ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!
ಬಳ್ಳಾರಿ, ಮೇ 21: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಈ ಬಾರಿ ಪ್ರಸ್ತುತ ರಾಜಕಾರಣದ ಸ್ಥಿತಿ ಕುರಿತಂತೆ ಭವಿಷ್ಯ ನುಡಿದಿದ್ದು ನಿಜವಾಗಿದೆ ಎಂದು ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪ ಒಡೆಯರ್ ಘೋಷಿಸಿದ್ದಾರೆ.
ಗೊರವಪ್ಪ ಕಳೆದ ಫೆಬ್ರವರಿ ಮೊದಲ ವಾರದಲ್ಲಿ 'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್' ಎಂದು ಕಾರ್ಣಿಕ ನುಡಿ ಹೇಳಿದ್ದರು. ಅದೀಗ ಸತ್ಯವಾದಂತಾಗಿದೆ ಎಂದಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವತಿಯಿಂದ ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಈ ಮೂಲಕ ಶತ ಶತಮಾನಗಳಿಂದ ಹೇಳುತ್ತಾ ಬರುತ್ತಿರುವ ಕಾರ್ಣಿಕ ಭವಿಷ್ಯದ ಮುನ್ನುಡಿ ಎಂಬುದು ಸಾಬೀತಾದಂತಾಗಿದೆ ಎಂದಿದ್ದಾರೆ.
ನಾಡಿನ ಭವಿಷ್ಯವಾಣಿಯಾದ ಕಾರ್ಣಿಕ, ಶುಭಾಶುಭ ಫಲಗಳ ಬಗ್ಗೆ ಸಾರ್ವಜನಿಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವ ವಿಶ್ಲೇಷಣೆಗಳು, ವಿಶೇಷ ಅರ್ಥಗಳು ಕೇಳುತ್ತಿದ್ದು, ಪರಸ್ಪರ ಚರ್ಚೆಗಳಿಗೆ ಕಾರಣವಾಗಿದೆ.
ವ್ಯಾಪಾರದಲ್ಲಿ ಲಾಭ ನಷ್ಟ ಏರುಪೇರು, ರೈತರು ಈ ಬಾರಿ ಸಾಧಾರಣ ಮಳೆ, ರಾಜಕೀಯವಾಗಿ ಪಕ್ಷ ಒಡೆಯುವ ಸಂಭವ ಹೀಗೆ ಚರ್ಚೆಗಳು ಅರ್ಥಗಳು ನಡೆದಿವೆ.

ಏನಿದರ ನಿಜವಾದ ಅರ್ಥ
ಗೊರವಪ್ಪನ ಕಾರ್ಣಿಕ ಭವಿಷ್ಯ,'ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೆ ಪರಾಕ್' ಅರ್ಥ: ಆಕಾಶದಂತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಅಧಿಕಾರ ಸಿಕ್ಕಿಲ್ಲ. ಬದಲಿಗೆ ಗಿಳಿಯಂತಿರುವ ಹಸಿರು ಬಣ್ಣದ ಸಣ್ಣ ಪಕ್ಷ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದೆ ಎಂದು ವೆಂಕಪ್ಪ ಒಡೆಯರ್ ವಿಶ್ಲೇಷಿಸಿದ್ದಾರೆ.
ಈ ಹಿಂದೆ ಸಹ ಗೊರವಪ್ಪ ಹೇಳಿರುವ ಕಾರ್ಣಿಕಗಳು ಸತ್ಯವಾಗಿದ್ದು, ಇದು ಶ್ರೀಕ್ಷೇತ್ರದ ಮಹಿಮೆಯಾಗಿದೆ ಎಂದು ಒಡೆಯರ್ ಹೇಳಿದ್ದಾರೆ.

ಗೊರವಯ್ಯ ನುಡಿಯುವ ಭವಿಷ್ಯ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.

ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ
ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.

ಮೈಲಾರ ಲಿಂಗ ಕ್ಷೇತ್ರ ತಲುಪುವುದು ಹೇಗೆ?
ಬಳ್ಳಾರಿ ಜಿಲ್ಲೆ ಹಡಗಲಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯವಿದೆ. ಹಡಗಲಿಯಿಂದ ಈ ಕ್ಷೇತ್ರಕ್ಕೆ 40 ಕಿ.ಮೀ ಹಾಗೂ ರಾಣೆ ಬೆನ್ನೂರಿನಿಂಡ 34 ಕಿ.ಮೀ ಆಗುತ್ತದೆ. ಗೊರವ ಸಮುದಾಯದ ಅಧಿದೇವತೆ ಪರಮ ಶಿವನನ್ನು ಇಲ್ಲಿ ಮೈಲಾರ ಲಿಂಗರೂಪಿಯಾಗಿ ಪೂಜಿಸಲಾಗುತ್ತದೆ. ಕಂಬಳಿ ಹೊದ್ದು, ಢಮರುಗ ಹಿಡಿದು ಹಣೆಯಲ್ಲಿ ಭಂಡಾರ ತೊಟ್ಟು ಮೈಲಾರಿ ವೇಷಧಾರಿಯಾಗಿ ಶಿವನನ್ನು ಪೂಜಿಸಲಾಗುತ್ತದೆ. ಮಲ್ಲಾಸುರ, ಮಣಿಕಾಸುರನನ್ನು ಮೈಲಾರ ರೂಪದಲ್ಲಿ ಅವತರಿಸಿದ ಶಿವ ಕೊಂದು ಹಾಕಿದ್ದು ಪೌರಣಿಕ ಕಥೆಗಳಲ್ಲಿ ಓದಬಹುದು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications