Get Updates
Get notified of breaking news, exclusive insights, and must-see stories!

Makar Sankranti 2022: ಹೊಸ ವರ್ಷದಲ್ಲಿ ಮಕರ ರಾಶಿಯಲ್ಲಿ ಮೂರು ಗ್ರಹಗಳು. ಈ ರಾಶಿಗಳಿಗೆ ಸಂಕಷ್ಟ

ಹೊಸ ವರ್ಷದಲ್ಲಿ ಮನಸ್ಸಿನಲ್ಲಿ ಹೊಸ ಭರವಸೆಗಳು ಮೂಡತೊಡಗುತ್ತದೆ. ಈ ಸಂದರ್ಭದಲ್ಲಿ ಹಲವಾರು ಮಂದಿಗೆ ಭವಿಷ್ಯವನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಹಲವಾರು ಮಂದಿ ತಮ್ಮ ಭವಿಷ್ಯವನ್ನು ನೋಡಿ ಮುಂದಿನ ಕಾರ್ಯದಲ್ಲಿ ತೊಡಗುತ್ತಾರೆ. ಜ್ಯೋತಿಷ್ಯದ ಪ್ರಕಾರ ಮುಂಬರುವ ವರ್ಷ 2022 ರ ಪ್ರಾರಂಭದ ಸಮಯವು 5 ರಾಶಿಯವರಿಗೆ ಕೆಲವು ತೊಂದರೆಗಳನ್ನು ಅಧಿಕ ಮಾಡಬಹುದು.

2022 ರಲ್ಲಿ, ಮಕರ ರಾಶಿಯಲ್ಲಿ ಶನಿಯ ತ್ರಿಗ್ರಹ ಯೋಗವು ರೂಪುಗೊಳ್ಳಲಿದೆ. ಈಗಾಗಲೇ ಶನಿಯು ಮಕರ ರಾಶಿಯಲ್ಲಿದ್ದು, ಜನವರಿ 5 ರಂದು ಬುಧ ಕೂಡ ಈ ರಾಶಿಯನ್ನು ತಲುಪುತ್ತಾನೆ. ಆ ಬಳಿಕ ಜನವರಿ 14 ರಂದು ಸೂರ್ಯನೂ ಮಕರ ರಾಶಿಯನ್ನು ತಲುಪುತ್ತಾನೆ. ಮಕರ ಸಂಕ್ರಾಂತಿಯಲ್ಲಿ ಶನಿ, ಸೂರ್ಯ ಮತ್ತು ಬುಧಗಳು ಮಕರ ರಾಶಿಯಲ್ಲಿ ಇರುವಾಗ ತ್ರಿಗ್ರಹ ಯೋಗವು ಉಂಟಾಗಲಿದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ 5 ರಾಶಿಯವರಿಗೆ ಕೆಲವು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಯಾವೆಲ್ಲಾ ರಾಶಿಯವರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಯಲು ಮುಂದೆ ಓದಿ.

 ಕಟಕ ರಾಶಿ

ಕಟಕ ರಾಶಿ

ಕಟಕ ರಾಶಿಯವರು ತ್ರಿಗ್ರಹ ಯೋಗದ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವಿರೋಧಿಗಳು ನಿಮ್ಮ ಗೌರವ, ಘನತೆಗೆ ಧಕ್ಕೆ ಉಂಟು ಮಾಡಲು ಸಂಚು ರೂಪಿಸುತ್ತಾರೆ. ನಿಮ್ಮ ಗೌರವಕ್ಕೆ ಹಾನಿ ಉಂಟುವ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಇದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮ ಉಂಟು ಮಾಡಬಹುದು. ಈ ಸಂದರ್ಭದಲ್ಲಿ ನಿಮ್ಮ ಬೆಂಬಲಕ್ಕೆ ಹಿರಿಯ ಅಧಿಕಾರಿಗಳು ಕೂಡಾ ಬರಲಾರರು. ನಿಮ್ಮ ಬೆಂಬಲದಲ್ಲಿ ನಿಲ್ಲಲು ಹಿರಿಯ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ನಿವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.

 ಕನ್ಯಾ ರಾಶಿ

ಕನ್ಯಾ ರಾಶಿ

ತ್ರಿಗ್ರಹ ಯೋಗದ ಸಂದರ್ಭದಲ್ಲಿ ಕನ್ಯಾ ರಾಶಿಯವರು ಅಧಿಕವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ತ್ರಿಗ್ರಹ ಯೋಗದ ಸಂದರ್ಭದಲ್ಲಿ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಈ ಹಿನ್ನೆಲೆಯಿಂದಾಗಿ ನೀವು ನಿಮ್ಮ ಆರೋಗ್ಯವನ್ನು ಹೆಚ್ಚು ಜಾಗರೂಕರಾಗಿ ನೋಡಿಕೊಳ್ಳಿ. ಆಹಾರ ಸೇವನೆ ಮಾಡುವಾಗ ಕೊಂಚ ಜಾಗರೂಕರಾಗಿ ಆರೋಗ್ಯಕರ ಆಹಾರ ಮಾತ್ರ ಸೇವನೆ ಮಾಡಿ. ಮುಖ್ಯವಾಗಿ ಹೋಟೆಲ್‌ನ ಆಹಾರ, ಫಾಸ್ಟ್‌ಫುಡ್‌ಗಳನ್ನು ಸಾಧ್ಯವಾದಷ್ಟು ತಿನ್ನದಿದ್ದರೆ ಉತ್ತಮ.

 ತುಲಾ ರಾಶಿ

ತುಲಾ ರಾಶಿ

ತ್ರಿಗ್ರಹ ಯೋಗದ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಮನಸಿಕ ಒತ್ತಡ ಉಂಟಾಗಬಹುದು. ಇನ್ನು ಆರೋಗ್ಯದ ಸಮಸ್ಯೆಯಿಂದಾಗಿ ಮಾನಸಿಕ ಒತ್ತಡ ಇನ್ನಷ್ಟು ಅಧಿಕವಾಗಬಹುದು. ನೀವು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಬಹುದು. ಹಾಗೆಯೇ ಮುಖ್ಯವಾಗಿ ಗಂಟಲು, ಎದೆ ಮತ್ತು ಬೆನ್ನುನೋವಿನ ಸಮಸ್ಯೆ ಇರಬಹುದು.

 ಧನು ರಾಶಿ

ಧನು ರಾಶಿ

ಜನವರಿ ತಿಂಗಳಲ್ಲಿ ಧನು ರಾಶಿಯವರಿಗೆ ಕೆಲವು ತೊಂದರೆಗಳನ್ನು ಅಧಿಕವಾಗಬಹುದು. ವೈವಾಹಿಕ ಜೀವನದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಇನ್ನು ವೈವಾಹಿಕ ಜೀವನದಲ್ಲಿ ಸಂಕಷ್ಟ ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ವಾದ ಅಥವಾ ಘರ್ಷಣೆ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಮಾನಸಿಕ ಪರಿಸ್ಥಿತಿಯು ಕೆಟ್ಟದಾಗಲಿದೆ. ನೀವು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.

 ಮಕರ ರಾಶಿ

ಮಕರ ರಾಶಿ

ತ್ರಿಗ್ರಹ ಯೋಗದ ಸಂದರ್ಭದಲ್ಲಿ ಮಕರ ರಾಶಿಯ ಜನರು ಏನು ಸಾಧಿಸಬೇಕಾದರೂ ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ. ನೀವು ಯಾವುದೇ ಸಣ್ಣ ಪುಟ್ಟ ಕೆಲಸವನ್ನು ಪೂರ್ತಿ ಮಾಡಲು ಬಹಳ ಕಷ್ಟ ಪಡಬೇಕಾಗುತ್ತದೆ. ನಿಮ್ಮ ಜೀವನ ವೆಚ್ಚವು ಅಧಿಕವಾಗಲಿದೆ. ತ್ರಿಗ್ರಹ ಯೋಗದ ಸಂದರ್ಭದಲ್ಲಿ ನಿಮಗೆ ಆರ್ಥಿಕ ಬಿಕ್ಕಟ್ಟು ಕೂಡಾ ಉಂಟಾಗಲಿದೆ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+