Get Updates
Get notified of breaking news, exclusive insights, and must-see stories!

September Horoscope: ಸಪ್ಟೆಂಬರ್‌ ತಿಂಗಳು ಈ ರಾಶಿಗಳಿಗೆ ಅದೃಷ್ಟದ ಕಾಲ, ದಿಢೀರ್‌ ಧನ, ಸಂಪತ್ತು ಲಾಭ

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ವರ್ಷಋತು ಶ್ರಾವಣ ಬಹುಳ ಚತುರ್ದಶಿ ಯಿಂದ ಭಾದ್ರಪದ ಬಹುಳ ತ್ರಯೋದಶಿಯವರೆಗೆ

ಮಾಸ ವಿಶೇಷ

06.09.2024: ಸ್ವರ್ಣಗೌರಿ ವ್ರತ

07.9.2024: ವರಸಿದ್ಧಿ ವಿನಾಯಕ ವ್ರತ

16.09.2024: ಈದ್ ಮಿಲಾದ್

17.09.2024: ಅನಂತಪದ್ಮನಾಭವ್ರತ

20.09.2024: ಪಿತೃಪಕ್ಷಾರಂಭ

17.09.2024: ಕನ್ಯಾರಾಶಿಗೆ ಸೂರ್ಯನ ಪ್ರವೇಶ

Monthly Horoscope For September 2024 Masika Rashi Bhavishya For 12 Zodiac Signs In Kannada

ಮೇಷ ರಾಶಿಯ ಮಾಸ ಭವಿಷ್ಯ

ಗುರುಬಲ ಇದೆ. ಶನಿ ಕೂಡ ಲಾಭಸ್ಥಾನದಲ್ಲಿ ಇದ್ದು ನಿಮಗೆ ಅನುಕೂಲ ಮಾಡಿಕೊಡುತ್ತಾನೆ. ಕುಜ ಮೂರನೇ ಮನೆಯಲ್ಲಿ ಇದ್ದು ನಿಮ್ಮ ಶಕ್ತಿಯನ್ನು ವೃದ್ಧಿಸುತ್ತಾನೆ. ನಾಲ್ಕನೇ ಮನೆಯಲ್ಲಿ ಬುಧ ಇದ್ದು ನಿಮಗೆ ಸಕಲ ಸುಖಭಾಗ್ಯಗಳನ್ನು ಅನುಭವಿಸುವಂತೆ ಮಾಡುತ್ತಾನೆ. ಮನೆ ಕೊಳ್ಳಲು ವಾಹನ ಕೊಳ್ಳಲು ಈಗ ಪ್ರಶಸ್ತವಾದ ಸಮಯ. ಯಾವುದೇ ಆಸ್ತಿ ಮಾಡಲು ಈಗ ಗ್ರಹಗತಿಗಳ ಅನುಕೂಲ ಇದೆ. ಐದನೇ ಮನೆಯಲ್ಲಿ ಸೂರ್ಯ 17 ನೇ ತಾರೀಕಿನವರೆಗೂ ಇದ್ದು ನಂತರ ಆರನೇ ಮನೆಗೆ ಪ್ರವೇಶ ಮಾಡುತ್ತಾನೆ.

ಆರನೇ ಮನೆಯ ಸೂರ್ಯ ಹಾಗೂ ಕೇತು ಸಹ ನಿಮಗೆ ಬಹಳ ಅನುಕೂಲ ಮಾಡಿಕೊಡುತ್ತಾರೆ. ಯಾವುದೇ ಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ದಾರಿ ಸುಗಮವಾಗುವಂತೆ ಮಾಡುತ್ತಾರೆ. ಎಲ್ಲ ವಿಧದಲ್ಲೂ ನಿಮಗೆ ಈ ಅನುಕೂಲಕರ ವಾತಾವರಣ ಇದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಮನೆಯಲ್ಲಿ ಮಂಗಳಕರ ಕಾರ್ಯಕ್ರಮಗಳು ನಡೆದು ನಿಮಗೆ ಸಂತೋಷ ಉಂಟುಮಾಡುತ್ತದೆ. ಎರಡನೇ ಮನೆಯ ಗುರು ನಿಮಗೆ ಸಕಲ ವಿಧದಲ್ಲೂ ಅನುಗ್ರಹಿಸಿ ಕಾಪಾಡುತ್ತಾನೆ. ಕೆಡುಕು ನಿಮ್ಮಬಳಿ ಸುಳಿಯದಂತೆ ರಕ್ಷಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ವೃಷಭ ರಾಶಿಯ ಮಾಸ ಭವಿಷ್ಯ

ನಿಮಗೆ ಈಗ ಗುರು ನಿಮ್ಮ ರಾಶಿಯಲ್ಲೇ ಇದ್ದು ಮಾನಸಿಕ ಒತ್ತಡಗಳನ್ನು ಕೊಡುತ್ತಾನೆ. ಎಂದೋ ಮಾಡಿದ್ದ ಕೆಲಸಗಳ ತಪ್ಪುಒಪ್ಪುಗಳು ಈಗ ನಿಮ್ಮ ಕಾಡಿಸುತ್ತದೆ. ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ಯಾವುದೋ ಒಂದು ಯೋಚನೆ ಮನಸ್ಸಿಗೆ ತುಂಬಾ ಹಿಂಸೆ ಕೊಡುತ್ತಿರುತ್ತದೆ. ಆಳವಾಗಿ ನೋಡಿದರೆ ಅಂತ ಸಮಸ್ಯೆ ಅನಿಸದಿದ್ದರೂ ಆ ಕ್ಷಣಕ್ಕೆ ಗಹನವಾದ ಚಿಂತೆಗೆ ಕಾರಣವಾಗುತ್ತದೆ. ರಾಹು ಲಾಭಸ್ಥಾನದಲ್ಲಿ ಇದ್ದಾನೆ. ಇದು ನಿಮಗೆ ಧನಲಾಭವನ್ನೂ ಹೆಚ್ಚಿಸುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವಂತೆ ಮಾಡುತ್ತದೆ.

ಮೂರನೇ ಮನೆಯಲ್ಲಿ ಬುಧ ಕೂಡ ನಿಮಗೆ ಅನುಕೂಲವನ್ನೇ ಕೊಡುತ್ತಾನೆ. ಸಹೋದರರಿಂದ ಸಹಾಯ ಸಹಕಾರ ಇದೆ. ನಾಲ್ಕನೇ ಮನೆಯಲ್ಲಿ ಮನೆಯಲ್ಲಿ ಸೂರ್ಯ ಐದನೇ ಮನೆಯಲ್ಲಿ ಶುಕ್ರ- ಕೇತು ಇವರೆಲ್ಲ ಅಂಥ ಅನುಕೂಲ ಕಲ್ಪಿಸದಿದ್ದರೂ ತೊಂದರೆ ಮಾಡುವುದಿಲ್ಲ. ಕರ್ಮಸ್ಥಾನದಲ್ಲಿ ಶನಿ ನಿಮಗೆ ವೃತ್ತಿಸ್ಥಾನವನ್ನು ಭದ್ರ್ರವಾಗಿಡುತ್ತಾನೆ. ಕರ್ಮಸ್ಥಾನಾಧಿಪತಿಯಾಗಿ ಸ್ವಕ್ಷೇತ್ರದಲ್ಲಿ ಇರುವ ಶನಿಯಿಂದ ನಿಮಗೆ ಅನುಕೂಲಗಳೇ ಹೆಚ್ಚು. ಇನ್ನು ಮುಂದಿನ ದಿನಗಳಲ್ಲಿ ಶನಿಯ ಬದಲಾವಣೆ ನಿಮ್ಮ ಜೀವನದಲ್ಲೀ ಬಹಳ ಒಳ್ಳೆಯ ಬದಲಾವಣೆಯನ್ನು ತರುತ್ತದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ಮಿಥುನ ರಾಶಿಯ ಮಾಸ ಭವಿಷ್ಯ

ನಿಮ್ಮ ರಾಶಿಯಲ್ಲಿ ಕುಜ, ವ್ಯಯಸ್ಥಾನದಲ್ಲಿ ಗುರು ನಿಮಗೆ ಹಚ್ಚು ಒತ್ತಡಗಳನ್ನು ಕೊಡುತ್ತಾರೆ. ಖರ್ಚುಗಳು ಹೆಚ್ಚು ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಟಾರ್ಗೆಟ್ ಮುಟ್ಟಲು ಸಾಧ್ಯಾವಾಗುದಿಲ್ಲ. ನೀವು ಬಯಸಿದಷ್ಟು ಅಂಕಗಳು ಬರದೆ ಚಡಪಡಿಸುತ್ತೀರಿ. ಎರಡನೇ ಮನೆಯಲ್ಲಿ ಬುಧ ಇರುವುದು ಹಣಕಾಸಿಗೆ ತೊಂದರೆ ಇಲ್ಲ. ಮೂರನೇ ಮನೆಯಲ್ಲಿ ಸೂರ್ಯ ಕೂಡ 17 ನೇ ತಾರೀಖಿನ ವರೆಗೂ ಇದ್ದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತಾನೆ.

ನಾಲ್ಕನೇ ಮನೆಯಲ್ಲಿ ಶುಕ್ರ, ಕೇತು ಇರುವುದು ತಾಯಿಗೆ ಕೊಂಚಮಟ್ಟಿನ ಸುಖಶಾಂತಿ ಲಭಿಸಲು ಕಾರಣವಾಗುತ್ತದೆ. ತಾಯಿಗೆ ಧನಲಾಭ ಸಿಗುತ್ತದೆ. ನಿಮ್ಮ ತಾಯಿಯೊಂದಿಗಿನ ವೈಮನಸ್ಸು ಕಡಿಮೆಯಾಗಬಹುದು. ಒಂಬತ್ತನೇ ಮನೆಯ ಅಧಿಪತಿ ಶನಿ ಅಲ್ಲಿಯೇ ಇದ್ದು ನಿಮಗೆ ಧಾರ್ಮಿಕ ಮನೋಭಾವ ಹೆಚ್ಚಾಗುವಂತೆ ಮಾಡುತ್ತಾನೆ. ಈ ತಿಂಗಳು ನಿಮಗೆ ಮಿಶ್ರಫಲ. ಆದರೂ ದೈನಂದಿನ ಜೀವನಕ್ಕೆ ಅಡ್ಡಿಯಿಲ್ಲ.

Monthly Horoscope For September 2024 Masika Rashi Bhavishya For 12 Zodiac Signs In Kannada

ಕಟಕ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಅಷ್ಟಮ ಶನಿ ನಡೆಯುತ್ತಿದ್ದರೂ ಗುರುಬಲ ಬಂದಿರುವುದರಿಂದ ಯಾವುದಕ್ಕೂ ಭಯ ಪಡಬೇಕಿಲ್ಲ. ಹಿಂದಿನ ದಿನಗಳಲ್ಲಿ ಪಟ್ಟ ಕಷ್ಟಗಳಿಗೆ ಸಮಸ್ಯೆಗಳಿಗೆ ಈಗ ತಾನಾಗೇ ಪರಿಹಾರ ಗೋಚರವಾಗುತ್ತದೆ. ಅವಿವಾಹಿತರಿಗೆ ವಿವಾಹ ನಿಷ್ಕರ್ಷೆಯಾಗುವ ಸಮಯ. ನಿಮ್ಮ ರಾಶಿಯಲ್ಲೇ ಬುಧ ಇದ್ದು ನಿಮಗೆ ಕೊಂಚ ಶಾಂತ ವಾತಾವರಣವನ್ನು ಕೊಡುತ್ತಾನೆ.ಪರಿಸ್ಥಿತಿ ಸುತ್ತಮುತ್ತ ಹಿತವಾಗಿರುವಂತೆ ನೋಡಿಕೊಳ್ಳುತ್ತಾನೆ. ಗುರು ಲಾಭಸ್ಥಾನದಲ್ಲಿದ್ದು ಸತ್ಸಂಗ ಗುರುಗಳ ಸೇವೆಯ ಭಾಗ್ಯ ದೇವರ ದರ್ಶನ ಪುಣ್ಯಕ್ಷೇತ್ರಗಳ ದರ್ಶನ ಮುಂತಾದ ಧಾರ್ಮಿಕ ಅವಕಾಶಗಳನ್ನು ಮಾಡಿಕೊಡುತ್ತಾನೆ.

ನಿಮ್ಮ ಮನಸ್ಸು ಧರ್ಮದಲ್ಲಿ ನಿಲ್ಲುವಂತೆ ಮಾಡುತ್ತಾನೆ. ವೃತ್ತಿಯಲ್ಲಿ ಬಡ್ತಿ, ವಿದೇಶಪ್ರಯಾಣ ಯೋಗ ಇವೆಲ್ಲ ಸಿಗುವ ಸಮಯ. ಯಾವುದೇ ಕೆಲಸ ಕಾರ್ಯಗಳಿಗೆ ಈ ಹಿಂದೆ ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸಿ ನಿಮ್ಮನ್ನು ಮುಂದುವರೆಯುವಂತೆ ಮಾಡುತ್ತಾನೆ. ಅಷ್ಟಮಶನಿಯ ಕಹಿ ಆಗಾಗ ಗೋಚರವಾದರೂ ಗುರುಬಲ ಮತ್ತು ಕೇತುಬಲ ಇರುವುದರಿಂದ ನಿಮಗೆ ಸಾಕಷ್ಟು ಅನುಕೂಲಗಳು ಸಿಗುತ್ತವೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ಸಿಂಹ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಹನ್ನೊಂದನೇ ಮನೆಯಲ್ಲಿ ಕುಜ ಇರುವುದು ಭೂಮಿಯಿಂದ ಮತ್ತು ಪವರ್‌ಗೆ ಸಂಬಂಧಪಟ್ಟ ವಿಷಯಗಳಿಂದ ಲಾಭ ಬರುತ್ತದೆ. ಕಟ್ಟಡ ಕಟ್ಟುವ ಕೆಲಸಮಾಡುವವರಿಗೆ ವಿದ್ಯುತ್‌ಗೆ ಸಂಬಂಧಪಟ್ಟ ಕೆಲಸ ಮಾಡುವವರಿಗೆ ಲಾಭ ಇದೆ. ನಿಮ್ಮ ರಾಶಿಯಲ್ಲೇ ಸೂರ್ಯ ಹಾಗೂ ಏಳನೇ ಮನೆಯಲ್ಲಿ ಶನಿ ಪರಸ್ಪರ ದೃಷ್ಟಿಯಲ್ಲಿದ್ದಾರೆ. ಇದು ನಿಮಗೆ ಅಷ್ಟು ಕ್ಷೇಮವಲ್ಲ. ಆರೋಗ್ಯದ ಕಡೆ ಗಮನ ಇರಲಿ. ಮನೆಯಲ್ಲಿ ಕೊಂಚ ಕಿರಿಕಿರಿಯ ವಾತಾವರಣ ಇರುತ್ತದೆ. ನಿಮ್ಮ ಮಾತಿಗೆ ವ್ಯತಿರಿಕ್ತ ನಡವಳಿಕೆ ಕುಟುಂಬ ಸದಸ್ಯರಲ್ಲಿ ಕಾಣಬಹುದು.

ನಿಮ್ಮ ಸುತ್ತ ಇರುವ ವಿರೋಧಿ ಜನರಿಂದ ಅಂತರ ಕಾಯ್ದುಕೊಳ್ಳಿ. ವೃತ್ತಿ ಕ್ಷೇತ್ರದಲ್ಲಿ ಒತ್ತಡಗಳು ಇರುತ್ತದೆ. ನೀವು ಸ್ವಭಾವತಃ ಮುನ್ನುಗ್ಗುವ ಛಾತಿ ಉಳ್ಳವರು. ಚಿಕ್ಕಪುಟ್ಟ ಅಡೆತಡೆಗಳನ್ನು ನೀವು ಲೆಕ್ಕಿಸುವುದಿಲ್ಲ. ನಿಮ್ಮ ಕೆಲಸ ಆಗಬೇಕೆಂದರೆ ಸವಾಲುಗಳನ್ನು ಎದುರಿಸುವ ಧೈರ್ಯ ನಿಮಗಿದೆ. ಆದರೆ ಸಂದರ್ಭಗಳು ನಿಮಗೆ ಪ್ರತಿಕೂಲವಾಗಿದ್ದಾಗ ಅರ್ಥ ಮಾಡಿಕೊಂಡು ಹಿಂದೆ ಸರಿದರೆ ಉತ್ತಮ. ಮುಂದೆ ನಿಮಗೆ ಇವೇ ಒಳ್ಳೆಯ ಅವಕಾಶ ಮಾಡಿಕೊಡುತ್ತದೆ. ಈಗ ಗುರುಬಲ ಇಲ್ಲದಿರುವುದರಿಂದ ಯಾವುದೇ ಕೆಲಸ ನಿಧಾನವಾಗಿ ಸಾಗುತ್ತದೆ. ಪ್ರಯತ್ನ ಹೆಚ್ಚು ಫಲ ಕಡಿಮೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ಕನ್ಯಾ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಬಹಳ ಗ್ರಹಗಳು ಅನುಕೂಲ ಸ್ಥಿತಿಯಲ್ಲಿ ಇವೆ. ಗುರುವಿನ ಅನುಗ್ರಹ ಇದೆ. ಶನಿಯ ಬಲ ಇದೆ. ನಿಮ್ಮ ರಾಶಿಯ ಅಧಿಪತಿ ಬುಧ ಲಾಭಸ್ಥಾನದಲ್ಲಿ ಇದ್ದು ನಿಮಗೆ ಬಹಳ ಅನುಕೂಲಗಳನ್ನು ಸೃಷ್ಟಿಸುತ್ತಾನೆ. ಅಧಿಕ ಧನಲಾಭ ಇದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸುಲಭದಲ್ಲಿ ಮುಗಿಯುತ್ತದೆ. ಈಗ ಶ್ರಮ ಕಡಿಮೆ ಫಲ ಹೆಚ್ಚು. ನಿಮ್ಮ ಮಾತಿಗೆ ಗೌರವ ಸಿಗುತ್ತದೆ. ನಿಮ್ಮ ಪ್ರಭಾವಶಾಲಿ ವ್ಯಕ್ತಿತ್ವದಿಂದ ಸುತ್ತಲಿನ ಜನರನ್ನು ಆಕರ್ಷಿಸುತ್ತೀರಿ. ನಿಮ್ಮದು ಜನರನ್ನು ಆಕರ್ಷಕಗೊಳಿಸುವ ವ್ಯಕ್ತಿತ್ವ. ಕಲಾವಂತರೂ ಮೃದುಭಾಷಿಗಳು ಆಗಿರುತ್ತೀರಿ.

ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತದೆ. ಸಾಮಾಜಿಕ ಗೌರವ ಮನ್ನಣೆಗಳು ಸಿಗುವ ಸಮಯ. ಅವಿವಾಹಿತರಿಗೆ ಈಗ ವಿವಾಹಯೋಗ ಇದೆ. ವೃತ್ತಿಯಲ್ಲಿ ಬಡ್ತಿ ವಿದೇಶಪ್ರಯಾಣ ಮೊದಲಾದ ನಿಮ್ಮ ಖುಷಿಯನ್ನು ಹೆಚ್ಚಿಸುವ ಸಂದರ್ಭಗಳು ಬಹಳ ಇವೆ. ವಿದ್ಯಾರ್ಥಿಗಳಿಗೆ ಈಗ ಶುಭ ಕಾಲ. ಅವರ ಆಸೆ ಗುರಿ ನೆರವೇರುವಂಥ ಕಾಲ. ರಾಜಕೀಯ ವ್ಯಕ್ತಿಗಳಿಗೂ ಈಗ ಸುಸಂದರ್ಭ ಒಳ್ಳೆಯ ಅವಕಾಶ ಜವಾಬ್ದಾರಿಗಳು ನಿಮ್ಮ ಹುಡುಕಿಕೊಂಡು ಬರುತ್ತದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ತುಲಾ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದ ಅಥವಾ ಹಣಕಾಸಿನ ಸಮಸ್ಯೆಗಳು ಬಾಧಿಸಬಹುದು. ಆದರೆ ರಾಹುಬಲ ಈಗ ನಿಮಗೆ ಇದೆ. ಹಾಗಾಗಿ ಸಮಸ್ಯೆಗಳು ಬಂದರೂ ಅದಕ್ಕೆ ಪೂರಕವಾಗಿ ಪರಿಹಾರಗಳು ದೊರೆತು ನೀವು ಸುಲಭವಾಗಿ ಆ ಸಮಸ್ಯೆಗಳಿಂದ ಹೊಬರುವಿರಿ. ರಾಹುವಿನ ಬಲ ಇದ್ದಾಗ ದೈಹಿಕ ಸಾಮಥ್ರ್ಯ ಹೆಚ್ಚಾಗಿ ಇರುತ್ತದೆ. ಹಾಗೂ ಹೋರಾಟಮಾಡುವ ಗುಣ ಛಲ ಇರುತ್ತದೆ. ಯಾವುದೇ ಸಮಸ್ಯೆ ವಿಕೋಪಕ್ಕೆ ಹೋಗದಂತೆ ತಡೆದು ನಿಲ್ಲಿಸುವ ಶಕ್ತಿ ಇರುತ್ತದೆ.

ಬುಧ ಕರ್ಮಸ್ಥಾನದಲ್ಲಿ ಇರುವುದರಿಂದ ವೃತ್ತಿಯಲ್ಲೂ ಬೆಳವಣಿಗೆ ಇದೆ. ಹನ್ನೊಂದನೇ ಮನೆಯಲ್ಲಿ ಸೂರ್ಯ 17 ನೇ ತಾರೀಖಿನ ವರೆಗೂ ಇರುತ್ತಾನೆ. ಇದು ಕೂಡ ನಿಮಗೆ ಅಭಿವೃದ್ಧಿಸೂಚಕವಾಗಿದೆ. ಶನಿ ಪಂಚಮಸ್ಥಾನದಲ್ಲಿ ಇದ್ದು ಸ್ವಲ್ಪ ಕಿರಿಕಿರಿ ಮಾಡುತ್ತಾನೆ. ಆದರೆ ತುಲಾರಾಶಿಗೆ ಶನಿಯಿಂದ ದೊಡ್ಡ ತೊಂದರೆ ಏನೂ ಬರುವುದಿಲ್ಲ. ಈಗ ನಿಮಗೆ ತಾಳ್ಮೆ ಹಾಗೂ ವಿವೇಚನೆ ಬಹಳ ಮುಖ್ಯ. ಯಾವುದು ಮಾಡಬೇಕು ಮಾಡಬಾರದು ಇದರ ತಾರತಮ್ಯ ನೀವು ತಿಳಿದುಕೊಂಡರೆ ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಆಗುತ್ತದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ವೃಶ್ಚಿಕ ರಾಶಿಯ ಮಾಸ ಭವಿಷ್ಯ

ನಿಮಗೆ ಗುರುಬಲ ಇದೆ. ಕಳೆದ ವರ್ಷ ನೆನೆಗುದಿಗೆ ಬಿದ್ದಿದ್ದ ಕೆಲಸಗಳೆಲ್ಲ ಈಗ ಕಾರ್ಯರೂಪಕ್ಕೆ ಬರುತ್ತದೆ. ಚಾಲನೆ ಪಡೆದುಕೊಳ್ಳುತ್ತದೆ. ವೃತ್ತಿಯಲ್ಲಿ ಒಳ್ಳೆಯ ಬದಲಾವಣೆ ಇದೆ. ಹೊಸ ಕೆಲಸ ಸಿಗಬಹುದು ಅಥವಾ ಇರುವ ಕೆಲಸದಲ್ಲಿ ಯಶಸ್ಸು ಅಭಿವೃದ್ಧಿ ಕಾಣಬಹುದು. ಅವಿವಾಹಿತರಿಗೆ ವಿವಾಹಯೋಗ ಇದೆ. ಆಸ್ತಿ ಕೊಳ್ಳುವ ಯೋಗ ಇದೆ. ಸಂತಾನ ಅಪೇಕ್ಷೆ ಮಾಡುವವರು ತಮ್ಮ ಯೋಜನೆಯನ್ನು ಮುಂದಕ್ಕೆ ಹಾಕುವುದು ಉತ್ತಮ.

ಈಗ ಸಂತಾನ ಪಡೆಯಲು ಒಳ್ಳೆಯ ಕಾಲ ಅಲ್ಲ. ಮಕ್ಕಳಿಂದ ನಿಷ್ಠೂರಕ್ಕೆ ಒಳಗಾಗುವಿರಿ. ಮಕ್ಕಳ ಒರಟು ನಡವಳಿಕೆ ನಿಮಗೆ ಬೇಸರ ದುಃಖ ತರಬಹುದು. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಅನುಕೂಲಗಳಿದ್ದರೂ ಒತ್ತಡಗಳು ಇರುತ್ತದೆ. ಕಾರ್ಯಭಾರ ಹೆಚ್ಚು. ಕಾಲಕಾಲಕ್ಕೆ ಊಟ ನಿದ್ರೆಯಿಲ್ಲದೆ ಬಳಲುತ್ತೀರಿ. ಹನ್ನೊಂದನೇ ಮನೆಯಲ್ಲಿ ಕೇತು ಇರುವುದು ಧನಲಾಭಕ್ಕೆ ಕಾರಣವಾಗುತ್ತದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ಧನಸ್ಸು ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗುರುಬಲ ಇಲ್ಲ. ಗುರು ಆರನೇ ಮನೆಯಲ್ಲಿ ಇರುವುದರಿಂದ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಾನೆ. ಮೂರನೇ ಮನೆಯಲ್ಲಿ ಶನಿ ಇರುವುದರಿಂದ ಹಣಕಾಸಿಗೆ ಏನೂ ತೊಂದರೆ ಇಲ್ಲ. ಆದರೆ ನಿಮಗೆ ಈಗ ನಾನಾ ಸಮಸ್ಯೆಗಳು ಅನುಭವಕ್ಕೆ ಬರುತ್ತದೆ. ಹತ್ತನೇ ಮನೆಯಲ್ಲಿ ಕೇತು ಶುಕ್ರ ಇದ್ದಾರೆ. 17 ರ ನಂತರ ಸೂರ್ಯ ಸಹ ಹತ್ತನೇ ಮನೆಗೆ ಪ್ರವೇಶವಾಗುತ್ತಾನೆ. ವೃತ್ತಿಸ್ಥಾನ ಭದ್ರವಾಗಿದ್ದರೂ ಒತ್ತಡಗಳು ಇರುತ್ತದೆ. ನಿಮ್ಮ ಟಾರ್ಗೆಟ್ ಮುಟ್ಟಲು ಕಷ್ಟಪಡುತ್ತೀರಿ. ಎಂಟನೇ ಮನೆಯಲ್ಲಿ ಬುಧ ಇರುವುದು ಒಂದು ರೀತಿಯ ರಕ್ಷಣೆಯ ಅನುಭವ ನೀಡುತ್ತದೆ.

ನಿಮಗೆ ಈಗ ನಾಲ್ಕನೇ ಮನೆಯಲ್ಲಿ ರಾಹು ಇರುವುದು ತಾಯಿ ಸ್ಥಾನದಲ್ಲಿ ಇರುವವರಿಂದ ನಿಷ್ಠೂರ ಉಂಟಾಗುತ್ತದೆ. ಮನಸ್ಸಿಗೆ ಖೇದವಾಗುವಂಥ ಸಂದರ್ಭಗಳು ಎದುರಾಗುತ್ತದೆ. ಸುಖ ಎಂದುಕೊಂಡದ್ದು ಮರೀಚಿಕೆಯಾಗುತ್ತದೆ. ಈಗ ನೀವು ದತ್ತಾತ್ರೇಯನ ಪೂಜೆ ಪ್ರಾರ್ಥನೆ ಅವಶ್ಯವಾಗಿ ಮಾಡಬೇಕು. ಏಳುಬೀಳುಗಳು ಎದುರಾಗುತ್ತದೆ. ಮಾನಸಿಕವಾಗಿ ಗಟ್ಟಿಯಾಗಿರಬೇಕಾಗುತ್ತದೆ. ಈಗ ನಿಮಗೆ ಮಾನಸಿಕ ಶಕ್ತಿಯೇ ಬಲ.

Monthly Horoscope For September 2024 Masika Rashi Bhavishya For 12 Zodiac Signs In Kannada

ಮಕರ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಸಾಡೆಸಾತಿಯ ಪ್ರಭಾವ ಕಡಿಮೆಯಾಗುತ್ತ ಬಂದಿದೆ. ಈ ತಿಂಗಳ ನಂತರ ಕ್ರಮೇಣ ಸಾಡೆಸಾತಿ ಶನಿಯ ಪ್ರಭಾವ ನಶಿಸಿ ನೀವು ಮತ್ತೆ ವಿಜೃಂಭಿಸುತ್ತೀರಿ. ನಿಮ್ಮ ಜೀವನದ ಕಳೆ ಬದಲಾಗುತ್ತದೆ. ನಿಮ್ಮನ್ನು ಹೀಗಳೆದವರ ಮುಂದೆ ಎದೆಯೆತ್ತಿ ತಲೆಯೆತ್ತಿ ನಿಲ್ಲುತ್ತೀರಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹೊಸ ಕೆಲಸ ಸಿಗುವುದು, ಅವಿವಾಹಿತರಿಗೆ ವಿವಾಹ ನಿಷ್ಕರ್ಷೆಯಾಗುವುದು, ಬಡ್ತಿ ಸಿಗುವುದು, ನಿಮಗೆ ಸಾಮಾಜಿಕ ಮನ್ನಣೆ ಗೌರವ ಸಿಗುವುದು ಮುಂತಾದ ಶುಭ ಸಂಗತಿಗಳು ನಡೆಯುತ್ತವೆ. ಏಳು ವರ್ಷಗಳಿಂದ ಬಹಳ ಕಷ್ಟ ಪಟ್ಟಿದ್ದೀರಿ. ಹೆಜ್ಜೆಹೆಜ್ಜೆಗ ಅವಮಾನ ನೋವು ಸಂಕಟಗಳನ್ನು ಅನುಭವಿಸಿದ್ದೀರಿ.

ಈಗ ಅವೆಲ್ಲಕ್ಕೂ ಒಂದು ಕೊನೆ ಸಿಗಲಿದೆ. ಮೂರರಲ್ಲಿ ರಾಹು, ಐದನೇ ಮನೆಯಲ್ಲಿ ಗುರು ನಿಮಗೆ ಅಪಾರ ಬೆಂಬಲ ಕೊಡುತ್ತಿದ್ದಾರೆ. ಹಣದ ಹರಿವು ಉತ್ತಮವಾಗಿದೆ. ನೆನೆಗುದಿಗೆ ಬಿದ್ದ ಕೆಲಸಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ. ಆಸ್ತಿ ಮಾಡುವ ಅವಕಾಶ ಬರಬಹುದು. ಶನಿ ಕೂಡ ಈಗ ಎರಡನೇ ಮನೆಯಲ್ಲಿ ಇದ್ದು ಇನ್ನು ಮುಂದೆ ಮೂರನೇ ಮನೆಗೆ ದೃಷ್ಟಿ ಹಾಯಿಸುತ್ತಾನೆ. ಇದು ನಿಮಗೆ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ. ಉತ್ಕಷ್ಟವಾದ ಜೀವನ ಫಥದಲ್ಲಿ ನಡೆಯುವಂತೆ ಮಾಡುತ್ತದೆ. ಕಷ್ಟಗಳು ಕೊನೆಯಾಗಿ ಸುಖನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

Monthly Horoscope For September 2024 Masika Rashi Bhavishya For 12 Zodiac Signs In Kannada

ಕುಂಭ ರಾಶಿಯ ಮಾಸ ಭವಿಷ್ಯ

ಈಗ ಬಹಳ ಆತಂಕದ ದಿನಗಳು ಯಾವುದೇ ಗ್ರಹಗಳು ನಿಮಗೆ ಸಹಕಾರಿಯಾಗಿ ಇಲ್ಲ. ನಿಮ್ಮ ರಾಶಿಯಲ್ಲೇ ಇರುವ ಶನಿ, ಎರಡನೇ ಮನೆಯಲ್ಲಿ ರಾಹು, ನಾಲ್ಕನೇ ಮನೆಯಲ್ಲಿ ಗುರು, ಎಂಟನೇ ಮನೆಯಲ್ಲಿ ಕೇತು ಇದ್ದು ಇವರೆಲ್ಲ ನಿಮಗೆ ವ್ಯತಿರಿಕ್ತ ಪರಿಣಾಮದ ಪ್ರಭಾವವನ್ನು ಉಂಟುಮಾಡುತ್ತಾರೆ. ನಿಮ್ಮವರೇ ನಿಮಗೆ ದ್ವೇಷಿಗಳಾಗುತ್ತಾರೆ. ನಿಮ್ಮ ಮೇಲೆ ದೂರುಗಳು ಬರಬಹುದು. ನಿಮ್ಮವರಿಂದಲೇ ಆಕ್ಷೇಪಣೆಗಳು ಬರಬಹುದು. ಹಣಕಾಸಿ ಮುಗ್ಗಟ್ಟು ಕಾಡಿಸಬಹುದು. ಮನೆಯಲ್ಲಿ ಖರ್ಚುವೆಚ್ಚಗಳು ಏರುಪೇರಾಗಬಹುದು.

ಅವಮಾನಗಳು ಮಾನಸಿಕ ವೇದನೆ ಮುಂತಾದ ನೆಗೆಟಿವ್ ಎಫೆಕ್ಟ್ ಇರುತ್ತದೆ. ನಿಮ್ಮ ಅಧಿಕಾರಕ್ಕೂ ಕುತ್ತು ಬರಬಹುದು. ಕಾರ್ಯಕ್ಷೇತ್ರದಲ್ಲಿ ನಾನಾ ರೀತಿಯ ಒತ್ತಡಗಳು ಸೃಷ್ಟಿಯಾಗಿ ಕಿರುಕುಳಕ್ಕೆ ಕಾರಣವಾಗುತ್ತದೆ. ಈಗ ನೀವು ಒಂದು ನವಗ್ರಹ ಹೋಮ ಮಾಡಿಸುವುದು ಅಥವಾ ನವಗ್ರಹ ಜಪ ಮಾಡಿಸುವುದು ಒಳ್ಳೆಯದು. ಅಧಿಕಾರ ನಷ್ಟವಾಗದೆ ಇರುವಂತೆ ಶ್ರೀರಾಮನ ಪೂಜೆ ಪ್ರತಿ ಭಾನುವಾರ ಮಾಡಬೇಕು. ಧೈರ್ಯ ಕಳೆದುಕೊಳ್ಳದೆ ಸ್ಥಿರ ಮನಸ್ಸಿನಿಂದ ಸವಾಲುಗಳನ್ನು ಎದುರಿಸಿ. ಶ್ರೀ ದತ್ತಾತ್ರೇಯನ ಪ್ರಾರ್ಥನೆ ಮಾಡಿ.

Monthly Horoscope For September 2024 Masika Rashi Bhavishya For 12 Zodiac Signs In Kannada

ಮೀನ ರಾಶಿಯ ಮಾಸ ಭವಿಷ್ಯ

ನಿಮಗೂ ಈಗ ಗಂಭೀರ ಸಮಯವೇ ಆಗಿದೆ. ನಿಮ್ಮ ರಾಶಿಯಲ್ಲೇ ರಾಹು, ಏಳನೇ ಮನೆಯಲ್ಲಿ ಕೇತು, ವ್ಯಯಸ್ಥಾನದಲ್ಲಿ ಶನಿ , ಮೂರರಲ್ಲಿ ಗುರು ಹೀಗೆ ಯಾವ ಗ್ರಹಗಳು ಅನುಕೂಲಕರ ಜಾಗಗಳಲ್ಲಿ ಇಲ್ಲ, ಸಾಡೆಸಾತಿಯ ಪ್ರಭಾವದಲ್ಲಿ ನೀವು ಪ್ರಾರಂಭಿಕ ಹಂತದಲ್ಲಿ ಇದ್ದೀರ. ಹಾಗಾಗಿ ಖರ್ಚು ವೆಚ್ಚಗಳು ಹೆಚ್ಚು. ಯಾವುದೇ ಕೆಲಸ ಮುಂದೆ ಸಾಗದೆ ಅರ್ಧದಲ್ಲೇ ನಿಂತುಹೋಗುತ್ತದೆ. ಶ್ರಮ ಹಣಕಾಸಿನ ಖರ್ಚು ಹೆಚ್ಚು ಬೇಡುತ್ತದೆ. ನೀವು ಊಹೆ ಮಾಡದೆ ಇರುವಂತೆ ಖರ್ಚು ಮಾನಸಿಕ ಚಿಂತೆ ನಿಮ್ಮನ್ನು ಕಾಡುತ್ತದೆ.

ನೀವು ಹನುಮಾನ್ ಪೂಜೆ ಮಾಡಬೇಕು. ಹನುಮಾನ್‍ನ ಚಾಲೀಸಾ ಹೇಳಿಕೊಳ್ಳಬೇಕು. ವಿಷ್ಣು ಸಹಸ್ರನಾಮ ಪಠಿಸಬೇಕು. ನಿಮ್ಮ ಹತ್ತಿರದವರಿಂದಲೇ ಕಿರುಕುಳಗಳನ್ನು ಅನುಭವಿಸುತ್ತೀರಿ. ನಿಮ್ಮವರೇ ನಿಮಗೆ ಹಗೆಗಳಾಗುತ್ತಾರೆ. ಯಾವುದಕ್ಕೂ ಅಂಜಬೇಡಿ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ. ನೀವು ಮಾಡುವ ಕೆಲಸದಲ್ಲಿ ಶ್ರದ್ಧಾಭಕ್ತಿ ಇರಲಿ. ಫಲಾಫಲಗಳನ್ನು ದೇವರಿಗೆ ಬಿಡಿ. ಆದಷ್ಟು ವಿವೇಚನೆಯಿಂದ ಯೋಚಿಸಿ ಮುಂದುವರೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+