ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?

Posted By:
Subscribe to Oneindia Kannada

ಕಳೆದ ವರ್ಷ ಆಗಸ್ಟ್ ನಲ್ಲಿ ಗುರು ಕನ್ಯಾ ರಾಶಿಯನ್ನು ಪ್ರವೇಶಿಸಿತ್ತು. ಈ ವರ್ಷದ ಸೆಪ್ಟೆಂಬರ್ ವರೆಗೆ ಅದೇ ರಾಶಿಯಲ್ಲಿರುತ್ತದೆ. ಈ ವರೆಗೆ ಗುರು ಯಾವ ರೀತಿ ಗೋಚಾರ ಫಲ ನೀಡಿದೆ ಅನ್ನೋದು ಒಂದು ಕಡೆಯಾಯಿತು. ಇನ್ನು ಮೂರು-ಮೂರೂವರೆ ತಿಂಗಳು ಏನು ಫಲ ನೀಡುತ್ತದೆ ಅನ್ನೋದನ್ನು ತಿಳಿಯುವುದಕ್ಕೆ ಮತ್ತೊಮ್ಮೆ ಓದಿಕೊಳ್ಳಿ.

*********

ಸೌರಮಂಡಲದಲ್ಲೇ ದೊಡ್ಡ ಗ್ರಹ ಗುರು. ಈ ಗ್ರಹವು ಆಗಸ್ಟ್ 11ರಂದು ಸಿಂಹರಾಶಿಯಿಂದ ಕನ್ಯಾರಾಶಿಯನ್ನು ಪ್ರವೇಶಿಸಿದ್ದು, 2017ರ ಸೆಪ್ಟೆಂಬರ್ 12ರ ವರೆಗೆ ಅದೇ ರಾಶಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ಯಾವ ರಾಶಿಯವರಿಗೆ ಎಂಥ ಫಲ ನೀಡುತ್ತದೆ ಎಂಬುದನ್ನು ತಿಳಿಸಲಾಗುವುದು.

ಗೋಚಾರ ಫಲವನ್ನು ರಾಶಿಯಿಂದ ನೋಡಬೇಕೋ ಅಥವಾ ಲಗ್ನದಿಂದ ನೋಡಬೇಕೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಎರಡರ ಮೂಲಕವೂ ಗಮನಿಸಬೇಕು. ರಾಶಿಯಿಂದ ಉತ್ತಮ ಫಲವಿದ್ದರೂ ಲಗ್ನದಿಂದ ಉತ್ತಮ ಫಲ ನೀಡದಿರಬಹುದು. ಅದೇ ರೀತಿ ಲಗ್ನಕ್ಕೆ ಉತ್ತಮವಾಗಿದ್ದರೂ ರಾಶಿಗೆ ಉತ್ತಮ ಫಲ ನೀಡದ ಸಾಧ್ಯತೆ ಇರುತ್ತದೆ.

ಇದರ ಜತೆಗೆ ಆಯಾ ವ್ಯಕ್ತಿಗೆ ಯಾವ ಮಹರ್ದಶೆ ನಡೆಯುತ್ತಿದೆ ಎಂಬುದರ ಆಧಾರದಲ್ಲೂ ಶುಭಾಶುಭ ಫಲಗಳು ನಿರ್ಧಾರವಾಗುತ್ತವೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

ಮೇಷ

ಮೇಷ

ಸೇವಾವಲಯದಲ್ಲಿ ಕೆಲಸ ಮಾಡುವ ಈ ರಾಶಿಯವರಿಗೆ ಉತ್ತಮ ಫಲ ದೊರೆಯುತ್ತದೆ. ಆದರೆ ವ್ಯಾಪಾರಿಗಳಿಗೆ ಸಾಧಾರಣವಾಗಿರುತ್ತದೆ. ಸಾಮರ್ಥ್ಯ ವೃದ್ಧಿಸುತ್ತದೆ. ಕೆಲಸದ ಮೂಲಕವೇ ಅನುಕೂಲ ಅರಸಿ ಬರುತ್ತದೆ. ನಿಮ್ಮ ಕೌಶಲದ ಪರಿಚಯ ಸಹೋದ್ಯೋಗಿಗಳಿಗೆ ಆಗುತ್ತದೆ. ನಿಮ್ಮ ಜಾತಕದಲ್ಲಿ ಗುರು-ಬುಧ ಕ್ರೂರವಾಗಿದ್ದರೆ ಕೆಲಸ ಹಾಗೂ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಈ ಎರಡೂ ಗ್ರಹಗಳು ಉತ್ತಮ ಸ್ಥಾನದಲ್ಲಿದ್ದರೆ ಬಡ್ತಿ ಸಿಗುವ ಸಾಧ್ಯತೆ ಇದೆ. ಜತೆಗೆ ಆಸ್ತಿ ಖರೀದಿಸಲಿದ್ದು, ಸಂಪಾದನೆಯಲ್ಲಿ ಹೆಚ್ಚಳವಾಗುತ್ತದೆ. [ಮೇಷ ವರ್ಷ ಭವಿಷ್ಯ : ಹರ್ಷದ ಸಮಯ ಅನುಭವಿಸಲು ಸಿದ್ಧರಾಗಿ]

ವೃಷಭ

ವೃಷಭ

ಈ ರಾಶಿಯವರು ಎಲ್ಲ ರಂಗದಲ್ಲೂ ಯಶಸ್ಸು ಪಡೆಯುತ್ತಾರೆ. ಸುಖವನ್ನು ಅನುಭವಿಸುತ್ತಾರೆ. ಸಂಬಂಧ ವೃದ್ಧಿಯಾಗುತ್ತದೆ, ಲಾಭ ಗಳಿಸುತ್ತಾರೆ, ನಿಮ್ಮ ಕ್ರಿಯೇಟಿವಿಟಿಗೆ ಮನ್ನಣೆ ದೊರೆಯುತ್ತದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಂತಾನ ಭಾಗ್ಯ ನಿರೀಕ್ಷಿಸುತ್ತಿರುವವರಿಗೆ ಉತ್ತಮ ಫಲ ಇದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದ್ದರೆ ಹೆಚ್ಚು ಲಾಭವಾಗುತ್ತದೆ. ಜತೆಗೆ ಸಟ್ಟಾ ವ್ಯವಹಾರದಲ್ಲೂ ಉತ್ತಮ ಲಾಭವಾಗುತ್ತದೆ. ವಿಶೇಷವಾಗಿ ಕಲಾವಿದರಿಗೆ ಹೆಚ್ಚಿನ ಯಶಸ್ಸು,ಶ್ರೀಮಂತಿಕೆ ದೊರೆಯಲಿದೆ. ಪ್ರೀತಿ, ಪ್ರೇಮ, ಪ್ರಣಯದ ವಿಚಾರದಲ್ಲಿ ಮುನ್ನಡೆ ಇದೆ. ಒಟ್ಟಾರೆ ಯಶಸ್ಸು, ಸಮೃದ್ಧಿ, ಸುಖವನ್ನು ಗುರು ದಯಪಾಲಿಸುತ್ತಾನೆ. [ವೃಷಭ ವರ್ಷಭವಿಷ್ಯ : ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ]

ಮಿಥುನ

ಮಿಥುನ

ಈ ರಾಶಿಯವರು ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಈ ಅವಧಿಯಲ್ಲಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ.ಈ ವರ್ಷ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ದೊಡ್ಡ ಮನೆ ಕಟ್ಟಿಸಬೇಕು ಎಂದುಕೊಂಡವರು, ಖರೀದಿಸಬೇಕು ಎಂದುಕೊಂಡವರು ಅಥವಾ ಹೊಸ ಸ್ಥ ಳಕ್ಕೆ ಹೋಗಬೇಕು ಎಂದುಕೊಂಡವರ ಆಶೆ ನೆರವೇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭವಿದೆ. ಹೊಸ ವಾಹನ, ಆಸ್ತಿ ಮತ್ತು ಸಂತೋಷದ ಕ್ಷಣಗಳು ನಿಮ್ಮ ಪಾಲಿಗಿವೆ. ವೃತ್ತಿಯಲ್ಲಿ ಮುನ್ನಡೆಯಿದೆ. ದೀರ್ಘಾವಧಿ ಹಣಕಾಸು ಯೋಜನೆ ರೂಪಿಸಲು ಇದು ಸಕಾಲ. [ಮಿಥುನ ವರ್ಷಭವಿಷ್ಯ: ಏರಿಳಿತವಿಲ್ಲದ ಸರಳರೇಖೆಯಂತೆ ಬದುಕು]

ಕರ್ಕಾಟಕ

ಕರ್ಕಾಟಕ

ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇದು ಸಕಾಲ. ಗುರುವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತಾನೆ. ಸ್ನೇಹಿತರು, ಕುಟುಂಬದವರು, ಅದರಲ್ಲೂ ಸಹೋದರ-ಸಹೋದರಿಯರು ನೆರವಿಗೆ ಬರುತ್ತಾರೆ. ಆಲೋಚನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಂಡಿಸುತ್ತೀರಿ. ಹಿಂದಿಗಿಂತಲೂ ಆಲೋಚನಾ ಶಕ್ತಿ, ಮಾತು ಚುರುಕಾಗುತ್ತದೆ. ಇದರ ಅನುಕೂಲವನ್ನು ಪಡೆಯಲು ಇದು ಸಕಾಲ. ಹೊಸ ವ್ಯವಹಾರದಲ್ಲಿ ಹಣ ಹೂಡಿದವರಿಗೆ ಲಾಭವಾಗುತ್ತದೆ. ಪುಣ್ಯಕ್ಷೇತ್ರಗಳ ದರ್ಶನವಿದೆ. ಮೂರನೇ ಸ್ಥಾನದಲ್ಲಿರುವ ಗುರು ನಂಬಿಕೆ ಹಾಗೂ ಸಹೋದರರಿಂದ ಸಹಕಾರ ದೊರಕಿಸುತ್ತಾನೆ.ಈ ರಾಶಿಯ ಸಾಹಿತಿಗಳು, ಬರಹಗಾರರು, ಶಿಕ್ಷಕರಿಗೆ ಹೆಚ್ಚಿನ ಪ್ರಗತಿಯಿದೆ. [ಕರ್ಕಾಟಕ ವರ್ಷ ಭವಿಷ್ಯ: ಪಟ್ಟ ಕಷ್ಟ ಮಾಯವಾಗಿ, ಸುಖ ನಿರೀಕ್ಷಿಸಿ]

ಸಿಂಹ

ಸಿಂಹ

ಆದಾಯದಲ್ಲಿ ಹೆಚ್ಚಳವಾಗಲಿದೆ. ಆಸ್ತಿ, ಮನೆ ವಿಸ್ತರಣೆ ಇದೆ. ಹೂಡಿಕೆಗೆ, ಉಳಿತಾಯಕ್ಕೆ ಇದು ಸೂಕ್ತ ಸಮಯ. ಕಳೆದ ಕೆಲ ವರ್ಷದಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜಾತಕದಲ್ಲಿ ಗುರು ನೀಚನಾಗಿದ್ದರೆ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುತ್ತವೆ. ಕಲಹಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಸಾಲ ಕೊಡುವ ಹಾಗೂ ಪಡೆಯುವ ವಿಚಾರದಲ್ಲಿ ಹುಷಾರಾಗಿರಬೇಕು. ವೃತ್ತಿಯಲ್ಲಿರುವವರಿಗೆ, ವ್ಯಾಪಾರಸ್ಥರಿಗೆ ಉತ್ತಮವಾಗಿರುತ್ತದೆ.
ಸಂಬಳ ಹೆಚ್ಚಳದ ಸಾಧ್ಯತೆ ಇದ್ದು, ಸಕಾರಾತ್ಮಕ ನಂಬಿಕೆ ಧೋರಣೆ ಬೆಳವಣಿಗೆಗೆ ಪೂರಕವಾಗುತ್ತದೆ.

ಕನ್ಯಾ

ಕನ್ಯಾ

ವಿವಿಧ ರಂಗಗಳಲ್ಲಿ ಈ ರಾಶಿಯವರು ಯಶಸ್ಸು ಹಾಗೂ ಅವಕಾಶ ಪಡೆಯುತ್ತಾರೆ. ಹಲವು ವರ್ಷಗಳಿಂದ ಬಾಕಿಯಿದ್ದ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಮುನ್ನಡೆ, ಸಂಪತ್ತು, ವ್ಯವಹಾರ, ವಿದೇಶ ಪ್ರವಾಸ, ಸಂತಾನ ಹೀಗೆ ವಿವಿಧ ಶುಭ ಫಲಗಳಿವೆ.
ವಿವಾಹಕ್ಕೆ ಇದು ಯೋಗ್ಯ ಕಾಲ. ಒಟ್ಟಾರೆ ಇದು ಹೊಸ ಬದುಕಿನ ಆರಂಭ. ನಿಮ್ಮ ಈಗಿನ ನಿರ್ಧಾರಗಳು ಮುಂಬರುವ ಹಲವು ವರ್ಷಗಳ ಕಾಲ ಉತ್ತಮ ಫಲ ನೀಡುತ್ತವೆ. ಅವಕಾಶಗಳು ಬಂದಾಗ ಸದುಪಯೋಗ ಮಾಡಿಕೊಳ್ಳಬೇಕು. ಇದೇ ವೇಳೆ ಪುಣ್ಯಕ್ಷೇತ್ರಗಳಿಗೆ ಭೇಟಿ ಇದೆ. ದೀರ್ಘಾವಧಿ ಯೋಜನೆ ರೂಪಿಸಲು ಇದು ಸಕಾಲ. ಹೊಸ ವ್ಯವಹಾರಗಳು ಲಾಭ ತಂದುಕೊಂಡಲಿವೆ. ಜೀವನದ ಬಗೆಗಿನ ದೃಷ್ಟಿಕೋನವೇ ಬದಲಾಗಲಿದೆ.

ತುಲಾ

ತುಲಾ

ವಿದೇಶದಲ್ಲಿ ದೀರ್ಘಾವಧಿಗೆ ಕೆಲಸ ನಿರ್ವಹಿಸುವ ಸಾಧ್ಯತೆ ಇದೆ. ಇದರಿಂದಲೇ ಅನುಕೂಲವಾಗುವ ಸಾಧ್ಯತೆಗಳಿವೆ. ಬುಧ-ಗುರು ಗ್ರಹ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಮಾತ್ರ ಈ ಫಲಗಳು ದೊರೆಯುತ್ತವೆ. ಒಂದು ವೇಳೆ ದುಸ್ಥಾನದಲ್ಲಿದ್ದರೆ ಹಣ ಕಾಸು ನಷ್ಟ, ದುಂದು ವೆಚ್ಚ ಆಗುತ್ತದೆ. ಅಧ್ಯಾತ್ಮ ವಿಚಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಧಾರ್ಮಿಕರಾಗಿರುತ್ತಾರೆ. ನೆಮ್ಮದಿ ಹೆಚ್ಚುತ್ತದೆ. ಆಗಸ್ಟ್ ತಿಂಗಳಲ್ಲಿ ಪ್ರೀತಿ, ಪ್ರೇಮ-ಪ್ರಣಯ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಸೆಪ್ಟೆಂಬರ್ ನಲ್ಲಿ ನಡವಳಿಕೆ ಹಾಗೂ ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸುತ್ತದೆ. ಗುರು-ಬುಧ ಜಾತಕದಲ್ಲಿ ದುಸ್ಥಾನದಲ್ಲಿದ್ದರೆ ಏಕಾಂಗಿತನ, ದುಂದುವೆಚ್ಚ, ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ.

ವೃಶ್ಚಿಕ

ವೃಶ್ಚಿಕ

ಗುರುವು ಲಾಭ ತಂದುಕೊಡುತ್ತದೆ. ಗೆಳೆಯರ ಸಂಖ್ಯೆ ಹೆಚ್ಚಲಿದೆ. ಈ ವರ್ಷ ಆರ್ಥಿಕವಾಗಿ ಉತ್ತಮ ಫಲಗಳು ಕಂಡುಬರುತ್ತವೆ. ಸಂಪಾದನೆಯ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಎಲ್ಲ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ. ಸಂತಾನ ಮತ್ತಿತರ ಶುಭ ಕಾರ್ಯಗಳು ಮನೆಯಲ್ಲಿ ನಡೆಯಲಿವೆ. ಬಹು ವರ್ಷದ ಗುರಿ, ಕನಸುಗಳು ಈಡೇರಲಿವೆ. ವ್ಯವಹಾರ, ವೃತ್ತಿಯಲ್ಲಿ ಸಂಪಾದನೆ ಹೆಚ್ಚಾಗಲಿದೆ. ಹೊಸ ವೃತ್ತಿ ಹಾಗೂ ವ್ಯವಹಾರದಲ್ಲಿ ಹೊಸ ಅವಕಾಶಗಳು ಬರಲಿವೆ. ಸಹಾಯ ಮಾಡಬಹುದಾದ ವ್ಯಕ್ತಿಗಳ ಸಂಪರ್ಕ ದೊರೆಯಲಿದೆ. ಆಕ್ಟೋಬರ್ ನಂತರ ಹೆಚ್ಚಿನ ಶುಭ ಫಲವಿದೆ.

ಧನಸ್ಸು

ಧನಸ್ಸು

ವೃತ್ತಿಯಲ್ಲಿ ಮುನ್ನಡೆ, ಉತ್ತಮ ಸ್ಥಾನ-ಮಾನ, ಕೀರ್ತಿ ದೊರೆಯುತ್ತದೆ. ಮೇಲಧಿಕಾರಿಗಳು ಗುರುತಿಸಲು ಆರಂಭಿಸುತ್ತಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರವಾಸಗಳು ಯಶಸ್ಸು ತಂದುಕೊಂಡುತ್ತವೆ. ಬಡ್ತಿ, ಹೊಸ ಉದ್ಯೋಗಾವಕಾಶ, ಮದುವೆ, ಪ್ರಶಸ್ತಿಗಳು ದೊರೆಯುವ ಸಾಧ್ಯತೆಗಳಿವೆ. ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯಕ್ಕೆ ಅನುಸಾರವಾಗಿ ಫಲಗಳು ದೊರೆಯಲಿವೆ.

ಮಕರ

ಮಕರ

ಇಷ್ಟು ಕಾಲ ಹೇಗಿರಬೇಕು ಎಂದು ಬಯಸಿದಿರೋ ಅದರಂತೆ ಬದುಕುತ್ತೀರಿ. ಮುಖ್ಯವಾದ ಗುರಿಯೊಂದು ಕಾಯುತ್ತಿದ್ದು, ಅದನ್ನು ಸಾಧಿಸಬಹುದು. ವಿವಿಧ ರಂಗದ ಅಸಕ್ತಿಕರ ವ್ಯಕ್ತಿಗಳ ಭೇಟಿಯಾಗುತ್ತದೆ. ದೂರ ಪ್ರಯಾಣವಿದೆ, ಕಲಿಕೆಗೆ ಇದು ಉತ್ತಮ ಸಮಯ. ಸಾರ್ವಜನಿಕರಂಗದಲ್ಲಿ ಮನ್ನಣೆಯಿದೆ. ಒತ್ತಡ ಕಡಿಮೆಯಾಗುತ್ತದೆ. ಸಂಬಂಧ ವೃದ್ಧಿಸುತ್ತದೆ. ವಿದೇಶ ಪ್ರವಾಸದ ಸಾಧ್ಯತೆಯಿದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕಳೆದ ವರ್ಷ ಅನುಭವಿಸಿದ ಕಷ್ಟಗಳು ಕರಗಲಿವೆ.

ಕುಂಭ

ಕುಂಭ

ಎಂಟನೇ ಸ್ಥಾನಕ್ಕೆ ಗುರು ಪ್ರವೇಶವಾಗಿದೆ. ಪಿತ್ರಾರ್ಜಿತ ಆಸ್ತಿ, ಸಾಲ, ಲೈಂಗಿಕತೆ ಮತ್ತಿತರ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ಈ ರಾಶಿಯವರ ಪತ್ನಿ ಅಥವಾ ಪತಿಯ ಆದಾಯದಲ್ಲಿ ಹೆಚ್ಚಳವಾಗಲಿದೆ.
ವ್ಯಾಸಂಗ ಹಾಗೂ ಸಂಶೋಧನೆಗೆ ಇದು ಸೂಕ್ತ ಕಾಲ. ಗುರು ಗ್ರಹವು ಬುಧನ ಮನೆಯಲ್ಲಿರುವುದರಿಂದ ಸಾಂಸಾರಿಕ ಸುಖ ಇರುತ್ತದೆ.

ಮೀನ

ಮೀನ

ಪ್ರಾಪ್ತ ವಯಸ್ಕರಿಗೆ ವಿವಾಹ ಸಾಧ್ಯತೆಗಳಿವೆ. ಪಾಲುದಾರಿಕೆ ವ್ಯವಹಾರ ಲಾಭ ತಂದುಕೊಡುತ್ತದೆ. ದಂಪತಿ ಮಧ್ಯೆ ಸಾಮರಸ್ಯ ಹೆಚ್ಚುತ್ತದೆ. ಸಾರ್ವಜನಿಕ ವಲಯದಲ್ಲಿ ಮನ್ನಣೆ ದೊರೆಯುತ್ತದೆ. ವೃತ್ತಿ ಮುನ್ನಡೆ, ಗೌರವ, ಸಾಮಾಜಿಕ ಸ್ಥಾನ-ಮಾನ ಹೆಚ್ಚಲಿದೆ.
ಈ ವರ್ಷ ವಿದೇಶ ಪ್ರವಾಸ ಯೋಗವಿದೆ. ದೊಡ್ಡ ಮಟ್ಟದ ಲಾಭ, ಅನುಕೂಲಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jupiter transition impact on zodiac signs. Transit of planet Jupiter, harbinger of love and biggest planet in the solar system, will surely have big impact on your life. The transit in Virgo zodiac sign will be from 11ht August 2016 to 12th September 2017.
Please Wait while comments are loading...