• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budh Gochar 2022 : ಧನು ರಾಶಿಯಲ್ಲಿ ಬುಧ ಸಂಕ್ರಮಣ: ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

|
Google Oneindia Kannada News

ಸೌರವ್ಯೂಹದಲ್ಲಿ ಗ್ರಹಗಳ ಸ್ಥಾನ ಬದಲಾಗುತ್ತಲೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಕೆಲವೊಮ್ಮೆ ಶುಭವಾಗಿರಬಹುದು ಅಥವಾ ಅಶುಭವೂ ಆಗಿರಬಹುದು. ಒಂದು ಗ್ರಹದ ಸ್ಥಾನ ಬದಲಾವಣೆಯಿಂದ ಜನ ಜೀವನಕ್ಕೆ ಶುಭ ಸೂಚನೆಗಳ ಬದಲಿಗೆ ಅಶುಭಗಳಿದ್ದರೆ ಅದಕ್ಕೆ ಪರಿಹಾರ ಕೂಡ ಇದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಡಿಸೆಂಬರ್ 3ರಂದು ಸಂಭವಿಸುವ ಧನು ರಾಶಿಯಲ್ಲಿ ಬುಧ ಸಂಕ್ರಮಣದಿಂದ ಯಾವ ರಾಶಿಯವರಿಗೆ ಒಳಿತಾಗಲಿದೆ? ಯಾರಿಗೆ ಖುಲಾಯಿಸಲಿದೆ ಅದೃಷ್ಟ? ಕೆಟ್ಟ ಪರಿಣಾಮಗಳಿಂದ ಮುಕ್ತಿ ಪಡೆಯುವುದು ಹೇಗೆ? ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳೋಣ.

ಡಿಸೆಂಬರ್ 3ರಂದು ಧನು ರಾಶಿಯಲ್ಲಿ ಬುಧ ಗ್ರಹ ಸಂಕ್ರಮಣ ಸಾಮಾನ್ಯವಾದುದ್ದಲ್ಲ. ಈ ಸಾಗಣೆಯು 12 ರಾಶಿಯವರ ಜೀವನದಲ್ಲಿ ಹೆಚ್ಚಿನ ಅವಕಾಶಗಳು ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತೆರೆಯುತ್ತದೆ.

ಅಂದಹಾಗೆ ಬುಧ ಗ್ರಹ ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಸಾಮರ್ಥ್ಯಗಳನ್ನು ಸೂಚಿಸುತ್ತದೆ. ಜಾತಕದಲ್ಲಿ ಬುಧ ಬಲವಿದ್ದರೆ ಅಂತವರ ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಜೊತೆಗೆ ಅತ್ಯುತ್ತಮವಾದ ಸಂಭಾಷಣೆಯ ಸಾಮರ್ಥ್ಯವನ್ನು ಹೊಂದಬಹುದು. ಇದು ನಿಮ್ಮ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ.

ಮಾತ್ರವಲ್ಲದೆ ಬುಧ ಗ್ರಹ ಬುದ್ಧಿವಂತಿಕೆ, ಸ್ಮರಣೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಇದು ನಮ್ಮ ನರಮಂಡಲ, ಮಾತು, ಸಂವಹನವನ್ನು ನಿಯಂತ್ರಿಸುತ್ತದೆ. ಈಗ ಈ ಬುಧ ಗ್ರಹವು ಧನು ರಾಶಿಯಲ್ಲಿ ಸಾಗುತ್ತದೆ. ಧನು ದ್ವಾದಶಿ ರಾಶಿಗಳಲ್ಲಿ ಒಂಬತ್ತನೇ ರಾಶಿಯಾಗಿದೆ. ಧನು ರಾಶಿ ಸಂಪತ್ತು, ಪ್ರೇರಣೆ, ಬುದ್ಧಿವಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಹೀಗಾಗಿ ಧನು ರಾಶಿಯಲ್ಲಿ ಬುಧನ ಸಂಕ್ರಮಣ ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು, ಶಿಕ್ಷಕರಿಗೆ ತುಂಬಾ ಒಳ್ಳೆಯ ಸಮಯವನ್ನು ತರುತ್ತದೆ. ಆದರೆ ರಾಶಿಯಲ್ಲಿ ಬುಧ ಬಲವಿಲ್ಲದೇ ಇದ್ದಲ್ಲಿ ಕೆಲ ತೊಂದರೆಗಳು ಎದುರಾಗಬಹುದು. ಈ ಸಂಚಾರದಲ್ಲಿ ದ್ವಾದಶಿ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಯೋಣ.

ಧನು ರಾಶಿಯಲ್ಲಿ ಬುಧ ಸಂಕ್ರಮಣ: ಸಮಯ
ಧನು ರಾಶಿಯಲ್ಲಿ ಬುಧ ಸಂಕ್ರಮಣ ಡಿಸೆಂಬರ್ 3 ರಂದು ಶನಿವಾರ ಬೆಳಗ್ಗೆ 06:34 ಕ್ಕೆ ಸಂಭವಿಸಲಿದೆ. ಚಂದ್ರನ ನಂತರ ಸೌರವ್ಯೂಹದಲ್ಲಿ ಬುಧ ಚಿಕ್ಕದಾದ ಮತ್ತು ವೇಗವಾಗಿ ಚಲಿಸುವ ಗ್ರಹವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವನ್ನು ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಗ್ರಹ ಎಂದು ಪರಿಗಣಿಸಲಾಗುತ್ತದೆ.

ಮೇಷ: ಖುಲಾಯಿಸಲಿದೆ ಅದೃಷ್ಟ

ಮೇಷ: ಖುಲಾಯಿಸಲಿದೆ ಅದೃಷ್ಟ

ಮೇಷ ರಾಶಿಯವರ ಜಾತಕದಲ್ಲಿ ಬುಧ ಗ್ರಹದ ಅನುಗ್ರಹವಿದೆ. ಹೀಗಾಗಿ ಧನು ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ಮೇಷ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಸಾಮರ್ಥ್ಯ ಹೆಚ್ಚಾಗಲಿದೆ. ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು, ಶಿಕ್ಷಕರು ಈ ಸಮಯದಲ್ಲಿ ಅಸಾಧಾರಣ ಸಾಧನೆ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಬೆಳವಣಿಗೆ ಹೊಂದುತ್ತಾರೆ. ಚಿಲ್ಲರೆ ಅಂಗಡಿ, ತರಕಾರಿ, ಹೂ ಮತ್ತು ಹಣ್ಣು ಹೀಗೆ ಸಣ್ಣ ವ್ಯಾಪಾರಿಗಳ ಮೊಗದಲ್ಲಿಂದು ಮಂದಹಾಸ ಮೂಡಲಿದೆ. ಅವರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ನಿರೀಕ್ಷಿತ ಲಾಭ ಪಡೆಯುತ್ತಾರೆ. ವಾಹನ, ಮನೆ, ಭೂಮಿ ಖರೀದಿ ವಿಚಾರ ಮಾಡುವ ಸಾಧ್ಯತೆಗಳು ಇವೆ.

ಉನ್ನತ ಶಿಕ್ಷಣಕ್ಕಾಗಿ ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ವಿದ್ಯಾರ್ಥಿಗಳ ಆಸಕ್ತಿಗನುಸಾರ ಪೋಷಕರು ಶಿಕ್ಷಣ ಕೊಡಿಸಲು ಪ್ರಯತ್ನಿಸುತ್ತಾರೆ. ದೂರದ ಪ್ರಯಾಣ ಮತ್ತು ತೀರ್ಥಯಾತ್ರೆಗೆ ಇದು ಉತ್ತಮ ಸಮಯ. ನೀವು ಧಾರ್ಮಿಕ ಮಾರ್ಗದ ಕಡೆಗೆ ಒಲವು ತೋರುತ್ತೀರಿ. ಈ ಮೂಲಕ ನಿಮ್ಮ ಉತ್ತಮ ಕರ್ಮವನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ಮೇಷ ರಾಶಿಯವರು ತಮ್ಮ ತಂದೆ ಮತ್ತು ಮಾರ್ಗದರ್ಶಕರ ಬೆಂಬಲವನ್ನು ಪಡೆಯುತ್ತಾರೆ. ಬುಧ ನಿಮ್ಮ ಒಂಬತ್ತನೇ ಮನೆಯಲ್ಲಿ ನಿಮ್ಮ ಆರನೇ ಅಧಿಪತಿಯಾಗಿಯೂ ಸಂಚಾರ ಮಾಡುತ್ತಿರುವುದರಿಂದ ನಿಮ್ಮ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಜಾಗೃತರಾಗಿರಬೇಕು.

ವೃಷಭ: ಐಟಿ, ವ್ಯಾಪಾರ, ಸಂಶೋಧನಾ ಕ್ಷೇತ್ರದವರಿಗೆ ಶುಭ ದಿನ

ವೃಷಭ: ಐಟಿ, ವ್ಯಾಪಾರ, ಸಂಶೋಧನಾ ಕ್ಷೇತ್ರದವರಿಗೆ ಶುಭ ದಿನ

ವೃಷಭ ರಾಶಿಯವರ ಜೀವನದಲ್ಲಿ ಹಠಾತ್ ಬದಲಾವಣೆಗಳಾಗುತ್ತವೆ. ಹಸ್ಯಗಳು, ನಿಗೂಢ ಅಧ್ಯಯನಗಳತ್ತ ನಿಮ್ಮ ಒಲವು ಹೆಚ್ಚಾಗಬಹುದು. ಕಂಪ್ಯೂಟರ್, ಐಟಿ, ವ್ಯಾಪಾರ, ಸಂಶೋಧನಾ ಕ್ಷೇತ್ರದಲ್ಲಿರುವ ವೃಷಭ ರಾಶಿಯವರು ಕಠಿಣ ಪರಿಶ್ರಮದಿಂದ ಮಾತ್ರ ಫಲಪಡೆಯುತ್ತಾರೆ. ನಿಮ್ಮ ಎಲ್ಲಾ ಸಂಶೋಧನೆಗಳನ್ನು ಜಗತ್ತಿಗೆ ತೋರಿಸುವ ಸಮಯ ಇದು. ನಿಮ್ಮಲ್ಲಿರು ಬುದ್ಧಿ ಶಕ್ತಿ, ಮಾತು, ಸಂವಹನ ಉತ್ತಮ ರೀತಿಯಲ್ಲಿ ಬದಲಾಗುತ್ತದೆ. ಮಾತಿನಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ಆಸಕ್ತಿ ಹೆಚ್ಚಿಕೊಳ್ಳುವಿರಿ. ನಿಮಗೆ ಅಂಟಿಕೊಂಡಿದ್ದ ಕಷ್ಟಗಳು ದೂರವಾಗುತ್ತವೆ. ಆದರೆ ಅದಕ್ಕೆ ನಿಮ್ಮ ಶ್ರಮದ ಅವಶ್ಯಕತೆ ಇದೆ. ಯಾರ ಮಾತಿಗೂ ಕಿವಿ ಕೊಡದೆ ನಿಮ್ಮ ಕೆಲಸದಲ್ಲಿ ಶ್ರದ್ಧೆ ತೋರುವ ನಿಮ್ಮ ಗುಣವನ್ನು ಎಲ್ಲರೂ ಮೆಚ್ಚುತ್ತಾರೆ.

ಆರೋಗ್ಯದ ಬಗ್ಗೆ ನೀವು ಜಾಗೃತರಾಗಿರಬೇಕು. ಆದಕ್ಕಾಗಿ ಉತ್ತಮ ಆಹಾರವನ್ನು ಸೇವಿಸಿ. ಸ್ವಚ್ಚತೆ ಕಡೆಗೆ ಇರಲಿ ಗಮನ. ನೀವು ಗಮನ ಕೊಡದಿದ್ದರೆ ನಿಮ್ಮ ಉಳಿತಾಯವನ್ನು ಸಮತೋಲನಗೊಳಿಸಲು ಸಾಧ್ಯವಾಗುವುದಿಲ್ಲ. ಉಳಿತಾಯವನ್ನು ಅನಿರೀಕ್ಷಿತ ವೆಚ್ಚಗಳಿಗೆ ಬಳಸಬಹುದು.

ಮಿಥುನ: ನಿರೀಕ್ಷಿತ ಬಾಳ ಸಂಗಾತಿ ಆಯ್ಕೆ

ಮಿಥುನ: ನಿರೀಕ್ಷಿತ ಬಾಳ ಸಂಗಾತಿ ಆಯ್ಕೆ

ಅವಿವಾಹಿತ ಮಿಥುನ ರಾಶಿಯವರು ದಾಂಪತ್ಯ ಜೀವನಕ್ಕೆ ಕಾಲಿಡುವ ಸಂದರ್ಭವಿದು. ಜೀವನ ಸಂಗಾತಿ ಹುಡುಕಾಟದಲ್ಲಿರುವವರಿಗೆ ನಿರೀಕ್ಷಿತ ಬಾಳ ಸಂಗಾತಿ ಲಭಿಸುತ್ತಾರೆ. ಮನೆ ಮನ ಸಂತೋಷದಿಂದ ಕೂಡಿರುತ್ತದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಬಲವಾದ ಬಾಂಧವ್ಯವನ್ನು ಅನುಭವಿಸುತ್ತಾರೆ. ಬುಧ ಬಲದಿಂದಾಗಿ ಸಂವಹನ ಎಲ್ಲರನ್ನು ಆಕರ್ಷಿಸುತ್ತದೆ. ನಿಮ್ಮ ಮಾತಿನಲ್ಲಿರುವ ಮಧುರತೆ ಶತ್ರುಗಳ ಕೋಪವನ್ನೂ ತಣ್ಣಗಾಗಿಸುತ್ತದೆ. ಮನೆಯಲ್ಲಿ ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ಯೋಜಿಷಬಹುದು. ಕೆಲಸದಲ್ಲಿ ನಿಮ್ಮ ಮೇಲೆ ಮೇಲಾಧಿಕಾರಿಗಳು ನಂಬಿಕೆ ಇಡುತ್ತಾರೆ. ಹೀಗಾಗಿ ಕೆಲಸ ನಿಮಗೆ ಹೆಚ್ಚಾಗಿರಬಹುದು. ಆದರೆ ನೀವು ಅದನ್ನು ಹೊರೆಯಾಗಿ ತೆಗೆದುಕೊಳ್ಳುವುದಕ್ಕಿಂತ ಸುಲಭವಾಗಿ ಪೂರ್ಣಗೊಳಿಸುವಿರಿ.

ವ್ಯಾಪಾರ ಪಾಲುದಾರಿಕೆಗೆ ಇದು ಉತ್ತಮ ಸಮಯ. ಬುಧನು ನಿಮ್ಮ ಲಗ್ನವನ್ನು ಸಹ ನೋಡುತ್ತಿರುವುದರಿಂದ ನಿಮ್ಮ ಆರೋಗ್ಯ ಫಿಟ್ ಆಗಿರುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸಲು ಮತ್ತು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ.

ಕಟಕ: ಶತ್ರುಗಳ ನಾಶ

ಕಟಕ: ಶತ್ರುಗಳ ನಾಶ

ಕಟಕ ರಾಶಿಯವರ ಮೇಲೆ ಈ ಸಮಯದಲ್ಲಿ ಬುಧ ಬಲವಿರುತ್ತದೆ. ಇದರಿಂದ ಶತ್ರುಗಳ ನಾಶವಾಗಲಿದೆ. ಕೆಲಸದಲ್ಲಿ ಕಠಿಣ ಪೈಪೋಟಿ ಮಾಡುವಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಖುಲಾಯಿಸಲಿದೆ. ವ್ಯಾಪಾರ, ಸಮಾಲೋಚನೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವವರು ಲಾಭವನ್ನು ಪಡೆಯುತ್ತಾರೆ. ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆರೋಗ್ಯದ ಬಗ್ಗೆ ಅಸಡ್ಡೆ ತೋರುವುದು ಉತ್ತಮ ನಡೆಯಲ್ಲ.

ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಜನರೊಂದಿಗೆ ಸಂಪರ್ಕವನ್ನು ಮಾಡುವುದು ಬಹಳ ಮುಖ್ಯ. ಇಷ್ಟೇ ಅಲ್ಲ, ಇಂದು ನೀವು ಶಕ್ತಿಯಿಂದ ತುಂಬಿರುವಿರಿ. ಮನೆಯ ಸೌಕರ್ಯಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಸಹ ನೀವು ಪ್ರಮುಖ ಕೊಡುಗೆಯನ್ನು ಹೊಂದಿರುತ್ತೀರಿ. ಕೆಲವು ಕೆಲಸಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಮೂಡ್ ಕೆಟ್ಟದಾಗಿರುತ್ತದೆ ಮತ್ತು ಇದು ಮನೆಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಯಾವುದೇ ರೀತಿಯ ಸ್ಥಳಾಂತರವು ಒತ್ತಡವನ್ನು ಉಂಟುಮಾಡಬಹುದು. ಆದರೆ ನೀವು ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ. ಅದೃಷ್ಟ ನಿಮ್ಮನ್ನು ಸದಾ ಕೈ ಹಿಡಿಯುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ, ನೀವು ನಿಮ್ಮ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುತ್ತೀರಿ. ನಿಮ್ಮ ತಾಯಿಯ ಬೆಂಬಲವನ್ನೂ ನೀವು ಪಡೆಯುತ್ತೀರಿ.

ಸಿಂಹ: ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಸಾಮಾರ್ಥ್ಯ ವೃದ್ಧಿ

ಸಿಂಹ: ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಸಾಮಾರ್ಥ್ಯ ವೃದ್ಧಿ

ಸಿಂಹ ರಾಶಿಯವರ ಜೀವನ ನಿರೀಕ್ಷಿಸಿದಂತೆ ನಡೆಯಲಿದೆ. ಬುಧಬಲದಿಂದಾಗಿ ಇದು ನಿಮ್ಮ ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಸಾಮಾರ್ಥ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ವಿಷಯಗಳಲ್ಲಿ ಮಾಡುವ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಸಮಸ್ಯೆಯನ್ನು ಬಗೆಹರಿಸುವ ಜಾಣ್ಮೆ ನಿಮಗಿರುತ್ತದೆ. ನೀವು ಸಂಪೂರ್ಣ ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ ಮತ್ತು ಶಕ್ತಿಯುತವಾಗಿರುವಿರಿ. ಇದರಿಂದಾಗಿ ನೀವು ನಿಮ್ಮ ಕಾರ್ಯಗಳನ್ನು ಸರಿಯಾಗಿ ಪೂರ್ಣಗೊಳಿಸುತ್ತೀರಿ. ಆದರೆ, ಇಂದು ಮಧ್ಯಾಹ್ನ ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ. ಸಿಂಹ ರಾಶಿಯವರು ಈ ಸಮಯದಲ್ಲಿ ಪ್ರಯಾಣ ಮಾಡುವುದು ಉತ್ತಮವಲ್ಲ. ಅಗತ್ಯವಿದ್ದರೆ ಮಾತ್ರ ಪ್ರಯಾಣಿಸುವುದು ಉತ್ತಮ.

ಗಣಿತ, ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ಗಳಲ್ಲಿ ನೀವು ಯಶಸ್ಸು ಕಾಣುವಿರಿ. ಈ ಸಾಗಾಣೆ ನಿಮ್ಮ ಕಲಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸುತ್ತದೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಇದು ಸದುಪಯೋಗಪಡಿಸಿಕೊಳ್ಳಬೇಕಾದ ಸಮಯವಾಗಿದೆ. ಕೆಲವರು ವಿದ್ಯಾರ್ಥಿವೇತನವನ್ನು ಸಹ ಪಡೆಯಬಹುದು. ನೀವು ಪ್ರಣಯ ಸಮಯವನ್ನು ಆನಂದಿಸುವಿರಿ ಮತ್ತು ಸಂಬಂಧವು ಬಲಗೊಳ್ಳುತ್ತದೆ. ದೀರ್ಘಕಾಲದಿಂದ ಮಕ್ಕಳು ಪಡೆಯಲು ಯೋಜಿಸುತ್ತಿರುವ ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು.

ಕನ್ಯಾ: ಮನೆಯಲ್ಲಿ ಶುಭ ಕಾರ್ಯಕ್ರಮ

ಕನ್ಯಾ: ಮನೆಯಲ್ಲಿ ಶುಭ ಕಾರ್ಯಕ್ರಮ

ಕನ್ಯಾರಾಶಿಯ ಅವಿವಾಹಿತ ಪುರುಷರಿಗೆ ಕನ್ಯಾದಾನ ಮಾಡಲು ಹಲವಾರು ಜನ ಮುಂದೆ ಬರುತ್ತಾರೆ. ಈ ಸಮಯದಲ್ಲಿ ಏಕಾಂಗಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಮನೆಯಲ್ಲಿ ಸಂತೋಷ ಶುಭ ಕಾರ್ಯಕ್ರಮಗಳು ನಡೆಯಲಿವೆ. ಯಾವುದೇ ಆಸ್ತಿ ಅಥವಾ ಯಾವುದೇ ವಾಹನವನ್ನು ಖರೀದಿಸಲು ಇದು ತುಂಬಾ ಒಳ್ಳೆಯ ಸಮಯ. ಮನೆಯಲ್ಲಿ ಅದೃಷ್ಟ ಲಕ್ಷ್ಮಿ ತಾಂಡವವಾಡಲಿದ್ದಾಳೆ. ಎಸ್ಟೇಟ್ ಡೆವಲಪರ್ ಮತ್ತು ಏಜೆಂಟ್ ಈ ಸಮಯ ಮಂಗಳಕರವಾಗಿದೆ. ಮನೆಯಿಂದಲೂ ಕೆಲವು ಲಾಭದಾಯ ಕೆಲಸವನ್ನು ಪ್ರಾರಂಭಿಸಬಹುದು.

ನಿರ್ಗತಿಕರಿಗೆ, ಅನಾಥರಿಕೆ ಸಹಾಯ ಮಾಡುವ ನಿಮ್ಮ ಗುಣವನ್ನು ಹಲವಾರು ಜನ ಮೆಚ್ಚುತ್ತಾರೆ. ಇದರ ಫಲಿತಾಂಶ ಕಷ್ಟಕಾಲದಲ್ಲಿ ನಿಮಗೆ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸಿ. ಶತ್ರುಗಳಿಂದ ದೂರವಿರುವುದು ಒಳ್ಳೆಯದು. ಸದ್ಯಕ್ಕೆ ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸೂಕ್ತ. ಇಲ್ಲದಿದ್ದರೆ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಇಂದು ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದರೆ, ಅದರಲ್ಲಿ ಜಾಗರೂಕರಾಗಿರಿ.

ವಿದ್ಯಾರ್ಥಿಗಳು ಶಿಕ್ಷಕರ ಸಹಕಾರ ಪಡೆಯುತ್ತಾರೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಪ್ರವಾಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು.

ತುಲಾ: ಸಂವಹನ ಕೌಶಲ್ಯ ವೃದ್ಧಿ

ತುಲಾ: ಸಂವಹನ ಕೌಶಲ್ಯ ವೃದ್ಧಿ

ತುಲಾ ರಾಶಿಯವರ ಜಾತಕದಲ್ಲಿ ಬುಧ ಬಲವಿದೆ. ಇದರಿಂದಾಗಿ ತುಲಾ ರಾಶಿಯವರ ಸಂಪತ್ತು, ಬುದ್ಧಿವಂತಿಕೆ ಮತ್ತು ಅದೃಷ್ಟ ಹೆಚ್ಚಾಗಲಿದೆ. ನಿಮ್ಮ ಸಂವಹನ ಕೌಶಲ್ಯಗಳು ಹೆಚ್ಚಾಗಲಿವೆ. ಮಾಧ್ಯಮ, ಪ್ರಕಟಣೆ, ಬರವಣಿಗೆ, ದಾಖಲಾತಿ, ಸಮಾಲೋಚನೆ, ವ್ಯಾಪಾರೋದ್ಯಮಕ್ಕೆ ಸಂಪರ್ಕವಿರುವ ಜನರಿಗೆ ಇದು ಅತ್ಯುತ್ತಮ ಅವಧಿಯಾಗಿದೆ. ಈ ಸಮಯದಲ್ಲಿ ನಿಮ್ಮ ಮಾತನಾಡುವ ವಿಧಾನವು ಜನರನ್ನು ಆಕರ್ಷಿಸಬಹುದು. ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ತೀರ್ಥಯಾತ್ರೆಯನ್ನು ಯೋಜಿಸಬಹುದು. ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಇದರಿಂದ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ನಿಮ್ಮ ಖರೀದಿಗಳ ಬಗ್ಗೆ ನಿಮ್ಮ ಮನಸ್ಸು ಹೆಚ್ಚು ಉತ್ಸುಕವಾಗಿರುತ್ತದೆ, ಆದರೆ ನೀವು ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ವೆಚ್ಚಗಳು ಅಧಿಕವಾಗಿರುತ್ತದೆ. ಮನೆಯ ನಿಕಟ ಸದಸ್ಯರ ವೈವಾಹಿಕ ಸಂಬಂಧದ ಬಗ್ಗೆ ನೀವು ಉದ್ವಿಗ್ನತೆಯನ್ನು ಪಡೆಯಬಹುದು. ಇಂದು ಕಚೇರಿಯಲ್ಲಿ ಕೆಲಸ ಹೆಚ್ಚಾಗಬಹುದು. ವಿದ್ಯಾರ್ಥಿಗಳು ಅದ್ಯಾಯನದಲ್ಲಿ ಆಸಕ್ತಿ ತೋರುತ್ತಾರೆ. ಗುರುವಿನ ಬೆಂಬಲವನ್ನು ಪಡೆಯುತ್ತಾರೆ.

ವೃಶ್ಚಿಕ: ಜ್ಯೋತಿಷ್ಯದ ಕಡೆಗೆ ಒಲವು

ವೃಶ್ಚಿಕ: ಜ್ಯೋತಿಷ್ಯದ ಕಡೆಗೆ ಒಲವು

ಮನೆಯಲ್ಲಿ ಶಾಂತಿ ಮನೆಯಲ್ಲಿ ನೆಮ್ಮದಿ ಇರುತ್ತದೆ. ವೃಶ್ಚಿಕ ರಾಶಿಯವರು ಇತರರೊಂದಿಗೆ ಸಂವಹನದಲ್ಲಿ ಬಹಳ ಪ್ರಬುದ್ಧ ಮತ್ತು ಪ್ರಭಾವಶಾಲಿಯಾಗಿರುತ್ತಾರೆ. ನಿಮ್ಮ ಕುಟುಂಬದೊಂದಿಗೆ ಪ್ರಬುದ್ಧ ಮತ್ತು ಗುಣಮಟ್ಟದ ಸಂಭಾಷಣೆಗಳನ್ನು ನೀವು ಆನಂದಿಸುವಿರಿ ಮತ್ತು ಬಂಧವನ್ನು ಗಟ್ಟಿಗೊಳಿಸುತ್ತೀರಿ. ಠಾತ್ ಲಾಭ, ಬಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವನ್ನು ಪಡೆಯಬಹುದು. ವ್ಯವಹಾರದಲ್ಲಿರುವ ಜನರ ಹಣದ ಹರಿವು ಹೆಚ್ಚಾಗಲಿದೆ. ಆದಾಯ ಮತ್ತು ಗಳಿಕೆಯ ಶಕ್ತಿ ಹೆಚ್ಚಾಗಲಿದೆ. ಜಂಟಿ ಗುಪ್ತ ಹೂಡಿಕೆಯನ್ನು ಹೊಂದುವ ಸಾಧ್ಯತೆಗಳಿವೆ. ಜ್ಯೋತಿಷ್ಯದ ಕಡೆಗೆ ಒಲವು ಹೊಂದಿರುವ ಮತ್ತು ಕಲಿಯಲು ಬಯಸುವ ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಅದನ್ನು ಪ್ರಾರಂಭಿಸಬಹುದು.

ನಿಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸವು ಹೆಚ್ಚು ಉಳಿಯುತ್ತದೆ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ನೀವು ಸಮರ್ಥವಾಗಿ ಎದುರಿಸುವಿರಿ. ಕೆಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಬಂಧಿಸಿದ ಯೋಜನೆಯನ್ನು ಮನೆಯಲ್ಲಿಯೇ ಮಾಡಬಹುದು. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಮತ್ತು ಕೋಪವನ್ನು ನಿಯಂತ್ರಿಸಿ. ನಿಮ್ಮ ಶತ್ರುಗಳು ಕ್ರಮೇಣ ದೂರವಾಗುತ್ತಾರೆ. ಹೀಗಾಗಿ ಜಾಗರೂಕರಾಗಿರುವುದು ಉತ್ತಮ.

ವಿದ್ಯಾರ್ಥಿಗಳು ಪೋಷಕರ ಹೆಸರನ್ನು ಉಳಿಸುತ್ತಾರೆ. ಅವರ ಮಾತು, ಗ್ರಹಿಕೆಯ ಶಕ್ತಿ ಹೆಚ್ಚಾಗಲಿದೆ. ಶಿಕ್ಷಕರಿಂದ ಪ್ರಶಂಸಿಲ್ಪಡುತ್ತಾರೆ.

ಧನು: ಧಾರ್ಮಿಕ ಸ್ಥಳಗಳಿಗೆ ಭೇಟಿ

ಧನು: ಧಾರ್ಮಿಕ ಸ್ಥಳಗಳಿಗೆ ಭೇಟಿ

ಧನು ರಾಶಿವರ ಜಾತಕದಲ್ಲಿ ಬುಧ ಬಲವಿದ್ದು ಅದೃಷ್ಟ ತರಲಿದೆ. ಅತ್ಯಂತ ಬುದ್ಧಿವಂತ ವ್ಯಕ್ತಿ ನೀವಾಗಿರುತ್ತೀರಿ. ನಿಮ್ಮ ಸ್ಮರಣಾ ಶಕ್ತಿ ಹೆಚ್ಚಾಗಲಿದೆ. ಲಾಭದಾಯಕ ವ್ಯಾಪಾರ ಮಾಡುವ ಜಾಣ್ಮೆ ನಿಮಗಿರುತ್ತದೆ. ಬುದ್ಧಿವಂತ ವ್ಯಕ್ತಿತ್ವ ಹೊಂದಿರುತ್ತೀರಿ. ವೃತ್ತಿಪರ ಜೀವನ ಉತ್ತಮವಾಗಿರುತ್ತದೆ. ಡೇಟಾ ವಿಜ್ಞಾನಿಗಳು, ರಫ್ತು-ಆಮದು, ಸಮಾಲೋಚಕರು, ಬ್ಯಾಂಕಿಂಗ್, ವೈದ್ಯಕೀಯ ಕ್ಷೇತ್ರ ಮತ್ತು ವ್ಯಾಪಾರಸ್ಥರಿಗೆ ಇದು ಉತ್ತಮ ಸಮಯ. ವ್ಯಾಪಾರ ಜಗತ್ತಿನಲ್ಲಿ ಲಾಭ ಪಡೆಯುವಿರಿ. ನೀವು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಓಡಬೇಕಾಗಬಹುದು. ಪ್ರಯಾಣ ಬೆಳಸುವಾಗ ಜಾಗರೂಕರಾಗಿರಿ. ನಿಮ್ಮ ಶತ್ರು ನಿಮ್ಮನ್ನು ಹಿಂಬಾಲಿಸಬಹುದು. ನಿಮ್ಮ ಕೆಲಸದ ಲಾಭವನ್ನು ಪಡೆಯುವ ಸಾಧ್ಯತೆಗಳು ಇವೆ.

ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣವಿರಲಿದೆ. ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಶಾಂತಿಯುತ ಮತ್ತು ಪ್ರೀತಿಯ ಸಂಬಂಧವನ್ನು ಆನಂದಿಸುತ್ತಾರೆ. ಕುಟುಂಬಸ್ಥರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಬೆಳೆಸುವ ಪ್ರಯಾಣ ಸುಖಕರವಾಗಿರುತ್ತದೆ. ನಿಮ್ಮ ಧಾರ್ಮಿಕ ನಂಬಿಕೆ ಆಶೀರ್ವದಿಸಲ್ಪಡುತ್ತದೆ. ನಿಮ್ಮ ಉತ್ತಮ ನಡೆಗೆ ಹಿರಿಯರ ಆಶೀರ್ವಾದ ಸಿಗಲಿದೆ. ನಿರ್ಗತಿಕರಿಗೆ ಅನಾಥರಿಗೆ ದಾನ ಮಾಡುವ ನಿಮ್ಮ ಗುಣವನ್ನು ಮೆಚ್ಚಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಕಠಿಣ ಪರಿಶ್ರಮಕ್ಕೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಆದರೆ ಇದು ನಿಮ್ಮ ಊಹೆ ಅಷ್ಟೆ. ಶ್ರಮದ ಫಲ ಮುಮದೊಂದು ದಿನ ನಿಮಗೆ ಲಭಿಸಲಿದೆ.

ಮಕರ: ವಿದೇಶದಲ್ಲಿ ಭೂಮಿ ಖರೀದಿ

ಮಕರ: ವಿದೇಶದಲ್ಲಿ ಭೂಮಿ ಖರೀದಿ

ಧನು ರಾಶಿಯಲ್ಲಿ ಬುಧ ಸಂಕ್ರಮಣದ ಸಮಯದಲ್ಲಿ ವಿದೇಶ ಪ್ರಯಾಣದ ಹೆಚ್ಚಿನ ಅವಕಾಶಗಳು ಸಿಗಲಿದೆ. ವಿದೇಶಿ ಭೂಮಿ ಖರೀದಿ ಮಾಡುವ ಅವಕಾಶ ಸಿಗಬಹುದು. ಪ್ರತ್ಯೇಕ ಮನೆಗಳು, ಆಸ್ಪತ್ರೆ, ವೆಚ್ಚಗಳು ಹೆಚ್ಚಾಗಲಿದೆ. ಎಂಎನ್‌ಸಿಗಳಂಹ ವಿದೇಶಿ ಕಂಪನಿಗಳಲ್ಲಿ ಉದ್ಯೋಗದ ಅವಕಾಶ ಸಿಗುತ್ತದೆ. ವಿದೇಶಿ ಶಿಕ್ಷಣಕ್ಕಾಗಿ ಬಯಸುವಮಕರ ರಾಶಿಯ ವಿದ್ಯಾರ್ಥಿಗಳು ಸಹ ತಮ್ಮ ಅಪೇಕ್ಷಿತ ಕಾಲೇಜಿಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತಾರೆ. ಆಮದು/ರಫ್ತು ವ್ಯವಹಾರದಲ್ಲಿರುವ ಮಕರ ರಾಶಿಯವರು ನಿರೀಕ್ಷಿತ ಲಾಭ ಪಡೆಯುತ್ತಾರೆ. ಆದರೆ ಮಕರ ರಾಶಿಯವರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಸಮತೋಲಿತ ಆಹಾರವನ್ನು ಸೇವಿಸಬೇಕು.

ಹೆಚ್ಚಿನ ವೆಚ್ಚಗಳಿಂದಾಗಿ ನಿಮ್ಮ ಬಜೆಟ್ ಹಾಳಾಗಬಹುದು. ಅದನ್ನು ಚೆನ್ನಾಗಿ ನೋಡಿಕೊ. ಮನೆಯಲ್ಲಿರುವವರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರುತ್ತದೆ. ಅವರನ್ನು ನೋಡಿಕೊಳ್ಳಲು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ.

ಜನರು ನಿಮ್ಮ ವ್ಯಕ್ತಿತ್ವದಿಂದ ಪ್ರಭಾವಿತರಾಗಬಹುದು. ಮನೆಗೆ ಪ್ರಮುಖ ವ್ಯಕ್ತಿಯ ಆಗಮನದಿಂದ ಯಾವುದೇ ಪ್ರಮುಖ ವಿಷಯವನ್ನು ಚರ್ಚಿಸಬಹುದು. ಕೆಲವೊಮ್ಮೆ ತುಂಬಾ ಸ್ವಯಂ-ಕೇಂದ್ರಿತವಾಗಿರುವುದು ಮತ್ತು ಅಹಂಕಾರದ ಪ್ರಜ್ಞೆಯು ಪರಸ್ಪರ ಸಂವಹನದಲ್ಲಿ ವಾದಗಳಿಗೆ ಕಾರಣವಾಗಬಹುದು. ನಿಮ್ಮ ಗುಣಗಳನ್ನು ಸಕಾರಾತ್ಮಕವಾಗಿ ಬಳಸಿದರೆ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು.

ಕುಂಭ: ಅನಿರೀಕ್ಷಿತ ಸಂತಸದ ಸುದ್ದಿ

ಕುಂಭ: ಅನಿರೀಕ್ಷಿತ ಸಂತಸದ ಸುದ್ದಿ

ಕುಂಭ ರಾಶಿಯವರ ಜಾತಕದಲ್ಲಿ ಬುಧ ಬಲವಿದ್ದು ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಹಠಾತ್ ಲಾಭಗಳನ್ನು ಪಡೆಯುವಿರಿ. ಅನಿರೀಕ್ಷಿತ ಸಂತಸದ ಸುದ್ದಿಗಳನ್ನು ಕೇಳುವಿರಿ. ಈ ಸಾಗಣೆಯ ಸಮಯದಲ್ಲಿ ವೃತ್ತಿ ಮತ್ತು ವ್ಯವಹಾರಕ್ಕಾಗಿ ಕಳೆದ ಒಂದು ವರ್ಷದಲ್ಲಿ ಮಾಡಿದ ಎಲ್ಲಾ ಶ್ರಮದ ಫಲ ಮತ್ತು ಪ್ರಯೋಜನಗಳನ್ನು ಈಗ ಆನಂದಿಸಲಾಗುತ್ತದೆ. ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ಗಳಿಗೆ ಇದು ಉತ್ತಮ ಸಮಯವಾಗಿರುತ್ತದೆ. ವ್ಯಾಪಾರ ಚಟುವಟಿಕೆಗಳಿಗೆ ನಿಮ್ಮ ಸಂಪೂರ್ಣ ಗಮನವನ್ನು ನೀಡಿ. ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ.

ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆಯಲಿವೆ. ಧಾರ್ಮಿಕ ಕಾರ್ಯಗಳ ಕಡೆಗೆ ನೀವು ಒಲವು ತೋರುತ್ತೀರಿ. ಖರ್ಚು ಅಧಿಕವಾಗಿದ್ದರೂ ಆದಾಯದ ಮೂಲವೂ ಇರುವುದರಿಂದ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಕುಟುಂಬ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯಿರಿ. ಅತಿಯಾಗಿ ಸ್ವ-ಕೇಂದ್ರಿತವಾಗಿರುವುದು ನಿಮ್ಮ ಸಂಬಂಧಗಳನ್ನು ಹದಗೆಡಿಸಬಹುದು. ನಿಮ್ಮ ಅಭ್ಯಾಸದಲ್ಲಿ ನಮ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯ ಕೊಡುಗೆ ನಿಮಗೆ ವ್ಯಾಪಾರಕ್ಕೆ ಸಂಬಂಧಿಸಿದ ಹೊಸ ಯಶಸ್ಸನ್ನು ನೀಡುತ್ತದೆ.

ಮೀನ: ಐಷಾರಾಮಿ ವಸ್ತುಗಳ ಖರೀದಿ ಸಾಧ್ಯತೆ

ಮೀನ: ಐಷಾರಾಮಿ ವಸ್ತುಗಳ ಖರೀದಿ ಸಾಧ್ಯತೆ

ಈ ಅವಧಿಯು ನಿಮ್ಮ ವೃತ್ತಿಪರ ಜೀವನಕ್ಕೆ ಬಹಳ ಫಲಪ್ರದವಾಗಿರುತ್ತದೆ. ಇದು ನಿಮಗೆ ಖ್ಯಾತಿ ಮತ್ತು ಸ್ಥಾನಮಾನವನ್ನು ನೀಡುತ್ತದೆ. ವ್ಯಾಪಾರವು ಏಳಿಗೆಯಾಗುತ್ತದೆ. ಈ ಅವಧಿಯಲ್ಲಿ ಅದರ ಬ್ರಾಂಡ್ ಮೌಲ್ಯವು ಹೆಚ್ಚಾಗುತ್ತದೆ. ರಾಜಕೀಯ, ತಂತ್ರಜ್ಞಾನ ಕ್ಷೇತ್ರ ಮತ್ತು ಸಂವಹನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಇದು ಮಂಗಳಕರ ಸಮಯವಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಬರಬಹುದು. ನಿಮ್ಮ ಮನೆಗೆ ಹೊಸ ವಾಹನ ಅಥವಾ ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ.

ಮಗುವಿನ ವೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪ್ರಮುಖ ವ್ಯಕ್ತಿಯ ಸಹಾಯದಿಂದ ಪರಿಹರಿಸುವುದು ಯಶಸ್ಸನ್ನು ತರುತ್ತದೆ. ಮನೆಯ ಹಿರಿಯರ ವಾತ್ಸಲ್ಯ ಮತ್ತು ಆಶೀರ್ವಾದ ನಿಮಗೆ ವರದಾನವಾಗಲಿದೆ. ಕೆಲವು ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ನೀವು ಕೆರಳಿಸುವ ಮತ್ತು ನಿರಾಶಾವಾದದ ಭಾವನೆಯನ್ನು ಅನುಭವಿಸುವಿರಿ. ಸ್ವಲ್ಪ ಗಾಯವಾಗುವ ಸಾಧ್ಯತೆಯೂ ಇದೆ. ಕೆಲಸದ ಸ್ಥಳ ಮತ್ತು ಸಾರ್ವಜನಿಕರೊಂದಿಗೆ ನಿಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಿ. ಮನೆಯ ವಾತಾವರಣದಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅವಶ್ಯಕ.ನಿಮ್ಮ ಮನೆಯಲ್ಲಿ ಕೆಲವು ಧಾರ್ಮಿಕ ಪೂಜೆಗಳನ್ನು ನಡೆಸಲು ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬಹುದು.

English summary
Budh Gochar 2022 In Dhanu Rashi ; Mercury Transit in Sagittarius Impact on Zodiac Signs : The Mercury Transit in Sagittarius will take place on 03 December 2022. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X