Ugadi Horoscope 2025: ಯುಗಾದಿ ಭವಿಷ್ಯ- ವಿಶ್ವಾವಸು ಸಂವತ್ಸರದಲ್ಲಿ ಯಾವ ರಾಶಿಗೆ ಸಂಕಷ್ಟ? ಸಂತೋಷ?
ಯುಗಾದಿ ಹಬ್ಬ ಮಾರ್ಚ್ 30 ಆಚರಿಸಲಾಗುತ್ತದೆ. 2025 ಯುಗಾದಿಯಿಂದ 2026 ಯುಗಾದಿಯವರೆಗೆ ವಿಶ್ವಾವಸು ನಾಮ ಸಂವತ್ಸರದಲ್ಲಿ ದ್ವಾದಶಿ ರಾಶಿಗಳ ವರ್ಷ ಭವಿಷ್ಯ ತಿಳಿಯುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಈ ವರ್ಷ ಅತ್ಯಂತ ಶುಭ ಫಲಗಳನ್ನು ಪಡೆಯುವ ರಾಶಿಗಳನ್ನು ನಾವು ನೋಡಿದ್ದೇವೆ. ಇದೀಗ ಮಿಶ್ರ ಫಲ ಪಡೆಯುವ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿ ಅಶ್ವಿನಿ, ಕೃತಿಕಾ, ಭರಣಿ ನಕ್ಷತ್ರಗಳನ್ನು ಒಳಪಟ್ಟಿರುತ್ತದೆ. ಈ ಮೂರು ನಕ್ಷತ್ರದವರಿಗೆ ಈ ಯುಗಾದಿಯ ಆರಂಭದ ನಂತರದಲ್ಲಿ ಅಂದರೆ ಮೂರು ತಿಂಗಳು ಚೆನ್ನಾಗಿ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಆಗುತ್ತವೆ. ಅಭಿವೃದ್ಧಿ ಚೆನ್ನಾಗಿ ಕಾಣುವಿರಿ. ಆದರೆ ನಂತರ ಶನಿ ಸಂಚಾರದಿಂದ ಮೇಷ ರಾಶಿಯವರಿಗೆ ಪರಿಣಾಮ ಬೀರುತ್ತದೆ.

ಮಾರ್ಚ್ ತಿಂಗಳಲ್ಲಿ ಮೀನ ರಾಶಿಗೆ ಶನಿ ಸಂಚಾರ ಮಾಡಿದ ದಿನದಿಂದಲೇ ಅದರ ಪರಿಣಾಮ ಬೀರುವುದಿಲ್ಲ. ಎರಡರಿಂದ ಮೂರು ತಿಂಗಳ ನಂತರ ಶನಿ ಮೇಷ ರಾಶಿಯವರ ಮೇಲೆ ತನ್ನ ಪ್ರಭಾವನನ್ನು ಬೀರುತ್ತದೆ. ಆ ನಂತರ ಹಣದ ಅಭಾವ, ತೊಂದರೆ, ಕಿರಿಕಿರಿಗಳು ಹೆಚ್ಚಾಗಲಿವೆ. ಖರ್ಚುಗಳು ಹೆಚ್ಚಾಗುತ್ತವೆ.
ಹಾಗೆಯೇ ಶನಿ ಮೇಷ ರಾಶಿಗೆ ನೀಚ ಸ್ಥಾನದಲ್ಲಿ ಇರುತ್ತದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ಶನಿ ನೀಚ ಸ್ಥಾನದಲ್ಲಿ ಇದ್ದರೆ ವಾಹನದಲ್ಲಿ ಸಂಚಾರ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಹೊಸದಾಗಿ ವಾಹನ ಖರೀದಿ ಮಾಡಿ ವಾಹನ ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸಲೇಬೇಕು. ಮೇ ನಂತರ ಹೊಸ ಉದ್ಯೋಗ, ಹೂಡಿಕೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಹೀಗಾಗಿ ಮೇಷ ರಾಶಿಯವರು ಇಡೀ ವರ್ಷ ಗುರು ಆರಾಧನೆ ಮಾಡಿ, ಶನಿ ಶಾಂತಿಯನ್ನು ಮಾಡಿಸುವುದು ಒಳ್ಳೆಯದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವರ್ಷ ಗುರು ಜನ್ಮ ಸ್ಥಾನಕ್ಕೆ ಬರುತ್ತಾನೆ. ಇದರ ಜೊತೆಗೆ ಶನಿಯ ಫಲದಿಂದ ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಇರುತ್ತವೆ. ಸರ್ಕಾರಿ ಕೆಲಸದಲ್ಲಿ ಅಭಿವೃದ್ಧಿ ಕಡಿಮೆಯಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಇರಬೇಕು. ಯಾವಾಗಲು ಚಿಂತೆ, ದುಡ್ಡಿನ ಅಭಾವ, ಯೋಚನೆ ಇರುತ್ತದೆ.

ಹೀಗಾಗಿ ಹಣವನ್ನು ವ್ಯಯ ಮಾಡಬೇಡಿ. ಪರಿಹಾರಕ್ಕೆ ಗುರು ಆರಾಧನೆ, ಮಂತ್ರವನ್ನು ಮಾಡುವುದು ಒಳ್ಳೆಯದು. ಇದನ್ನು ರೂಢಿ ಮಾಡಿಕೊಂಡರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಆದರೂ ಕೂಡ ಈ ವರ್ಷ ಮಿಥುನ ರಾಶಿಯವರು ಜಾಗರೂಕರಾಗಿರಬೇಕು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮುಕ್ತಾಯವಾಗುತ್ತದೆ. ಇದು ಕಟಕ ರಾಶಿಯವರಿಗೆ ಶುಭ ಸುದ್ದಿ. ಆದರೆ ಗುರು ಕಟಕ ರಾಶಿಯ 12ನೇ ಮನೆಗೆ ಬರುವುದು ಉತ್ತಮವಲ್ಲ. ಇದರಿಂದ ನಿಮ್ಮ ಹಣ ವ್ಯಯವಾಗುತ್ತದೆ. ಈ ವರ್ಷ ನೀವು ತುಂಬಾ ಜಾಗರೂಕರಾಗಿ ಹೆಜ್ಜೆಯನ್ನು ಇಡಬೇಕಾಗುತ್ತದೆ. ಯಾರಿಗಾದರೂ ವಿವಾಹವಾಗುತ್ತಿಲ್ಲ ಅಥವಾ ವಿವಾಹವಾಗಿ ಮಕ್ಕಳಾಗುತ್ತಿಲ್ಲ ಅಥವಾ ಆರೋಗ್ಯ ಸಮಸ್ಯೆಗಳಿದ್ದರೆ ಪರಿಹಾರ ಸಿಗಲಿದೆ.

ಮೇ ನಂತರ ಭೂ ವಿಚಾರದಲ್ಲಿ ಬಂಡವಾಳ ಹಾಕುವುದು ಶುಭವಲ್ಲ. ನವೆಂಬರ್ ವರೆಗೂ ಕಷ್ಟ ಇರುತ್ತದೆ. ನಂತರ ತುಂಬಾ ಉತ್ತಮ ಫಲ ಸಿಗಲಿವೆ. ಅದಕ್ಕಾಗಿ ಲಕ್ಷ್ಮೀ ನರಸಿಂಹ ಹಾಗೂ ಹನುಮಂತನನನ್ನು ಆರಾಧನೆ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ನೋಡಿದರೆ ಶುಭ ಫಲ ಸಿಗಲಿದೆ. ಈ ವರ್ಷ ಸಿಂಹ ರಾಶಿಯವರಿಗೆ ಗುರು ಬಲ ಇದೆ. ಸರ್ಕಾರಿ ಕೆಲಸ ಬೇಕು ಅನ್ನೋರಿಗೆ ಶುಭ ಸುದ್ದಿ ಸಿಗಲಿದೆ. ಆದರೆ ಅಷ್ಟಮ ಶನಿ ಮಾರ್ಚ್ ತಿಂಗಳಲ್ಲಿ ಆರಂಭವಾಗುವುದರಿಂದ ಎರಡುವರೆ ತಿಂಗಳು ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಆಗುತ್ತವೆ.

ಗುರು ಭಾಗ್ಯ ಸ್ಥಾನದ 11ನೇ ಮನೆಯಲ್ಲಿ ಇರುವುದರಿಂದ ಮೂರು ತಿಂಗಳ ನಂತರ ಪೂರ್ಣಗೊಳ್ಳುತ್ತವೆ. ದುಡ್ಡಿನ ವಿಚಾರದಲ್ಲಿ ಅನುಕೂಲಗಳು ಇವೆ. ಕೆಲಸ ಕಾರ್ಯಗಳು ವಿಳಂಬವಾಗುತ್ತವೆ. ವಿದ್ಯಾರ್ಥಿಗಳು ಸೋಂಬೇರಿಗಳು ಆಗಬಹುದು. ಕೆಲಸದ ಒತ್ತಡ ಹೆಚ್ಚಾದಷ್ಟು ಹಣ ಬರುತ್ತದೆ. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳು ಕೆಟ್ಟ ಚಟ ಕಲಿಯಬಹುದು. ಒಟ್ಟಾರೆ ಇಡೀ ವರ್ಷ ವಿರಾಮ ಇಲ್ಲದೆ ಕೆಲಸ ಮಾಡುವಿರಿ. ಪರಿಹಾರಕ್ಕೆ ಈಶ್ವರನನ್ನು ಆರಾಧನೆ ಮಾಡಿ.












Click it and Unblock the Notifications