ಈ ರಾಶಿಯವರಿಗೆ ಉದ್ಯೋಗದಲ್ಲಿ ಒತ್ತಡ: ಮಕರ, ಕುಂಭ, ಮೀನ ರಾಶಿಗಳ ಜನವರಿ ಮಾಸ ಭವಿಷ್ಯ
ಹೊಸ ಕ್ಯಾಲೆಂಡರ್ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಗಳ ಫಲಾಫಲಗಳು ಹೇಗಿರುತ್ತವೆ ಎನ್ನುವ ಮಾಹಿತಿ ಇಲ್ಲಿದೆ. ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದಂತೆ ಈ ಫಲಗಳ ವಿವರಗಳನ್ನು ಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರು ನೀಡಿದ್ದಾರೆ. ಎಲ್ಲ ರಾಶಿಗಳ ದಿನ ಭವಿಷ್ಯ, ವಾರ ಭವಿಷ್ಯ ಮತ್ತು ಮಾಸ ಭವಿಷ್ಯಗಳು ಒನ್ ಇಂಡಿಯಾ ಕನ್ನಡ ಜಾಲತಾಣದಲ್ಲಿ ಲಭ್ಯ.
ಮಕರ ರಾಶಿ: ಉದ್ಯೋಗದಲ್ಲಿ ಒತ್ತಡ, ಪರಿಶ್ರಮಕ್ಕೆ ತಕ್ಕ ಪ್ರತಿಫಲ
ಈ ತಿಂಗಳು ಮಕರ ರಾಶಿಯವರಿಗೆ ಶ್ರಮ ಮತ್ತು ಸಹನೆಯ ಪರೀಕ್ಷೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ತಕ್ಷಣ ಫಲ ಸಿಗದಿದ್ದರೂ ನಿಮ್ಮ ಪರಿಶ್ರಮ ಮುಂದಿನ ತಿಂಗಳಲ್ಲಿ ಫಲ ನೀಡುತ್ತದೆ. ಆರ್ಥಿಕವಾಗಿ ಸ್ಥಿರತೆ ಇದ್ದರೂ ದೊಡ್ಡ ಹೂಡಿಕೆ ತಪ್ಪಿಸುವುದು ಒಳಿತು. ದಾಂಪತ್ಯ ಜೀವನದಲ್ಲಿ ಸಮಯದ ಕೊರತೆಯಿಂದ ಅಸಮಾಧಾನ ಉಂಟಾಗಬಹುದು. ಪರಸ್ಪರ ಅರಿವು ಅಗತ್ಯ. ಸಂತಾನ ವಿಚಾರದಲ್ಲಿ ಚಿಂತೆ ನಿಧಾನವಾಗಿ ಕಡಿಮೆಯಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಎಲುಬು, ಸಂಧಿ ನೋವುಗಳಿಗೆ ಗಮನ ಕೊಡಿ. ರೈತರಿಗೆ ಶ್ರಮ ಹೆಚ್ಚಾದರೂ ಬೆಳೆ ನಿಧಾನವಾಗಿ ಉತ್ತಮವಾಗುತ್ತದೆ. ಶನಿ ದೇವರ ಆರಾಧನೆ ಮಾನಸಿಕ ಬಲ ಮತ್ತು ಸ್ಥಿರತೆ ನೀಡುತ್ತದೆ.
ನಕ್ಷತ್ರಗಳು: ಉತ್ತರಾಷಾಢ (2 ರಿಂದ 4 ಪಾದ), ಶ್ರವಣ (1 ರಿಂದ 4 ಪಾದ), ಧನಿಷ್ಠ (1 ಮತ್ತು 2ನೇ ಪಾದ). ಅದೃಷ್ಟ ಸಂಖ್ಯೆ: 8, ಶುಭ ಬಣ್ಣ: ನೀಲಿ, ಶುಭ ದಿಕ್ಕು: ಪಶ್ಚಿಮ, ಶನಿದೇವನ ಆರಾಧನೆಯಿಂದ ಶುಭಫಲ.

ಕುಂಭ ರಾಶಿ: ವಿಭಿನ್ನ ಚಿಂತನೆಗೆ ಮಾನ್ಯತೆ
ಜನವರಿ ತಿಂಗಳು ಕುಂಭ ರಾಶಿಯವರಿಗೆ ಹೊಸ ಆಲೋಚನೆಗಳು ಮತ್ತು ಯೋಜನೆಗಳ ಕಾಲ. ಉದ್ಯೋಗದಲ್ಲಿ ನಿಮ್ಮ ವಿಭಿನ್ನ ಚಿಂತನೆಯನ್ನು ಗುರುತಿಸಲಾಗುತ್ತದೆ. ಆದರೆ ನಿಮ್ಮ ಎಲ್ಲ ಅಭಿಪ್ರಾಯಗಳನ್ನು ತಕ್ಷಣಕ್ಕೆ ಎಲ್ಲರೊಂದಿಗೆ ಹಂಚಿಕೊಳ್ಳುವುದು ಸೂಕ್ತವಲ್ಲ. ಆರ್ಥಿಕವಾಗಿ ಆದಾಯ ಸಾಧಾರಣವಾಗಿದ್ದು, ಭವಿಷ್ಯದ ಯೋಜನೆಗಳಿಗೆ ಈ ತಿಂಗಳು ಅಡಿಪಾಯ ಹಾಕಬಹುದು. ದಾಂಪತ್ಯ ಜೀವನದಲ್ಲಿ ಸ್ವಲ್ಪ ದೂರದ ಭಾವನೆ ಕಂಡರೂ ಮಾತುಕತೆಯಿಂದ ಸರಿಹೋಗುತ್ತದೆ. ಸಂತಾನ ವಿಚಾರದಲ್ಲಿ ಶುಭ ಸೂಚನೆ ಇದೆ. ಆರೋಗ್ಯದ ದೃಷ್ಟಿಯಿಂದ ನರವ್ಯೂಹ ಮತ್ತು ನಿದ್ರಾಭಾವಕ್ಕೆ ಗಮನ ಕೊಡಿ. ರೈತರಿಗೆ ಹೊಸ ಪ್ರಯೋಗಗಳು ಲಾಭ ನೀಡಬಹುದು. ಶಿವನ ಆರಾಧನೆಯು ಮಾನಸಿಕ ಶಾಂತಿ ನೀಡುತ್ತದೆ.
ನಕ್ಷತ್ರಗಳು: ಧನಿಷ್ಠ (3 ಮತ್ತು 4 ನೇ ಪಾದ), ಶತಭಿಷ (1 ರಿಂದ 4 ಪಾದ), ಪೂರ್ವಾಭಾದ್ರಾ (1 ರಿಂದ 3 ಪಾದ). ಅದೃಷ್ಟ ಸಂಖ್ಯೆ: 7, ಶುಭ ಬಣ್ಣ: ನೀಲಿ, ಶುಭ ದಿಕ್ಕು: ಉತ್ತರ, ಶಿವನ ಆರಾಧನೆಯಿಂದ ಶುಭ ಫಲ.
ಮೀನ ರಾಶಿ: ಸೃಜನಶೀಲನೆಯಿಂದ ಸಮಸ್ಯೆಗಳು ಪರಿಹಾರ
ಈ ತಿಂಗಳು ಮೀನ ರಾಶಿಯವರಿಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುವ ಕಾಲ. ಉದ್ಯೋಗದಲ್ಲಿ ಒತ್ತಡ ಇದ್ದರೂ ನಿಮ್ಮ ಸೃಜನಶೀಲತೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಆರ್ಥಿಕವಾಗಿ ಆದಾಯ ನಿಧಾನವಾಗಿದ್ದರೂ ಸ್ಥಿರವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂವೇದನೆ ಹೆಚ್ಚಾಗುತ್ತದೆ; ಸಣ್ಣ ಮಾತಿಗೂ ಮನಸ್ತಾಪ ಸಾಧ್ಯ. ಸಂಯಮ ಅಗತ್ಯ. ಸಂತಾನ ವಿಚಾರದಲ್ಲಿ ದೇವರ ಕೃಪೆಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಅಲರ್ಜಿ, ಜಲ ಸಂಬಂಧಿತ ಸಮಸ್ಯೆಗಳಿಗೆ ಗಮನ ಕೊಡಿ. ರೈತರಿಗೆ ನೀರಾವರಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿಷ್ಣು ಅಥವಾ ನಾರಾಯಣ ಆರಾಧನೆ ಶುಭ ಫಲ ನೀಡುತ್ತದೆ.
ನಕ್ಷತ್ರಗಳು: ಪೂರ್ವಾಭಾದ್ರಾ (4ನೇ ಪಾದ), ಉತ್ತರಾಭಾದ್ರಾ (1 ರಿಂದ 4 ಪಾದ), ರೇವತಿ (1 ರಿಂದ 4 ಪಾದ). ಅದೃಷ್ಟ ಸಂಖ್ಯೆ: 2, ಶುಭ ಬಣ್ಣ: ಹಸಿರು, ಶುಭ ದಿಕ್ಕು: ಈಶಾನ್ಯ, ವಿಷ್ಣುವಿನ ಆರಾಧನೆಯಿಂದ ಶುಭ ಫಲ.












Click it and Unblock the Notifications