ಶೀಲಾ ಬಜಾಜ್ ಪ್ರಕಾರ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಹೇಗಿದೆ?
Recommended Video

ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಮೈಸೂರಿನಲ್ಲಿ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದಾಗಿನಿಂದ ಹಲವು ಊಹಾಪೋಹ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯವೇ ಮುಗಿದುಹೋಯಿತಾ ಎಂಬ ಮುಖ್ಯ ಪ್ರಶ್ನೆ ಕೂಡ ಇದೆ.
ಆ ಬಗ್ಗೆ ಟಾರೋಟ್ ಕಾರ್ಡ್ ಗಳು ಏನು ಸೂಚಿಸುತ್ತವೆ? ಸಂಖ್ಯಾಶಾಸ್ತ್ರ ಏನನ್ನು ಸೂಚಿಸುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಜನಾರ್ದನ ರೆಡ್ಡಿ ಅವರ ಜನ್ಮ ದಿನಾಂಕದ ಪ್ರಕಾರ ಅವರ ಸಂಖ್ಯೆ 2. ಅದರ ಅಧಿಪತಿ ಚಂದ್ರ ಆಗುತ್ತದೆ. ಇನ್ನು ಗಮ್ಯದ ಸಂಖ್ಯೆ ನೋಡಿದರೆ, ಅಧಿಪತಿ ಶನಿ ಆಗುತ್ತದೆ.

ಅವರ ಜೀವನದಲ್ಲಿ ಬಹಳ ಏರುಪೇರುಗಳಿರುತ್ತವೆ. ಗಮ್ಯದ ಸಂಖ್ಯೆ ಅಧಿಪತಿ ಶನಿಯು ಅಂಥ ಒಳಿತು ಮಾಡುವುದಿಲ್ಲ. ಇನ್ನು ಅವರ ವಯಸ್ಸು ಐವತ್ತೊಂದು. ಈ ಸಂಖ್ಯೆಯ ವಯಸ್ಸಿನಲ್ಲಿ ಹಲವರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನು ಜನಾರ್ದನ ರೆಡ್ಡಿ ಅವರ ರಾಜಕೀಯದ ಕೊನೆಯಂತೂ ಖಂಡಿತಾ ಅಲ್ಲ.
ಜನಾರ್ದನ ರೆಡ್ಡಿ ಅವರು ಬೇರೆ ಪಕ್ಷ ಸೇರಬಹುದು. ಅವರು ಇನ್ನೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಾವು ಹೊರಗಿನಿಂದ ನೋಡುವವರಿಗೆ ಕಾಣುವ ಶತ್ರುಗಳಿಗಿಂತ ಹೆಚ್ಚಿನ ಸಂಖ್ಯೆಯ ಶತ್ರುಗಳು ಅವರಿಗೆ ಇದ್ದಾರೆ. ಅವರನ್ನು ತುಳಿಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇದ್ದಾರೆ.

ಆದರೆ, ಅವರ ಪಾಲಿಗೆ ಹೊಸ ದಿಕ್ಕು ಗೋಚರಿಸುತ್ತಿದೆ. ಅವರ ಮೇಲೆ ಸಾಕಷ್ಟು ದೃಷ್ಟಿ ಇದೆ. ಹೀಗಿದ್ದರೂ ಹೊಸ ದಾರಿಯೊಂದು ಅವರ ಪಾಲಿಗೆ ಕಾಣಿಸಿಕೊಳ್ಳುತ್ತದೆ. ಇದು ರಾಜಕೀಯ ಜೀವನದ ಕೊನೆಯಂತೂ ಅಲ್ಲ.












Click it and Unblock the Notifications