• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budh Uday 2023: ಧನು ರಾಶಿಯಲ್ಲಿ ಬುಧ ಉದಯ- ಯಾರಿಗೆ ಲಾಭ, ಯಾರಿಗೆ ನಷ್ಟ?

|
Google Oneindia Kannada News

ಜನವರಿ 13ರಂದು ಧನು ರಾಶಿಯಲ್ಲಿ ಬುಧ ಉದಯವಾಗಲಿದೆ. ಬುಧ ಗ್ರಹ ಬುದ್ಧಿವಂತ ಮತ್ತು ಕುತೂಹಲಕಾರಿ ಸ್ವಭಾವ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯಗಳನ್ನು ಪ್ರತಿನಿಧಿಸುತ್ತದೆ. ಬುದ್ಧಿವಂತಿಕೆ, ಸ್ಮರಣೆ, ಕಲಿಕೆಯ ಸಾಮರ್ಥ್ಯ, ಮಾತು, ಸಂವಹನವನ್ನು ನಿಯಂತ್ರಿಸುತ್ತದೆ. ಜೊತೆಗೆ ಬುಧ ವಾಣಿಜ್ಯ, ಬ್ಯಾಂಕಿಂಗ್, ಶಿಕ್ಷಣ, ಸಂವಹನ ಬರವಣಿಗೆ, ಪುಸ್ತಕಗಳು, ಹಾಸ್ಯ ಪ್ರಜ್ಞೆ, ಮಾಧ್ಯಮದ ಎಲ್ಲಾ ವಿಧಾನಗಳ ಕಾರಕವಾಗಿದೆ.

13 ಜನವರಿ 2023 ರಂದು ಬೆಳಿಗ್ಗೆ 5:15 ಕ್ಕೆ ಧನು ರಾಶಿಯಲ್ಲಿ ಬುಧ ಉದಯ ನಡೆಯುತ್ತದೆ. ಈ ಚಿಹ್ನೆಯು ಸಂಪತ್ತು, ಪ್ರೇರಣೆ, ಬುದ್ಧಿವಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು, ಶಿಕ್ಷಕರಿಗೆ ಇದು ತುಂಬಾ ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಈ ರಾಶಿಯವರು ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಬಹುದು. ಧನು ರಾಶಿಯಲ್ಲಿ ಬುಧ ಉದಯದಿಂದ ಯಾವ ರಾಶಿಗೆ ಲಾಭ ಹಾಗೂ ಯಾವ ರಾಶಿಗೆ ನಷ್ಟವಾಗಲಿದೆ ಎನ್ನುವುದನ್ನು ನೋಡೋಣ.

ಮೇಷ: ದೂರದ ಪ್ರಯಾಣ ಆರಾಮದಾಯಕ

ಮೇಷ: ದೂರದ ಪ್ರಯಾಣ ಆರಾಮದಾಯಕ

ಧನು ರಾಶಿಯಲ್ಲಿ ಬುಧ ಉದಯದಿಂದ ಮೇಷ ರಾಶಿಯವರು ಮಿಶ್ರ ಫಲವನ್ನು ಪಡೆಯಲಿದ್ದಾರೆ. ಹೀಗಾಗಿ ಮೇಷ ರಾಶಿಯವರು ಮಾತಿನ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ರಾಜಕಾರಣಿಗಳು ಅಥವಾ ರಾಜಕೀಯ ಹಿನ್ನೆಲೆಯುಳ್ಳವರು ತಮ್ಮ ಹೇಳಿಕೆಗಳಿಂದ ಅಥವಾ ಸಂವಹನದಿಂದ ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಆದರೆ ಧನು ರಾಶಿಯಲ್ಲಿ ಬುಧದ ಉದಯದ ಸಮಯದಲ್ಲಿ ಆ ವಿವಾದದಿಂದ ಹೊರಬರುತ್ತಾರೆ. ಶಿಕ್ಷಕರೂ ಈ ಸಮಯದಲ್ಲಿ ಕೊಂಚ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ನೀಡುವ ಊಟದ ವಿಚಾರದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬದಲ್ಲಿನ ಮನಸ್ತಾಪಗಳು ದೂರವಾಗುತ್ತವೆ. ಸಹೋದರರು, ಸೋದರಸಂಬಂಧಿಗಳು ಅಥವಾ ಸ್ನೇಹಿತರೊಂದಿಗೆ ಪ್ರಯಾಣ ನಿಮಗೆ ಆನಂದವನ್ನು ನೀಡುತ್ತದೆ. ಒಂದು ವೇಳೆ ಪ್ರಯಾಣ ಮಾಡಲೇಬೇಕಾದ ಸಂದರ್ಭ ಬಂದರೂ ದೂರದ ಪ್ರಯಾಣವನ್ನು ನೀವು ಆನಂದಿಸಬಹುದು.

ವೃಷಭ: ಕಾರ್ಯ ವೈಖರಿ ಬಗ್ಗೆ ಶ್ಲಾಘನೆ

ವೃಷಭ: ಕಾರ್ಯ ವೈಖರಿ ಬಗ್ಗೆ ಶ್ಲಾಘನೆ

ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಮತ್ತು ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ನಿರೀಕ್ಷಿಸಬಹುದು. ವೃಷಭ ರಾಶಿಯವರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಈ ಸಮಯದಲ್ಲಿ ದೂರವಾಗುತ್ತವೆ. ಆದರೆ ನೀವು ಹಠಾತ್ ನಷ್ಟವನ್ನು ಎದುರಿಸಬಹುದಾದ್ದರಿಂದ ಸ್ಪಲ್ಪ ಜಾಗೃತರಾಗಿರುವುದು ಉತ್ತಮ. ಉಳಿತಾಯದಲ್ಲಿ ಯಾವುದೇ ತೊಂದರೆಯನ್ನು ಎದುರಿಸಬೇಡಿ. ಯಾಕೆಂದರೆ ಈ ಸಮಯಯದಲ್ಲಿ ಕೋಂಚ ಖರ್ಚುಗಳು ಅಧಿಕವಾಗಬಹುದು. ನಿಮ್ಮ ಜೀವನ ಸಂಗಾತಿ ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚುತ್ತಾರೆ. ನೀವು ಕೆಲಸದಲ್ಲಿ ಮಾತ್ರವಲ್ಲದೆ ಮನೆಯಲ್ಲೂ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿಮ್ಮ ಮುಂದಾಲೋಚನೆಯನ್ನು ಎಲ್ಲರೂ ಮೆಚ್ಚುತ್ತಾರೆ. ವಿದ್ಯಾರ್ಥಿಗಳಿ ಈ ಸಮಯ ಉತ್ತಮವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಅದನ್ನು ಎದುರಿಸುವ ತಾಳ್ಮೆ ಸಹನೆ ನಿಮಗಿರುತ್ತದೆ. ಅದೃಷ್ಟ ನಿಮ್ಮನ್ನು ಸಮಸ್ಯೆಗಳಿಂದ ಕಾಪಾಡಲಿದೆ.

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ

ಮಿಥುನ ರಾಶಿಯ ಅವಿವಾಹಿತರಿಗೆ ಇದು ಉತ್ತಮ ದಿನವಾಗಿರುತ್ತದೆ. ಬುಧನು ಉದಯಿಸುವುದರಿಂದ ವೈವಾಹಿಕ ಜೀವನದಲ್ಲಿ ಮತ್ತು ವ್ಯಾಪಾರ ಪಾಲುದಾರಿಕೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮಿಥುನ ರಾಶಿಯವರು ಮದುವೆಯಾಗಲು ಬಯಸುವವರಿಗೆ ಈ ಸಮಯ ಉತ್ತಮವಾಗಿದೆ. ಕುಟುಂಬದಲ್ಲಿ ನಿಮ್ಮ ಮದುವೆ ವಿಚಾರ ಪ್ರಸ್ತಾಪಿಸಲಾಗುತ್ತದೆ. ಪ್ರೇಮಿಗಳಿಗೆ ಈ ಸಮಯ ಉತ್ತಮವಾಗಿದೆ. ನಿಮ್ಮ ಪ್ರೇಮ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ನಿಮ್ಮ ಆರೋಗ್ಯವನ್ನು ನೀವು ನಿರ್ಲಕ್ಷಿಸುವುದು ಒಳ್ಳೆ ನಡೆಯಲ್ಲ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಫಿಟ್ನೆಸ್ ಆಗಿರಲು ವ್ಯಾಯಾಮವನ್ನು ರೂಢಿಸಿಕೊಳ್ಳಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ.

ಕಟಕ: ಜೀವನದ ಕಷ್ಟಗಳು ಪರಿಹಾರ

ಕಟಕ: ಜೀವನದ ಕಷ್ಟಗಳು ಪರಿಹಾರ

ಧನು ರಾಶಿಯಲ್ಲಿ ಬುಧ ಗ್ರಹದ ಉದಯದ ಸಮಯದಲ್ಲಿ ಕಟಕ ರಾಶಿಯವರಿಗೆ ಮಂಗಳಕರ ಅವಧಿಯಾಗಿದೆ. ಬಹು ದಿನಗಳಿಂದ ಅಂಟಿಕೊಂಡಿದ್ದ ಕೆಲ ಸಮಸ್ಯೆಗಳು ದೂರವಾಗಲಿವೆ. ಅಂದುಕೊಂಡ ಕಾರ್ಯಗಳು ತಡವಾಗಲಿವೆ. ಕೆಲಸದಲ್ಲಿ ಯಾವುದೇ ಒತ್ತಡ ಇರುವುದಿಲ್ಲ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಆದರೆ ಹಠಾತ್ ವೈದ್ಯಕೀಯ ವೆಚ್ಚಗಳು ಇನ್ನೂ ಇರುತ್ತದೆ. ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ಜಾಗೃತರಾಗಿರಬೇಕು. ಇನ್ನೂ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಥವಾ ವಿದೇಶಿ ವಿಶ್ವವಿದ್ಯಾನಿಲಯಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಜೀವನದಲ್ಲಿ ಒಳಿತಾಗಲಿದೆ. ನಿರ್ಗತಿಕರಿಗೆ ಅಗತ್ಯ ಇರುವವರಿಗೆ ಸಹಾಯ ಮಾಡುವ ಗುಣ ನಿಮ್ಮದು. ಇದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.

ಸಿಂಹ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ

ಸಿಂಹ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ

ಬುಧದ ಉದಯವು ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಧನು ರಾಶಿಯಲ್ಲಿ ಬುಧದ ಉದಯ ಶಿಕ್ಷಣ, ಪ್ರೀತಿ ಸಂಬಂಧಗಳು, ಮಕ್ಕಳು, ಊಹಾಪೋಹಗಳನ್ನು ಪ್ರತಿನಿಧಿಸುತ್ತದೆ. ವೈವಾಹಿಕ ಜೀವನದಲ್ಲಿ ಅನೇಕ ಊಹಾಪೋಹಗಳಿಂದ ಸಂಬಂಧ ಹದಗೆಡಬಹುದು. ಹೀಗಾಗಿ ಜಾಗರೂಕರಾಗಿರಿ. ಇದು ಪೂರ್ವ ಪುಣ್ಯ ಮನೆಯಾಗಿದೆ. ಆದ್ದರಿಂದ ಸಿಂಹ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ. ನೀವು ಷೇರು ಮಾರುಕಟ್ಟೆ ಅಥವಾ ಜಾಹೀರಾತು ಯಾವುದೇ ಮೂಲಗಳ ಮೂಲಕ ಹಣವನ್ನು ಗಳಿಸಬಹುದು. ಮನೆಯಲ್ಲಿ ಮದುವೆ ಪ್ರಸ್ತಾಪಗಳು ಬರಬಹುದು. ಪ್ರೇಮಿಗಳಿಗೆ ಈ ಸಮಯ ಉತ್ತಮವಾಗಿದೆ. ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿದೇಶಕ್ಕೆ ಹೋಗಲು ಬಯಸುವ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ. ಗಣಿತ, ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ಗಳನ್ನು ಕಲಿಯಲು ಇದು ಒಳ್ಳೆಯ ಸಮಯವಾಗಿದೆ.

ಕನ್ಯಾ: ನಿಮ್ಮದಾಗಲಿದೆ ಉತ್ತಮ ಆರೋಗ್ಯ

ಕನ್ಯಾ: ನಿಮ್ಮದಾಗಲಿದೆ ಉತ್ತಮ ಆರೋಗ್ಯ

ಕನ್ಯಾ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ. ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಹೆಚ್ಚು ಸಂತೋಷವನ್ನು ಅನುಭವಿಸುವಿರಿ. ಜೀವನದಲ್ಲಿ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವೃತ್ತಿಪರ ಜೀವನದಲ್ಲಿ ನಿಮ್ಮ ಸಮಸ್ಯೆಯು ಸಹ ದೂರವಾಗುತ್ತದೆ. ನಿಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಳೆಯಲು ಮತ್ತು ನಿಮ್ಮ ಪ್ರವಾಸವನ್ನು ಆನಂದಿಸಲು ನಿಮಗೆ ಹೆಚ್ಚಿನ ಸಮಯವನ್ನು ಸಿಗಲಿದೆ. ವಾಹನವನ್ನು ಖರೀದಿಸುವ ನಿಮ್ಮ ಯೋಜನೆಯನ್ನು ಸದ್ಯ ಮುಂದೂಡುವುದು ಉತ್ತಮ. ವ್ಯಾಪಾರದಲ್ಲಿ ನೀವು ಅಧಿಕ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ ಜಾಣ್ಮೆಯಿಂದ ಕೆಲಸ ಮಾಡುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಯಾವುದೇ ಒಂದು ಕೆಲಸಕ್ಕೆ ಅಂಟಿಕೊಳ್ಳಬೇಡಿ. ಲಾಭದಾಯಕ ಹುದ್ದೆಗಳತ್ತ ನಿಮ್ಮ ಗಮನವನ್ನು ಹರಿಸುವುದು ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಉತ್ತಮ ಅವಕಾಶಗಳನ್ನು ನೀವು ಪಡೆಯುತ್ತೀರಿ.

ತುಲಾ: ಮನೆಯಲ್ಲಿ ಶಾಂತಿ ಹಬ್ಬದ ವಾತಾವರಣ

ತುಲಾ: ಮನೆಯಲ್ಲಿ ಶಾಂತಿ ಹಬ್ಬದ ವಾತಾವರಣ

ಈ ಸಂಚಾರ ತುಲಾ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆ ತರಲಿದೆ. ವೃತ್ತಿ ಜೀವನದಲ್ಲಿ ಕೆಲ ಬದಲಾವಣೆಗಳಾಗಲಿವೆ. ಹೆಚ್ಚು ಪ್ರಯಾಣ ನಿಮ್ಮನ್ನು ಆಯಾಸಗೊಳಿಸಬಹುದು. ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ. ಇದು ಸಂವಹನ ಕೌಶಲ್ಯಗಳ ಮೇಲೆ ಪ್ರಭಾವ ಬೀರುವುದರಿಂದ ನಿಮ್ಮ ಮಾತು ಯಾರಿಗೂ ನೋವಾಗದಂತೆ ನೋಡಿಕೊಳ್ಳಿ. ಮನೆಯಲ್ಲಿ ಶಾಂತಿ ಇರಲಿದೆ. ಹಬ್ಬದ ವಾತಾವರಣ ನಿರ್ಮಾಣವಾಗಬಹುದು. ಮುಂಬರುವ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೆಚ್ಚು ಸುಧಾರಣೆ ಕಾಣಲಿದೆ. ರೈತರು, ವ್ಯಾಪಾರಿಗಳಿಗೆ ಈ ಸಮಯ ಉತ್ತಮವಾಗಿದೆ. ಒಡಹುಟ್ಟಿದವರೊಂದಿಗಿನ ಘರ್ಷಣೆ ಕೊನೆಗೊಳ್ಳಲಿದೆ. ಹಣಕಾಸು ವೆಚ್ಚಗಳಂತಹ ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವೃತ್ತಿಪರ ಜೀವನದಲ್ಲಿ ಬದಲಾವಣೆಯಾಗಲಿದೆ. ಕೆಲಸದ ಕಾರಣದಿಂದಾಗಿ ನೀವು ವಿದೇಶ ಪ್ರಯಾಣದ ಅವಕಾಶಗಳನ್ನು ಸಹ ಪಡೆಯಬಹುದು. ನೀವು ನಿಮ್ಮ ತಂದೆ ಮತ್ತು ನಿಮ್ಮ ಗುರುವಿನ ಬೆಂಬಲವನ್ನು ಪಡೆಯುತ್ತೀರಿ.

ವೃಶ್ಚಿಕ: ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ

ವೃಶ್ಚಿಕ: ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ

ವೃಶ್ಚಿಕ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ನೀವು ಉತ್ತಮ ಹಣದ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಉಳಿತಾಯ ಹೆಚ್ಚಾಗುತ್ತದೆ. ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ತಪ್ಪಿಸಿ. ನಿಮ್ಮ ಕೆಲ ಸೂಕ್ಷ್ಮ ಮಾಹಿತಿಗಳನ್ನು ದುರುಪಯೋಗಗೊಳ್ಳಬಹುದು. ನೀವಂದುಕೊಂಡಂತ ಜೀವನ ಸಂಗಾತಿಯನ್ನು ನೀವು ಪಡೆಯುತ್ತೀರಿ. ಹೀಗಾಗಿ ಅನುಮಾನಿಸುವುದನ್ನು ತಪ್ಪಿಸಿ. ಯಾವುದೇ ಸಮಸ್ಯೆಗಳನ್ನು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. ಸಂವಹನ ಮತ್ತು ಮಾತು ಪ್ರಭಾವಶಾಲಿಯಾಗಿರುತ್ತದೆ. ಕುಟುಂಬದೊಂದಿಗೆ ನೀವು ಪ್ರಬುದ್ಧ ಮತ್ತು ಗುಣಮಟ್ಟದ ಸಂವಹನವನ್ನು ನಡೆಸುವಿರಿ. ನಿಮ್ಮ ಮಾತಿನ ಮೇಲಿನ ಹಿಡಿತ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತದೆ. ಆದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು. ದನಿತ್ಯ ವ್ಯಾಯಾಮ ರೂಢಿಸಿಕೊಳ್ಳಿ. ಹೊರಗಿನ ಆಹಾರವನ್ನು ತಪ್ಪಿಸಿ. ಕೆಟ್ಟ ಆಹಾರ ಪದ್ಧತಿಗಳಿಂದ ದೂರವಿರಿ.

ಧನು: ವೃತ್ತಿಜೀವನದಲ್ಲಿ ಬೆಳವಣಿಗೆ

ಧನು: ವೃತ್ತಿಜೀವನದಲ್ಲಿ ಬೆಳವಣಿಗೆ

ಬುಧ ಧನುರಾಶಿಯವರಿಗೆ ಲಾಭದಾಯಕ ಗ್ರಹವಾಗಿದೆ. ಇದು ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ವ್ಯಕ್ತಿತ್ವ ಮತ್ತು ವೃತ್ತಿಜೀವನದ ಬೆಳವಣಿಗೆಯನ್ನು ನೀವು ಕಾಣುವಿರಿ. ವಿಜ್ಞಾನಿಗಳು, ರಫ್ತು-ಆಮದು, ಸಮಾಲೋಚಕರು, ಬ್ಯಾಂಕಿಂಗ್, ವೈದ್ಯಕೀಯ ಕ್ಷೇತ್ರ ಮತ್ತು ವ್ಯಾಪಾರ ಸ್ಥಳೀಯರಿಗೆ ಇದು ಉತ್ತಮ ಸಮಯ. ನಿಮ್ಮ ವೃತ್ತಿಪರ ಪಾಲುದಾರಿಕೆಯನ್ನು ಸುಧಾರಣೆಯಾಗಲಿದೆ. ನೀವು ಸ್ನೇಹಿತರ ಬೆಂಬಲದೊಂದಿಗೆ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಬುಧ ಉದಯದ ಸಮಯದಲ್ಲಿ ವಿವಾಹಿತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಶಾಂತಿಯುತ ಮತ್ತು ಪ್ರೀತಿಯ ಸಂಬಂಧವನ್ನು ಆನಂದಿಸುತ್ತಾರೆ. ಈ ಸಮಯದಲ್ಲಿ ಕುಟುಂಬಸ್ಥರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳು ಇವೆ. ಮಕ್ಕಳೊಂದಿಗೆ ಉತ್ತಮವಾದ ಸಮಯವನ್ನು ನೀವು ಕಳೆಯಬಹುದು. ಮಕ್ಕಳ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ.

ಮಕರ: ಶತ್ರುಗಳು ಮಿತ್ರರಾಗುವ ಸಮಯ

ಮಕರ: ಶತ್ರುಗಳು ಮಿತ್ರರಾಗುವ ಸಮಯ

ಈ ಸಮಯದಲ್ಲಿ ಮಕರ ರಾಶಿಯವರ ಅದೃಷ್ಟವೂ ಹೆಚ್ಚಾಗುತ್ತದೆ. ವಿದೇಶ ಪ್ರಯಾಣವನ್ನು ನೀವು ಮಾಡಬಹುದು. ಕೆಲಸದ ವಿಚಾರದಲ್ಲಿ ನೀವು ಹೆಚ್ಚು ಪ್ರಯಾಣವನ್ನು ಮಾಡಬಹುದು. ಉದ್ಯೋಗದ ಹಲವಾರು ಅವಕಾಶಗಳನ್ನು ನೀವು ಪಡೆಯುತ್ತೀರಿ. ನೀವು ಮಾಡುವ ಕೆಲಸಗಳಿಗೆ ಕುಟುಂಬಸ್ಥರ ಬೆಂಬಲ ಸಿಗಲಿದೆ. ಸ್ನೇಹಿತರು ನಿಮ್ಮ ಬಳಿ ಸಲಹೆಯನ್ನು ಕೇಳುತ್ತಾರೆ. ನಿಮ್ಮ ಮಾತು ಎಲ್ಲರಿಗೂ ಆಕರ್ಷಣೀಯವಾಗಿರುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡುವ ಗುಣ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅವು ದೂರವಾಗುತ್ತವೆ. ನಿಮ್ಮ ಶತ್ರುಗಳಿಗೆ ನಿಮ್ಮನ್ನು ಆಳಲು ಆಗುವಿದಿಲ್ಲ. ಹೀಗಾಗಿ ಶತ್ರುಗಳು ನಿಮ್ಮ ಮಿತ್ರರಾಗುತ್ತಾರೆ. ನಿಮ್ಮ ಜಾತಕದಲ್ಲಿ ಬುಧ ಬಲವಿದ್ದು ಸಮಸ್ಯೆಗಳು ದೂರವಾಗುತ್ತವೆ. ವಿದೇಶಿ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳು ಸಹ ತಮ್ಮ ಅಪೇಕ್ಷಿತ ಕಾಲೇಜಿಗೆ ಪ್ರವೇಶಿಸುವ ಅವಕಾಶವನ್ನು ಹೊಂದಿರುತ್ತಾರೆ. ಗರ್ಭಿಣಿ ಮಕರ ರಾಶಿಯವರು ಈ ಸಮಯದಲ್ಲಿ ತಮ್ಮ ಮತ್ತು ಮಗುವಿನ ಯೋಗಕ್ಷೇಮವನ್ನ ನೋಡಿಕೊಳ್ಳಬೇಕು.

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಹೆಚ್ಚಳ

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಹೆಚ್ಚಳ

ಉದಯೋನ್ಮುಖ ಬುಧ ಕುಂಭ ರಾಶಿಯವರ ಆರ್ಥಿಕ ಸ್ಥಿತಿಯೂ ಹೆಚ್ಚಾಗುತ್ತದೆ. ಆರ್ಥಿಕ ಲಾಭಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಅಥವಾ ಬಡ್ತಿ ಮತ್ತು ಇನ್ಕ್ರಿಮೆಂಟ್ಗಾಗಿ ಕಾಯುತ್ತಿರುವ ಸಮಸ್ಯೆಯು ಅಂತ್ಯಗೊಳ್ಳುತ್ತದೆ. ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಹೊಸಬರಿಗೂ ಉತ್ತಮ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಮೂಹ ಸಂವಹನ, ಬರವಣಿಗೆ ಮತ್ತು ಯಾವುದೇ ಭಾಷಾ ಕೋರ್ಸ್‌ ಕಲಿಯುವವರಿಗೆ ಇದು ಉತ್ತಮ ಸಮಯವಾಗಿರುತ್ತದೆ. ಮಹಿಳೆಯರಿಗೆ ಈ ಸಮಯ ಉತ್ತಮವಾಗಿದೆ ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ಹೆಚ್ಚಾಗಲಿದೆ. ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗುತ್ತದೆ. ಹೊಸ ಪ್ರೇಮ ಪಕ್ಷಿಗಳು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಆನಂದಿಸುತ್ತಾರೆ. ಪ್ರವಾಸಕ್ಕೆ ಹೋಗುವ ಸಾಧ್ಯತೆಗಳು ಇವೆ. ಅಂದುಕೊಂಡ ಕಾರ್ಯಗಳು ನಿಮ್ಮ ಕೈ ಹಿಡಿಯದೇ ಹೋದರು ನಿಮ್ಮ ಶ್ರಮ ನಿಮ್ಮ ಕೈ ಬಿಡುವುದಿಲ್ಲ.

ಮೀನ: ಸಮಾಜದಲ್ಲಿ ಖ್ಯಾತಿ ಮತ್ತು ಸ್ಥಾನಮಾನ

ಮೀನ: ಸಮಾಜದಲ್ಲಿ ಖ್ಯಾತಿ ಮತ್ತು ಸ್ಥಾನಮಾನ

ಇದು ಮೀನ ರಾಶಿಯವರಿ ತುಂಬಾ ಅನುಕೂಲಕರವಾದ ಸ್ಥಾನವಾಗಿದೆ. ಈ ಅವಧಿಯು ನಿಮ್ಮ ವೃತ್ತಿಪರ ಜೀವನಕ್ಕೆ ಬಹಳ ಫಲಪ್ರದವಾಗಿರುತ್ತದೆ. ಇದು ನಿಮಗೆ ಖ್ಯಾತಿ ಮತ್ತು ಸ್ಥಾನಮಾನವನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ಏಳಿಗೆಯಾಗಲಿದೆ. ಈ ಅವಧಿಯಲ್ಲಿ ನೀವು ಮಾರಾಟ ಮಾಡುವ ವಸ್ತುಗಳ ಮೌಲ್ಯವು ಹೆಚ್ಚಾಗುತ್ತದೆ. ಧನು ರಾಶಿಯಲ್ಲಿ ಬುಧದ ಉದಯದ ಸಮಯದಲ್ಲಿ, ನೀವು ಮನೆಯಿಂದ ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ನಿಮ್ಮ ಜೀವನ ಸಂಗಾತಿಯೊಂದಿಗೆ ವ್ಯಾಪಾರ ಪಾಲುದಾರಿಕೆಯನ್ನು ಮಾಡಲು ಸಹ ಅವಕಾಶವನ್ನು ಪಡೆಯಬಹುದು. ಮೀನ ರಾಶಿಯವರು ನಿಮ್ಮ ಕೆಲಸದ ಸ್ಥಳದಲ್ಲಿ ಯಾರೊಂದಿಗಾದರೂ ಪ್ರೇಮವನ್ನು ಎದುರಿಸುವ ಸಾಧ್ಯತೆಗಳಿವೆ. ಐಷಾರಾಮಿ ವಸ್ತುಗಳನ್ನು ಖರೀದಿಸಲು ನಿಮಗೆ ಸಾಧ್ಯವಾಗುತ್ತದೆ. ಇದು ಕೆಲ ಕಠಿಣ ನಿರ್ಧಾರವನ್ನು ಮರುಪರಿಶೀಲಿಸುವ ಸಮಯ.

English summary
Budh Uday 2023 Effects on Zodiac Signs: The Mercury Rise In Sagittarius will take place on 13 January 2023. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X