ಕೋಡಿಶ್ರೀಗಳು ಭವಿಷ್ಯ ನುಡಿದಿದ್ದ ಬಹುದೊಡ್ಡ ದುರಂತಕ್ಕೆ ಇನ್ನು ಒಂದೇ ದಿನ!
ತಾಳೇಗರಿ ಆಧಾರಿತ ಪ್ರಪಂಚದ ಮುಂದಿನ ಆಗುಹೋಗುಗಳ ಬಗ್ಗೆ ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯವನ್ನು ನಂಬುವವರ ಪಟ್ಟಿ ಬಹುದೊಡ್ಡದು. ಕಳೆದ ವರ್ಷ ಹತ್ತಾರು ಬಾರಿ ಕೋಡಿಶ್ರೀಗಳು ರಾಜಕೀಯ, ನೈಸರ್ಗಿಕ ವಿಕೋಪ, ಕಾಯಿಲೆಗಳು ಮುಂತಾದ ವಿಚಾರದಲ್ಲಿ ಭವಿಷ್ಯವನ್ನು ನುಡಿದಿದ್ದರು.
ಅಕಾಲಿಕ ಮಳೆಯ ವಿಚಾರದಲ್ಲೂ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿದಿತ್ತು.
ರಾಷ್ಟ್ರೀಯ ದುರಂತವೊಂದು ಸಂಭವಿಸಲಿದೆ ಎಂದು ಕೋಡಿಶ್ರೀಗಳು ಹೇಳಿದ್ದರು. ಅದರಂತೇ, ಮೂರೂ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ ಹಲವಾರು ಯೋಧರು ಹೆಲಿಕಾಪ್ಟರ್ ಪತನಗೊಂಡು ಮೃತ ಪಟ್ಟಿದ್ದರು.
ಕಳೆದ ಡಿಸೆಂಬರ್ 24ರಂದು ವರ್ಷದ ಕೊನೆಯ ಭವಿಷ್ಯವನ್ನು ನುಡಿದಿದ್ದ ಶ್ರೀಗಳು, ಜನವರಿ ಹದಿನಾಲ್ಕು ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಮತ್ತೊಂದು ಬಹುದೊಡ್ಡ ಅವಘಡ ಸಂಭವಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ದುರಂತ: ಅದರಂತೇ, ಸಿಡಿಎಸ್ ದುರ್ಮರಣ
"ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ರೋಗ ಕಾಯಿಲೆಗಳು ಹೆಚ್ಚಾಗಲಿದೆ. ರಾಷ್ಟ್ರೀಯ ದುರಂತ ಸಂಭವಿಸಲಿದೆ. ವೈರಸ್ ಹಾವಳಿ ಸದ್ಯಕ್ಕೆ ಮುಗಿಯುವುದಿಲ್ಲ"ಎಂದು ಕೋಡಿಮಠದ ಶ್ರೀಗಳು ಕಳೆದ ವರ್ಷದ ಸೆಪ್ಟಂಬರ್ ಮಾಸಾಂತ್ಯದಲ್ಲಿ ಹಾವೇರಿಯಲ್ಲಿ ಹೇಳಿದ್ದರು. ಅದರಂತೇ, ಸಿಡಿಎಸ್ ದುರ್ಮರಣ, ಓಮಿಕ್ರಾನ್ ಕೇಸ್ ಹೆಚ್ಚಳ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು
ಕಳೆದ ಡಿಸೆಂಬರ್ ತಿಂಗಳಲ್ಲಿ ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, "ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಇದೀಗ ಮತ್ತೆ ಅಂಥದ್ದೇ ದುರಂತ ಸಂಭವಿಸುವ ಲಕ್ಷಣವಿದೆ, ಸಂಕ್ರಾತಿಯೊಳಗೆ ಮತ್ತೊಂದು ಬಹುದೊಡ್ಡ ಅವಘಡ ಸಂಭವಿಸುವ ಸಾಧ್ಯತೆಗಳಿವೆ"ಎಂದು ಹೇಳಿದ್ದರು.

ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ
"ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ"ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ/ಓಮಿಕ್ರಾನ್ ಕೇಸುಗಳ ನಾಗಾಲೋಟ ಮುಂದುವರಿದಿದೆ. ದೇಶದಲ್ಲಿ ಎರಡು ಲಕ್ಷ ಮತ್ತು ರಾಜ್ಯದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೇಸುಗಳು ದಾಖಲಾಗಲಿದೆ.

ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ, ಬಾಬಾ ವಂಗಾಳ ಭವಿಷ್ಯ
ಮನುಕುಲಕ್ಕೆ ಎಲ್ಲಿಲ್ಲದ ಕಾಟವನ್ನು ಕೊಡುತ್ತಿರುವ ಕೊರೊನಾ ಹಾವಳಿ ಮುಂದಿನ ವರ್ಷವೂ ಮುಗಿಯದು. ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ. ತಾಪಮಾನದಲ್ಲಿನ ಬದಲಾವಣೆಯಿಂದ ಈ ವೈರಸ್ ಜನ್ಮತಾಳಲಿದ್ದು ಜಗತ್ತಿಗೆ ಹರಡಲಿದೆ. ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ, ಇದರ ನಿಯಂತ್ರಣ ಇಡೀ ವಿಶ್ವಕ್ಕೆ ಸವಾಲಾಗಲಿದೆ. ಈ ವರ್ಷ ಕಂಡ ಅತಿವೃಷ್ಟಿ ಏನೇನೂ ಅಲ್ಲ, ಮುಂದಿನ ವರ್ಷ ಇನ್ನಷ್ಟು ಜಲಕಂಟಕ ಎದುರಾಗಲಿದೆ ಎಂದು ಬಾಬಾ ವಂಗಾ ಕೂಡಾ ಹಿಂದೆನೇ ಭವಿಷ್ಯ ಬರೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications