Raksha Bandhan: ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು? ಪ್ರತೀ ಗಂಟಿನ ಅರ್ಥ ಸಾರುತ್ತದೆ ಶಾಸ್ತ್ರ
Raksha Bandhan: ಈ ವರ್ಷ, ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 28 ರಂದು ಅಂದರೆ ನಾಳೆ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟುತ್ತಾರೆ. ಆತನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸಹೋದರನ ಜೀವನದಲ್ಲಿ ಯಾವುದೇ ಕಷ್ಟ, ನೋವು ಬಾರದಂತೆ ದೇವರಲ್ಲಿ ಕೇಳಿಕೊಳ್ಳುತ್ತಾರೆ. ಸಹೋದರರು ಸಹೋದರಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಜೀವನ ಪರ್ಯಂತ ತಮ್ಮ ಅಕ್ಕ ಅಥವಾ ತಂಗಿಯನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ರಾಖಿ ಕಟ್ಟುವುದು ಅದು ಬರೀ ಫ್ಯಾಷನ್ ಅಲ್ಲ. ರಾಖಿ ಕಟ್ಟುವುದಕ್ಕೂ ನಿಯಮವಿದೆ. ಸಹೋದರಿ ಸಹೀದರನ ಕೈಗೆ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು ಎನ್ನುವುದು ಕೂಡಾ ಗೊತ್ತಿರಬೇಕು. ಯಾಕೆಂದರೆ ಒಂದೊಂದು ಗಂಟಿಗೂ ವಿಶೇಷ ಅರ್ಥವಿದೆ.

ಹಾಗಿದ್ದರೆ ರಾಖಿ ಕಟ್ಟುವಾಗ ಎಷ್ಟು ಎಷ್ಟು ಗಂಟು ಹಾಕಬೇಕು ಎನ್ನುವುದನ್ನು ನೋಡೋಣ.
ಮೂರು ಗಂಟುಗಳ ರಹಸ್ಯ :
ರಾಖಿಯ ಮೊದಲ ಗಂಟು : ರಾಖಿಯ ಮೊದಲ ಗಂಟು ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನಿಗೆ ಸಮರ್ಪಿತವಾಗಿದೆ. ಮೊದಲ ಗಂಟು ಹಾಕುವ ಮೂಲಕ ಸಹೋದರನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಹಾರೈಸುತ್ತಾರೆ.
ರಾಖಿಯ ಎರಡನೇ ಗಂಟು : ರಾಖಿಯ ಎರಡನೇ ಗಂಟು ಎಲ್ಲರ ರಕ್ಷಕನಾದ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ಗಂಟು ಹಾಕುವಾಗ ಸಹೋದರಿಯರು ತಮ್ಮ ಸಹೋದರರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ವೃದ್ದಿಯಾಗಲಿ ಎಂದು ಬೇಡಿಕೊಳ್ಳುತ್ತಾರೆ.
ರಾಖಿಯ ಮೂರನೇ ಗಂಟು :
ರಾಖಿಯ ಮೂರನೇ ಗಂಟು ಶಿವನಿಗೆ ಅರ್ಪಿತವಾಗಿದೆ. ಈ ಗಂಟು ಹಾಕುವ ಮೂಲಕ ತನ್ನ ಸಹೋದರನಿಗೆ ಯಾವಾಗಲೂ ದುಷ್ಟ ಶಕ್ತಿಗಳು ಮತ್ತು ಅಪಾಯಗಳಿಂದ ರಕ್ಷಣೆ ಸಿಗಲಿ ಎಂದು ಹಾರೈಸುತ್ತಾರೆ. ಅಣ್ಣ ತಮ್ಮನಿಗೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಈ ಗಂಟು ರಕ್ಷಣಾತ್ಮಕ ಗುರಾಣಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ನಂಬಿಕೆ.
ರಾಖಿಗೆ 5 ಗಂಟು ಹಾಕಿದರೆ ಏನರ್ಥ ?:
ಕೆಲವು ಕುಟುಂಬ ಸಂಪ್ರದಾಯಗಳು ರಾಖಿ ಕಟ್ಟುವಾಗ ಐದು ಗಂಟು ಹಾಕಬೇಕು ಎನ್ನುತ್ತವೆ. ಈ ಐದು ಗಂಟಿಗೂ ವಿಶೇಷ ಅರ್ಥವಿದೆ. ಇವು ಪ್ರಕೃತಿಯ ಐದು ಅಂಶಗಳಿಗೆ ಅಂದರೆ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಕ್ಕೆ ಸಂಬಂಧಿಸಿವೆ. ಈ ಐದು ಗಂಟುಗಳು ಸಹೋದರನಿಗೆ ಸ್ಥಿರತೆ, ಧೈರ್ಯ, ಸಕಾರಾತ್ಮಕತೆ ಮತ್ತು ಹೃದಯ ವೈಶಾಲ್ಯ ಸಿಗಲಿ ಎನ್ನುವ ಆಶೀರ್ವಾದವಾಗಿರುತ್ತದೆ.
ರಾಖಿಗೆ ಎಷ್ಟು ಗಂಟು ಹಾಕಿದರೆ ಶುಭ? :
ರಾಖಿ ಕಟ್ಟುವಾಗ ಸರಿಯಾದ ಸಂಖ್ಯೆಯ ಗಂಟುಗಳನ್ನು ಹಾಕುವುದು ಬಹಳ ಮುಖ್ಯ. ಇಲ್ಲಿ ರಾಖಿಗಿಂತ ಅದನ್ನು ಕಟ್ಟುವಾಗ ಹಾಕುವ ಗಂಟೇ ಮುಖ್ಯ. ಹಾಗಾಗಿ ಸಹೋದರನಿಗೆ ದೀರ್ಘಾಯುಷ್ಯ, ರಕ್ಷಣೆ, ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸುತ್ತಾ ಸಾಮಾನ್ಯವಾಗಿ ಮೂರು ಗಂಟುಗಳನ್ನು ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಹೋದರ-ಸಹೋದರಿಯರ ಸಂಬಂಧವು ಯಾವಾಗಲೂ ಅಚಲವಾದ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ತುಂಬಿರುತ್ತದೆ. ರಾಖಿಯನ್ನು ಕಟ್ಟುವಾಗ ಮೂರು ಗಂಟುಗಳನ್ನು ಹಾಕುವುದರಿಂದ ತನ್ನ ಸಹೋದರಿಯನ್ನು ರಕ್ಷಿಸುವ ಸಹೋದರನ ಕರ್ತವ್ಯವನ್ನು ಸದಾ ಸಹೋದರನಿಗೆ ನೆನಪಿಸುತ್ತಿರುತ್ತದೆ.
ರಾಖಿಗೆ ಗಂಟು ಹಾಕುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ :
ರಾಖಿಗೆ ಗಂಟುಗಳನ್ನು ಹಾಕುವಾಗ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ದೇವರನ್ನು ಧ್ಯಾನಿಸಿ. ರಾಖಿ ಕಟ್ಟುವಾಗ ಮನಸ್ಸಿನಲ್ಲಿಯೇ "ಓಂ ರಕ್ಷಂ ಚ ರಕ್ಷಾಯ" ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಸಹೋದರ ಮತ್ತು ಇಡೀ ಕುಟುಂಬದ ಮೇಲೆ ದೇವರ ಆಶೀರ್ವಾದ ಹಾಗೆಯೇ ಮುಂದುವರಿಯುವುದು.


Click it and Unblock the Notifications
