ಮುಖ್ಯ ದ್ವಾರದಲ್ಲಿ ಇದೊಂದು ವಸ್ತು ಇಟ್ಟರೆ ಮನೆಯೊಳಗೆ ಸದಾ ನೆಲೆಸುತ್ತಾಳೆ ಲಕ್ಷ್ಮೀ, ಹಣದ ತೊಂದರೆ ಇರುವುದೇ ಇಲ್ಲ
ಮನೆಯ ಪ್ರವೇಶ ದ್ವಾರ ಅಂದರೆ ಅದು ಕೇವಲ ಒಂದು ಬಾಗಿಲು ಅಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಶಕ್ತಿಯ ಮುಖ್ಯ ಪ್ರವೇಶ ಬಿಂದುವಾಗಿದೆ. ಪ್ರವೇಶ ದ್ವಾರ ಸರಿಯಾಗಿದ್ದರೆ ಮನೆಯಲ್ಲಿ ಶಾಂತಿ ಇದ್ದು ಮನೆಯವರ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ. ಇದು ಆರ್ಥಿಕ ಸ್ಥಿರತೆಯನ್ನು ಸುಧಾರಿಸಲು ಕೂಡಾ ಸಹಾಯ ಮಾಡುತ್ತದೆ. ಅನೇಕ ಮನೆಮಾಲೀಕರು ಈಗ ವಿನ್ಯಾಸ ಅಥವಾ ನವೀಕರಣದ ಸಮಯದಲ್ಲಿ ಮನೆ ಪ್ರವೇಶದ ವಾಸ್ತುವಿನ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ. ಇಲ್ಲಿ ಸಣ್ಣ ಬದಲಾವಣೆಯಾದರೂ ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮವನ್ನೇ ಬೀರಬಹುದು.
1. ಮುಖ್ಯ ಬಾಗಿಲು ಈ ದಿಕ್ಕಿಗೆ ಇದ್ದರೆ ಉತ್ತಮ:
ವಾಸ್ತುವಿನ ಪ್ರಮುಖ ನಿಯಮದ ಪ್ರಕಾರ ಮುಖ್ಯ ದ್ವಾರದ ದಿಕ್ಕು ಬಹಳ ಮುಖ್ಯ. ಮನೆಯ ಮೇನ್ ಡೋರ್ ಈಶಾನ್ಯ, ಉತ್ತರ ಮತ್ತು ಪೂರ್ವಕ್ಕಿದ್ದರೆ ಶುಭ. ಈ ದಿಕ್ಕುಗಳು ಸಕಾರಾತ್ಮಕ ಶಕ್ತಿ ಮತ್ತು ಸೂರ್ಯನ ಬೆಳಕನ್ನು ಪ್ರವೇಶಿಸಲು ಅವಕಾಶ ನೀಡುತ್ತವೆ. ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಶಾಂತಿ, ಸಂಪತ್ತು ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಆಕರ್ಷಿಸುತ್ತದೆ. ಉತ್ತರವು ಸಮೃದ್ಧಿಯನ್ನು ಬೆಂಬಲಿಸುತ್ತದೆ. ಪೂರ್ವವು ಆರೋಗ್ಯ ಮತ್ತು ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಪ್ರವೇಶ ದ್ವಾರ ಸ್ವಚ್ಛವಾಗಿರಬೇಕು:
ಮನೆಯ ಪ್ರವೇಶ ದ್ವಾರ ಎಷ್ಟು ಶುಚಿಯಾಗಿರುವುದೋ ಮನೆಯೊಳಗೆ ಅಷ್ಟು ಪಾಸಿಟಿವಿಟಿ ಹರಿದಾಡುತ್ತದೆ. ಮನೆಯ ಬಾಗಿಲ ಬಳಿ ಚಪ್ಪಲಿ, ಶೂ, ಹಳೆಯ ಚೀಲಗಳು ಮತ್ತು ಬಾಕ್ಸ್ಗಳನ್ನು ಇಡಬಾರದು. ಈ ಜಾಗ ಯಾವಾಗಲೂ ಸ್ವಚ್ಛವಾಗಿರಬೇಕು. ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ ಮನೆಯ ಮುಖ್ಯ ದ್ವಾರದ ಗುಡಿಸಿ ಕಸ ಕಡ್ಡಿ ಇರದಂತೆ ನೋಡಿಕೊಳ್ಳಬೇಕು. ಈ ಜಾಗವನ್ನು ಎಷ್ಟು ಅಚ್ಚುಕಟ್ಟಾಗಿ ಇಡುತ್ತಿರೋ ಅಷ್ಟು ಶಾಂತಿ, ನೆಮ್ಮದಿ, ನಿಮ್ಮದಾಗುತ್ತದೆ ಎನ್ನುವುದು ನಂಬಿಕೆ.
3. ಸರಿಯಾದ ಬಣ್ಣಗಳ ಆಯ್ಕೆ:
ವಾಸ್ತುವಿನಲ್ಲಿ ಮುಖ್ಯ ದ್ವಾರದ ಬಣ್ಣವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಬೀಜ್, ಕ್ರೀಮ್, ತಿಳಿ ಹಳದಿ ಮತ್ತು ವುಡನ್ ಟೋನ್ಗಳಂತಹ ಮೃದು ಮತ್ತು ತಿಳಿ ಬಣ್ಣಗಳು ಹೆಚ್ಚು ಸೂಕ್ತವಾಗಿವೆ. ಈ ಬಣ್ಣಗಳು ಸಾಮರಸ್ಯ ಮತ್ತು ಶಾಂತಿಯನ್ನು ಆಕರ್ಷಿಸುತ್ತವೆ. ಪ್ರವೇಶದ್ವಾರದಲ್ಲಿ ಕಪ್ಪು ಅಥವಾ ಆಳವಾದ ಕಂದು ಬಣ್ಣಗಳಂತಹ ಗಾಢ ಬಣ್ಣಗಳನ್ನು ಬಳಸಬಾರದು.
4. ಪ್ರವೇಶದ್ವಾರದಲ್ಲಿ ಉತ್ತಮ ಬೆಳಕು:
ಉತ್ತಮ ಬೆಳಕನ್ನು ಹೊಂದಿರುವ ಪ್ರವೇಶ ದ್ವಾರವು ಹೊಳಪು ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಪ್ರವೇಶ ದ್ವಾರವು ಹಗಲಿನಲ್ಲಿ ನೈಸರ್ಗಿಕ ಸೂರ್ಯನ ಬೆಳಕನ್ನು ಮತ್ತು ಸಂಜೆ ದೀಪದ ಬೆಳಕನ್ನು ಹೊಂದಿರುವಂತೆ ನೋಡಿಕೊಳ್ಳಿ. ಮುಖ್ಯ ದ್ವಾರದಲ್ಲಿ ಬೆಳಕು ಸರಿಯಾಗಿ ಇಲ್ಲ ಎಂದಾದರೆ ಅದು ಅವಕಾಶಗಳನ್ನು ನಿರ್ಬಂಧಿಸುತ್ತದೆ. ರಾತ್ರಿ ದೀಪಗಳು ಅಥವಾ ಬಾಗಿಲಿನ ಬಳಿ ಇಡುವ ದೀಪಗಳು ಸಹ ಪಾಸಿಟಿವ್ ವೈಬ್ಗಳನ್ನು ಆಹ್ವಾನಿಸಬಹುದು. ಇನ್ನು ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಲಾಟೀನುಗಳನ್ನು ನೇತುಹಾಕಿದರೂ ಒಳ್ಳೆಯದು.
5. ಶುಭ ಚಿಹ್ನೆಗಳು ಮತ್ತು ಅಲಂಕಾರ:
ವಾಸ್ತು ಪ್ರಕಾರ, ಮನೆ ಬಾಗಿಲಿನ ಬಳಿ ಆಧ್ಯಾತ್ಮಿಕ ಚಿಹ್ನೆಗಳನ್ನು ಇಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಕಾರಾತ್ಮಕತೆಯನ್ನು ದೂರ ಮಾಡಲು ಮುಖ್ಯ ದ್ವಾರದ ಸುತ್ತಲೂ ಓಂ, ಸ್ವಸ್ತಿಕ ಚಿಹ್ನೆಗಳನ್ನು ಬಳಸಬಹುದು. ಇನ್ನು ತೋರಣ ಅಥವಾ ಹೂವುಗಳನ್ನು ಬಳಸಬಹುದು. ಈ ವಸ್ತುಗಳು ಮನೆಯೊಳಗೆ ಪಾಸಿಟಿವಿಟಿ ನೆಲೆಯಾಗಿರುವಂತೆ ಮಾಡುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರುವಂತೆ ನೋಡಿಕೊಳ್ಳುತ್ತದೆ.
6. ಸಸ್ಯಗಳು ಮತ್ತು ಹಸಿರು:
ಪ್ರವೇಶ ದ್ವಾರದ ಬಳಿ ಇರುವ ಹಸಿರು ಸಸ್ಯಗಳು ವಾಸ್ತುವಿಗೆ ಉತ್ತಮವಾಗಿವೆ. ಪವಿತ್ರ ತುಳಸಿ, ಮನಿ ಪ್ಲಾಂಟ್ ಮತ್ತು ಬಿದಿರಿನಂತಹ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸಲು ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತವೆ. ಆದರೆ ಈ ಸಸ್ಯಗಳು ಉತ್ತಮ ಸ್ಥಿತಿಯಲ್ಲಿರಬೇಕು. ಮುಳ್ಳುಗಳನ್ನು ಹೊಂದಿರುವ ಗಿಡಗಳನ್ನು ಒಂಗಿ ಹೀಗಿರುವ ಗಿಡಗಳನ್ನು ಮನೆಯ ಬಾಗಿಲ ಬಳಿ ಇಡಲು ಹೋಗಬೇಡಿ. ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು .
7. ಬಾಗಿಲಿನ ಶೈಲಿ:
ಮುಖ್ಯ ಬಾಗಿಲು ಒಳಮುಖವಾಗಿ ತೆರೆದಿರಬೇಕು. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿ ಉಳಿಯಲು ಸಹಾಯ ಮಾಡುತ್ತದೆ. ಪ್ರವೇಶ ದ್ವಾರವು ಇತರ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಅದು ಹೆಚ್ಚು ಎದ್ದು ಕಾಣುವಂತೆಯೂ ಇರಬೇಕು. ಬಾಗಿಲನ್ನು ಒಂದು ಮೂಲೆಯಲ್ಲಿ ಇಡಬಾರದು. ಇನ್ನೊಂದು ಮನೆಯ ಪ್ರವೇಶದ್ವಾರದ ಕಡೆಗೆ ಅದನ್ನು ನೇರವಾಗಿ ಎದುರಾಗುವಂತೆ ಇಡಬಾರದು.
9. ಹೊಸ್ತಿಲು ಬಹಳ ಮುಖ್ಯ:
ಪ್ರವೇಶದ್ವಾರದಲ್ಲಿ ಸಣ್ಣ ಹೊಸ್ತಿಲನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ ಎನ್ನಲಾಗಿದೆ. ಅಲ್ಲದೆ, ಪ್ರವೇಶದ್ವಾರದ ಮೇಲೆ ನಾಮಫಲಕವನ್ನು ಇರಿಸಿ. ಇದು ಶಕ್ತಿಯ ಹರಿವಿಗೆ ಗುರುತು ಮತ್ತು ಸ್ಪಷ್ಟತೆಯನ್ನು ಸಂಕೇತಿಸುತ್ತದೆ. ಸ್ಪಷ್ಟ, ಅಚ್ಚುಕಟ್ಟಾದ ನಾಮಫಲಕವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications