May Horoscope 2023 : ಮೇ 2023ರ ಮಾಸಭವಿಷ್ಯ: ಈ ರಾಶಿಯ ಜನರಿಗೆ ಶುಭವಾಗಲಿದೆ !
ಜೋತಿಷ್ಯ ಶಾಸ್ತ್ರದ ಮೂಲಕ ನಿತ್ಯದ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಘಟಿಸಬಹುದಾದ ಘಟನೆಗಳ ಕುರಿತು ತಿಳಿದುಕೊಳ್ಳಲು ಪ್ರತಿಯೋರ್ವರು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ನಿಮ್ಮ ರಾಶಿ ಚಕ್ರದ ಪ್ರಕಾರ ಈ ತಿಂಗಳಿನಲ್ಲಿ ಉಂಟಾಗಬಹುದಾದ ಲಾಭ-ನಷ್ಟಗಳ ಕುರಿತ ಮಾಹಿತಿ ಇಲ್ಲಿದೆ ನೋಡಿರಿ.
ಶೋಭಾಕೃತ ನಾಮ ಸಂವತ್ಸರದ ಉತ್ತರಾಯಣ ವಸಂತ-ಗ್ರೀಷ್ಮ ಋತು, ವೈಶಾಖ ಮಾಸ/ಜ್ಯೇಷ್ಠ ವಸಂತ-ಗ್ರೀಷ್ಮ
02.05.2023 ರಂದು ಮಿಥುನಕ್ಕೆ ಶುಕ್ರನ ಪ್ರವೇಶ, 10.05.2023 ರಂದು ಕಟಕಕ್ಕೆ ಕುಜನ ಪ್ರವೇಶ, 15.05.2023 ರಂದು ವೃಷಭಕ್ಕೆ ರವಿಯ ಪ್ರವೇಶ.
04.05.2023 ಶ್ರೀ ನರಸಿಂಹ ಜಯಂತಿ, 05.05.2023 ಬುದ್ಧ ಪೂರ್ಣಿಮಾ, 14.05.2023 ಹನುಮ ಜಯಂತಿ.

ಮೇಷ ರಾಶಿ
ಗುರು ರಾಹು ಸೂರ್ಯ ಬುಧ ಈ ನಾಲ್ಕು ಗ್ರಹಗಳು ನಿಮ್ಮ ರಾಶಿಯಲ್ಲೇ ಇವೆ. ಇದೊಂದು ತಾತ್ಕಾಲಿಕ ರಾಜಯೋಗ. ಶನಿ ಹನ್ನೊಂದನೇ ಮನೆಯಲ್ಲಿ ಲಾಭವನ್ನು ಕೊಡಲು ಸಿದ್ಧನಾಗಿರುವಾಗ ಈ ಗ್ರಹಗಳು ಕೂಡ ಶನಿಗೆ ಪೂರಕವಾಗಿ ನಿಮಗೆ ಒಳಿತನ್ನು ಮಾಡುತ್ತದೆ. 11ರ ವರೆಗೂ ಕುಜ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಇರುತ್ತಾನೆ. ಇದು ನಿಮಗೆ ಧೈರ್ಯ ನೀಡುತ್ತದೆ. ನಂತರ ನಾಲ್ಕನೇ ಮನೆ ಕಟಕ ರಾಶಿಗೆ ಪ್ರವೇಶವಾದಾಗ ಕುಜನ ಬಲ ಕಡಿಮೆಯಾಗಿ ಭೂಮಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಶನಿ ಲಾಭದಲ್ಲಿ ಇರುವುದರಿಂದ ನಿಮಗೆ ಅಧಿಕ ಧನಲಾಭ ಹಿಡಿದ ಕೆಲಸ ಕಾರ್ಯಗಳಲ್ಲಿ ಜಯ ಯಶಸ್ಸು, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಗೆಲುವು ಮುಂತಾದ ಶುಭ ಸಂಗತಿಗಳು ನಡೆಯುತ್ತದೆ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ನಿಮ್ಮದಾಗುತ್ತದೆ. ದೇವರ, ಕಾರ್ಯಗಳಿಗೆ, ಶುಭಕಾರ್ಯಕ್ಕೆ ಹಣ ಖರ್ಚು ಮಾಡುತ್ತೀರಿ. ಸಂಗಾತಿಗೆ ಕೊಂಚ ಆರೋಗ್ಯ ಸಮಸ್ಯೆ ಎದುರಾಗಬಹುದು. ವೃತ್ತಿಯಲ್ಲಿ ಯಶಸ್ಸು, ಬಡ್ತಿ ಪ್ರಶಂಸೆ ಮುಂತಾದ ಒಳ್ಳೆಯ ಫಲಗಳು ದೊರೆಯುತ್ತದೆ.

ವೃಷಭ ರಾಶಿ
ಗುರು,ರಾಹು, ಸೂರ್ಯ, ಬುಧ ನಿಮಗೆ 12ನೇ ಮನೆ ವ್ಯಯಸ್ಥಾನದಲ್ಲಿ ಇದ್ದಾರೆ. ವಿನಾಕಾರಣ ಖರ್ಚು ವಿನಾಕಾರಣ ಭಯ ಅಸಂತುಷ್ಟಿ ಕಳವಳ ಗೊಂದಲ ಇರುತ್ತದೆ. ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಸ್ಥಿರತೆ ಇದೆ. ಶನಿ 10 ನೇ ಮನೆ ವೃತ್ತಿಸ್ಥಾನದಲ್ಲಿ ಇರುವುದರಿಂದ ವೃತ್ತಿಯಲ್ಲಿ ಗೆಲುವು ಯಶಸ್ಸೂ ಇರುತ್ತದೆ. ಮೇಲಾಧಿಕಾರಿಗಳ ಪ್ರಶಂಸೆ ಸಿಗುತ್ತದೆ. 10ನೇ ತಾರಿಖಿನ ನಂತರ ಕುಜನ ಮೂರನೇ ಮನೆ ಪ್ರವೇಶ ನಿಮಗೆ ಲಾಭ ತಂದು ಕೊಡುತ್ತದೆ. ಧೈರ್ಯ ಪರಾಕ್ರಮ ಹೆಚ್ಚಾಗುತ್ತದೆ. ಹಿಡಿದ ಕೆಲಸವನ್ನು ಬಿಡದೆ ಛಲದಿಂದ ಮಾಡುತ್ತೀರಿ. ನಿಮ್ಮ ವಿರೋಧಿಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತೀರಿ. ಆರನೇ ಮನೆಯೆ ಕೇತು ಸಹ ನಿಮಗೆ ಶಕ್ತಿಯನ್ನು ಹಣವನ್ನೂ ಕೊಡುತ್ತಾನೆ. ವೇದಾಂತ ಆಧ್ಯಾತ್ಮ ಮುಂತಾದ ಕಡೆ ಮನಸ್ಸು ಹರಿಯುತ್ತದೆ. ದೇವರ ಧ್ಯಾನದಲ್ಲಿ ಮನಸ್ಸು ನಿಲ್ಲುತ್ತದೆ. ಆದಷ್ಟು ದೇವರ ಧ್ಯಾನ ಮಾಡಿ. ದೇವರ ಕಾರ್ಯಗಳಿಗೆ, ಧರ್ಮಕಾರ್ಯಗಳಿಗೆ ಹಣ ಖರ್ಚಾಗುತ್ತದೆ. ಗುರುಬಲ ನಿಮಗೆ ಕಡಿಮೆ ಆಗುವುದರಿಂದ ಬಿಳಿ ಹಸುವಿಗೆ ಆಹಾರ ಕೊಡಿ. ಬಿಳಿಯ ವಸ್ತ್ರ ದಾನ ಮಾಡಿ. ತಂದೆಯಿಂದ ಲಾಭ ಇದೆ.

ಮಿಥುನ ರಾಶಿ
ನಿಮಗೆ ಈಗ 11ನೇ ಮನೆಗೆ ಗುರು ಬಂದಿದ್ದಾನೆ. ಲಾಭಸ್ಥಾನದ ಗುರು ನಿಮಗೆ ಅಪರಿಮಿತ ಲಾಭ ಮಾಡಿಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ, ವಿವಾಹದ ಮಾತುಕತೆಗಳು ನಡೆಯುತ್ತದೆ. ಸಂತಾನ ಫಲ ನೀರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ. ವೃತ್ತಿಯಲ್ಲಿ ಬಡ್ತಿ, ವೃತ್ತಿ ಸಂಬಂಧವಾಗಿ ವಿದೇಶ ಪ್ರವಾಸ ಮುಂತಾದ ಶುಭಫಲಗಳು ಇವೆ. ಇಷ್ಟು ದಿನ ಅಷ್ಟಮಶನಿಯ ಪ್ರಭಾವದಿಂದ ಬಹಳ ನಷ್ಟ ಅನುಭವಿಸಿದ್ದೀರಿ. ಈಗ ಆ ನಷ್ಟಗಳು ನಿಮಗೆ ಲಾಭಗಳಾಗಿ ಬದಲಾಗುತ್ತದೆ. ಕುಟುಂಬದಲ್ಲಿ ವೈಮನಸ್ಸು ಮರೆಯಾಗಿ ಸುಖ ಸಂಸಾರದ ಭಾಗ್ಯ ನಿಮ್ಮದಾಗುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಲಾಭದ ಮುಖ ನೋಡುತ್ತೀರಿ. ಪ್ರವಾಸ ಮಾಡುವ ಯೋಗ ಇದೆ. ಬಂಧು ಬಾಂಧವರಲ್ಲಿ ನಿಮಗೆ ಒಂದು ಸ್ಥಾನಮಾನ ಬೆಲೆ ಸಿಗುತ್ತದೆ. ಸ್ನೇಹಿತರೊಡನೆ ಕಾಲ ಕಳೆಯುವ ಯೋಗ ಇದೆ. ಹೊಸ ವಾಹನ ಖರೀದಿ ಯೋಗ ಇದೆ. 2ನೇ ತಾರೀಕಿನ ನಂತರ ಶುಕ್ರ ನಿಮ್ಮ ರಾಶಿಗೇ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಸೌಖ್ಯ ನೆಮ್ಮದಿ ದೊರೆಯುತ್ತದೆ.ಎಲ್ಲಕ್ಕಿಂದ 11ರ ಗುರು ನಿಮಗೆ ಸಕಲ ವಿಧದಲ್ಲಿ ಸೌಖ್ಯ, ಮಂಗಳ, ಶುಭವನ್ನು ತಂದುಕೊಡುತ್ತಾನೆ.

ಕಟಕ ರಾಶಿ
ಅಷ್ಟಮದ ಶನಿಯ ಪ್ರಭಾವ ನಿಮಗೆ ಬಹಳ ಕಿರಿಕಿರಿ ಉಂಟುಮಾಡುತ್ತದೆ. ಶನಿ ಎಂಟನೇ ಮನೆಯಲ್ಲಿ ಇದ್ದಾಗ ಕೊಂಚ ಬೇಡದ ಉಪದ್ಯಾಪಗಳು ನಡೆಯುವುದು ಸಹಜ. ಯಾವುದೋ ಮರೆತುಹೋಗಿದ್ದ ತಪ್ಪುಗಳು ಈಗ ಮೇಲೆದ್ದು ನಿಂತು ನಿಮ್ಮನ್ನು ಹೆದರಿಸುತ್ತದೆ. ವಿನಾಕಾರಣ ಹಣದ ಖರ್ಚು, ಹಣಕ್ಕೆ ಸಂಬಧಿತ ಸಮಸ್ಯೆಗಳು ತಲೆದೋರುತ್ತದೆ. ಅನಾರೋಗ್ಯವೂ ಕಾಡಿಸಬಹುದು. ಯಾವುದಕ್ಕೂ ಹೆದರಬೇಡಿ. ಶನಿ ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತಾನೆ. ಒಳ್ಳೆಯದಾವುದು ಕೆಟ್ಟದ್ದು ಯಾವುದು ಎಂಬ ತಾರತಮ್ಯ ನಮಗೆ ಕಾಣುವಂತೆ ಮಾಡುತ್ತಾನೆ. ನಮ್ಮವರಾರು ಶತ್ರುಗಳಾರು ಎಂದು ತೋರಿಸಿಕೊಡುತ್ತಾನೆ. ಜಗತ್ತಿನ ಸತ್ಯಗಳನ್ನು ಅರಿವಿಗೆ ಬರಿಸುತ್ತಾನೆ. ಇದುವರೆಗೂ ನಿಮ್ಮ ಮಿತ್ರರಾಗಿದ್ದವರೇ ಈಗ ನಿಮಗೆ ಶತ್ರುಗಳಾಗಬಹುದು. ಎಚ್ಚರಿಕೆಯಿಂದ ಇರಿ. ಜಗಳ ವಾದ ಮಾಡಬೇಡಿ. ಕುಟುಂಬದಲ್ಲಿ ನೆಮ್ಮದಿಗೆ ಭಂಗವಾಗುವ ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ.

ಸಿಂಹ ರಾಶಿ
ಕಳೆದ ವರ್ಷ ಯಾವ ಕೆಲಸವೂ ಪೂರ್ತಿಯಾಗಿ ಆಗದೆ ಬಹಳ ಕಿರಿಕಿರಿ ಅನುಭವಿಸಿದ್ದೀರಿ. ಈಗ ನಿಮ್ಮದೇ ಸಮಯ. ಒಳ್ಳೆಯದೆಲ್ಲವನ್ನೂ ನಿಮ್ಮದಾಗಿಸಿಕೊಳ್ಳಲು ತಯಾರಾಗಿರಿ. ಕೆಲಸಗಳು ವೇಗ ಪಡೆದುಕೊಳ್ಳುತ್ತದೆ. ಕೋರ್ಟು ಕೇಸುಗಳು ಈಗ ನಿಮ್ಮ ಪರವಾಗಿ ನಡೆಯುತ್ತದೆ. ಹೊಸ ವಾಹನ ಕೊಂಡುಕೊಳ್ಳುವ ಯೋಗ ಇದೆ. 11ನೇ ಮನೆಗೆ ಶುಕ್ರ ಪ್ರವೇಶವಾಗುವುದರಿಂದ ಲಾಭವಾಗುತ್ತದೆ. ಶುಕ್ರ ನಿಮಗೆ ವೃತ್ತಿಸ್ಥಾನಾಧಿಪತಿ. ಲಾಭ ಸ್ಥಾನಕ್ಕೆ ಪ್ರವೇಶವಾದಾಗ ವೃತ್ತಿಯಲ್ಲಿ ಬಹುದೊಡ್ಡ ಯಶಸ್ಸನ್ನು ಕಾಣುತ್ತೀರಿ. ಮೇಲಧಿಕಾರಿಗಳ ಪ್ರಶಂಸೆ, ಉನ್ನತ ಸ್ಥಾನಮಾನ ಬಹುಮಾನ ಪ್ರಶಸ್ತಿ ಮುಂತಾದವು ಕೂಡ ಸಿಗುವ ಸಾಧ್ಯತೆ ಇದೆ. ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಬಹುದೊಡ್ಡ ಲಾಭ ಇದೆ. ಒಳ್ಳೆಯ ಪದವಿ ಸಿಗುತ್ತದೆ. ಈ ತಿಂಗಳು ಶುಕ್ರ ಸೂರ್ಯ ಬುಧ ಈ ಮೂರೂ ಗ್ರಹಗಳು ನಿಮಗೆ ಅನುಕೂಲಕರವಾಗಿ ಇದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸಿದೆ. ವಿದ್ಯಾರ್ಥಿಗಳಿಗೆ ಪ್ರವಾಸ ಮಾಡುವ ಯೋಗ ಇದೆ. ಗುರು ಒಂಬತ್ತನೇ ಮನೆಯಲ್ಲಿ ಇರುವುದರಿಂದ ಧರ್ಮ ಕಾರ್ಯಗಳನ್ನು ಹೆಚ್ಚು ಮಾಡುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಧನಾಗಮನ ಉತ್ತಮವಾಗಿದೆ.

ಕನ್ಯಾ ರಾಶಿ
7ನೇ ಮನೆಯಲ್ಲಿದ್ದ ಇದ್ದ ಗುರು ಎಂಟನೇ ಮನೆಗೆ ಬರುತ್ತಾನೆ. ಎಂಟನೇ ಮನೆಯಲ್ಲಿ ರಾಹು ಸಹ ಇದ್ದಾನೆ. ಕೆಲಸದಲ್ಲಿ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮಾತಿಗೆ ಮನ್ನಣೆ ಸಿಗುವುದು ಕಡಿಮೆ. ಆದ್ದರಿಂದ ಯಾರೊಂದಿಗೂ ವಿನಾಕಾರಣ ವಾದ-ವಿವಾದ ಮಾಡಬೇಡಿ. ಗುರು ಎಂಟನೇ ಮನೆಯಲ್ಲಿ ಆರೋಗ್ಯಕ್ಕೆ ಕೊಂಚ ಸಮಸ್ಯೆ ತರುತ್ತಾನೆ. ಎರಡನೇ ಮನೆಯ ಕೇತು ಸಂಸಾರದಲ್ಲಿ ಅಶಾಂತಿ ತರುತ್ತಾನೆ. ಕುಜ 11ನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣ ಹಾಗೂ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಅಂತ್ಯ ಕಾಣಲಿವೆ. 2ನೇ ತಾರೀಖಿನ ನಂತರ ಶುಕ್ರ ಹತ್ತನೇ ಮನೆಗೆ ಪ್ರವೇಶವಾದಾಗ ನಿಮ್ಮ ವೃತ್ತಿಯಲ್ಲಿ ಬಹಳ ಒಳ್ಳೆಯ ಬದಲಾವಣೆ ಸಾದ್ಯತೆ ಇದೆ. ಮೇ.15ರಂದು ಸೂರ್ಯ ಒಂಬತ್ತನೇ ಮನೆಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಸರ್ಕಾರಿ ಕೆಲಸಗಳನ್ನು ಸುಲಭ ಮಾಡಿಕೊಡುತ್ತದೆ. ಸರ್ಕಾರದಿಂದ ಲಾಭ ಇದೆ. ಗುರು ರಾಹು ಬುಧ ಈ 3 ಗ್ರಹಗಳು ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು. ಈಶ್ವರನ ದರ್ಶನ ಮಾಡಿ. ಬಿಳಿ ಹಸುವಿಗೆ ಆಹಾರ ಕೊಡಿ. ಪ್ರತಿದಿನ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ತುಲಾ ರಾಶಿ
ಗುರುಬಲ ಇಲ್ಲದ ಕಾರಣ ಹಲವಾರು ನೋವು-ನಷ್ಟಗಳನ್ನು ಅನುಭವಿಸಿದ್ದಿರಿ. ಈಗ ನಿಮಗೆ ಸಂಪೂರ್ಣ ಗುರುಬಲ ಇದೆ. ಕೆಲಸ ಕಾರ್ಯಗಳು ಬಹಳ ಸುಲಲಿತವಾಗಿ ನೆರವೇರುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ವಿದೇಶ ಪ್ರಯಾಣಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಸಮಯ. ವಿದ್ಯಾರ್ಥಿಗಳಿಗೆ ಶುಭಕಾಲ. ಈಗ ಪರೀಕ್ಷೆ ಬರೆದವರು ಒಳ್ಳೆಯ ಅಂಕಗಳನ್ನು ಪಡೆಯುತ್ತೀರಿ. ಈ ರಾಶಿಯ ರಾಜಕೀಯ ನಾಯಕರಿಗೂ ಈಗ ಸಮಯ ಬಹಳ ಚೆನ್ನಾಗಿದೆ. ಒಳ್ಳೆಯ ಪದವಿ ಉನ್ನತ ಹುದ್ದೆ ಸಿಗುವ ಸಾಧ್ಯತೆ ಇದೆ. ಪಂಚಮ ಶನಿಯ ಪ್ರಭಾವ ಇದ್ದರೂ ಗುರು ಏಳನೇ ಮನೆಯಲ್ಲಿ ಇದ್ದು ನಿಮಗೆ ಸಕಲ ಸೌಭಾಗ್ಯಗಳನ್ನೂ ಕೊಡುತ್ತಾನೆ. ನಿಮಗೆ ಹೆಚ್ಚಿನ ಅನುಕೂಲಗಳು ಈಗ ನಿಮ್ಮ ಅರಿವಿಗೆ ಬರುತ್ತದೆ. ವೃತ್ತಿಯಲ್ಲಿ ಬಡ್ತಿ ಇದೆ. ಅರ್ಹರಿಗೆ ಪ್ರಶಸ್ತಿ ಪುರಸ್ಕಾರಗಳು ದೊರೆಯುತ್ತದೆ. ಕಲಾವಿದರಿಗೆ ಶುಭಫಲಗಳು ಇವೆ.

ವೃಶ್ಚಿಕ ರಾಶಿ
ನಿಮಗೆ ಈಗ ರಾಹುಬಲ ಒಂದೇ ಕಾಪಾಡುವ ಆಪತ್ಬಾಂಧವ. ರಾಹು ಆರನೇ ಮನೆಯಲ್ಲಿ ಬಹಳಷ್ಟು ಧನ ಸಹಾಯವನ್ನು ಕೊಡಿಸುತ್ತಾನೆ. 14ರ ಮೇ ವರೆಗೂ ಸೂರ್ಯನೂ ಆರನೇ ಮನೆಯಲ್ಲಿ ಇರುವುದು ನಿಮಗೆ ವೃತ್ತಿಯಲ್ಲಿ ಯಶಸ್ಸು ಸಿಗಲು ಕಾರಣವಾಗುತ್ತದೆ. ಗುರುಬಲ ಇಲ್ಲದೇ ಇರುವುದರಿಂದ ಮುಖ್ಯವಾದ ಕೆಲಸಗಳು ಬೇಗನೇ ನಡೆಯುವುದಿಲ್ಲ. ನಿಮಗೆ ಈಗ ಕೊಂಚ ತಾಳ್ಮೆ ಸಹನೆಯ ಅಗತ್ಯ ಇದೆ. ಶನಿ ನಾಲ್ಕನೇ ಮನೆಯಲ್ಲಿ ವಾಹನದಿಂದ ನಷ್ಟ ಮಾಡಿಸುತ್ತಾನೆ. ಖರ್ಚುಗಳು ಹೆಚ್ಚಾಗಬಹುದು. ಮೇ.2ರ ನಂತರ ಶುಕ್ರ ಮಿಥುನರಾಶಿಗೆ ಪ್ರವೇಶ ನಿಮಗೆ ಶುಭವನ್ನು ತರುತ್ತದೆ. ಮೇ.10 ನಂತರ ಕುಜ ಒಂಬತ್ತನೇ ಮನೆಗೆ ಪ್ರವೇಶವಾಗುವುದರಿಂದ ಒಳಿತು. ದತ್ತಾತ್ರೇಯ ಜಪ ಮಾಡಿ. ನಿಮಗೆ ಒಳ್ಳೆಯ ಸಮಯ ಬರಲು ಕೊಂಚ ಸಮಯ ಕಾಯಬೇಕು. ರಾಹುವಿನ ಬಲದಿಂದ ಹಣಕ್ಕೆ ಕೊರತೆ ಇರುವುದಿಲ್ಲ. ಆದರೆ ಉನ್ನತ ಸ್ಥಾನಮಾನ ಬಡ್ತಿ ಒಳ್ಳೆಯ ಕೆಲಸ ಇವೆಲ್ಲ ತಡವಾಗುತ್ತದೆ. ನೀವು ಎಣಿಸಿದಷ್ಟು ಬೇಗೆ ಯಾವ ಕೆಲಸಗಳು ನಡೆಯುವುದಿಲ್ಲ. ಕಾಯಬೇಕು.

ಧನಸ್ಸು ರಾಶಿ
ನಿಮಗೆ ಈಗ ಒಳ್ಳೆಯ ದಿನಗಳು ಪ್ರಾರಂಭವಾಗಿದೆ. ನಿಮ್ಮ ಕನಸುಗಳು ಸಾಕಾರವಾಗುವ ಸಮಯವಿದು. ಬಂಧುಗಳಲ್ಲಿ ಒಳ್ಳೆಯ ಹೆಸರು ಪ್ರತಿಷ್ಠೆ ಗಳಿಸುತ್ತೀರಿ. ಸ್ನೇಹಿತರೊಡನೆ ಸಂತಸವಾಗಿ ಕಾಲ ಕಳೆಯುವಿರಿ. ಪ್ರವಾಸಗಳು, ಯಾತ್ರಾ ಸ್ಥಳಗಳಿಗೆ ಭೇಟಿಯಾಗುವ ಅವಕಾಶಗಳು ತಾನಾಗಿ ಬರುತ್ತವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ. ಹಣಕ್ಕೆ ಕೊರತೆ ಇಲ್ಲ. ಹಣ ಬರುವ ಮೂಲಗಳು ಚೆನ್ನಾಗಿದೆ. ಮೇ.15ರ ನಂತರ ಸೂರ್ಯನ ಆರನೇ ಮನೆ ಪ್ರವೇಶ ನಿಮಗೆ ಬಹಳ ಶಕ್ತಿ ಸಾಹಸಗಳನ್ನು ಕೊಡುತ್ತದೆ. ಅಧಿಕಾರ ಸಿಗುವಂತೆ ಮಾಡುತ್ತದೆ. ಪದವಿ ಉನ್ನತಿ ಇಂತಹ ಭಾಗ್ಯಗಳು ಇವೆ. ಮೇ.2ರ ನಂತರ ಶುಕ್ರ ಏಳನೇ ಮನೆ ಪ್ರವೇಶ ಕೂಡ ನಿಮಗೆ ಶುಭ ಸಂದೇಶಗಳನ್ನು ತರುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ಕೋರ್ಟು ಕೇಸುಗಳು ನಿಮ್ಮ ಪರವಾಗಿ ನಡೆಯುತ್ತದೆ. ಮೇಲಧಿಕಾರಿಗಳ ಪ್ರಶಂಸೆ ಪಡೆದುಕೊಳ್ಳುತ್ತೀರಿ. ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ರಾಜಕೀಯ ನಾಯಕರಿಗೆ ಶಿಕ್ಷಕ ವೃತ್ತಿಯವರಿಗೆ, ವಿದ್ಯಾರ್ಥಿಗಳಿಗೆ ಶುಭವಿದೆ.

ಮಕರ ರಾಶಿ
ನಾಲ್ಕನೇ ಮನೆಯಲ್ಲಿ ಬುಧ, ಗುರು, ರಾಹು ಸೂರ್ಯ ಸೇರಿ ಒಂದು ರಾಜಯೋಗ ಆಗಿದೆ. ಈ ಗ್ರಹಗಳು ತಮ್ಮ ನೇರಕ್ಕೆ ಹತ್ತನೇ ಮನೆಯನ್ನೂ ನೋಡುವುದರಿಂದ ಹೊಸ ಕೆಲಸ ಸಿಗುವುದು. ವೃತ್ತಿಯಲ್ಲಿ ಏಳ್ಗೆ, ಉನ್ನತಿ ಮೊದಲಾದ ಶುಭಸಂಗತಿಗಳು ನಡೆಯುತ್ತದೆ. ಒಳ್ಳೆಯ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ. ಮೇ 15 ರ ನಂತರ ಸೂರ್ಯ ಐದನೇ ಮನೆ ಪ್ರವೇಶ ನಿಮಗೆ ಒಳಿತನ್ನು ತರುತ್ತದೆ. ನಾಲ್ಕರ ಬುಧ ಸುಖಸ್ಥಾನಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬುತ್ತಾನೆ. ವಾಹನದಿಂದ ಲಾಭ ಇದೆ. ಎರಡನೇ ಮನೆಯಲ್ಲಿ ಶನಿ ಇರುವುದು ಕುಟುಂಬ ಸೌಖ್ಯಕ್ಕೆ ಕೊಂಚ ಧಕ್ಕೆ ಆದರೂ ನೀವು ಸಾಡೆಸಾತಿಯ ಕೊನೆಯ ಮೆಟ್ಟಿಲಲ್ಲಿ ಇದ್ದೀರಿ. ಹೀಗಾಗಿ ಶನಿಯ ಪ್ರಭಾವ ಕಡಿಮೆ ಇದೆ. ಇನ್ನು ಸ್ವಲ್ಪ ದಿನಗಳು ಕಳೆದರೆ ನಿಮಗೆ ಭಾಗ್ಯೋದಯವನ್ನು ಶನಿ ಖಂಡಿತಾ ತೋರಿಸುತ್ತಾನೆ. ಶನಿವಾರದಂದು ಶನಿದೇವರ ಗುಡಿಗೆ ಹೋಗಿ ಬನ್ನಿ. ಗುರುಗಳ ಅನುಗ್ರಹ ಸಿಗುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶ ಇದೆ. ವ್ಯವಸಾಯದಲ್ಲಿ ಅನುಕೂಲ ಲಾಭ ಇದೆ. ಇನ್ನೂ ಕೆಲವು ತಿಂಗಳ ಬಳಿಕ ರಾಹುವಿನ ಸ್ಥಾನ ಬದಲಾವಣೆ ನಿಮಗೆ ತುಂಬಾ ಯಶಸ್ಸನ್ನು ಕೊಡುತ್ತದೆ.

ಕುಂಭ ರಾಶಿ
ಗುರು ಮೂರನೇ ಮನೆಗೆ ಪ್ರವೇಶ ಮಾಡಿದ್ದಾನೆ. ನಿಮ್ಮ ಧೈರ್ಯ ವೃದ್ದಿಸುವ ಸಮಯ. ಸಹೋದರರಿಂದ ಲಾಭ ಇದೆ. ಸಹೋದರರಿಗೆ ಉನ್ನತಿ ಇದೆ. ರಾಹು ಮೂರನೇ ಮನೆಯಲ್ಲಿ ನಿಮಗೆ ಯಶಸ್ಸನ್ನು ಕೊಡುತ್ತಾನೆ. ಮೇ.2ರ ನಂತರ ಶುಕ್ರನ ಐದನೇ ಮನೆ ಪ್ರವೇಶ ನಿಮಗೆ ಬಹಳ ಅನುಕೂಲಕರವಾಗಿದೆ. ಐದನೇ ಮನೆ ಪೂರ್ವ ಪುಣ್ಯಸ್ಥಾನ, ಅಂದರೆ ನೀವು ಅಂದುಕೊಂಡ ಕೆಲಸಗಳು ನೆರವೇರುವ ಸಮಯ. ಏನಾದರೂ ಶುಭ ಸಂಗತಿಗಳು ನಿಮ್ಮ ಅರಿವಿಗೆ ಬರುತ್ತದೆ. ಮಕ್ಕಳಿಗೆ ಒಳ್ಳೆಯದಾಗುತ್ತದೆ. ವಾಹನ ಖರೀದಿಸುವಿರಿ. ವಾಹನ ವ್ಯಾಪಾರಿಗಳಿಗೆ ಲಾಭ ಇದೆ. ನಿಮ್ಮ ರಾಶಿಯಲ್ಲೇ ಶನಿ ಇರುವುದು ಕೊಂಚ ಹಿನ್ನಡೆ ಆದರೂ ಇತರ ಗ್ರಹಗಳು ನಿಮಗೆ ಅನುಕೂಲ ಸ್ಥಿತಿಯಲ್ಲಿ ಇರುವುದರಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಬಹುದು. ಮೇ.10ರ ನಂತರ ಕುಜ ಸಹ ಆರನೇ ಮನೆಗೆ ಪ್ರವೇಶವಾಗುವುದು ನಿಮಗೆ ಇನ್ನೂ ಹೆಚ್ಚಿನ ಲಾಭವನ್ನು ಕೊಡುತ್ತದೆ. ಭೂಮಿಗೆ ಸಂಬಂದಿಸಿದ ವ್ಯವಹಾರಗಳು ಲಾಭ ತಂದುಕೊಡುತ್ತದೆ. ಸೇನೆ,ಪೊಲೀಸ್ ಇಲಾಖೆಯಲ್ಲಿ ವೃತ್ತಿಯಲ್ಲಿರುವವರಿಗೆ ಲಾಭ ಇದೆ.

ಮೀನ ರಾಶಿ
ಎರಡನೇ ಮನೆಯಲ್ಲಿರುವ ಗುರು ಧನ ಲಾಭ ನೀಡಲಿದ್ದಾನೆ. ಮನೆಯಲ್ಲಿ ಶುಭಕಾರ್ಯ ನಡೆಯಲಿವೆ. ವೃತ್ತಿಯಲ್ಲಿ ಏಳ್ಗೆ ಯಶಸ್ಸು ಇದೆ. ಇಷ್ಟೂ ದಿನಗಳು ನೀವು ಯಾವುದೇ ಯಶಸ್ಸು ಕಾಣದೆ ಕಂಗೆಟ್ಟಿದ್ದೀರಿ. ಈಗ ನಿಮಗೆ ಯಶಸ್ಸಿನ ಸುರಿಮಳೆಯೇ ಆಗಲಿದೆ. ವೃತ್ತಿಯಲ್ಲಿ ಲಾಭ, ಹೊಸಹೊಸ ಅವಕಾಶಗಳು ದೊರೆಯಲಿದೆ. ಬಂಧುಮಿತ್ರರ ಭೇಟಿ ಸಂತಸ ತರಲಿದೆ. ಸ್ನೇಹಿತರೊನೆ ಒಡನಾಟ ಮನಸ್ಸಿಗೆ ಮುದ ನೀಡುತ್ತದೆ. ವಿದೇಶ ಪ್ರಯಾಣದ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳಿಗೂ ಈಗ ಶುಭಕಾಲ. ಒಳ್ಳೆಯ ಸಮಾರಂಭಗಳಿಗೆ ಹೋಗುತ್ತೀರಿ. ಅರ್ಹರಿಗೆ ಪ್ರಶಸ್ತಿ ದೊರೆಯಲಿದೆ. ನಿಮ್ಮ ಮನಸ್ಸಿಗೆ ಮುದ ನೀಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರಿ. ರಾಜಕೀಯ ನಾಯಕರಿಗೆ ಒಳ್ಳೆಯ ಬದಲಾವಣೆಯ ಕಾಲ. ಉನ್ನತ ಸ್ಥಾನಮಾನ ಸಿಗುವ ಯೋಗ ಇದೆ. ಮೇ 2ರ ನಂತರ ಶುಕ್ರನ ನಾಲ್ಕನೇ ಮನೆ ಪ್ರವೇಶ, ಮೇ.15 ರ ನಂತರ ಸೂರ್ಯ ಮೂರನೇ ಮನೆ ಪ್ರವೇಶದಿಂದ ಹೆಚ್ಚಿನ ಲಾಭವಾಗಲಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications