Sarvartha Siddhi Yoga 2024: ಸರ್ವಾರ್ಥ ಸಿದ್ಧಿ ಯೋಗ: ಈ ರಾಶಿಯವರಿಗೆ ಶತ್ರು ಸೋಲಿಸುವಷ್ಟು ಧೈರ್ಯ..
ಗ್ರಹಗಳು ಆಗಾಗ ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಈ ಗ್ರಹಗಳ ಸ್ಥಾನ ಜಾತಕದಲ್ಲಿ ಬಲವಾಗಿದ್ದರೆ ಅಂಥವರ ಜೀವನ ಸುಂದರವಾಗಿ ಸಮೃದ್ಧಿಯಿಂದ ಕೂಡಿಯುತ್ತದೆ. ಆದರೆ ಜಾತಕದಲ್ಲಿ ಗ್ರಹಗಳ ಸ್ಥಾನ ದುರ್ಬಲವಾಗಿದ್ದರೆ ಅಂಥವರ ಜೀವನ ಸಮಸ್ಯೆಗಳಿಂದ ಕೂಡಿರುತ್ತದೆ. ಅಂದಹಾಗೆ ಇಂದು (ಅಕ್ಟೋಬರ್ 15) ಚಂದ್ರನು ಮೀನ ರಾಶಿಗೆ ಸಂಚಾರ ಮಾಡಲಿದ್ದಾನೆ. ಇದರಿಂದಾಗಿ ವೃದ್ಧಿ ಯೋಗ, ಧ್ರುವ ಯೋಗ, ಸರ್ವಾರ್ಥ ಸಿದ್ಧಿ ಯೋಗ ರೂಪಗೊಳ್ಳಲಿದೆ.
ಸರ್ವಾರ್ಥ ಸಿದ್ಧಿ ಯೋಗ ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಈ ಯೋಗವು ಮೃತ್ಯು ಯೋಗದಂತಹ ಇತರ ಅಶುಭ ಯೋಗಗಳ ದುಷ್ಪರಿಣಾಮಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಈ ಶುಭ ಯೋಗಗಳ ಪರಿಣಾಮ ಎಲ್ಲಾ ರಾಶಿಗಳಿ ಮೇಲೆ ಬೀಳಲಿದೆ. ಕೆಲ ರಾಶಿಯವರು ಈ ಮಂಗಳಕರ ಯೋಗದಿಂದ ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ ಇಂದು ರೂಪಗೊಳ್ಳುವ ಯೋಗಗಳ ಶುಭ ಪರಿಣಾಮವನ್ನು ಯಾವ ರಾಶಿಯವರು ಅನುಭವಿಸಲಿದ್ದಾರೆ ಎಂದು ತಿಳಿಯೋಣ.

ವೃಷಭ ರಾಶಿ
ಚಂದ್ರನು ಮೀನ ರಾಶಿಗೆ ಸಂಚಾರ ಮಾಡುವುದು ವೃಷಭ ರಾಶಿಯವರಿಗೆ ಶುಭಕರವಾಗಿರುತ್ತದೆ. ಹೂಡಿಕೆಯಿಂದ ಧನಲಾಭ ಪ್ರಾಪ್ತಿಯಾಗಲಿದೆ. ನಿಮ್ಮ ನಡವಳಿಕೆಯು ತುಂಬಾ ಮೃದುವಾಗಿರುತ್ತದೆ. ಸ್ವಂತ ವ್ಯಾಪಾರ ಮಾಡುವವರು ಲಾಭ ಗಳಿಸುತ್ತಾರೆ. ಉದ್ಯೋಗಿಗಳ ಸ್ಥಾನ ಅವರ ಕ್ಷೇತ್ರದಲ್ಲಿ ಬಹಳ ಪ್ರಬಲವಾಗಿರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಆರೋಗ್ಯ ಭಾಗ್ಯ ಸಿಗಲಿದೆ. ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದು. ಅಲ್ಲದೆ ಈ ರಾಶಿಯವರು ಶತ್ರುಗಳನ್ನು ಸದೆಬಡಿಯುವಷ್ಟು ಧೈರ್ಯ ಹೊಂದಿರುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಚಂದ್ರನು ಮೀನ ರಾಶಿಗೆ ಸಂಚಾರ ಮಾಡುವುದು ವಿಶೇಷವಾಗಿ ಫಲದಾಯಕ ದಿನವಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಪತ್ತು ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಯಾವುದೇ ತಪ್ಪು ತಿಳುವಳಿಕೆ ಸರಿಹೋಗುತ್ತದೆ. ಸಿಂಹ ರಾಶಿಯ ಜನರು ಆಧ್ಯಾತ್ಮದತ್ತ ಒಲವು ತೋರುತ್ತಾರೆ. ಹನುಮಂತನ ಕೃಪೆಯಿಂದ ಧೈರ್ಯ ಹೆಚ್ಚಿ ಎಲ್ಲ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗಿ ಕೋರ್ಸ್ ಮಾಡಲು ಬಯಸುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ತುಲಾ ರಾಶಿ
ಚಂದ್ರನು ಮೀನ ರಾಶಿಗೆ ಸಂಚಾರ ಮಾಡುವುದು ತುಲಾ ರಾಶಿಯವರಿಗೆ ಖುಷಿಯ ದಿನವಾಗಿರುತ್ತದೆ. ಅದೃಷ್ಟದ ಸಮಯ ಇದಾಗಿದೆ. ಧನ ಲಕ್ಷ್ಮಿಯ ಆಶೀರ್ವಾದ ನಿಮ್ಮಮೇಲಿರಲಿದೆ. ಶಿವನ ಕೃಪೆಯಿಂದ ಹಣದ ಆಗಮನವಾಗಲಿದೆ. ಸ್ವಂತ ವ್ಯವಹಾರದಲ್ಲಿ ಆರ್ಥಿಕ ಲಾಭ ಹೆಚ್ಚಾಗಲಿದೆ. ನಿಮ್ಮ ಕ್ಷೇತ್ರದಲ್ಲಿ ಪ್ರಾಬಲ್ಯ, ಆರೋಗ್ಯಕರ ಜೀವನ ನಡೆಸುವಿರಿ. ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಮೂಡಲಿದೆ. ಶನಿ ದೋಷದಿಂದ ಮುಕ್ತಿ ಸಿಗಲಿದೆ. ಶತ್ರುಗಳನ್ನು ಗೆಲ್ಲುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ.

ವೃಶ್ಚಿಕ ರಾಶಿ
ಈವರೆಗೂ ಇದ್ದ ಸಮಸ್ಯೆಗಳು ದೂರವಾಗಲಿವೆ. ವೃಶ್ಚಿಕ ರಾಶಿಯವರಿಗೆ ಹೊಸ ಭರವಸೆಯ ಕಿರಣವನ್ನು ಚಂದ್ರ ಸಂಚಾರ ತರಲಿದೆ. ನೀವು ಸಾಲದಿಂದ ಮುಕ್ತಿ ಹೊಂದುವಿರಿ. ಕಾನೂನು ವಿಷಯಗಳಲ್ಲಿ ಸಿಲುಕಿಕೊಂಡಿದ್ದರೆ ಪರಿಹಾರ ಸಿಗಲಿದೆ. ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಲವ್ ಲೈಫ್ ಅದ್ಭುತವಾಗಿರುತ್ತದೆ. ಯಾವುದೇ ದೋಷವಿದ್ದರೆ ಅದು ಈ ಸಮಯದಲ್ಲಿ ದೂರವಾಗುತ್ತದೆ. ಶತ್ರುಗಳನ್ನು ಮಿತ್ರರನ್ನಾಗಿಸುವ ಸಾಮಾರ್ಥ್ಯ ಇವರಿಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಚಂದ್ರನು ಮೀನ ರಾಶಿಗೆ ಸಂಚಾರ ಮಾಡುವುದು ಲಾಭದಾಯಕವಾಗಿರುತ್ತದೆ. ಮಕರ ರಾಶಿಯವರ ಸಮಸ್ಯೆಗಳೆಲ್ಲವೂ ದೂರವಾಗಲಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಅಧಿಕ ಲಾಭ ಇದರಿಂದ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷದಿಂದ ಸಮಯ ಕಳೆಯುತ್ತೀರಿ. ಅವರನ್ನು ಎಲ್ಲೋ ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು. ಹಾಳಾದ ಕೆಲಸವನ್ನು ಪೂರ್ಣಗೊಳಿಸಿ ಪ್ರಶಂಸಿಸಲ್ಪಡುವಿರಿ. ಉದ್ಯೋಗ ಮತ್ತು ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.












Click it and Unblock the Notifications