• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರ ಗ್ರಹಣ ಮೇ 2022 ಎಫೆಕ್ಟ್: ಪ್ರಧಾನಿ ಮೋದಿಗೆ ಕಷ್ಟಕಷ್ಟ, ಎಚ್ಚರ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಯಾವುದೇ ಗ್ರಹಣ ಸಂಭವಿಸಿದಾಗ ಗಣ್ಯ ವ್ಯಕ್ತಿಗಳ ಅಥವಾ ಸೆಲೆಬ್ರಿಟಿಗಳ ರಾಶಿಫಲವನ್ನು ನೋಡುವ ಪದ್ದತಿಯನ್ನು ಕೆಲವೊಂದು ಜ್ಯೋತಿಷಿಗಳು ಆರಂಭಿಸಿರುವುದು ಗೊತ್ತಿರುವ ವಿಚಾರ. ಅದರಂತೇ, ಸೋಮವಾರದ (ಮೇ 16) ಚಂದ್ರ ಗ್ರಹಣದ ಬಗ್ಗೆಯೂ ಜ್ಯೋತಿಷಿಯೊಬ್ಬರು ವಿಶ್ಲೇಷಣೆಯನ್ನು ಮಾಡಿದ್ದಾರೆ.

ಚಂದ್ರ ಗ್ರಹಣದಿಂದಾಗಿ ಪ್ರಧಾನಿ ಮೋದಿಯವರ ಜಾತಕ ಕುಂಡಲಿಯನ್ನು ಆಧರಿಸಿ, ಉತ್ತರ ಭಾರತದ ಹೆಸರಾಂತ ಜ್ಯೋತಿಷಿ ಮುಕೇಶ್ ವತ್ಸ್ ಎನ್ನುವವರು ಇದರ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಭವಿಷ್ಯ ನುಡಿದಿದ್ದಾರೆ.

Lunar Eclipse 2022: ಭಾರತದಲ್ಲಿ 2022ರ ಮೊದಲ ಚಂದ್ರಗ್ರಹಣ ಯಾವಾಗ? Lunar Eclipse 2022: ಭಾರತದಲ್ಲಿ 2022ರ ಮೊದಲ ಚಂದ್ರಗ್ರಹಣ ಯಾವಾಗ?

ಜ್ಯೋತಿಷಿ ಮುಕೇಶ್ ಅವರ ಪ್ರಕಾರ, ಚಂದ್ರ ಗ್ರಹಣದ ನಂತರದ ಅವಧಿ ಪ್ರಧಾನಿ ಮೋದಿಯವರಿಗೆ ದುಃಖದಾಯಕವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಮೋದಿಯವರ ಲಭ್ಯವಿರುವ ಎರಡು ಜಾತಕದ ಆಧಾರದ ಮೇಲೆ ಇದನ್ನು ಹೇಳುತ್ತಿರುವುದಾಗಿ ಇವರು ಸ್ಪಷ್ಟನೆಯನ್ನು ವಿಡಿಯೋದಲ್ಲಿ ನೀಡಿದ್ದಾರೆ.

ಹಾಲೀ ವರ್ಷದ ಮೊದಲ ಚಂದ್ರ ಗ್ರಹಣ ಸೋಮವಾರ (ಮೇ 16) ಬೆಳಗ್ಗೆ 7.02ಕ್ಕೆ ಆರಂಭವಾಗಿ 12.20ಕ್ಕೆ ಮೋಕ್ಷವಾಗಲಿದೆ. ತುಲಾ ರಾಶಿಯಲ್ಲಿ ಕೇತುಗ್ರಸ್ತ ಗ್ರಹಣ ಸಂಭವಿಸಲಿದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ರೋಮ್, ಲಂಡನ್, ಪ್ಯಾರಿಸ್, ಹವಾನ, ನ್ಯೂಯಾರ್ಕ್, ವಾಷಿಂಗ್ಟನ್, ಮ್ಯಾಡ್ರಿಡ್, ಚಿಕಾಗೋ, ಜೋಹಾನ್ಸಬರ್ಗ್, ಗ್ವಾಟೆಮಾಲ ಮುಂತಾದ ಕಡೆ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ.

ವರ್ಷದ ಮೊದಲ ಚಂದ್ರ ಗ್ರಹಣ: ನಿಮ್ಮನಿಮ್ಮ ರಾಶಿಯ ಜಾತಕಫಲ ಇಲ್ಲಿದೆವರ್ಷದ ಮೊದಲ ಚಂದ್ರ ಗ್ರಹಣ: ನಿಮ್ಮನಿಮ್ಮ ರಾಶಿಯ ಜಾತಕಫಲ ಇಲ್ಲಿದೆ

 ಒಂದು ಜಾತಕ ವೃಶ್ಚಿಕ, ಇನ್ನೊಂದು ತುಲಾ ರಾಶಿ

ಒಂದು ಜಾತಕ ವೃಶ್ಚಿಕ, ಇನ್ನೊಂದು ತುಲಾ ರಾಶಿ

ಮೋದಿಯವರ ಎರಡು ಜಾತಕ ಕುಂಡಲಿ ಲಭ್ಯವಿದೆ, ಎರಡೂ 17/09/1950 ಇಸವಿಯದ್ದು. ಆದರೆ, ಒಂದು ಜಾತಕ ವೃಶ್ಚಿಕ ಇನ್ನೊಂದು ತುಲಾ ರಾಶಿಯಂತಿದೆ. ಹಾಗಾಗಿ, ಎರಡೂ ಜಾತಕವನ್ನು ಪರಿಶೀಲಿಸಿ, ಜೊತೆಗೆ ಇನ್ನೊಂದು ಪ್ರಶ್ನೆ ಕುಂಡಲಿಯನ್ನು ಅವಲೋಕಿಸಿ ಈ ಜ್ಯೋತಿಷ್ಯವನ್ನು ಹೇಳುತ್ತಿದ್ದೇನೆ ಎಂದು ಮುಕೇಶ್ ವತ್ಸ್ ವಿಡಿಯೋದಲ್ಲಿ ಹೇಳಿದ್ದಾರೆ. ಮೂರೂ ಜಾತಕವನ್ನು ನೋಡಿದಾಗ, ಚಂದ್ರ ಗ್ರಹಣದ ಮುಂದಿನ ಕೆಲವು ತಿಂಗಳುಗಳ ಅವಧಿಯಲ್ಲಿ ಮೋದಿಯವರು ಭಾವನಾತ್ಮಕ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಬಹುದು. ಅದು, ಪ್ರಮುಖವಾಗಿ ಕುಟುಂಬದ ಸದಸ್ಯರ ಮೂಲಕ ಎಂದು ಮುಕೇಶ್ ಹೇಳಿದ್ದಾರೆ.

 ಪ್ರಧಾನಿ ಮೋದಿಯವರ ತಾಯಿಗೆ ಈಗ 90 ವರ್ಷ

ಪ್ರಧಾನಿ ಮೋದಿಯವರ ತಾಯಿಗೆ ಈಗ 90 ವರ್ಷ

ಅವರಿಗೆ ವೈಯಕ್ತಿಕವಾಗಿ ಅಂದರೆ ಕುಟುಂಬದ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಎದುರಾಗಬಹುದು, ಅವರ ತಾಯಿಗೆ 90 ವರ್ಷ. ಇದರ ಜೊತೆಗೆ, ಮೋದಿಯವರಿಗೂ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯೂ ಇದೆ. ಈ ಕಷ್ಟವು ಮೃತ್ಯು ರೂಪದಲ್ಲೂ ಬರಬಹುದು, ವೃಶ್ಚಿಕ ಅಥವಾ ತುಲಾ, ಯಾವುದೇ ರಾಶಿ ಮೋದಿಯವರದ್ದು ಇರಬಹುದು, ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಅವರ ಗ್ರಹಗತಿಯಲ್ಲೇ ಗ್ರಹಣ ಸಂಭವಿಸುತ್ತಿರುವುದರಿಂದ ಮುಂದಿನ ಕೆಲವು ತಿಂಗಳು ಮೋದಿಯವರು ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗಿ ಬರಬಹುದು.

 ಚಂದ್ರ ಗ್ರಹಣ ಮೇ 2022 ಎಫೆಕ್ಟ್: ಪ್ರಧಾನಿ ಮೋದಿಗೆ ಕಷ್ಟಕಷ್ಟ

ಚಂದ್ರ ಗ್ರಹಣ ಮೇ 2022 ಎಫೆಕ್ಟ್: ಪ್ರಧಾನಿ ಮೋದಿಗೆ ಕಷ್ಟಕಷ್ಟ

ಈ ಗ್ರಹಣದ ನಂತರ ಬಹುದೊಡ್ಡ ಪಿತೂರಿ ಮೋದಿಯವರ ವಿರುದ್ದ ನಡೆಯುತ್ತಿದ್ದ ವಿಷಯ ಬಹಿರಂಗವಾಗಬಹುದು. ಇದರಿಂದಾಗಿ ಅಶಾಂತಿಯ ವಾತಾವರಣ ಎದುರಾಗಬಹುದು, ರಾಜಕೀಯವಾಗಿ ಆಂದೋಲನ ಎದುರಾಗುವುದು, ಅವರ ಭದ್ರತೆಯಲ್ಲಿ ಭಾರೀ ಲೋಪ ಎದುರಾಗುವುದು ಮುಂತಾದ ಸನ್ನಿವೇಶಗಳು ಎದುರಾಗಬಹುದು. ಕೆಲವು ವರ್ಷಗಳ ಹಿಂದೆ ಮೇ 16ರಂದೇ ಗ್ರಹಣ ಸಂಭವಿಸಿತ್ತು. ಆಗಲೂ, ಮೋದಿಯವರು ಕಷ್ಟಕಾಲವನ್ನು ಎದುರಿಸಿದ್ದರು.

 ಭದ್ರತಾ ಲೋಪ, ರಾಜಕೀಯವಾಗಿ ಹಿನ್ನಡೆ, ಆರೋಗ್ಯದಲ್ಲಿ ಸಮಸ್ಯೆ

ಭದ್ರತಾ ಲೋಪ, ರಾಜಕೀಯವಾಗಿ ಹಿನ್ನಡೆ, ಆರೋಗ್ಯದಲ್ಲಿ ಸಮಸ್ಯೆ

ಮೋದಿಯವರ ಆರೋಗ್ಯಕ್ಕೆ ತೊಂದರೆ, ಭದ್ರತಾ ಲೋಪ, ರಾಜಕೀಯವಾಗಿ ಹಿನ್ನಡೆ, ಆರೋಗ್ಯದಲ್ಲಿ ಸಮಸ್ಯೆ ಮುಂತಾದವುಗಳನ್ನು ಮೋದಿಯವರು ಎದುರಿಸಬೇಕಾಗಿ ಬರಬಹುದು. ಯಾವುದೇ ಜ್ಯೋತಿಷಿಗಳಿಗೆ ಇಂತಹ ವಿಚಾರವನ್ನು ಹೇಳುವುದನ್ನು ಕಷ್ಟ. ಮೋದಿಯವರ ಜೊತೆಗಿರುವ ಎಲ್ಲಾ ಅಧಿಕಾರಿಗಳು, ವೈದ್ಯರು, ಇತರ ಸಿಬ್ಬಂದಿಗಳು, ಖುದ್ದು ಪ್ರಧಾನಿಯವರು ಬಹಳ ಜಾಗರೂಕತೆಯಿಂದ ಇರುವುದು ಸೂಕ್ತ ಎಂದು ಜ್ಯೋತಿಷಿ ಮುಕೇಶ್ ವತ್ಸ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

English summary
PM Narendra Modi Prediction Based On His Zodaic Sign, Lunar Eclipse May ' 2022. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X