ಶನಿವಾರ ಈ ಕೆಲಸಗಳನ್ನು ಮಾಡಿದರೆ ಬದಲಾಗಲಿದೆ ನಿಮ್ಮ ಅದೃಷ್ಟ: ಶನಿದೇವನ ಕೃಪೆಗೆ ಇಲ್ಲಿದೆ ಸರಳ ವಾಸ್ತು ಟಿಪ್ಸ್

ವಾಸ್ತು ಶಾಸ್ತ್ರದ ಪ್ರಕಾರ ಶನಿವಾರ ಕೆಲವೊಂದು ಸಣ್ಣ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಹೆಚ್ಚು ಶುಭಫಲಗಳು ಸಿಗಲಿವೆ ಎಂದು ನಂಬಲಾಗಿದೆ. ಶನಿ ದೇವರು ವ್ಯಕ್ತಿಯ ಕ್ರಿಯಾ ಕರ್ಮಗಳ ಆಧಾರದ ಮೇಲೆ ಫಲವನ್ನು ನೀಡುವ ದೇವರು. ಬಹುತೇಕರು ಶನಿ ದೇವರನ್ನು ಕಂಡರೆ ಭಯಪಡುತ್ತಾರೆ ಮತ್ತು ಶನಿ ದೇವರನ್ನು ನಂಬುತ್ತಾರೆ. ಶನಿ ದೇವರು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸಿ ಒಳ್ಳೆ ದಾರಿಯಲ್ಲಿ ನಡೆಯುವ ಹಾಗೆ ಮಾಡುವ ಶಕ್ತಿ ಹೊಂದಿದೆ.

ಶನಿವಾರದ ದೋಷ ನಿವಾರಣೆಗೆ ವಾಸ್ತು ಸಲಹೆಗಳು:

1. ಕಾಗೆಗಳಿಗೆ ಆಹಾರ ನೀಡಿ (ಪಿತೃ ದೋಷ ನಿವಾರಣೆ):

ಶನಿವಾರದಂದು ಕಾಗೆಗಳಿಗೆ ಅನ್ನ ಅಥವಾ ಧಾನ್ಯಗಳನ್ನು ನೀಡುವುದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಇದು ನಿಮ್ಮ ಪಿತೃಗಳ ಆತ್ಮಕ್ಕೆ ಶಾಂತಿ ನೀಡುವುದಲ್ಲದೆ ನಿಮ್ಮ ಕುಟುಂಬದ ಮೇಲಿರುವ ಪಿತೃ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

Saturday Vastu Tips

2. ಪಾದರಕ್ಷೆಗಳ ದಾನ (ಆರೋಗ್ಯ ವೃದ್ಧಿ):

ಪಾದರಕ್ಷೆಗಳನ್ನು ದಾನ ಮಾಡುವುದು ಶನಿದೇವನಿಗೆ ಪ್ರಿಯವಾದ ಕಾರ್ಯ. ಶನಿವಾರದಂದು ನಿರ್ಗತಿಕರಿಗೆ ಚಪ್ಪಲಿ ಅಥವಾ ಬೂಟುಗಳನ್ನು ದಾನ ಮಾಡುವುದರಿಂದ ಕಾಲುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ.

3. ಹನುಮಂತನ ಆರಾಧನೆ:

ಶನಿದೇವರ ಕಾಟದಿಂದ ತಪ್ಪಿಸಿಕೊಳ್ಳಲು ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಸುಲಭದ ಹಾದಿ. ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ಹನುಮ ಚಾಲೀಸಾ ಪಠಿಸುವುದರಿಂದ ಶನಿ ದೋಷದ ಪ್ರಭಾವ ತಗ್ಗುತ್ತದೆ.

4. ಬಣ್ಣಗಳ ಆಯ್ಕೆ:

ಶನಿದೇವನಿಗೆ ಕಪ್ಪು ಮತ್ತು ನೀಲಿ ಬಣ್ಣಗಳೆಂದರೆ ತುಂಬಾ ಇಷ್ಟ. ಈ ದಿನದಂದು ಕಪ್ಪು ಬಟ್ಟೆಗಳನ್ನು ಧರಿಸುವುದು ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡುವುದು ಶ್ರೇಯಸ್ಕರ.

ಶನಿಯಿಂದ ಭಯ ಬೇಡ ಶಿಸ್ತು ಇರಲಿ

ಅನೇಕರು ಶನಿದೇವನೆಂದರೆ ಭಯಪಡುತ್ತಾರೆ. ಆದರೆ ಶನಿಯು ನಮಗೆ ಜೀವನದ ಕಠಿಣ ಪಾಠಗಳನ್ನು ಕಲಿಸಿ, ನಮ್ಮನ್ನು ಶಿಸ್ತುಬದ್ಧ ವ್ಯಕ್ತಿಯನ್ನಾಗಿ ಮಾಡುತ್ತಾನೆ. ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕ ಬದಲಾವಣೆ ತರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+