Shani Uday 2023: ಕುಂಭದಲ್ಲಿ ಶನಿ ಉದಯ: ಈ ರಾಶಿಯವರಿಗೆ ಹೆಚ್ಚಿನ ಲಾಭ!
ಕುಂಭ ರಾಶಿಯಲ್ಲಿನ ಶನಿ ಉದಯ ಎಲ್ಲಾ ರಾಶಿಚಕ್ರಗಳ ಮೇಲೆ ಪ್ರಭಾವ ಬೀರಲಿದೆ. ಜ್ಯೋತಿಷ್ಯದ ಪರಿಹಾರಗಳನ್ನು ವಿವರವಾಗಿ ತಿಳಿಯೋಣ.
ಶನಿ ದೇವನನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ನ್ಯಾಯ ಹಾಗೂ ಕರ್ಮದ ಫಲವನ್ನು ನೀಡುತ್ತದೆ. ಶನಿ ದೇವನು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಹೀಗಾಗಿ ಇದು ಚಲಿಸುವಾಗ ಯಾವುದೇ ಒಂದು ರಾಶಿಚಕ್ರದಲ್ಲಿ ಹೆಚ್ಚು ಕಾಲ ಇರುತ್ತದೆ. ಈ ಕಾರಣದಿಂದಾಗಿ ಜನರ ಮೇಲೆ ಇದು ಶುಭ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ವೇಳೆ ಯಾವ ರಾಶಿವರ ಮೇಲೆ ಶನಿ ಬಲವಿರುತ್ತದೆಯೇ ಅವರ ಜೀವನದಲ್ಲಿ ಶುಭವಾಗಲಿದೆ. ಒಂದು ವೇಳೆ ಶನಿ ದುರ್ಬಲವಾಗಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಶನಿ ದೇದ ಸದ್ಯ ಕುಂಭ ರಾಶಿಯಲ್ಲಿದ್ದಾನೆ. ಶನಿಯು ಮಾರ್ಚ್ 06, 2023 ರಂದು ರಾತ್ರಿ 11.36 ಕ್ಕೆ ಕುಂಭ ರಾಶಿಯಲ್ಲಿದ್ದಾಗ ಉದಯಿಸುತ್ತಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವ ಗ್ರಹವು ಸೂರ್ಯನಿಗೆ ಬಹಳ ಹತ್ತಿರ ಬರುತ್ತದೋ ಅದು ತನ್ನ ಸಂಪೂರ್ಣ ಸಾಮಾರ್ಥ್ಯವನ್ನು ಪ್ರಯೋಗಿಸಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿ ರಾಶಿಯಲ್ಲಿ ಶನಿ ಉದಯುತ್ತದೆ. ಶನಿದೇವನು ಉದಯಿಸಿದಾಗ ಅದರ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಬೀಳುತ್ತದೆ. ಈ ಬಾರಿ ಶನಿಯು ಉದಯಿಸಿದ ಮೇಲೆ ಅದರ ಶುಭ ಪರಿಣಾಮ ಕೆಲವು ರಾಶಿಚಕ್ರಗಳ ಮೇಲೆ ಹೆಚ್ಚು ಕಂಡುಬರುತ್ತದೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.
ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ

ಮೇಷ: ಕೆಲಸಗಳಲ್ಲಿ ಪ್ರಗತಿ
ಶನಿಯು ಉದಯಿಸಿದ ಮೇಲೆ ಅದರ ಶುಭ ಪರಿಣಾಮ ಮೇಷ ರಾಶಿಯ ಮೇಲೆ ಬೀಳಲಿದೆ. ಕುಂಭ ರಾಶಿಯಲ್ಲಿ ಶನಿಯ ಉದಯವು ಮೇಷ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳಲ್ಲಿ ಪ್ರಗತಿ ಕಂಡುಬರುವುದು. ಶನಿಯ ಉದಯವು ವೃತ್ತಿಜೀವನದ ದೃಷ್ಟಿಯಿಂದ ಪ್ರಯೋಜನಕಾರಿಯಾಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ.

ವೃಷಭ: ನಿರುದ್ಯೋಗಿಗಳಿಗೆ ಉದ್ಯೋಗವಕಾಶ
ಈ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶನಿಯ ಉದಯವಾಗುವುದು ವರದಾನವಾಗಿದೆ. ಮಾರ್ಚ್ 06 ರಿಂದ, ನಿಮ್ಮ ಪ್ರತಿಯೊಂದು ಕೆಲಸದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ನೋಡುತ್ತೀರಿ. ಅದೃಷ್ಟದ ಬೆಂಬಲದಿಂದಾಗಿ ವಿತ್ತೀಯ ಲಾಭ ಮತ್ತು ಕೆಲಸದಲ್ಲಿ ಉತ್ತಮ ಯಶಸ್ಸಿನ ಸಾಧ್ಯತೆಗಳಿವೆ. ಗೌರವದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗಸ್ಥರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಸಂಬಳ ಮತ್ತು ಬಡ್ತಿಯಲ್ಲಿ ಹೆಚ್ಚಳದ ಸೂಚನೆ ಇದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ ಮತ್ತು ಕೆಲವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ.

ಮಿಥುನ: ಮಾತು ಬೆಳ್ಳಿ ಮೌನ ಬಂಗಾರ
ಕುಂಭ ರಾಶಿಯಲ್ಲಿ ಶನಿಯ ಉದಯವು ಮಿಥುನ ರಾಶಿಯವರಿಗೆ ಕೆಲ ಸಮಸ್ಯೆಗಳನ್ನು ತರುತ್ತದೆ. ಮಿಥುನ ರಾಶಿಯವರು ಹಣಕಾಸು, ಬ್ಯಾಂಕಿಂಗ್, ಶಿಕ್ಷಕ, ಮಾರ್ಗದರ್ಶಕ ಇನ್ನಿತರ ಕ್ಷೇತ್ರದಲ್ಲಿರುವವರಿಗೆ ಶನಿ ದಹನ ಅವಧಿಯಲ್ಲಿ ಸಮಸ್ಯೆಗಳನ್ನು ಎದುರಿಸುವರು. ನಿಮ್ಮ ಸಂವಹನದಿಂದ ನಿಮ್ಮ ಮೇಲೆ ಇತರರಿಗೆ ಕೋಪ ಉಂಟಾಗಬಹುದು. ನಿಮ್ಮ ಮತ್ತು ನಿಮ್ಮ ತಂದೆಯ ನಡುವೆ ನಡೆಯುತ್ತಿದ್ದ ಶೀತಲ ಸಮರವು ಕೊನೆಗೊಳ್ಳುತ್ತದೆ. ಇಬ್ಬರ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ. ಕುಟುಂಬಸ್ಥರ ಆರೋಗ್ಯದಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಕೆಲಸದೊಂದಿಗೆ ಮನೆಯವರ ಆರೋಗ್ಯದ ಕಡೆಗೂ ನೀವು ಗಮನ ಹರಸಿಬೇಕಾಗುತ್ತದೆ. ಅದೃಷ್ಟ ನಿಮ್ಮ ಪರವಾಗಿರುತ್ತದೆ. ಕ್ರಮೇಣ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.

ಕಟಕ: ಓದಿನಲ್ಲಿ ನಿರಾಸಕ್ತಿ
ಕರ್ಕಾಟಕ ರಾಶಿಯವರ ಜೀವನದಲ್ಲಿ ಹಠಾತ್ ಘಟನೆಗಳು ಸಂಭವಿಸುತ್ತವೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಕೆಲ ತೊಂದರೆಗಳಾಗಬಹುದು. ಆರೋಗ್ಯದಲ್ಲ ಏರುಪೇರಾಗುವ ಸಾಧ್ಯತೆಗಳಿವೆ. ಹೀಗಾಗಿ ಕೊಂಚ ಜಾಗರೂಕರಾಗಿರಿ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯುತ್ತವೆ. ಶನಿಯು ಕರ್ಕಾಟಕ ರಾಶಿಯವರಿಗೆ ನಕಾರಾತ್ಮಕ ಗ್ರಹವಾಗಿದೆ. ಆದ್ದರಿಂದ ಶನಿಯ ಸ್ಥಾನ ಕಟಕ ರಾಶಿಯವರಿಗೆ ಅನುಕೂಲಕರವಾಗಿರುವುದಿಲ್ಲ. ಅದರ ಉದಯವು ಕರ್ಕ ರಾಶಿಯವರಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಇದರಿಂದ ವಿಚಲಿತರಾಗಬೇಡಿ. ಸಮಯ ಕಳೆದಂತೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಸಿಂಹ: ಅವಿವಾಹಿತರ ಮದುವೆಗೆ ಅಡೆತಡೆ
ಕುಂಭ ರಾಶಿಯಲ್ಲಿ ಶನಿಗ್ರಹದ ಉದಯದ ಸಮಯದಲ್ಲಿ, ಮದುವೆಯಾಗಲು ಅವಿವಾಹಿತ ಸಿಂಹ ರಾಶಿಯವರು ತೊಂದರೆಗಳನ್ನು ಎದುರಿಸುತ್ತಾರೆ. ಅದನ್ನು ಸರಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅಡೆತಡೆಗಳನ್ನು ಎದುರಿಸುವಿರಿ. ಆದರೀಗ ಸಿಂಹ ರಾಶಿಯವರು ಹಾಗೆ ಮಾಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ಏಪ್ರಿಲ್ ತಿಂಗಳ ನಂತರ ಅವರು ಗುರು ಗ್ರಹದ ಅನುಗ್ರಹವನ್ನು ಪಡೆಯುತ್ತಾರೆ. ಅಲ್ಲದೆ ಈಗಾಗಲೇ ಮದುವೆಯಾಗಿರುವವರು ಘರ್ಷಣೆಗಳಿಗೆ ಒಳಗಾಗಬಹುದು. ಆಕ್ರಮಣಕಾರಿ ನಡವಳಿಕೆಯಿಂದ ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಏಪ್ರಿಲ್ ನಲ್ಲಿ ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಅವರ ವೈವಾಹಿಕ ಜೀವನದ ಗುಣಮಟ್ಟ ಸುಧಾರಿಸುತ್ತದೆ. ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಮತ್ತು ನಿಮ್ಮ ಇಮೇಜ್ ಅನ್ನು ಹಾಳುಮಾಡಲು ಪ್ರಯತ್ನಿಸುವ ಸಾಧ್ಯತೆಗಳಿವೆ ಆದ್ದರಿಂದ ಎಚ್ಚರದಿಂದಿರಿ.

ಕನ್ಯಾ: ಸಮಸ್ಯೆಗಳಿಂದ ಮುಕ್ತಿ
ಕನ್ಯಾ ರಾಶಿಯವರಿಗೆ ಈ ಸಮಯ ವಿಶ್ರವಾಗಿರುತ್ತದೆ. ಮಕ್ಕಳ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಕಾನೂನು ಸಂಘರ್ಷ, ಕೆಲಸದ ಸ್ಥಳದಲ್ಲಿ ಶತ್ರುಗಳಿಂದ ಕಷ್ಟಪಡುತ್ತಿದ್ದ ಕನ್ಯಾ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶನಿಯ ಉದಯವಾದಾಗ ಪರಿಹಾರ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಕುಟುಂಬಸ್ಥರೊಂಗಿದೆ ನಿಮ್ಮ ಸಂಬಂಧ ಸುಗಮವಾಗಿರುತ್ತದೆ. ನೀವು ನಿಮ್ಮನ್ನು ಮತ್ತು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದರೆ, ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಬೇಕಾದ ಸಮಯ ಇದು.

ತುಲಾ: ವಿವಾಹಿತ ಮಹಿಳೆಯರಿಗೆ ಮಕ್ಕಳ ಭಾಗ್ಯ
ತುಲಾ ರಾಶಿಯವರಿಗೆ, ಶನಿಯು ಯೋಗಕಾರಕ ಗ್ರಹವಾಗಿದೆ. ಮತ್ತು ಈಗ ಶನಿಯು ನಮ್ಮ ಶಿಕ್ಷಣ, ಪ್ರೀತಿ ಸಂಬಂಧಗಳು, ಮಕ್ಕಳನ್ನು ಪ್ರತಿನಿಧಿಸುವ ಗ್ರಹವಾಗಿದೆ. ಶನಿಯು ತುಲಾ ರಾಶಿಯವರಿಗೆ ಯೋಗ ಕಾರಕ ಗ್ರಹವಾಗಿದೆ. ಆದ್ದರಿಂದ ಕುಂಭದಲ್ಲಿ ಶನಿಯು ತುಲಾ ರಾಶಿಯವರಿಗೆ ಬಹಳಷ್ಟು ಸಂತೋಷ ಮತ್ತು ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಮತ್ತು ಅವರಿಂದ ಸಂತೋಷವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ತುಲಾ ರಾಶಿಯ ವಿವಾಹಿತ ಮಹಿಳೆಯರು ತಮ್ಮ ಕುಟುಂಬವನ್ನು ವಿಸ್ತರಿಸಲು ಮತ್ತು ಮಗುವನ್ನು ಪಡೆಯುವ ಸಾಧ್ಯವಿದೆ. ಅವರ ವೈದ್ಯಕೀಯ ಸಮಸ್ಯೆಗಳು ದೂರವಾಗುತ್ತವೆ. ಈಗ ಗರ್ಭಧರಿಸುವ ಬಲವಾದ ಅವಕಾಶಗಳಿವೆ. ತುಲಾ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಅವರು ತಮ್ಮ ಅಧ್ಯಯನದಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ವೃಶ್ಚಿಕ: ವೈವಾಹಿಕ ಜೀವನದಲ್ಲಿ ಸಂತಸ
ವೃಶ್ಚಿಕ ರಾಶಿಯವರು ವೈವಾಹಿಕ ಜೀವನದಲ್ಲಿ ಎದುರಿಸುತ್ತಿದ್ದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ನೀವು ಸಮತೋಲನದಲ್ಲಿಡಲು ಸಾಧ್ಯವಾಗುತ್ತದೆ. ನೀವು ಯಾವುದೇ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅದಕ್ಕೆ ಸದ್ಯ ಅವಕಾಶ ಕೊಡಬೇಡಿ. ಇದಕ್ಕೆ ಉತ್ತಮ ಸಮಯ ಇದಲ್ಲ. ಶನಿ ದಹನದಿಂದಾಗಿ ಯೋಜನೆಯನ್ನು ಮುಂದೂಡಿ. ಕುಂಭ ರಾಶಿಯಲ್ಲಿ ಶನಿಯ ಉದಯದ ನಂತರ ನಿಮ್ಮಲ್ಲಿ ವಾಹನ ಅಥವಾ ಆಸ್ತಿ ಖರೀದಿ ಮಾಡುವ ಅವಕಾಶ ನಿಮಗಿದೆ. ನೀವು ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ನಿಮ್ಮ ಕಿರಿಯ ಸಹೋದರನೊಂದಿಗೆ ನೀವು ವಿಶೇಷವಾಗಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವನ್ನು ಎದುರಿಸುತ್ತಿದ್ದರೆ ಅದನ್ನು ಪರಿಹಾರಗೊಳ್ಳಲಿದೆ.

ಧನು: ಆರ್ಥಿಕ ಸ್ಥಿತಿ ಸುಧಾರಣೆ
ಧನು ರಾಶಿಯವರು ತಮ್ಮ ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಈ ಸಮಯದಲ್ಲಿ ಕಡಿಮೆ ದೂರ ಪ್ರಯಾಣ ಮಾಡುವುದು ಉತ್ತಮ. ಈ ಸಮಯ ನಿಮ್ಮ ಸಂವಹನ ಕೌಶಲ್ಯಗಳನ್ನು ಪ್ರತಿನಿಧಿಸುತ್ತದೆ. ಆದುದರಿಂದ ನಿಮ್ಮ ಮಾತು ಮಧುರವಾಗಿರುತ್ತದೆ. ಕುಂಭ ರಾಶಿಯಲ್ಲಿ ಈ ಶನಿಗ್ರಹ ನಿಮಗೆ ದೊಡ್ಡ ಪರಿಹಾರವನ್ನು ನೀಡುತ್ತದೆ. ನೀವು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಯಾರಿಗಾದರೂ ಸಾಲ ನೀಡಬಹುದು. ಈ ಸಮಯದಲ್ಲಿ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ನೀವು ನಿಮ್ಮ ಕಿರಿಯ ಸಹೋದರರೊಂದಿಗೆ ಉತ್ತಮ ಸಂಬಂಧವನ್ನು ಸಹ ಹೊಂದಿರುತ್ತೀರಿ.

ಮಕರ: ಇದ್ದಕ್ಕಿದ್ದಂತೆ ಧನಲಾಭ
ಕುಂಭ ರಾಶಿಯಲ್ಲಿ ಶನಿಯ ಉದಯವು ಮಕರ ರಾಶಿಯವರಿಗೆ ಶುಭ ಸಂಕೇತವಾಗಿದೆ. ವೃತ್ತಿಜೀವನದ ದೃಷ್ಟಿಯಿಂದ ಇನ್ನು ಮುಂದೆ ನಿಮಗೆ ಅನೇಕ ಸ್ಥಳಗಳಿಂದ ಉತ್ತಮ ಅವಕಾಶಗಳು ಸಿಗುತ್ತವೆ. ಇದ್ದಕ್ಕಿದ್ದಂತೆ ಧನಲಾಭಕ್ಕೆ ಅವಕಾಶವಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಇರುತ್ತದೆ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಫಲ ನೀಡುವುದು. ವ್ಯಾಪಾರದಲ್ಲಿ ಹೊಸದನ್ನು ಮಾಡುವ ಅವಕಾಶವಿರುತ್ತದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ಹಣದ ಲಾಭಕ್ಕಾಗಿ ಉತ್ತಮ ಅವಕಾಶಗಳು ಸಿಗುತ್ತವೆ.

ಕುಂಭ: ಆರೋಗ್ಯಕ್ಕಾಗಿ ಯೋಗ ರೂಢಿ
ಕುಂಭ ರಾಶಿಯವರು ಸಂತೋಷದ ವ್ಯಕ್ತಿಯಾಗಿರುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸುವಿರಿ. ಕುಂಭ ರಾಶಿಯಲ್ಲಿ ಶನಿಗ್ರಹದ ಉದಯದ ಸಮಯದಲ್ಲಿ, ನಿಮ್ಮ ದಿನಚರಿಯಲ್ಲಿ ಸೋಮಾರಿತನವನ್ನು ಬದಿಗಿಟ್ಟು ಯೋಗ ಮತ್ತು ಧ್ಯಾನವನ್ನು ಮಾಡಲು ಸಲಹೆ ನೀಡಲಾಗುತ್ತದೆ. ನೃತ್ಯ ಅಥವಾ ಜುಂಬಾದಂತಹ ಯಾವುದೇ ಸೃಜನಶೀಲ ರೂಪದ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಅದು ನಿಮ್ಮ ಮನಸ್ಸು ಮತ್ತು ದೇಹವನ್ನು ಸಕ್ರಿಯವಾಗಿ ಮತ್ತು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ಎದುರಿಸುತ್ತಿದ್ದ ಘರ್ಷಣೆಗಳು ಸಹ ಕೊನೆಗೊಳ್ಳುತ್ತವೆ. ಶನಿಯ ಉದಯ ನಿಮ್ಮ ಒಟ್ಟಾರೆ ಜೀವನದ ಬೆಳವಣಿಗೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಪ್ರಯತ್ನಗಳಿಗೆ ನೀವು ಸ್ಥಿರವಾಗಿರಬೇಕು.

ಮೀನ: ಧಾರ್ಮಿಕ ಸ್ಥಳಗಳಿಗೆ ಪ್ರವಾಸ
ಈ ಸಮಯದಲ್ಲಿ ಮೀನ ರಾಶಿಯವರ ಖರ್ಚುಗಳು ಹೆಚ್ಚಾಗುತ್ತವೆ. ನೀವು ಎದುರಿಸುತ್ತಿದ್ದ ಸಮಸ್ಯೆಯು ನಿಯಂತ್ರಣಕ್ಕೆ ಬರುತ್ತದೆ. ಕುಂಭ ರಾಶಿಯಲ್ಲಿ ಶನಿಯು ಉದಯಿಸುವ ಸಮಯದಲ್ಲಿ ನಿಮ್ಮ ಖರ್ಚು ಹೆಚ್ಚಾಗಬಹುದು. ಯಾವುದಕ್ಕಾದರೂ ಖರ್ಚು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಲು ಸಲಹೆ ನೀಡಲಾಗುತ್ತದೆ. ಮೀನ ರಾಶಿಯವರು ತೀರ್ಥಯಾತ್ರೆ ಅಥವಾ ಧಾರ್ಮಿಕ ಪ್ರವಾಸಗಳಿಗೆ ಅಥವಾ ವಿದೇಶ ವಿಹಾರಕ್ಕೆ ಹೋಗಲು ಯೋಜಿಸಬಹುದು. ಮೀನ ರಾಶಿಯವರು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತರಾಗಿರಲು ಸಲಹೆ ನೀಡಲಾಗುತ್ತದೆ. ನಿಮ್ಮ ಮನಸ್ಸು ಮತ್ತು ದೇಹವನ್ನು ಸರಾಗಗೊಳಿಸಲು ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿ.












Click it and Unblock the Notifications