊಳ್ಳುತ್ತದೆ. ಲಾಭಸ್ಥಾನದಲ್ಲಿ ರಾಹು ಧನಲಾಭ ಕೊಡುತ್ತಾನೆ. ಮನಸ್ಸಿನಲ್ಲಿ ಕೆಲವು ಗೊಂದಲಗಳು ಇವೆ. ಎಲ್ಲವೂ ಕ್ರಮೇಣ ಪರಿಹಾರ ಕಾಣುತ್ತದೆ.

Weekly Horoscope In Kannada From September 29 To October 05 2024

ಮಿಥುನ ರಾಶಿಯ ವಾರ ಭವಿಷ್ಯ

ನಾಲ್ಕನೇ ಮನೆಯಲ್ಲಿ ಉಚ್ಛ ಬುಧ ಸೂರ್ಯ ಕೇತು ಸೇರಿ ಒಂದು ರಾಜಯೋಗವಾಗಿದೆ. ಇದರಿಂದ ತಾಯಿಗೆ ಒಳಿತು. ಸ್ಥಿರಾಸ್ತಿ ಕೊಳ್ಳಲೂ ಮಾರಾಟ ಮಾಡಲುಇದು ಶುಭ ಸಮಯ. ಐದನೇ ಮನೆಯಲ್ಲಿ ಶುಕ್ರ ಇರುವುದರಿಂದ ಹೆಣ್ಣು ಮಕ್ಕಳಿಗೆ ಒಳ್ಳೆಯದು. ವಸ್ತ್ರ ಆಭರಣ ಖರೀದಿ ಯೋಗ ಇದೆ. ಬಾಕಿಯಂತೆ ಕೆಲವು ವಿಷಯಗಳಲ್ಲಿ ನಿಧಾನ‌ಪ್ರಗತಿ. ವಿದ್ಯಾರ್ಥಿಗಳಿಗೆ ಶುಭವಿದೆ.

Weekly Horoscope In Kannada From September 29 To October 05 2024

ಕಟಕ ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ ಒಂದು ರಾಜಯೋಗವಾಗಿ ನಿಮಗೆ ಪರಾಕ್ರಮದಿಂದ ಯಾವ ಕೆಲಸ ಮಾಡಿದರೂ ಜಯಸಿಗುತ್ತದೆ. ಸಹೋದರರಿಗೆ ಒಳ್ಳೆಯದಾಗುತ್ತದೆ. ಸರ್ಕಾರದಿಂದ ಲಾಭ ಇದೆ. ನಾಲ್ಕನೇ ಮನೆಯಲ್ಲಿ ಶುಕ್ರ ಇರುವುದರಿಂದ ವಾಹನದಿಂದ ಲಾಭ ಇದೆ. ಹೊಸ ವಾಹನ ಖರೀದಿ ಯೋಗ ಇದೆ. ಗುರು ಲಾಭಸ್ಥಾನದಲ್ಲಿ ಇದ್ದು ಧನಲಾಭ ಕಾರ್ಯಲಾಭ ಕೊಡುತ್ತಾನೆ.

Weekly Horoscope In Kannada From September 29 To October 05 2024

ಸಿಂಹ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಉಚ್ಚ ಬುಧ ಸೂರ್ಯ ಕೇತುವಿನೊಡನೆ ಇದ್ದಾನೆ. ‌ಧನಲಾಭ ಇದೆ. ಕುಟುಂಬದಲ್ಲಿ ಹರ್ಷದ ವಾತಾವರಣ ಇರುತ್ತದೆ. ಏಳರಲ್ಲಿ ಶನಿ ಹಾಗೂ ಹತ್ತರಲ್ಲಿ ಗುರು ಕೊಂಚ ಒತ್ತಡವನ್ನು ಕೊಡುತ್ತಾರೆ. ಹನ್ನೊಂದರಲ್ಲಿ ಇರುವ ಕುಜನಿಂದ ಭೂಮಿ‌ಲಾಭ ಇದೆ. ಮೂರಲ್ಲಿ ಶುಕ್ರಕೂಡ ನಿಮಗೆ ಒಳಿತನ್ನು‌ ಮಾಡುತ್ತಾನೆ. ಶುಭವೂ ಇದೆ. ಒತ್ತಡಗಳೂ ಇವೆ. ನಿಮ್ಮ ವಿವೇಚನೆಗೆ ಬಿಟ್ಟಿದ್ದು.

Weekly Horoscope In Kannada From September 29 To October 05 2024

ಕನ್ಯಾ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಉಚ್ಛ ಬುಧ ಇದ್ದು ನಿಮಗೆ ವೈಯುಕ್ತಿಕ ವಾಗಿ ಹಾಗೂ ವೃತ್ತಿ ರೀತಿಯಾಗಿ ಬಹಳ ಲಾಭ ಕೊಡುತ್ತಾನೆ. ಎರಡನೇ ಮನೆಯಲ್ಲಿ ಶುಕ್ರ ಸಹ ಧನಲಾಭ ಕೊಡುತ್ತಾನೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯ.‌ ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಎಲ್ಲೆಲ್ಲೂ ಸಂತೋಷವೇ ಎಲ್ಲೆಲ್ಲೂ ಸಂಭ್ರಮವೇ ತುಂಬಿರುತ್ತದೆ. ದೈವ ಕಾರ್ಯ ಧರ್ಮ ಕಾರ್ಯ ಮಾಡುವಿರಿ.

Weekly Horoscope In Kannada From September 29 To October 05 2024

ತುಲಾ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಶುಕ್ರ ಇದ್ದು ಅಷ್ಟಮ ಶನಿಯಿಂದ ಕೊಂಚ ಮಟ್ಟಿಗೆ ತಂಪು ಕೊಡುತ್ತಾನೆ. ಆರನೇ ಮನೆಯಲ್ಲಿ ರಾಹು ಇದ್ದು ಧನಲಾಭ ಕೊಡುತ್ತಾನೆ. ‌ಪಂಚಮ ಶನಿಯ ಪ್ರಭಾವವೂ ಈಗ ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಸೂಚನೆ ಸಿಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಖರ್ಚು ಚಿಂತೆ ಕಡಿಮೆಯಾಗುತ್ತದೆ.

Weekly Horoscope In Kannada From September 29 To October 05 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಏಳರಲ್ಲಿ ಗುರು ಹನ್ನೊಂದರಲ್ಲಿ ಉಚ್ಛ ಬುಧ ಸೂರ್ಯ ಕೇತು ಸಮಯ ಬಹಳ ಚೆನ್ನಾಗಿದೆ. ಧನಲಾಭ ಹೇರಳವಾಗಿವೆ. ನೀವು ಅಂದುಕೊಂಡ ಕೆಲಸಗಳನ್ನು ನಿಶ್ಚಿಂತೆಯಿಂದ ನೆರವೇರಿಸಬಹುದು. ಯಾವುದೇ ಅಡೆತಡೆ ಇರುವುದಿಲ್ಲ. ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುತ್ತೀರಿ. ಮಕ್ಕಳಿಂದ ವಿರೋಧ ಇದೆ. ಸರ್ಕಾರದ ಕೆಲಸಗಳು ಸಲೀಸಾಗಿ ನೆರವೇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ‌ಇದೆ.

Weekly Horoscope In Kannada From September 29 To October 05 2024

ಧನಸ್ಸು ರಾಶಿಯ ವಾರ ಭವಿಷ್ಯ

ಮಾನಸಿಕ ಒತ್ತಡಗಳು ಹೆಚ್ಚು ಇರುತ್ತದೆ. ಯಾವುದೋ ಎಂದೋ ಮಾಡಿದ ಕೆಲಸಗಳ ತಪ್ಪು ಒಪ್ಪುಗಳು ನಿಮ್ಮನ್ನು ಈಗ ಕಾಡಬಹುದು. ತಾಯಿಯ ವಿರೋಧ ಎದುರಿಸುತ್ತೀರಿ. ‌ಅಥವಾ ನಿಮ್ಮ ಬಗ್ಗೆ ತಾಯಿಗೆ ಬೇಸರವಿರುತ್ತದೆ. ನಿಮಗೂ ಕೋಪ ಹೆಚ್ಚು ಹೀಗಾಗಿ ಎಲ್ಲರೊಡನೆ ಮಾತಿನ ಚಕಮಕಿ ಆಗುತ್ತದೆ ಅಂತಿಮವಾಗಿ ನಿಮಗೇ ಕೆಟ್ಟ ಹೆಸರು. ಹಾಗಾಗಿ ಸಹನೆಯಿಂದ ಇರಿ. ಹತ್ತನೇ ಮನೆಯಲ್ಲಿ ಉಚ್ಚ ಬುಧ ಸೂರ್ಯ ಇದ್ದು ವೃತ್ತಿಯಲ್ಲಿ ಅಭಿವೃದ್ಧಿಯನ್ನು ತೋರಿಸುತ್ತದೆ. ಲಾಭ ಸ್ಥಾನದಲ್ಲಿ ಶುಕ್ರ ಇದ್ದು ಅಲಂಕಾರಿಕ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ ಇದೆ. ಹಣದ ಹರಿವು ಉತ್ತಮವಾಗಿದೆ.

Weekly Horoscope In Kannada From September 29 To October 05 2024

ಮಕರ ರಾಶಿಯ ವಾರ ಭವಿಷ್ಯ

ನಿಮಗೆ ಈಗ ಉತ್ತಮ ಗುರುಬಲವೂ ಇದ್ದು, ರಾಹುಬಲವೂ ಚೆನ್ನಾಗಿ ಇದೆ. ರಾಹು ಬಲ ಇರುವುದರಿಂದ ನೀವು ಪ್ರಯತ್ನ ಪಟ್ಟ ಕೆಲಸಗಳು ಪರಾಕ್ರಮದಿಂದ ಯಶಸ್ಸು ಸಾಧಿಸುತ್ತದೆ. ಗುರುಬಲ ಇರುವುದರಿಂದ ದೇವರ ಗುರುಗಳ ಅನುಗ್ರಹವೂ ಸಿಗುತ್ತದೆ. ಸಾಡೆಸಾತಿ ಶನಿಯ ಪ್ರಭಾವ ಕೂಡ ಬಹಳಷ್ಟು ಕಡಿಮೆಯಾಗಿ ನಿಮಗೆ ಸದ್ಯದಲ್ಲೇ ನಿರಾಳತೆ ಸಿಗಲಿದೆ. ಜೀವನದಲ್ಲಿ ಅನಿರೀಕ್ಷಿತ ಶುಭಸುದ್ದಿ ಎದುರಾಗಲಿದೆ. ಒಳ್ಳೆಯ ತಿರುವು ಸಿಗಲಿದೆ. ಹಣದ ಹರಿವು ಉತ್ತಮಗೊಳ್ಳಲಿದೆ.

Weekly Horoscope In Kannada From September 29 To October 05 2024

ಕುಂಭ ರಾಶಿಯ ವಾರ ಭವಿಷ್ಯ

ಈಗ ನೀವು ಸಾಡೆಸಾತಿಯ ಮಧ್ಯಭಾಗದಲ್ಲಿ ಇದ್ದೀರಿ. ಪ್ರಭಾವ ಜೋರಾಗಿರುತ್ತದೆ. ಅವಮಾನ, ಅಗೌರವ, ನಿಮ್ಮ ಜನರಿಂದಲೇ ನಿಮಗೆ ಪಿತೂರಿ, ಮನಸ್ಸಿಗೆ ಆಘಾತ ಮುಂತಾದ ಮಾನಸಿಕ ಸಂಕಟಗಳು ಇರುತ್ತದೆ. ಹಣಕಾಸಿನ ಒತ್ತಡವೂ ಇರುತ್ತದೆ. ವೃತ್ತಿಯಲ್ಲಿ ಏಳುಬೀಳುಗಳು ಇದ್ದೇಇದೆ. ಅಧಿಕಾರ ಪದವಿಯನ್ನು ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ. ಇನ್ನೂ ಎರಡು ವರ್ಷ ಇದೇ ರೀತಿ‌ಇದೆ.‌ ವೃಥಾ ಅಲೆದಾಟ ಕೋರ್ಟು ಕಚೇರಿ ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಸಹನೆಯಿಂದ ಯೋಚಿಸಿ ಮುಂದುವರೆಯಿರಿ.

Weekly Horoscope In Kannada From September 29 To October 05 2024

ಮೀನ ರಾಶಿಯ ವಾರ ಭವಿಷ್ಯ

ಏಳನೇ ಮನೆಯಲ್ಲಿ ಉಚ್ಛ ಬುಧ ಸೂರ್ಯ ಕೇತುವಿನೊಂದಿಗೆ ಇದ್ದಾರೆ. ಸಂಗಾತಿಗೆ ಶುಭಫಲಗಳು ಸಿಗುತ್ತದೆ. ಎಂಟನೇ ಮನೆಯಲ್ಲಿ ಶುಕ್ರ ಸಹ ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಆರೋಗ್ಯದ ಮೇಲೆ ಗಮನ ಇರಲಿ. ಮೈಕೈ ನವೆ ತುರಿಕೆ ಹಾವು ಕನಸಲ್ಲಿ ಬರುವುದು ಈ ರೀತಿ ಇರುತ್ತದೆ. ಸುಬ್ರಮಣ್ಯ ದೇವರಿಗೆ ಹಾಲಿನ ಅಭಿಷೇಕ ಮಾಡಿಸಿ. ದತ್ತಾತ್ತೇಯನ‌ ದರ್ಶನ ಮಾಡಿ. ಇನ್ನೂ ಎರಡು ವರ್ಷ ನಿಮಗೆ ಜೀವನದಲ್ಲಿ ಏರುಪೇರು ಇರುತ್ತದೆ. ಸಹನೆ ಬೆಳೆಸಿಕೊಳ್ಳಿ.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+