Visha Yoga: ಶನಿ ಮತ್ತು ಚಂದ್ರನ ಸಂಯೋಜನೆಯಿಂದ ರೂಪುಗೊಂಡ ವಿಷ ಯೋಗ: ಜುಲೈ 06 ರಿಂದ ಈ ರಾಶಿಯವರಿಗೆ ತುಂಬಾ ಕೆಟ್ಟ ಸಮಯ

ಜುಲೈ 2023 ರಲ್ಲಿ ಶನಿ ಚಂದ್ರನಿಂದ ವಿಷ ಯೋಗ: ನವಗ್ರಹಗಳಲ್ಲಿ ಚಂದ್ರನು ತುಂಬಾ ಮೃದು. ಈ ಚಂದ್ರ ಗ್ರಹ ಭಾವನೆಗಳನ್ನು ನಿಯಂತ್ರಿಸುತ್ತದೆ. ಇದು ಕಟಕ ರಾಶಿಯ ಅಧಿಪತಿಯಾಗಿದೆ. ಮುಖ್ಯವಾಗಿ ಗ್ರಹಗಳಲ್ಲೇ ಚಂದ್ರ ಗ್ರಹ ಬಹಳ ಕಡಿಮೆ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತದೆ.

ಹಾಗೆಯೇ ಶನಿ ಗ್ರಹರ ಕಾರ್ಯಗಳಿಗನುಸಾರವಾಗಿ ಫಲಿತಾಂಶವನ್ನು ಕೊಡುತ್ತದೆ. ಈ ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದೆ. ಈ ಶನಿ ಗ್ರಹ ಮತ್ತು ಚಂದ್ರ ಗ್ರಹ ಎರಡು ಶತ್ರುಗಳು. ಈ ಎರಡು ಗ್ರಹಗಳ ಸಂಯೋಜನೆಯು ಅತ್ಯಂತ ಮಾರಕ ವಿಷ ಯೋಗವನ್ನು ಉಂಟುಮಾಡುತ್ತದೆ. ವಿಷ ಯೋಗ ಅನಗತ್ಯ ಒತ್ತಡ, ಆತ್ಮವಿಶ್ವಾಸದ ನಷ್ಟ, ಆತಂಕ, ಖಿನ್ನತೆ, ನಾಯಕತ್ವದ ಗುಣಗಳ ನಷ್ಟ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಸಹ ಉಂಟುಮಾಡಬಹುದು.

ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಜುಲೈ 06, 2023 ರಂದು ಚಂದ್ರ ಗ್ರಹ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಚಂದ್ರ ಮತ್ತು ಶನಿಯೊಂದಿಗೆ ಒಂದೇ ಸ್ಥಳದಲ್ಲಿ ಇದ್ದಾಗ ವಿಷ ಯೋಗವನ್ನು ರೂಪಗೊಳ್ಳುತ್ತದೆ. ಈ ವಿಷ ಯೋಗ ಜುಲೈ 08 ರವರೆಗೆ ಮುಂದುವರಿಯುತ್ತದೆ.

ಹೀಗಾಗಿ ಈ ವಿಷ ಯೋಗದ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 2 ರಾಶಿಯವರಿಗೆ ಈ ಯೋಗದಿಂದ ಅತ್ಯಂತ ಕೆಟ್ಟ ಪರಿಣಾಮ ಉಂಟಾಗಲಿದೆ. ಹಾಗಾದರೆ ಆ ರಾಶಿಯವರು ಯಾರೆಂದು ತಿಳಿಯೋಣ.

Saturn Moon form vish yoga in july 2023 these zodiac signs will face difficulties in kannada

ಸಿಂಹ ರಾಶಿ

ಸಿಂಹ ರಾಶಿಯ 7ನೇ ಮನೆಯಲ್ಲಿ ಶನಿ ಚಂದ್ರನ ಸಂಯೋಜನೆಯಿಂದ ವಿಷ ಯೋಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಸಿಂಹ ರಾಶಿಯವರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ದಂಪತಿಗಳ ನಡುವೆ ಜಗಳ ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ಜಗಳ ಮುಂದುವರಿದಂತೆ ಈ ಎರಡು ದಿನಗಳು ಸಾಕಷ್ಟು ಮಾನಸಿಕ ಆತಂಕವನ್ನು ಎದುರಿಸಬಹುದು. ಅಲ್ಲದೆ ಮನೆಯ ಪರಿಸರವೂ ಕೆಟ್ಟದಾಗಿರುತ್ತದೆ. ಈ ಸಮಯದಲ್ಲಿ ಹೇಳಲಾಗದ ದುಃಖ ನಿಮ್ಮನ್ನು ಆವರಿಸುತ್ತದೆ.

Saturn Moon form vish yoga in july 2023 these zodiac signs will face difficulties in kannada

ಕುಂಭ ರಾಶಿ

ಕುಂಭ ರಾಶಿಯ ಮೊದಲ ಮನೆಯಲ್ಲಿ ಶನಿ ಮತ್ತು ಚಂದ್ರ ಸಂಯೋಗದಿಂದ ವಿಷ ಯೋಗವು ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಶತ್ರುಗಳು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಾರೆ. ನ್ಯಾಯಾಲಯದ ಪ್ರಕರಣಗಳಿದ್ದರೆ, ತೀರ್ಪುಗಳು ನಿಮಗೆ ಅನುಕೂಲಕರವಾಗಿರುವುದಿಲ್ಲ. ಕಚೇರಿಯಲ್ಲಿ ನಡೆಯುವ ರಾಜಕೀಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಇದು ನಿಮ್ಮ ಆತಂಕವನ್ನು ಹೆಚ್ಚಿಸಬಹುದು. ಶಾಂತ ನಿದ್ರೆಯ ಕೊರತೆಯಿಂದ ಬಳಲಬಹುದು. ಒಟ್ಟಾರೆಯಾಗಿ ಈ ಅವಧಿಯು ಕುಂಭ ರಾಶಿಯವರಿಗೆ ತುಂಬಾ ಕೆಟ್ಟದಾಗಿರುತ್ತದೆ.

ವಿಷ ಯೋಗದಿಂದ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಹಾರಗಳು:

* ಚಂದ್ರಾಷ್ಟಮ ಮತ್ತು ಶನಿವಾರದಂದು ಚಂದ್ರ ಮತ್ತು ಶನಿಗೆ ಪೂಜೆಗಳನ್ನು ನಡೆಸುವುದು ಒಳ್ಳೆಯದು.

*ವಿಷ ಯೋಗದ ಪ್ರಭಾವವನ್ನು ಕಡಿಮೆ ಮಾಡಲು ಬಡವರಿಗೆ ದಾನವನ್ನು ನೀಡಬಹುದು.

* ಸೋಮವಾರ ಮತ್ತು ಶನಿವಾರದಂದು ಉಪವಾಸ ಮಾಡುವುದರಿಂದ ನಕಾರಾತ್ಮಕ ಪ್ರಭಾವ ಕಡಿಮೆಯಾಗುತ್ತದೆ.

* ಶನಿವಾರದಂದು ಅರಸಿನ ಮರಕ್ಕೆ ನೀರು ಹಾಕುವುದರಿಂದ ವಿಷ ಯೋಗದಿಂದ ಎದುರಾಗುವ ತೊಂದರೆಗಳು ಕಡಿಮೆಯಾಗುತ್ತವೆ

* ರುದ್ರಾಭಿಷೇಕ ಮಾಡುವುದರಿಂದ ಪುಣ್ಯ ಸಿಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+