ಒಟ್ಟೊಟ್ಟಿಗೆ ಮೂರು ರಾಜಯೋಗ :ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಅದೃಷ್ಟವೋ ಅದೃಷ್ಟ

Navaratri Rajayoga: ನವರಾತ್ರಿಗಾಗಿ ದುರ್ಗಾ ದೇವಿಯ ಭಕ್ತರು ಕುತೂಹಲದಿಂದ ಕಾಯುತ್ತಿರುತ್ತಾರೆ. ನವರಾತ್ರಿ ಅಕ್ಟೋಬರ್ 11ಕ್ಕೆ ಆರಂಭವಾಗಲಿದ್ದು, 21ಕ್ಕೆ ಕೊನೆಗೊಳ್ಳಲಿದೆ. ನವರಾತ್ರಿಯಲ್ಲಿ ದೇವಿ ಪೂಜೆ ಮಾಡಲಾಗುತ್ತದೆ. ಒಂಭತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

ಈ ಬಾರಿಯ ನವರಾತ್ರಿ ವಿಶೇಷ :

ಈ ಬಾರಿಯ ನವರಾತ್ರಿ ಬಹಳ ವಿಶೇಷವಾಗಿದೆ. ಆಧ್ಯಾತ್ಮಿಕವಾಗಿ ಮಾತ್ರ ಅಲ್ಲ ಜ್ಯೋತಿಷ್ಯ ದೃಷ್ಟಿಯಿಂದಲೂ ಈ ಬಾರಿಯ ನವರಾತ್ರಿಗೆ ಮಹತ್ವ ಹೆಚ್ಚಿದೆ. ಯಾಕೆಂದರೆ ನವರಾತ್ರಿ ಜೊತೆಗೆ ಈ ಸಲ ಅಪರೂಪದ ಗ್ರಹಗಳ ಸಂಯೋಜನೆ ಕೂಡಾ ಆಗಲಿದೆ. ಇದು ಉದ್ಯೋಗ, ವ್ಯವಹಾರ, ಹಣ ಮತ್ತು ಕುಟುಂಬದ ವಿಷಯದ ಮೇಲೆ ಪರಿಣಾಮ ಬೀರಲಿದೆ.

Navaratri Rajayoga Three Rajayoga During Navaratri Golden Time To Start For Four Zodiac Sign Lucky Days Success To Begin

Navaratri Rajayoga: ಯಾರಿಗೆ ಶುಭ?

ಸುಮಾರು 100 ವರ್ಷಗಳ ನಂತರ ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ಅನೇಕ ಶುಭ ಯೋಗ ರೂಪುಗೊಳ್ತಾ ಇದೆ. ಸೂರ್ಯ ಮತ್ತು ಬುಧನ ಸಂಯೋಗದಿಂದಾಗಿ ಬುದ್ಧಾದಿತ್ಯ ರಾಜಯೋಗ, ಬುಧ ಮತ್ತು ಶುಕ್ರನ ಸಂಯೋಗದಿಂದ ಲಕ್ಷ್ಮೀನಾರಾಯಣ ರಾಜಯೋಗ, ಗುರು-ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗ ನಿರ್ಮಾಣ ಆಗುತ್ತಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಗಳ ಸಂಯೋಜನೆ ಪರಿಣಾಮ ಬೇರೆ ಬೇರೆ ರಾಶಿಯವರ (zodiac signs) ಮೇಲೆ ಆಗುತ್ತದೆ. ಈ ನವರಾತ್ರಿ ಮೇಷ, ಕರ್ಕಾಟಕ, ಸಿಂಹ ಮತ್ತು ತುಲಾ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇವರು ಉದ್ಯೋಗ, ವ್ಯವಹಾರ, ಹಣ ಮತ್ತು ಕೌಟುಂಬಿಕ ವ್ಯವಹಾರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವರು.

Navaratri Rajayoga: ಮೇಷ ರಾಶಿ (aries) :

ನಿಮ್ಮ ಇಲ್ಲಿವರೆಗಿನ ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವುದು. ದೇವಿಯ (goddess) ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇರುವುದು. ಬಡ್ತಿಗೆ ಅವಕಾಶ ಇದೆ. ಕೆಲಸ ಬದಲಿಸುವ ಬಗ್ಗೆ ಉದ್ಯೋಗಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ವ್ಯಾಪಾರ ವ್ಯವಹಾರ ಮಾಡುವವರು ಕೂಡಾ ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ. ಬಹಳ ಸಮಯದಿಂದ ಹೊರಗಡೆ ಉಳಿದಿರುವ ಹಣ ಈ ಸಮಯದಲ್ಲಿ ಕೈ ಸೇರುವುದು. ಹಣದ ವಹಿವಾಟಿಗೆ ಇದು ಸೂಕ್ತ ಸಮಯ.

ಕಟಕ ರಾಶಿ (Cancer):

ನವರಾತ್ರಿ ಅವಧಿಯು ಕರ್ಕಾಟಕ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಇರುವುದು. ಹಣದ ಲಾಭವಾಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಒಳ್ಳೆಯ ಸುದ್ದಿ ಕೇಳುವಿರಿ. ಹೊಸ ಮನೆ ಖರೀದಿ ಭಾಗ್ಯ ಇದೆ. ಮಗನ ಸಾಧನೆ ಸಂತೋಷ ತರುವುದು. ಮದುವೆ ಮಾತುಕತೆ ನಡೆಸುವರು.

ಸಿಂಹ ರಾಶಿ (Leo) :

ಹೊಸ ಭರವಸೆ ಮತ್ತು ಅವಕಾಶ ಸಿಗುವುದು. ನವರಾತ್ರಿ ನಿಮ್ಮ ಪಾಲಿಗೆ ಸಂತೋಷ ಹೊತ್ತು ತರುವುದು. ವ್ಯವಹಾರದಲ್ಲಿ ಇಲ್ಲಿವರೆಗೆ ಆದ ನಷ್ಟ ಲಾಭವಾಗಿ ಬದಲಾಗುವುದು. ಹೊಸ ಆರಂಭಕ್ಕೆ ಸೂಕ್ತ ಸಮಯ. ವ್ಯವಹಾರ ವಿಸ್ತರಿಸಬಹುದು ಅಥವಾ ಹೊಸ ವ್ಯವಹಾರ ಶುರು ಮಾಡಬಹುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಉದ್ಯಮಿಗಳಿಗೆ ಹೆಚ್ಚು ಲಾಭ ಸಿಗುವುದು. ಈ ಸಮಯದಲ್ಲಿ, ಗೌರವ, ಆತ್ಮವಿಶ್ವಾಸ ಹೆಚ್ಚಾಗುವುದು.

ತುಲಾ ರಾಶಿ (Libra):

ನವರಾತ್ರಿ ನಿಮ್ಮ ಪಾಲಿಗೆ ಹೆಚ್ಚು ವಿಶೇಷವಾಗಿರಲಿದೆ. ಹಣಕಾಸಿನ ವಿಷಯದಲ್ಲಿ ಲಾಭವಾಗುವುದು. ಬಡ್ತಿ ಅಥವಾ ಹೊಸ ಜವಾಬ್ದಾರಿ ಸಿಗುವುದು. ವ್ಯಾಪಾರ ಕ್ಷೇತ್ರದಲ್ಲಿರುವವರು ದೊಡ್ಡ ಮಟ್ಟದ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗಿನ ಸಂಬಂಧ ಸುಧಾರಿಸುವುದು. ಎಲ್ಲಾ ಕೆಲಸದಲ್ಲಿ ಸಕ್ಸಸ್ ಸಿಗುವುದು. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಕೈ ಹಾಕಬಹುದು. ವಾಹನ ಖರೀದಿ ಮಾಡಬಹುದು. ತುಂಬಾ ದಿನಗಳಿಂದ ಅಂದುಕೊಂಡಿದ್ದ ದೇವಸ್ಥಾನಕ್ಕೆ ಭೇಟಿ ನೀಡುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+