ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲ

By ವೇದ ಬ್ರಹ್ಮಶ್ರೀ ಗುರೂಜಿ ಹರೀಶ್ ಶಾಸ್ತ್ರಿ
|
Google Oneindia Kannada News

Recommended Video

Sankranti Festival 2019 : 12 ರಾಶಿಚಕ್ರಗಳ ಸಂಕ್ರಾಂತಿ ಭವಿಷ್ಯ | Oneindia Kannada

ಒನ್ ಇಂಡಿಯಾ ಕನ್ನಡ ಓದುಗರಿಗೆ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರುತ್ತಲೇ ಸಂಕ್ರಾಂತಿ ರಾಶಿ ಫಲವನ್ನು ತಿಳಿಸಿಕೊಡಲಿದ್ದೇನೆ. ರವಿಯು ತನ್ನ ಪಥವನ್ನು ಬದಲಿಸುವ ಪರ್ವ ಕಾಲ ಮಕರ ಸಂಕ್ರಾಂತಿ ಅಥವಾ ಸಂಕ್ರಮಣ. ಹಾಗೆ ನೋಡಿದರೆ ಪ್ರತಿ ತಿಂಗಳೂ ಸಂಕ್ರಮಣ ಆಗುತ್ತಲೇ ಇರುತ್ತದೆ. ಆದರೆ ಮಕರ ಸಂಕ್ರಮಣಕ್ಕೆ ವಿಶೇಷವಾದ ಪ್ರಾಶಸ್ತ್ಯ.

ರವಿಯು ಮಕರ ರಾಶಿಯನ್ನು ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಮಣ ಎನ್ನಲಾಗುತ್ತದೆ. ಈ ದಿನದ ವಿಶೇಷತೆ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ ಬರುತ್ತದೆ. ಇಚ್ಛಾ ಮರಣಿ ಆಗಿದ್ದ ಭೀಷ್ಮರು ಉತ್ತರಾಯಣ ಪುಣ್ಯ ಕಾಲ ಎನಿಸಿಕೊಳ್ಳುವ ಈ ದಿನಕ್ಕಾಗಿಯೇ ಕಾಯ್ದು, ಆ ನಂತರ ಇಹ ಲೋಕವನ್ನು ತ್ಯಜಿಸುತ್ತಾರೆ.

2019ರ ವರ್ಷ ಭವಿಷ್ಯ; ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ 2019ರ ವರ್ಷ ಭವಿಷ್ಯ; ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ

ಇನ್ನು ಯಾವುದೇ ಶುಭ ಕಾರ್ಯಗಳಿಗೆ ಉತ್ತರಾಯಣವೇ ಪ್ರಶಸ್ತವಾದ ಕಾಲ. ರೈತ ಬಂಧುಗಳ ಪಾಲಿಗೆ ಕೂಡ ಅಷ್ಟೇ ಮಹತ್ವದ ಹಬ್ಬ ಇದು. ಒಟ್ಟಾರೆಯಾಗಿ ಎಲ್ಲರಿಗೂ ಶುಭ ಹಾರೈಸುವ ಸಂಕ್ರಾಂತಿ ಹಬ್ಬದಲ್ಲಿ ಹನ್ನೆರಡು ರಾಶಿಗಳಿಗೆ ಯಾವ ರೀತಿಯ ಫಲ ಇದೆ ಎಂದು ತಿಳಿಸುವ ಲೇಖನ ಇಲ್ಲಿದೆ.

ಮೇಷ: ಹೊಸ ಯೋಜನೆಗಳು ಆರಂಭ, ಮನೆಯಲ್ಲಿ ಶುಭ ಕಾರ್ಯ

ಮೇಷ: ಹೊಸ ಯೋಜನೆಗಳು ಆರಂಭ, ಮನೆಯಲ್ಲಿ ಶುಭ ಕಾರ್ಯ

ನಿಮಗೆ ಅದ್ಭುತವಾದ ಫಲಗಳನ್ನು ಹೇಳಬಹುದು. ಅತ್ಯಂತ ಲಾಭದಾಯಕವಾಗಿರುತ್ತದೆ. ಹೊಸ ಕೆಲಸಗಳ ಅವಕಾಶ ಸೃಷ್ಟಿಯಾಗುತ್ತದೆ. ಅದರಿಂದ ಜಯ ಪ್ರಾಪ್ತಿ ಆಗುತ್ತದೆ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ನೆರವು ನೀಡುತ್ತಾರೆ. ಹೊಸ ಯೋಜನೆಗಳು ಆರಂಭ ಆಗುತ್ತವೆ. ಯಾವುದೇ ಕೆಲಸಕ್ಕೆ ಯತ್ನಿಸಿದರೂ ಅದರಲ್ಲಿ ಜಯ ಸಿಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಅವಕಾಶಗಳಿವೆ. ಯಾವುದೇ ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ನಿಮ್ಮ ಮನೆ ದೇವರ ಅನುಗ್ರಹವನ್ನು ಪಡೆಯಿರಿ.

ವೃಷಭ: ವಿದೇಶಿ ವ್ಯಾಸಂಗ, ಉದ್ಯೋಗಕ್ಕೆ ಅನುಕೂಲ

ವೃಷಭ: ವಿದೇಶಿ ವ್ಯಾಸಂಗ, ಉದ್ಯೋಗಕ್ಕೆ ಅನುಕೂಲ

ನಿಮಗೆ ಮಿಶ್ರ ಫಲ ಹೇಳಬೇಕಾಗುತ್ತದೆ. ನಿಧಾನವಾಗಿಯಾದರೂ ಅಂದುಕೊಂಡ ಯಶಸ್ಸು ಪಡೆಯುತ್ತೀರಿ. ಉತ್ತಮ ಫಲ ಪಡೆಯಬೇಕು ಅಂದರೆ ಮಕರ ಸಂಕ್ರಮಣದ ದಿನದಂದು ಗೋವಿನ ದರ್ಶನ ಹಾಗೂ ಗುರು ಹಿರಿಯರ ದರ್ಶನ ಮಾಡಿ, ಆಶೀರ್ವಾದ ಪಡೆಯಬೇಕು. ನಿಮಗೆ ವಿದೇಶ ವ್ಯಾಸಂಗ ಅಥವಾ ಉದ್ಯೋಗ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಹೊಸದಾದ ವ್ಯವಹಾರ-ವ್ಯಾಪಾರ ಆರಂಭ ಮಾಡಲು ಈ ಬಾರಿಯ ಸಂಕ್ರಾಂತಿ ಬಹಳ ಉತ್ತಮ ಸಮಯ ಇದೆ. ಆ ಕಾರಣಕ್ಕೆ ರಾಜಯೋಗ ಇದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು, ಮನಸಿಗೆ ನೆಮ್ಮದಿ ದೊರೆಯುತ್ತದೆ.

ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ

ಮಿಥುನ: ವಿವಾಹ ವಿಳಂಬ ಸಮಸ್ಯೆ ನಿವಾರಣೆ

ಮಿಥುನ: ವಿವಾಹ ವಿಳಂಬ ಸಮಸ್ಯೆ ನಿವಾರಣೆ

ನಿಮಗೆ ಸಪ್ತಮ ಭಾವದಲ್ಲಿ ಶನಿ ಇದೆ. ಈ ಸ್ಥಾನವು ಕಳತ್ರ ಭಾವವನ್ನು ಸೂಚಿಸುತ್ತದೆ. ಈ ವರೆಗೆ ಯಾರ್ಯಾರಿಗೆ ಮದುವೆ ವಿಳಂಬ ಆಗುತ್ತಿದೆ ಅಥವಾ ಇನ್ನೇನು ವಿವಾಹ ಆಗೇಹೋಯಿತು ಎನ್ನುವಷ್ಟರಲ್ಲಿ ನಿಂತು ಹೋಗುತ್ತಿತ್ತು, ಅಂಥವರಿಗೆ ಈ ಬಾರಿಯ ಸಂಕ್ರಾಂತಿಯಲ್ಲಿ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರುತ್ತವೆ. ಮಾನಸಿಕ ಕ್ಷೋಭೆ ಎದುರಿಸುತ್ತಿರುವ ಮಿಥುನ ರಾಶಿಯವರಿಗೆ ಸಮಸ್ಯೆಯಿಂದ ಮುಕ್ತಿ ದೊರೆಯಬೇಕು ಅಂದರೆ ಮನೆ ದೇವರ ಗುಡಿಗೆ ತೆರಳಿ ದರ್ಶನ ಪಡೆಯಿರಿ. ಆ ನಂತರ ದೇವರ ಬಳಿ ತುಪ್ಪದ ದೀಪ ಹಚ್ಚಿಟ್ಟರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕರ್ಕಾಟಕ: ಶತ್ರು ಬಾಧೆ, ಋಣ ಬಾಧೆ ಪರಿಹಾರವಿದೆ

ಕರ್ಕಾಟಕ: ಶತ್ರು ಬಾಧೆ, ಋಣ ಬಾಧೆ ಪರಿಹಾರವಿದೆ

ಮಕರ ರಾಶಿಗೆ ಪ್ರವೇಶ ಮಾಡುವ ರವಿ ನಿಮಗೆ ಯಾವ ರೀತಿಯ ಫಲ ನೀಡುತ್ತಾನೆ ಅನ್ನೋದನ್ನು ನೋಡುವುದಾದರೆ, ನಿಮ್ಮ ಜನ್ಮ ರಾಶಿಯಿಂದ ಮಕರ ರಾಶಿ ಏಳನೇ ಸ್ಥಾನವಾಗುತ್ತದೆ. ಅಲ್ಲಿ ಸ್ಥಿತನಾದ ರವಿಯ ಪೂರ್ಣ ದೃಷ್ಟಿಯು ನಿಮ್ಮ ರಾಶಿಯ ಮೇಲೆ ಬೀಳುತ್ತದೆ. ಆದ್ದರಿಂದ ಈ ಸಂಕ್ರಾಂತಿ ಬಹಳ ಉತ್ತಮವಾದ ಫಲಗಳು ನಿಮಗಿವೆ. ಹಾಗಂತ ಒಂದೆರಡು ಫಲ ಮಾತ್ರವಲ್ಲ, ಹಲವಾರು ಇವೆ. ಶತ್ರು ಬಾಧೆ, ಋಣ ಬಾಧೆ ಪರಿಹಾರ ಆಗುತ್ತವೆ. ನೀವು ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ಹಣಕಾಸು ಪರಿಸ್ಥಿತಿ ಉತ್ತಮ ಆಗುತ್ತದೆ. ಅಂತೂ ಶುಭ ಫಲಗಳನ್ನೇ ಪಡೆಯುತ್ತೀರಿ.

ಸಿಂಹ: ಮನೆ-ಆಸ್ತಿ ಖರೀದಿಗೆ ಸೂಕ್ತ ಕಾಲವಿದು

ಸಿಂಹ: ಮನೆ-ಆಸ್ತಿ ಖರೀದಿಗೆ ಸೂಕ್ತ ಕಾಲವಿದು

ನಿಮಗೆ ವಿಶೇಷ ಫಲಗಳು ದೊರೆಯಲಿವೆ. ಆದರೆ ಯಾವ ಕಾರಣಕ್ಕೂ ಆತುರ ಪಡಬೇಡಿ. ಆತುರಾತುರವಾಗಿ ಮಾಡಿದ ಯಾವ ಕೆಲಸವೂ ಯಶಸ್ಸು ಪಡೆಯುವುದಿಲ್ಲ. ಹಿರಿಯರ ಮಾರ್ಗದರ್ಶನ ಪಡೆದು, ಮುಂದುವರಿಯಿರಿ. ಜನ್ಮ ಜಾತಕದಲ್ಲಿ ಪಂಚಮದಲ್ಲಿನ ಶನಿ ದೋಷಕಾರಿ ಆಗಬಹುದು ಆದರೆ ಗೋಚಾರದಲ್ಲಿ ಪಂಚಮ ಶನಿ, ಚತುರ್ಥದಲ್ಲಿ ಇರುವ ಗುರು, ಅಷ್ಟಮದಲ್ಲಿರುವ ಕುಜ ಇಷ್ಟೆಲ್ಲ ಗ್ರಹ ಸ್ಥಿತಿಗಳನ್ನು ನೋಡಿದರೆ ಈ ಬಾರಿಯ ಸಂಕ್ರಾಂತಿ ಬಹಳ ವಿಶೇಷ ಫಲಗಳನ್ನು ನಿಮಗೆ ನೀಡುತ್ತದೆ. ಯಾರು ಆಸ್ತಿ ಅಥವಾ ಮನೆ, ಫ್ಲ್ಯಾಟ್ ಖರೀದಿ ಮಾಡಬೇಕು ಎಂಬ ಪ್ರಯತ್ನದಲ್ಲಿ ಇದ್ದೀರೋ ಅಂಥವರಿಗೆ ಉತ್ತಮವಾದ ಫಲವನ್ನು ನೀಡುತ್ತದೆ.

ಸಿಂಹ ಮಾಸದಲ್ಲಿ ಮಗು ಹುಟ್ಟಿದರೆ ತಂದೆ-ಮಕ್ಕಳ ಸಂಬಂಧ ಗಟ್ಟಿಯೋ ಗಟ್ಟಿಸಿಂಹ ಮಾಸದಲ್ಲಿ ಮಗು ಹುಟ್ಟಿದರೆ ತಂದೆ-ಮಕ್ಕಳ ಸಂಬಂಧ ಗಟ್ಟಿಯೋ ಗಟ್ಟಿ

ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ದಿಗ್ವಿಜಯ ಇದೆ

ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ದಿಗ್ವಿಜಯ ಇದೆ

ಅತ್ಯಂತ ಶ್ರೇಷ್ಠ ಫಲಗಳು ದೊರೆಯುತ್ತವೆ. ಸಪ್ತಮ ಸ್ಥಾನದಲ್ಲಿ ಕುಜ ಇದೆ. ಪಂಚಮ ಸ್ಥಾನಾಧಿಪತಿ ಏಕಾದಶದಲ್ಲಿದ್ದರೆ ಅಥವಾ ಭಾಗ್ಯದಲ್ಲಿದ್ದರೆ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ದೊರೆಯುತ್ತದೆ. ಮಕ್ಕಳಿಂದ ಹೆಚ್ಚಿನ ಕೀರ್ತಿ ದೊರೆಯುತ್ತದೆ. ಆರೋಗ್ಯದಲ್ಲಿ ವೃದ್ಧಿ ಇದೆ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಫಲ ಇದೆ. ಷೇರು ವ್ಯವಹಾರಗಳಲ್ಲಿ ಲಾಭ ಇದೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ದುಪ್ಪಟ್ಟು ಆಗಲಿದೆ. ಯಾವುದೇ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದಂತೆ ದಿಗ್ವಿಜಯ ಸಾಧಿಸುತ್ತೀರಿ. ಹೊಸದಾಗಿ ಶಾಖೆ ಕಚೇರಿಗಳನ್ನು ತೆರೆಯುತ್ತೀರಿ. ಆದರೆ ಯಾವುದೇ ಕಾರಣಕ್ಕೂ ಸಾಲ ನೀಡಬೇಡಿ. ಹಾಗೆ ನೀಡಿದ ಸಾಲ ವಾಪಸ್ ಬರುವುದಿಲ್ಲ.

ತುಲಾ: ಪದೋನ್ನತಿ, ಏಳ್ಗೆ ಕಾಣುತ್ತೀರಿ

ತುಲಾ: ಪದೋನ್ನತಿ, ಏಳ್ಗೆ ಕಾಣುತ್ತೀರಿ

ಧನ ಸ್ಥಾನ, ವಾಕ್ ಸ್ಥಾನ, ಪ್ರಾರಂಭಿಕ ವಿದ್ಯಾ ಸ್ಥಾನ, ಕುಟುಂಬ ಸ್ಥಾನ ಎಂದು ಕರೆಸಿಕೊಳ್ಳುವ ಎರಡನೇ ಮನೆಯಲ್ಲಿ, ಅಂದರೆ ನಿಮ್ಮ ರಾಶಿಗೆ ಎರಡರಲ್ಲಿ ಗುರು ಇರುವುದರಿಂದ ದುಡ್ಡು ಜಾಸ್ತಿ ಸೇರುತ್ತದೆ. ಸಂಬಳ ಜಾಸ್ತಿ ಆಗುತ್ತದೆ. ಪದೋನ್ನತಿ ಆಗುತ್ತದೆ. ಜೀವನದಲ್ಲಿ ಒಂದು ಮೆಟ್ಟಿಲನ್ನು ಮೇಲಕ್ಕೆ ಹತ್ತುತ್ತೀರಿ. ಅಭಿವೃದ್ಧಿ ಮೆಟ್ಟಿಲನ್ನು ಹತ್ತುತ್ತೀರಿ. ಆರೋಗ್ಯದಲ್ಲಿ ವೃದ್ಧಿ ಇದೆ. ಶುಭ ಕಾರ್ಯಗಳು ನಡೆಯುತ್ತವೆ. ಇಷ್ಟೆಲ್ಲ ಆದ ಮೇಲೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿ ಆಗುತ್ತದೆ. ಹಿಡಿದ ಕೆಲಸದಲ್ಲಿ ಸಿಕ್ಕ ಯಶಸ್ಸು ಮನಸಿಗೆ ಧೈರ್ಯ ತುಂಬುತ್ತದೆ. ಭವಿಷ್ಯದ ಹಾದಿಯಲ್ಲಿ ಸಾಗಬೇಕಾದ ಹೆಜ್ಜೆಗಳು ಇನ್ನಷ್ಟು ದೃಢವಾಗುತ್ತವೆ.

ವೃಶ್ಚಿಕ: ಗುರು ಹಾಗೂ ಕುಜರ ಪರಿವರ್ತನಾ ಯೋಗ

ವೃಶ್ಚಿಕ: ಗುರು ಹಾಗೂ ಕುಜರ ಪರಿವರ್ತನಾ ಯೋಗ

ಸಂಕ್ರಾಂತಿ ಅಷ್ಟೊಂದು ಶುಭ ನೀಡುವಂಥದ್ದಲ್ಲ. ಜನ್ಮ ರಾಶಿಯಲ್ಲಿರುವ ಗುರು ಉತ್ತಮವಾದ ಫಲ ನೀಡುವುದಿಲ್ಲ. ನಿಮ್ಮ ರಾಶ್ಯಾಧಿಪತಿ ಐದರಲ್ಲಿದೆ ಹಾಗೂ ಐದನೇ ಸ್ಥಾನಾಧಿಪತಿ ನಿಮ್ಮ ರಾಶಿಯಲ್ಲೇ ಇದ್ದಾನೆ. ಇದು ಪರಿವರ್ತನೆ ಯೋಗ. ಚೆನ್ನಾಗಿಲ್ಲ ಅಂತ ಹೇಳಲೂ ಆಗಲ್ಲ, ಚೆನ್ನಾಗಿದೆ ಅನ್ನಲೂ ಸಾಧ್ಯವಿಲ್ಲ. ಏಕೆಂದರೆ ಇದು ಪರಿವರ್ತನಾ ಯೋಗ. ಕುಜ ನೀಡಬೇಕಾದ ಫಲವನ್ನು ಕುಜನು ಹಾಗೂ ಗುರು ನೀಡಬೇಕಾದ ಫಲವನ್ನು ಆ ಗ್ರಹವೂ ನೀಡುತ್ತದೆ. ಎಲ್ಲ ಕೆಲಸ ಪೂರ್ಣವಾಯಿತು ಅಂದುಕೊಳ್ಳುವಾಗ ಕೊನೆಯಲ್ಲಿ ಚೂರು ಕೊಕ್ಕೆ ಬೀಳುತ್ತದೆ. ಇನ್ನು ಈ ತೊಂದರೆಯಿಂದ ಆಚೆ ಬರುವುದಕ್ಕೆ ಸಂಕ್ರಾಂತಿ ಹಬ್ಬದ ದಿನ ಈಶ್ವರನ ದರ್ಶನ ಪಡೆಯಿರಿ. ದ್ವಿತೀಯ ಸ್ಥಾನದಲ್ಲಿರುವ ಶನಿಯಿಂದ ಕೆಲಸದಲ್ಲಿ ವೃದ್ಧಿ ಆಗುತ್ತದೆ.

ಧನುಸ್ಸು: ಉನ್ನತವಾದ ಹುದ್ದೆಗೆ ಏರುವ ಅವಕಾಶಗಳಿವೆ

ಧನುಸ್ಸು: ಉನ್ನತವಾದ ಹುದ್ದೆಗೆ ಏರುವ ಅವಕಾಶಗಳಿವೆ

ಈ ಬಾರಿ ಸಂಕ್ರಾಂತಿಗೆ ಉತ್ತಮ ಫಲದಾಯಕವಾಗಿದೆ. ಚತುರ್ಥ ಸ್ಥಾನವನ್ನು ಸುಖ ಸ್ಥಾನ ಅನ್ನುತ್ತೇವೆ ಅಲ್ಲಿ ಕುಜ ಗ್ರಹ ಇದೆ. ಆ ಸ್ಥಾನದ ಮೇಲೆ ಗುರುವಿನ ದೃಷ್ಟಿ ಇದೆ. ನಿಮಗೆ ರಾಶ್ಯಾಧಿಪತಿಯೇ ಗುರು. ಶಿಕ್ಷಕರು, ಉಪನ್ಯಾಸಕರು, ಪ್ರೊಫೆಸರ್ ಗಳು ಉತ್ತಮ ಫಲ ಸಿಗುತ್ತದೆ. ಸಿಎ ಮಾಡುವವರಿಗೆ ಯೋಗ ಇದೆ. ಯಾವುದಾದರೂ ಮಂಡಳಿ, ಸಂಸ್ಥೆಗೆ ಅಧ್ಯಕ್ಷ ಹುದ್ದೆಯಲ್ಲಿ ಕೂರುವ ಯೋಗ ಇದೆ. ಹೆಚ್ಚಿನ ಜವಾಬ್ದಾರಿ ನಿಮಗೆ ನೀಡಲಾಗುತ್ತದೆ. ಸಿಂಹಾಸನದ ಮೇಲೆ ಕೂರುವ ಯೋಗ ಇದೆ. ಅದನ್ನು ಯಥಾವತ್ ಅರ್ಥದಲ್ಲಿ ಗ್ರಹಿಸುವ ಅಗತ್ಯ ಇಲ್ಲ. ನಿಗಮ-ಮಂಡಳಿ, ಸಂಸ್ಥೆ, ವಿದ್ಯಾಲಯಗಳ ಎಂ.ಡಿ., ಸಿಇಒ, ಮುಖ್ಯಸ್ಥರಾಗುವ ಯೋಗವಿದೆ. ಆದರೂ ಗುರು-ಮಂಗಳ ಸ್ತೋತ್ರ ಪಾರಾಯಣ, ಶ್ರವಣ ಮಾಡಿ.

ಮಕರ: ಎಲ್ಲ ಕೆಲಸಗಳಲ್ಲೂ ಜಯ ಕಾಣುತ್ತೀರಿ

ಮಕರ: ಎಲ್ಲ ಕೆಲಸಗಳಲ್ಲೂ ಜಯ ಕಾಣುತ್ತೀರಿ

ಈ ಸಂಕ್ರಾಂತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೀರಿ. ಒಳ್ಳೆ ಕೆಲಸಗಳನ್ನು ಮಾಡುತ್ತೀರಿ. ಅನಾಥಾಶ್ರಮ, ಶಾಲೆ-ಕಾಲೇಜುಗಳಿಗೆ ದಾನ-ಧರ್ಮಗಳನ್ನು ಮಾಡುತ್ತೀರಿ. ಯಾವುದೇ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಏಕಾದಶ ಸ್ಥಾನದಲ್ಲಿ ಗುರು ಗ್ರಹ ಇರುವುದರಿಂದ ಹಿಡಿದ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇದು ಲಾಭ ಸ್ಥಾನ. ಆದ್ದರಿಂದ ಗುರುವಿನ ಅನುಗ್ರಹದಲ್ಲಿ ಹಾಗೂ ಬಲದಲ್ಲಿ ಯಾವುದೇ ಶುಭ ಕಾರ್ಯಗಳಿಗೂ ಅಡೆ-ತಡೆ ಆಗುವುದಿಲ್ಲ. ನಿಮಗೆ ಯಾವುದೇ ಶಾಂತಿ-ಪೂಜೆ ಅಗತ್ಯವಿಲ್ಲ. ನಿಮ್ಮ ಜೀವನದಲ್ಲಿ ಅಭಿವೃದ್ಧಿಯ ದಿನಗಳನ್ನು ಕಾಣುತ್ತೀರಿ. ಸಂತೃಪ್ತಿ ಕಾಣುತ್ತೀರಿ.

ಕುಂಭ: ಆರೋಗ್ಯ, ಆಯುಷ್ಯ ವೃದ್ಧಿ

ಕುಂಭ: ಆರೋಗ್ಯ, ಆಯುಷ್ಯ ವೃದ್ಧಿ

ಏಕಾದಶ ಸ್ಥಾನದಲ್ಲಿ ಅಂದರೆ ಲಾಭ ಸ್ಥಾನದಲ್ಲಿ ಶನಿ ಇರುವುದರಿಂದ ಆಯುಷ್ಯವೃದ್ಧಿ, ಆರೋಗ್ಯ ವೃದ್ಧಿ, ಧನ ಸ್ಥಾನದಲ್ಲಿ ಕುಜ ಇರುವುದರಿಂದ ಸಂತಾನ ವೃದ್ಧಿ, ಮನೆ-ನಿವೇಶನಗಳನ್ನು ಖರೀದಿ ಮಾಡುವ ಯೋಗ, ಹೊಸ ಕೆಲಸದಲ್ಲಿ ಜಯ ಪ್ರಾಪ್ತಿ, ಕೆಲಸದವರಿಂದ ಅನುಕೂಲ ಹೀಗೆ ಹಲವಾರು ಉತ್ತಮ ಫಲಗಳನ್ನು ಹೇಳಬಹುದು. ಶನಿಯಿಂದ ಉತ್ತಮ ಫಲಗಳನ್ನು ಹೇಳಬಹುದು. ನೀವು ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ. ಈ ಸಂಕ್ರಾಂತಿಯಲ್ಲಿ ನಿಮಗೆ ದೊರೆಯಬಹುದಾದ ಉತ್ತಮ ಫಲಗಳದೊಂದು ಪಟ್ಟಿಯನ್ನೇ ನಿಮ್ಮ ಮುಂದೆ ಇಡಲಾಗಿದೆ.

ಮೀನ: ಜಾಕ್ ಪಾಟ್ ಹೊಡೆದಂತೆ ನಿಮ್ಮ ಪಾಲಿಗೆ ಅದೃಷ್ಟ

ಮೀನ: ಜಾಕ್ ಪಾಟ್ ಹೊಡೆದಂತೆ ನಿಮ್ಮ ಪಾಲಿಗೆ ಅದೃಷ್ಟ

ನಿಮ್ಮ ಜನ್ಮ ರಾಶಿಯ ಅಧಿಪತಿಯಾದ ಗುರು ಗ್ರಹವು ಭಾಗ್ಯ ಸ್ಥಾನ ಎನ್ನುವ ಒಂಬತ್ತನೇ ಮನೆಯಲ್ಲಿ ಇದ್ದಾನೆ ಹಾಗೂ ಲಗ್ನಾಧಿಪತಿಯೂ ಒಂಬತ್ತರಲ್ಲಿ ಇದ್ದಾನೆ ಅಂದರೆ ಜಾಕ್ ಪಾಟ್ ಅಂತಲೇ ಹೇಳಲಾಗುತ್ತದೆ. ಅದೃಷ್ಟಗಳು ನಿಮಗೆ ಒಲಿದು ಬರುತ್ತವೆ. ಅನಿರೀಕ್ಷಿತವಾದ ಧನ ಲಾಭ ಆಗುತ್ತದೆ. ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಶೀರ್ವಾದ, ಪಿತ್ರಾರ್ಜಿತವಾದ ಆಸ್ತಿ ದೊರೆಯುತ್ತದೆ. ಜತೆಗೆ ಮೂರನೇ ವ್ಯಕ್ತಿಗೆ ಸೇರಿದ ಆಸ್ತಿಯೂ ನಿಮ್ಮ ಪಾಲಿಗೆ ಬರಲಿದೆ. ಆರೋಗ್ಯದಲ್ಲಿ ವೃದ್ಧಿ ಕಾಣಲಿದ್ದೀರಿ. ಅಷ್ಟೇ ಅಲ್ಲ, ಸಂಗಾತಿಯ ಕಡೆಯಿಂದ ಬರಬೇಕಾದ ಆಸ್ತಿ ಕೂಡ ನಿಮಗೆ ಸಿಗಬಹುದು. ಜತೆಗೆ ನೆಮ್ಮದಿ ದೊರೆಯಲಿದೆ.

ವೇದ ಬ್ರಹ್ಮಶ್ರೀ ಗುರೂಜಿ ಹರೀಶ್ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
This year Sankranti on January 15th. Here is the Sankranti prediction in Oneindia Kannada by well known astrologer Harish Shastri. Aries, Taurus, Gemini, Cancer etc. Sankranti is the auspicious time. Sun enters Capricorn zodiac sign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X