ನಿಮ್ಮ ಸಹೋದರನ ಜಾತಕದಲ್ಲಿ ಕಾಳಸರ್ಪ ದೋಷವಿದೆ!

By: ವಿಠ್ಠಲ್ ಭಟ್, ನೆಲಮಂಗಲ
Subscribe to Oneindia Kannada

ನಮಸ್ಕಾರ, ನನ್ನ ಸಹೋದರನ ಹೆಸರು ಡಾ. ಪುಷ್ಪರಾಜ್ ವೈ.ಆರ್., ಬಿಡಿಎಸ್. ಅವರ ಜನುಮ ದಿನಾಂಕ 16-10-1982, ಹುಟ್ಟಿದ್ದು ಶನಿವಾರ, ಅಮವಾಸ್ಯೆಯಂದು 12.30ಕ್ಕೆ. ನಕ್ಷತ್ರ : ಹಸ್ತಾ, ರಾಶಿ : ಕನ್ಯಾ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಅವರ ಮದುವೆ ತುಂಬಾ ತಡವಾಗುತ್ತಿದೆ. ಹೀಗಾಗಿ ಸ್ವಲ್ಪ ಬೇಜಾರು. ಅವರದು ತುಂಬಾ ವಿನಮ್ರ ವ್ಯಕ್ತಿತ್ವ ಮತ್ತು ಒಳ್ಳೆಯ ಮನುಷ್ಯ. ಎಷ್ಟು ಒಳ್ಳೆಯವರೆಂದರೆ, ಅವರು ಈವರೆಗೆ ಯಾರಿಗೂ ಬೈದಿಲ್ಲ, ಯಾರನ್ನೂ ಹೀಯಾಳಿಸಿಲ್ಲ. ಎಲ್ಲ ನೋವುಗಳನ್ನು ತಾವೇ ನುಂಗಿಕೊಂಡವರಂತೆ ವರ್ತಿಸುತ್ತಾರೆ.

ಅವರ ಹಿರಿ ಸಹೋದರಿಯಾಗಿ ಮದುವೆ ನಿಶ್ಚಯಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದೇನೆ. ಎಲ್ಲ ಸರಿಯಾಗಿಯೇ ಸಾಗುತ್ತಿರುತ್ತದೆ, ಮಾತುಕತೆವರೆಗೂ ಬಂದಿರುತ್ತದೆ, ಆದರೆ ಕೊನೆ ಘಳಿಗೆಯಲ್ಲಿ ಸಂಬಂಧಗಳು ಕಡಿದುಹೋಗುತ್ತಿವೆ. ಇದೆಲ್ಲ ಆಗುತ್ತಿರುವುದು ಹುಡುಗಿಯವರ ಕಡೆಯಿಂದಲೇ. [ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ]

KalaSarpa dosha in horoscope, remedies to come over

ಏನಾಗುತ್ತಿದೆ, ಹೀಗೇಕೆ ಸಂಭವಿಸುತ್ತಿದೆ, ಯಾಕೆ ಯಾವ ಹುಡುಗಿಯೂ ಇವನನ್ನು ಒಪ್ಪಿಕೊಳ್ಳುತ್ತಿಲ್ಲ? ಒಂದೂ ತಿಳಿಯುತ್ತಿಲ್ಲ. ಪೂಜಾರಿಗಳು ತಿಳಿಸಿದ ಎಲ್ಲ ರೀತಿಯ ಪೂಜೆ ಮಾಡಿಸಿದ್ದೇವೆ, ಕಾಳಹಸ್ತಿ ಸೇರಿದಂತೆ ಹಲವಾರು ದೇವಸ್ಥಾನ ಸುತ್ತಿದ್ದೇವೆ. ದಯವಿಟ್ಟು ಇದಕ್ಕೊಂದು ಪರಿಹಾರ ದೊರಕಿಸಿಕೊಡಿ.

ಜ್ಯೋತಿಷಿ ವಿಠ್ಠಲ್ ಭಟ್ ಅವರ ಉತ್ತರ

ನಮಸ್ಕಾರ, ಸಮಸ್ಯೆಗಳೊಂದಿಗೆ ನನ್ನ ಭೇಟಿ ಮಾಡಲು ಬರುವ ಮುಕ್ಕಾಲು ಜನರ ಬಾಯಲ್ಲಿ ನಾನು ಈ ಸಾಲು ಕೇಳಿರ್ತೀನೆ. ಎಲ್ಲಾ ಪರಿಹಾರ ಮಾಡಿಸಿದ್ದೇವೆ, ಎಲ್ಲಾ ಪೂಜೆ ಮಾಡಿಸಿದ್ದೇವೆ, ಆದರೆ ಸಮಸ್ಯೆಗೆ ಪರಿಹಾರ ಆಗಿಲ್ಲ ಎಂದು.

ಆದರೆ ವಿವಾಹ ಇತ್ಯಾದಿ ಶುಭ ಕಾರ್ಯಗಳು ಆಗಲು ಶುಭ ಯೋಗ ಸಹ ಬರಬೇಕು. ಇಲ್ಲಿ ನೀವು ಕೊಟ್ಟ ಜನ್ಮ ಕಾಲ ಆಧರಿತ ಜಾತಕ ಮಾಡಿದಾಗ ಈ ಜಾತಕದಲ್ಲಿ ವಿವಾಹ ಕಾರಕ ಶುಕ್ರ ಗ್ರಹ ನೀಚ ಸ್ಥಿತಿಯಲ್ಲಿ ಇದೆ ಹಾಗೂ ಚಂದ್ರ ಸಪ್ತಮಾಧಿಪತಿ ಗುರು ಶನಿ ಗ್ರಹದ ಜೊತೆಯಲ್ಲಿ ಇರುವುದು ಕಾಣುತ್ತಿದೆ. [ಜೂನ್ ನಲ್ಲಿ ಮತ್ತೆ ವೃಶ್ಚಿಕಕ್ಕೆ ಶನಿ ಪ್ರವೇಶ, ಹನ್ನೆರಡು ರಾಶಿಗಳ ಫಲಾಫಲ ಏನು?]

ಇನ್ನು ನೀವು ಜನ್ಮ ಸಮಯ 12.30 ಎಂದು ತಿಳಿಸಿದ್ದೀರಿ ಹಗಲೋ ರಾತ್ರಿಯೋ ತಿಳಿಸಿಲ್ಲ. ಅದು ಮಧ್ಯರಾತ್ರಿ ಆಗಿದ್ದಲ್ಲಿ ಕರ್ಕಾಟಕ ಲಗ್ನ ಆಗುತ್ತದೆ. ಆಗಲೂ ಸಪ್ತಮಾಧಿಪತಿ ಶನಿ ಆಗಿ ವಿವಾಹ ನಿಧಾನ ಎಂದು ಸೂಚಿಸುತ್ತದೆ. ಇನ್ನು ಮಧ್ಯಾಹ್ನ ಆಗಿದ್ದಲ್ಲಿ ಧನುರ್ ಲಗ್ನ ಸೂಚಿಸುತ್ತದೆ. ಆಗ ಸಪ್ತಮದಲ್ಲಿ ರಾಹು ಇದ್ದು ವಿವಾಹಕ್ಕೆ ವಿಘ್ನ ಉಂಟು ಮಾಡುತ್ತಾನೆ.

ಇನ್ನು ಜಾತಕದಲ್ಲಿ ಕಾಳ ಸರ್ಪ ದೋಷವಿದೆ ಅದೂ ಸಹ ವಿವಾಹ ಪ್ರತಿ ಬಂಧಕವೇ ಆಗುತ್ತದೆ. ಗಮನಿಸಿ :- ಕಾಳ ಸರ್ಪ ದೋಷ ಪರಿಹಾರಕ್ಕಾಗಿ ಕಾಳಹಸ್ತಿಗೆ ಹೋಗಿ ಬಂದಾಗಿದೆ ಎಂದು ನೀವು ಹೇಳಬಹುದು. ಆದರೆ ನಿಮ್ಮ ಗಮನಕ್ಕಾಗಿ ಹೇಳುತ್ತಿದ್ದೇನೆ ಕಾಳ ಸರ್ಪ ದೋಷಕ್ಕೂ ಹಾಗೂ ಕಾಳಹಸ್ತಿ ದಿವ್ಯ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕಾಳಹಸ್ತಿ ಶಿವನ ದಿವ್ಯ ಶಕ್ತಿ ಸನ್ನಿಧಿಗಳಲ್ಲಿ ಒಂದು. ಅಲ್ಲಿ ಹೋದರೆ ಪುಣ್ಯ ಬರುತ್ತದೆ ಒಳ್ಳೆಯದೇ ಆಗುತ್ತದೆ.

ಇನ್ನು ನಿಮ್ಮ ಸಹೋದರನ ಜಾತಕದ ದೋಷಗಳ ಪರಿಹಾರವಾಗಿ ವಿವಾಹ ಸಿದ್ದಿ ಆಗಬೇಕಿದ್ದಲ್ಲಿ ಶಾಸ್ತ್ರಬದ್ಧವಾಗಿ ಮಾಡಿಸಲೇಬೇಕಾದ ಪರಿಹಾರ ಮಾರ್ಗಸೂಚಿಯ ಲಿಸ್ಟ್ ಉದ್ದ ಇದೆ. ಆದರೂ ಶ್ರದ್ಧೆ ನಂಬಿಕೆ ಇಟ್ಟು ಮಾಡಿಸಿ. ಈ ವರ್ಷ ಸೆಪ್ಟೆಂಬರ್ ಒಳಗೆ ಎಲ್ಲ ದೋಷಗಳ ಪರಿಹಾರ ಮಾಡಿಸಿ ಬಿಟ್ಟರೆ, ಸೆಪ್ಟೆಂಬರ್ ನಂತರ ಗುರುಬಲ ಬರುತ್ತದೆ ಆಗ ದೈವಾನುಗ್ರಹದಿಂದ ವಿವಾಹ ಆಗಬಹುದು.

1) ಕಾಳ ಸರ್ಪ ದೋಷ ಪರಿಹಾರ ಶಾಂತಿ ಹವನ.
2) ಶುಕ್ರ ಗ್ರಹ ಜಪ ಸಹಿತ ಶುಕ್ರ ಶಾಂತಿ ಹವನ
3) ದುರ್ಗಾ ಸೂಕ್ತ ಹವನ
4) ಗುರು ಶಾಂತಿ ಹವನ
5) ಕೃಸರಾನ್ನ ದ್ರವ್ಯ ಹಾಗೂ ಶಮಿ ಸಮಿಧದಲ್ಲಿ ಶನಿ ಶಾಂತಿ ಹವನ.

ಈ ಹವನಗಳನ್ನು ಮಾಡಿಸಲೇಬೇಕು. ಇನ್ನು ಶೀಘ್ರ ಹಾಗೂ ಉತ್ತಮ ವಿವಾಹ ಸಿದ್ದಿಗಾಗಿ ಕೇರಳೀಯ ತಂತ್ರದಲ್ಲಿ "ಬಾಲ ಗಣಪತಿ ಹವನ" ಮಾಡಿಸಬಹುದು. (ಇದು ಆಪ್ಶನಲ್ ಅಷ್ಟೆ). ಇನ್ನು ತಿಂಗಳಿಗೊಮ್ಮೆ ಯಾವುದಾದರೂ ಶುಕ್ರವಾರ ಅವರು ವಾಸ ಮಾಡುವ ಮನೆಯಲ್ಲಿ ಅಥವಾ ದೇಗುಲದಲ್ಲಿ ಸಂಪುಟೀ ವಿಧಾನದಲ್ಲಿ ಶ್ರೀ ಸಪ್ತಶತೀ ಚಂಡಿಕಾ ಪಾರಾಯಣ ಮಾಡಿಸಬೇಕು. {ಸಂಪುಟಿ ವಿಧಾನಕ್ಕೆ ಶ್ಲೋಕ :- ಪತ್ನೀಂ ಮನೋರಮಾಂ ದೇಹಿ ...ಪೂರ್ಣ ಶ್ಳೋಕ}. ಒಮ್ಮೆ ನಿಮ್ಮ ಸಹೋದರ ನನ್ನನ್ನು ಭೇಟಿ ಮಾಡಿದರೆ ಇನ್ನೂ ಉತ್ತಮ.

ಈಮೇಲ್ ವಿಳಾಸ : shreepandithji@gmail.com
ಮೊಬೈಲ್ ಸಂಖ್ಯೆ
: 98456 82380

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahu and Ketu in modern days have most influence on a person's horoscope. Out of many combinations of rahu – ketu placements in a horoscope, all planets being within rahu – ketu and rest 7 houses being empty is said to Kalasarpa yoga or dosha.
Please Wait while comments are loading...