ಮೀನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ದುರ್ಮುಖನಾಮ ಸಂವತ್ಸರದ ಯುಗಾದಿಯಿಂದ ಮುಂದಿನ ವರ್ಷದ ಯುಗಾದಿಯವರೆಗಿನ ಮೀನ ರಾಶಿಯವರು ಫಲಾಫಲ ಹೀಗಿದೆ.
ಪೂರ್ವಾಭಾದ್ರಪದ ನಕ್ಷತ್ರದ ಕೊನೆಯ ಚರಣದವರಿಗೆ ವರ್ಷದ ಆರಂಭ ಸೂಪರ್ ಆಗಿದೆ. ಹಲವಾರು ದಿನಗಳಿಂದ ಕಾಣುತ್ತಿದ್ದ ಕನಸು ಈ ಮೊದಲು ನಾಲ್ಕು ತಿಂಗಳಿನಲ್ಲಿ ನನಸಾಗುವುದರಲ್ಲಿ ಸಂಶಯವೇ ಇಲ್ಲ. ನಂತರದ ನಾಲ್ಕು ತಿಂಗಳು ಅಷ್ಟೇನೂ ಏಳ್ಗೆ ಕಾಣದ ಜೀವನ ಕೊನೆಯ ನಾಲ್ಕು ತಿಂಗಳಿನಲ್ಲಿ ಸ್ವಲ್ಪ ಚೇತರಿಸಿಕೊಳ್ಳಲಾರಭಿಸುತ್ತದೆ.
ಆದರೆ ಇಡೀ ವರ್ಷ ಬರೀ ದುಡ್ಡು ಖರ್ಚು ಮಾಡುವುದೇ ದೊಡ್ಡ ಉದ್ಯೋಗವೆಂದುಕೊಳ್ಳುವಂತಾಗುತ್ತದೆ. ಇನ್ನು ಉತ್ತರಾಭಾದ್ರಪದ ನಕ್ಷತ್ರದವರು ಅಷ್ಟೇನೂ ನಿರೀಕ್ಷೆಯನ್ನು ಈ ವರ್ಷ ಇಟ್ಟುಕೊಳ್ಳುವ ಹಾಗಿಲ್ಲ. ಏಕೆಂದರೆ ಬಂದಿರುವ ಸಮಯವೇ ಹಾಗಿರುವುದರಿಂದ ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡಿರಬೇಕು ಸುಮ್ಮನೇ. [ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ]

ವರ್ಷದ ಕೊನೆಯ ನಾಲ್ಕು ತಿಂಗಳು ಸ್ವಲ್ಪ ಕಷ್ಟಕರವೆನಿಸುವ ಸಮಯ ಬರುತ್ತದೆ. ಈಗಿನಿಂದ ಪೂರ್ವ ತಯಾರಿ ಮಾಡಿಕೊಂಡಿರುವುದನ್ನು ಒಳ್ಳೆಯದು.
ಇನ್ನು ರೇವತಿ ನಕ್ಷತ್ರದವರು ಮೊದಲು ನಾಲ್ಕು ತಿಂಗಳು ಚೆನ್ನಾಗಿಯೇ ಇರುತ್ತಾರೆ. ನಂತರ ಒಮ್ಮೆಲೆ ತೊಂದರೆಗಳು ಬರಲಾರಂಭಿಸಿ ಕೊನೆಯ ನಾಲ್ಕು ತಿಂಗಳು ಸ್ವಲ್ಪ ಜೀವನ ಸುಧಾರಣೆಯ ಹಾದಿ ಹಿಡಿಯುತ್ತದೆ. ಹಣವಂತೂ ಪೋಲಾಗುವುದೇ ಗೊತ್ತಾಗುವುದಿಲ್ಲ. ಹೀಗಾಗಿ ದುಡ್ಡಿನ ಬರ ಕಾಡುತ್ತಿರುತ್ತದೆ ಯಾವಾಗಲೂ.
ಆಗಸ್ಟ್ ನಂತರ ಗುರುಬಲ ಬರುವುದರಿಂದ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ಜನವರಿಯಲ್ಲಿ ಶನಿಬಲವೂ ಬರುವುದರಿಂದ ಹೊಸ ವರ್ಷ ಚೆನ್ನಾಗಿಯೇ ಆರಂಭವಾಗುತ್ತದೆ ಈ ರಾಶಿಯವರಿಗೆ. [ಮೀನ, ಮೇಷ, ಮಿಥುನ, ಕರ್ಕ ಗುಣಗಳಿವು]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications