ಗೌರಿ ಗದ್ದೆ ಗ್ರಾಮದ ವಿನಯ್ ಅವಧೂತರೋ, ಜ್ಯೋತಿಷಿಯೋ?
ಸ್ಪೀಕರ್ ರಮೇಶ್ ಕುಮಾರ್ ಅವರು ಚಿಕ್ಕ ಪ್ರಾಯದ ವ್ಯಕ್ತಿಯೊಬ್ಬರಿಗೆ ಪಾದಪೂಜೆ ಮಾಡಿದ ವಿಡಿಯೋ ಬಹಳ ವೈರಲ್ ಆಯಿತು. ಆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಆ ನಂತರ ಮಾಧ್ಯಮಗಳು ಸಣ್ಣ ವಯಸ್ಸಿನ ಆ ವ್ಯಕ್ತಿಯ ಪೂರ್ವಾಪರದ ಬಗ್ಗೆ ತಿಳಿಯಲು ಪೈಪೋಟಿ ನಡೆಸಿದವು. ಅವರ ಹೆಸರು ವಿನಯ್. ಎಲ್ಲರೂ ವಿನಯ್ ಗುರೂಜಿ ಎಂದರು.
ಅವರು ವಾಸಿಸುವ ಆ ಪುಟ್ಟ ಗ್ರಾಮದ ಹೆಸರು ಗೌರಿ ಗದ್ದೆ. ಶೃಂಗೇರಿಯ ಹರಿಹರಪುರದಿಂದ ಐದು ಕಿ.ಮೀ. ದೂರದಲ್ಲಿರುವ ಗ್ರಾಮವದು. ಅಲ್ಲಿನ ಆಶ್ರಮದಲ್ಲಿ ವಾಸಿಸುವ ಅವರ ಹೆಸರು ವಿನಯ್. ಇಪ್ಪತ್ತೆಂಟು- ಇಪ್ಪತ್ತೊಂಬತ್ತರ ಪ್ರಾಯ. ಟೀ ಷರ್ಟ್- ಬರ್ಮುಡಾ ಹಾಕಿಕೊಂಡು, ಗಿಡಗಳಿಗೆ ನೀರು ಹಾಕುತ್ತಲೋ ಅಥವಾ ತಮ್ಮ ಕೆಲಸವನ್ನು ಮಾಡುತ್ತ ಕಾಣಸಿಗುತ್ತಾರೆ
ಅವರನ್ನು ಪ್ರೀತಿಯಿಂದ ವಿನಯ್ ಅಣ್ಣ ಅನ್ನೋರಿದ್ದಾರೆ. ಕೆಲವರು ವಿನಯ್ ಸ್ವಾಮೀಜಿ ಅಂತಾರೆ. ಏನೆಂದು ಕರೆದರೂ ಅವರದು ಮಾತ್ರ ನಿರ್ಲಿಪ್ತ ಭಾವ. ಅಂದಹಾಗೆ ಆ ಆಶ್ರಮದಲ್ಲಿ ಜಾತಿ-ಮತ-ಕುಲಗಳ ಸೋಂಕಿಲ್ಲ. ಕಳೆದ ಒಂದು ವಾರದಿಂದ ಈಚೆಗೆ ಮಾಧ್ಯಮಗಳು ಅವರನ್ನು ಹೆಚ್ಚು ಪ್ರಚಾರಕ್ಕೆ ತಂದಿವೆ. ಆ ಕಾರಣಕ್ಕೆ ಮುಂಚೆ ಎಲ್ಲರಿಗೂ ಸಿಗುತ್ತಿದ್ದ ವಿನಯ್ ರ ಆಲೋಚನೆಗೆ, ಅವರಷ್ಟಕ್ಕೆ ಬದುಕುವ ಅವಕಾಶಕ್ಕೆ ತಡೆಯಾಗಿ, ಅವರನ್ನು ಭೇಟಿ ಅವಕಾಶ ಈಗ ದುರ್ಲಭವಾಗಿದೆ.
ದೂರವಾಣಿ ಕರೆ ಮಾಡಿದರೆ, ಇನ್ನೊಂದು ತಿಂಗಳು ಅವರ ಭೇಟಿ ಅಸಾಧ್ಯ ಎಂಬ ಉತ್ತರ ಬರುತ್ತದೆ. ಎಂಜಿನಿಯರಿಂಗ್ ಪದವೀಧರರಾದ ವಿನಯ್ ಅವರಿಗೆ ಲಕ್ಷಾಂತರ ರುಪಾಯಿ ಸಂಬಳದ ಕೆಲಸ ಇತ್ತಂತೆ. ಕಾಲೇಜು ದಿನಗಳಲ್ಲಿ ಎಲ್ಲ ಹುಡುಗರಂತೆ ಸಿಗರೇಟು ಸೇದುತ್ತಿದ್ದರಂತೆ. ಗೆಳತಿ ಇದ್ದರಂತೆ. ತೀರ್ಥಹಳ್ಳಿಯ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿಯೂ ಇದ್ದರಂತೆ.
ಇವೆಲ್ಲ ಮಾಹಿತಿಯನ್ನೂ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆ ವಿಡಿಯೋ ಯೂ ಟ್ಯೂಬ್ ನಲ್ಲಿದೆ. ಹಣವನ್ನು ಎಣಿಸಬಾರದು ಎಂದು ತಮ್ಮ ಪರ್ಸ್ ನಿಂದ ದುಡ್ಡನ್ನೇ ಬಿಸಾಡಿ ಬಹಳ ವರ್ಷಗಳಾಗಿವೆ ಎಂಬುದನ್ನು ಸಹ ಅವರೇ ಹೇಳಿಕೊಂಡಿದ್ದಾರೆ. ಗೌರಿಗದ್ದೆಯ ಸುತ್ತ ಮುತ್ತಲ ಜನರು ಅವರನ್ನು ಅವಧೂತರು ಎಂದು ಕೂಡ ಕರೆಯುತ್ತಾರೆ. ವಿನಯ್ ರನ್ನು ಭೇಟಿ ಮಾಡುವ ಬಹುತೇಕರದು ಅದೇ ಅಭಿಪ್ರಾಯ.

ಇಷ್ಟವಾದ ತಿಂಡಿಯ ಹೆಸರು ಹೇಳದೇ ತರಿಸಿಕೊಟ್ಟರು
ಚಿಕ್ಕಮಗಳೂರಿನ ಪತ್ರಕರ್ತರೊಬ್ಬರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿತು. ವಿನಯ್ ಅವರ ಬಗ್ಗೆ ಪ್ರಶ್ನೆ ಕೇಳಿತು. "ಅವರಿನ್ನೂ ಚಿಕ್ಕಪ್ರಾಯದವರು. ಈ ಹಿಂದೆ ಸಖರಾಯಪಟ್ಟಣದ ಅವಧೂತರು ಇದ್ದರು. ನಾನು ಅವರನ್ನು ನೋಡಿದ್ದೇನೆ. ಅವರ ಬಗ್ಗೆ ಬಹಳ ಭಕ್ತಿ ಇತ್ತು. ಇವರಿಗೆ ಇನ್ನೂ ಚಿಕ್ಕ ವಯಸ್ಸು. ಆದರೆ ನಾನು ಕುಟುಂಬ ಸಮೇತ ಅಲ್ಲಿಗೆ ಒಮ್ಮೆ ಹೋಗಿದ್ದೆ. ಅವರ ಆಶ್ರಮದಲ್ಲಿ ದುಡ್ಡು- ಕಾಸಿನ ವ್ಯವಹಾರಗಳಿಲ್ಲ. ಈ ಪೂಜೆ ಮಾಡಿಸು- ಆ ಹೋಮ ಮಾಡಿಸು ಎಂಬ ಒತ್ತಾಯ ಇಲ್ಲ. ನನ್ನ ಮಗನಿಗೆ ಕೆಲವು ಸರಳ ಸಲಹೆಗಳನ್ನು ನೀಡಿದರು. ನಾವು ಒಂದೇ ಒಂದು ಮಾತನಾಡದೆ, ನನ್ನ ಸೊಸೆಗೆ ಇಷ್ಟವಾದ ತಿಂಡಿಯನ್ನು ತರಿಸಿಕೊಟ್ಟರು ಎಂದು ತಮ್ಮ ಅನುಭವ ಹಂಚಿಕೊಂಡರು.

ಸ್ವಾಮಿಜಿ, ಜ್ಯೋತಿಷಿ ಅಂತೆಲ್ಲ ಕರೆಯಬೇಡಿ
ಇನ್ನು ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ ಅವರ ಅನುಭವ ಮತ್ತಷ್ಟು ಆಸಕ್ತಿಕರ. "ಅವರನ್ನು ಸ್ವಾಮೀಜಿ ಅಂತಲೋ, ಜ್ಯೋತಿಷಿ ಅಂತಲೋ ದಯವಿಟ್ಟು ಕರೆಯಬೇಡಿ. ಅವರೊಂದು ಶಕ್ತಿ. ನಾಲ್ಕು ವರ್ಷದಿಂದ ಅವರ ಬಳಿಗೆ ನಾನು ದರ್ಶನಕ್ಕೆ ಹೋಗುತ್ತಿದ್ದೇನೆ. ಗಾಂಧಿ ತತ್ವವನ್ನು ಅವರ ಆಶ್ರಮದಲ್ಲಿ ಚೆನ್ನಾಗಿ ಅನುಸರಿಸುತ್ತಿದ್ದಾರೆ. ಅಲ್ಲಿಗೆ ಹೋಗುವವರ ಬಳಿಯಲ್ಲಿ ಏನು ಸಮಸ್ಯೆ ಎಂದು ಕೇಳದೆ, ತಾವೇ ತಿಳಿಸಿ, ಅದಕ್ಕೆ ಪರಿಹಾರವೂ ಸೂಚಿಸುತ್ತಾರೆ. ನನ್ನ ಜೀವನದಲ್ಲಿ ಸಾಕಷ್ಟು ಪವಾಡಗಳನ್ನು ಅವರ ಮೂಲಕ ನೋಡಿದ್ದೀನಿ. ಅವರಿಗೆ ಮಾತ್ರ ಅಲ್ಲ, ಅವರ ಇಡೀ ಆಶ್ರಮದಲ್ಲಿ ನಾನು- ನನ್ನದು ಎಂಬ ಅಹಂಕಾರ ನೋಡಲು ಸಾಧ್ಯವಿಲ್ಲ" ಎಂದರು.

ಬಿಸ್ಕೆಟ್- ಹಣ್ಣು ತೆಗೆದುಕೊಂಡು ಹೋಗುವುದುಂಟು
ನನ್ನ ಕೆಲವು ಸ್ನೇಹಿತರ ಮೂಲಕ ಅವರ ಬಗ್ಗೆ ತಿಳಿಯಿತು. ಮೊದಲ ಭೇಟಿಯಲ್ಲೇ ನನ್ನ ಮನಸಿನಲ್ಲಿದ್ದ ವಿಚಾರ ತಿಳಿಸಿ, ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸಿದ್ದರು. ಅದರಂತೆಯೇ ಆಯಿತು. ವಿನಯ್ ಅವರು ಎರಡು ಸಲ ನನ್ನ ಮನೆಗೆ ಬಂದಿದ್ದಾರೆ. ದೇವೇಗೌಡರ ಮನೆಗೆ ನಾನೇ ಕರೆದುಕೊಂಡು ಹೋಗಿದ್ದೀನಿ. ಕುಮಾರಸ್ವಾಮಿ ಅವರು, ದೇವೇಗೌಡರು ಆಶ್ರಮಕ್ಕೆ ಹೋಗಿಬಂದಿದ್ದಾರೆ. ಗೌರಿ ಗದ್ದೆಯ ಆಶ್ರಮಕ್ಕೆ ತೆರಳುವಾಗ ಹಣ್ಣು ಅಥವಾ ಬಿಸ್ಕೆಟ್ ಏನಾದರೂ ತೆಗೆದುಕೊಂಡು ಹೋಗಬಹುದು. ಅವುಗಳನ್ನೇ ಮತ್ತೊಬ್ಬ ಭಕ್ತರಿಗೆ ಆಶೀರ್ವಾದ ಮಾಡಿ ಕೊಟ್ಟುಬಿಡ್ತಾರೆ ಎಂದರು ಶರವಣ.

ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ವರ್ಷದ ಮುಂಚೆ ಹೇಳಿದ್ದರು
ಎಚ್.ಡಿ.ಕುಮಾರಸ್ವಾಮಿ ಅವರು ಆಶ್ರಮಕ್ಕೆ ಹೋದಾಗ, ಒಂದು ವರ್ಷದ ಹಿಂದೆಯೇ ಆಶೀರ್ವಾದ ಮಾಡಿ ಕಳುಹಿಸಿದ್ದರು. ಸಮ್ಮಿಶ್ರ ಸರಕಾರ ಬರುತ್ತದೆ ಅಂತ ಹೇಳಿದ್ದರು. ನೀವೇ ಮುಖ್ಯಮಂತ್ರಿ ಆಗುತ್ತೀರಿ ಎಂಬುದನ್ನು ಸಹ ವಿನಯ್ ಅವರು ತಿಳಿಸಿದ್ದರು. ಚುನಾವಣೆ ಫಲಿತಾಂಶದ ದಿನ ಬೆಳಗ್ಗೆ, ಬಿಜೆಪಿಗೆ ನೂರಾ ಹದಿನೈದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಿಗುತ್ತಾ ಹೋದಾಗ, ನಾನು ಅವರಿಗೆ ಕರೆ ಮಾಡಿದ್ದೆ. ಆಗ ಅವರು, ಆತಂಕ ಪಡಬೇಡಿ. ಬಿಜೆಪಿಗೆ ನೂರಾ ಮೂರು- ನೂರಾ ನಾಲ್ಕು ಸ್ಥಾನ ಬರುತ್ತದೆ. ಸಮ್ಮಿಶ್ರ ಸರಕಾರ ಬರುತ್ತದೆ. ಇದು ನನ್ನ ಮಾತಲ್ಲ, ಆ ದೈವ ಸಂಕಲ್ಪ ಅಂದಿದ್ದರು. ಅದರಂತೆಯೇ ಆಯಿತು. ಇವೆಲ್ಲ ಕೇಳಿ, ಅವರನ್ನು ಜ್ಯೋತಿಷಿ- ಸ್ವಾಮೀಜಿ ಅಂತೆಲ್ಲ ಕರೆಯಬೇಡಿ ಎಂದು ಮತ್ತೊಮ್ಮೆ ಶರವಣ ಮನವಿ ಮಾಡಿದರು.
-
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು












Click it and Unblock the Notifications