Shani Gochara: ಶನಿಯ ಕಾರಣದಿಂದ ಈ ರಾಶಿಯವರಿಗೆ 2026 ಅದೃಷ್ಟದ ಕಾಲ; ಹಿದೆಂದೂ ಕಾಣದ ಯಶಸ್ಸು

Shani Gochara: ವೈದಿಕ ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು, ಕರ್ಫಲದಾತ ಎಂದೆಲ್ಲಾ ಹೇಳಲಾಗುತ್ತದೆ. ಅಂದರೆ ಶನಿದೇವರು ಯಾವಾಗಲೂ ನಾವು ಮಾಡಿದ ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ನೀಡುತ್ತಾರೆಯಂತೆ. ಎಲ್ಲಾ ಗ್ರಹಗಳಂತೆ ಶನಿ ಗ್ರಹವು ಕೂಡಾ ಕಾಲ ಕಾಲಕ್ಕೆ ತನ್ನ ನಡೆಯನ್ನು ಬದಲಿಸುತ್ತಾ ಇರುತ್ತದೆ. ನವಗ್ರಹಗಳ ಪೈಕಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಶನಿಗ್ರಹ. ಇದು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಈ ನಡುವೆ ವಕ್ರ ನಡೆ, ನೇರ ನಡೆ, ಅಸ್ತ, ಉದಯದಂತಹ ಘಟ್ಟಗಳು ಕೂಡಾ ಬರುತ್ತವೆ. ಶನಿಯ ನಡೆಯಲ್ಲಿನ ಸಣ್ಣ ಬದಲಾವಣೆ ಕೂಡಾ ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮವನ್ನು ಬೀರುವುದು.

ಪ್ರಸ್ತುತ, ಶನಿ ಹಿಮ್ಮುಖ ಸ್ಥಿತಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಜ್ಯೋತಿಷಿಗಳ ಪ್ರಕಾರ, ಜುಲೈ 27 ರಂದು ಮೀನ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಿದೆ. ಡಿಸೆಂಬರ್ 11 ರವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ ಶನಿಯು ಕೆಲವು ರಾಶಿಯವರಿಗೆ ಅನುಕೂಲಕರ ಫಲವನ್ನು ನೀಡುತ್ತಿದ್ದಾನೆ. ವಿಶೇಷವಾಗಿ ವೃಷಭ, ಕರ್ಕಾಟಕ, ಕನ್ಯಾ ಮತ್ತು ಮಿಥುನ ರಾಶಿಯಲ್ಲಿ ಜನಿಸಿದವರು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ.

Shani Gochara

ವೃಷಭ ರಾಶಿ (Taurus)

ವೃಷಭ ರಾಶಿಯವರಿಗೆ ಶನಿಯ ಸಂಚಾರ ಅನುಕೂಲಕರವಾಗಿರುವುದು. ಉದ್ಯೋಗಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಪಡೆಯುವ ಸಾಧ್ಯತೆಯಿದೆ. ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಬಡ್ತಿ ಈ ಅವಧಿಯಲ್ಲಿ ಸಿಗುವುದು. ಸಂಬಳ ಕೂಡಾ ಹೆಚ್ಚಾಗುವುದು. ಒಳ್ಳೆ ಕಂಪನಿಯಿಂದ ಕೆಲಸದ ಆಫರ್‌ ಕೂಡಾ ಬರುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಲಾಭವಾಗುವುದು. ವ್ಯವಹಾರ ವಿಸ್ತರಣೆಗೆ ಯೋಚಿಸುತ್ತಿದ್ದರೆ ಇದು ಬೆಸ್ಟ್‌ ಟೈಂ. ಆದಾಯದ ಮೂಲಗಳು ಹೆಚ್ಚಾಗುವುದು. ಬಾಕಿ ಉಳಿದಿರುವ ಕೆಲಸಗಳು ವೇಗ ಪಡೆದುಕೊಳ್ಳುವುದು. ಹಳೆಯ ಸಂಪರ್ಕಗಳಿಂದ ಲಾಭ ಪಡೆಯುವ ಅವಕಾಶಗಳು ಹುಟ್ಟಿಕೊಳ್ಳುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು.

ಮಿಥುನ ರಾಶಿ (Gemini)

ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗುವುದು. ಕಠಿಣ ಪರಿಶ್ರಮದಿಂದ ನೀವು ಬಯಸುವ ಯಶಸ್ಸನ್ನು ಕಂಡುಕೊಳ್ಳುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ದೊಡ್ಡ ಯೋಜನೆಗಳು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಅವಕಾಶಗಳು ಒದಗಿ ಬರುವುದು. ನಿಂತು ಹೋಗಿರುವ ಕೆಲಸ ಕಾರ್ಯಗಳು ಮತ್ತೆ ಆರಂಭವಾಗುವುದು.

ಕರ್ಕಾಟಕ ರಾಶಿ (Cancer)

ಶನಿಯ ಹಿಮ್ಮುಖ ಚಲನೆ ಕಟಕ ರಾಶಿಯವರಿಗೆ ವಿಶೇಷವಾಗಿ ವೃತ್ತಿಜೀವನದ ವಿಷಯದಲ್ಲಿ ಪ್ರಯೋಜನಗಳನ್ನು ತರುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಉನ್ನತ ಸ್ಥಾನಕ್ಕೆ ಏರುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಮನ್ನಣೆ ಸಿಗುವುದು. ಕೆಲಸವನ್ನು ಅಥವಾ ಉದ್ಯೋಗಗಳನ್ನು ಬದಲಾಯಿಸಬೇಕು ಅಂದುಕೊಂಡವರಿಗೆ ಹೊಸ ಅವಕಾಶಗಳು ಸಿಗುವುದು. ಡಿಸೆಂಬರ್ 11 ರ ಮೊದಲು ಹೊಸ ಆರಂಭಗಳಿಗೆ ಸಂಬಂಧಿಸಿದ ಅವಕಾಶಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಆರ್ಥಿಕವಾಗಿಯೂ ಪರಿಹಾರ ಸಿಗುವುದು. ಕೈ ಸೇರದೆ ಹೊರಗೆ ಉಳಿದಿರುವ ಹಣ ಈ ಅವಧಿಯಲ್ಲಿ ವಾಪಸ್‌ ಸಿಗುವುದು. ಉಳಿತಾಯ ಮಾಡುವುದಕ್ಕೂ ಸಮಯ ಸರಿಯಾಗಿದೆ.

ಕನ್ಯಾ ರಾಶಿ (Virgo)

ಶನಿಯ ವಕ್ರ ನಡೆಯ ಅವಧಿಯು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿರುವುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ನಿಂತು ಹೋಗಿರುವ ಪ್ರಾಜೆಕ್ಟ್‌ಗಳು ಮತ್ತೆ ಆರಂಭವಾಗಿ ಲಾಭ ತರುವುದು. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ಹೊಸ ಜವಾಬ್ದಾರಿ ಸಿಗುವ ಮೂಲಕ ಆದಾಯವೂ ಹೆಚ್ಚಾಗುವುದು. ಹೊಸ ಅವಕಾಶಗಳು ಎದುರಾಗುವುದು.

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಪ್ರಭಾವ ಮತ್ತು ಫಲಿತಾಂಶಗಳು ವೈಯಕ್ತಿಕ ಜಾತಕವನ್ನು ಅವಲಂಬಿಸಿ ಬದಲಾಗಬಹುದು. ರಾಶಿಯನ್ನು ಮಾತ್ರ ಆಧರಿಸಿ ಪ್ರಮುಖ ಹಣಕಾಸು ಮತ್ತು ಉದ್ಯೋಗ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+