Get Updates
Get notified of breaking news, exclusive insights, and must-see stories!

ಕರ್ಕಾಟಕ ರಾಶಿಯವರಿಗೆ ಅನುಕೂಲದ ಸಮಯವಿದು, ಮೈ ಮರೆಯದಿರಿ

ಕರ್ಕಾಟಕ ರಾಶಿಯವರಿಗೆ ಇದು ಎಂಥ ಸಮಯ? ನಾಲ್ಕನೇ ಮನೆಯಲ್ಲಿದ್ದ ಗುರು ಐದನೇ ಸ್ಥಾನ ಪ್ರವೇಶಿಸಿದೆ. ಇನ್ನು ಶನಿ ಆರನೇ ಮನೆಯಲ್ಲಿದೆ. ರಾಹು ಜನ್ಮ ರಾಶಿಯಲ್ಲೇ ಇದ್ದರೆ, ಕೇತು ಏಳನೇ ಸ್ಥಾನದಲ್ಲಿದೆ. ಇವಿಷ್ಟು ಅಕ್ಟೋಬರ್ ತಿಂಗಳಲ್ಲಿ, ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಪಾಲಿನ ಗ್ರಹ ಸ್ಥಿತಿ.

ನಿಮ್ಮ ರಾಶಿಗೆ ಆರನೇ ಹಾಗೂ ಒಂಬತ್ತನೇ ಸ್ಥಾನಾಧಿಪತಿ ಗುರು. ಅಂದರೆ ಧನುಸ್ಸು ಹಾಗೂ ಮೀನ ರಾಶಿಗಳ ಅಧಿಪತಿ ಗುರು ಗ್ರಹವಾದ್ದರಿಂದ ಆ ಕಾರಕತ್ವಕ್ಕೆ ಸಂಬಂಧಿಸಿದಂತೆ ಕೆಲವು ಫಲಗಳನ್ನು ನಿಮ್ಮ ರಾಶಿಗೆ ನೀಡುತ್ತಾನೆ. ಗುರು ಹಾಗೂ ಶನಿ ಎರಡೂ ಗ್ರಹವೂ ಸದ್ಯದ ಸನ್ನಿವೇಶದಲ್ಲಿ ನಿಮಗೆ ಬಹಳ ಅನುಕೂಲಕರವಾದ ಸ್ಥಿತಿಯಲ್ಲಿವೆ.

ವೈದ್ಯಕೀಯ ಸಮಸ್ಯೆಗಳೇನೂ ಇಲ್ಲದಿದ್ದರೆ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ದೊರಕುವ ಸಮಯ ಇದು. ಇಷ್ಟು ಕಾಲ ಕಾಡುತ್ತಿದ್ದ ಕೊರತೆಗಳು ಒಂದೊಂದಾಗಿ ಕರಗುತ್ತವೆ. ತಾಯಿಯ ಜತೆಗೆ ಮನಸ್ತಾಪ ಮಾಡಿಕೊಂಡವರು ಇದ್ದರೆ, ಅದು ನಿವಾರಣೆ ಆಗುತ್ತದೆ. ಹಿರಿಯರೊಬ್ಬರು ಮಧ್ಯಸ್ಥಿಕೆ ವಹಿಸಿಕೊಂಡು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಾರೆ.

ಆದರೆ, ಮುಂದಿನ ವರ್ಷದ ಮಾರ್ಚ್ 30ರಿಂದ ಏಪ್ರಿಲ್ 23ರ ತನಕ ಮಾತಿನ ಮೇಲೆ ನಿಗಾ ಇರಲಿ. ಶತ್ರುಗಳ ಚಲನವಲನದ ಮೇಲೆ ಕಣ್ಣಿರಲಿ. ಅತಿಯಾದ ಆತವಿಶ್ವಾಸದಿಂದ ಮೈಮರೆಯುವುದು ಒಳ್ಳೆಯದಲ್ಲ.

ಉನ್ನತ ವ್ಯಾಸಂಗದಲ್ಲಿ ಪ್ರಗತಿಯಿದೆ

ಉನ್ನತ ವ್ಯಾಸಂಗದಲ್ಲಿ ಪ್ರಗತಿಯಿದೆ

ಕರ್ಕಾಟಕ ರಾಶಿಯ ವೈದ್ಯಕೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿದ್ದರೆ ಆ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ತಂದೆಯ ಕಡೆ ಸಂಬಂಧಿಯೊಬ್ಬರು ನಿಮಗೆ ನೆರವು ನೀಡುವ ಸಾಧ್ಯತೆ ಇದೆ. ಜತೆಗೆ ಶೈಕ್ಷಣಿಕ ಸಾಲಕ್ಕೆ ಅರ್ಜಿ ಹಾಕಿಕೊಂಡು, ನಾನಾ ಕಾರಣಗಳಿಂದಾಗಿ ಅದು ತಡ ಆಗುತ್ತಿದ್ದರೆ ಇನ್ನು ಮುಂದೆ ತಡೆ ನಿವಾರಣೆ ಆಗುತ್ತದೆ. ಇಷ್ಟು ಕಾಲ ಕೂಡಿಟ್ಟಿದ್ದ ಹಣ ಅಗತ್ಯಕ್ಕೆ ದೊರೆಯುತ್ತದೆ. ಅಥವಾ ಆಸ್ತಿ ಮಾರಾಟಕ್ಕೆ ಇಟ್ಟಿದ್ದರೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬೆಲೆ ದೊರೆತು, ಮನಸಿಗೆ ಸಮಾಧಾನ ಆಗುತ್ತದೆ. ಆದರೆ ಪಾರ್ಟನರ್ ಷಿಪ್ ನಲ್ಲಿ ಮಾಡಿದ್ದ ವ್ಯವಹಾರಗಳಿದ್ದರೆ ಅಂಥ ಪ್ರಗತಿ ಕಾಣುವುದಿಲ್ಲ.

ಇತರರ ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಬೇಡಿ

ಇತರರ ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಬೇಡಿ

ಬಾಳ ಸಂಗಾತಿ, ಗೆಳತಿ/ಗೆಳೆಯ ಅಥವಾ ಭಾಗೀದಾರರ ಜತೆಗೆ ಮನಸ್ತಾಪ ಆಗದಂತೆ ಎಚ್ಚರ ವಹಿಸಿ. ನಿಮಗೆ ಮೇಲ್ನೋಟಕ್ಕೆ ಕಂಡಿದ್ದ ಎಲ್ಲವೂ ಸತ್ಯ ಅಲ್ಲ. ಹೊಸದಾಗಿ ಆಗುವ ಸ್ನೇಹದ ವಿಚಾರದಲ್ಲಿ ಬಹಳ ಹುಷಾರಾಗಿ ಇರಬೇಕು. ಈ ಅವಧಿಯಲ್ಲಿ ನಿಮ್ಮಲ್ಲಿ ಅಹಂಭಾವ ಮೂಡುವ ಸಾಧ್ಯತೆಗಳಿವೆ. ನೀವು ಅಂದುಕೊಂಡಿದ್ದೇ ಸರಿ ಎಂಬ ಹಠಮಾರಿ ಧೋರಣೆಯನ್ನು ಬಿಡಬೇಕು. ಕುಟುಂಬದವರು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ವಿನಾಕಾರಣ ದೊಡ್ಡದು ಮಾಡಲು ಹೋಗಬೇಡಿ. ಒಮ್ಮೆ ಆಡಿದ ಮಾತು ಮನಸಿಗೆ ಭಾರೀ ಘಾಸಿ ಮಾಡುತ್ತದೆ. ಆ ನಂತರ ಏನೇ ಸಮಾಧಾನ ಮಾಡಿದರೂ ಪ್ರಯೋಜನ ಇಲ್ಲ.

ಆಸ್ತಿ-ಕಾರು ಖರೀದಿಗೆ ತುಂಬ ಸೂಕ್ತವಾದ ಕಾಲ

ಆಸ್ತಿ-ಕಾರು ಖರೀದಿಗೆ ತುಂಬ ಸೂಕ್ತವಾದ ಕಾಲ

ಕಾರು, ಮನೆ, ಒಡವೆ, ಭೂಮಿ, ಮನೆಯ ಅಲಂಕಾರಿಕ ವಸ್ತುಗಳು ಇವೆಲ್ಲದರ ಖರೀದಿಗೆ ಇದು ಸೂಕ್ತ ಕಾಲ. ಮಗಳು-ಮಗ, ಅಳಿಯ ಅಥವಾ ಸೊಸೆಯ ಸಲುವಾಗಿ ದೀರ್ಘಾವಧಿಗೆ ಆದಾಯ ಬರುವಂಥ ಅನುಕೂಲ ಮಾಡಿಕೊಡಲು ಆಲೋಚನೆ ಮಾಡುತ್ತೀರಿ. ಬಹಳ ಕಾಲದಿಂದ ಬರಬೇಕಿದ್ದ ಹಣವೊಂದು ಅಚಾನಕ್ ಆಗಿ ಬಂದು, ಅದನ್ನು ಇಂಥ ಖರೀದಿಗೆ ಬಳಸುವ ಸಾಧ್ಯತೆ ಇದೆ. ಆದರೆ ಈ ವಿಚಾರಗಳಲ್ಲಿ ಪೂರ್ವಾಪರ ಯೋಚಿಸಿ, ಮುಂದುವರಿಯುವುದು ಉತ್ತಮ. ಹೂಡಿಕೆಗೆ ಯಾವುದು ಉತ್ತಮ ಅಂತ ಸರಿಯಾಗಿ ನಿರ್ಧರಿಸಿ. ಇನ್ನು ಮನೆಯಲ್ಲಿ ಚರ್ಚಿಸದೆ ನಿರ್ಧಾರ ಕೈಗೊಂಡರೆ, ಅದರಿಂದ ಎಷ್ಟೇ ಒಳ್ಳೆಯದಾದರೂ ನಮ್ಮನ್ನು ಒಂದು ಮಾತು ಕೇಳಲಿಲ್ಲ ಎಂದು ಬಾಳಸಂಗಾತಿಗೆ ಮನಸು ಕಹಿಯಾಗುತ್ತದೆ.

ಭವಿಷ್ಯಕ್ಕೆ ಒಂದಿಷ್ಟು ಹಣ ಉಳಿತಾಯ ಮಾಡಿಟ್ಟುಕೊಳ್ಳಿ

ಭವಿಷ್ಯಕ್ಕೆ ಒಂದಿಷ್ಟು ಹಣ ಉಳಿತಾಯ ಮಾಡಿಟ್ಟುಕೊಳ್ಳಿ

ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟಂಥ ಕಾಯಿಲೆ ಇರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಹಾಗಂತ ಆಹಾರ ಪಥ್ಯವನ್ನು ಬಿಡಬೇಡಿ. ಧೂಮಪಾನ- ಮದ್ಯಪಾನದ ಅಭ್ಯಾಸ ಇರುವವರಿಗೆ ಈ ವರೆಗೂ ಇಲ್ಲದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವೈದ್ಯರು ಎಚ್ಚರಿಕೆ ನೀಡಿದ ನಂತರವೂ ನಾಳೆಯಿಂದ ಎಂದು ವಾಯಿದೆ ಹಾಕಿಕೊಳ್ಳುವುದು ಒಳ್ಳೆಯದಲ್ಲ. ಮುಂದಿನ ವರ್ಷದ ನವೆಂಬರ್ ತನಕ ಅನುಕೂಲಕರವಾದ ಪರಿಸ್ಥಿತಿ ಇದೆ. ಈ ಅವಧಿಯಲ್ಲಿ ಭವಿಷ್ಯಕ್ಕೆ ಅಗತ್ಯ ಇರುವಷ್ಟು ಉಳಿತಾಯ ಮಾಡಿಟ್ಟುಕೊಳ್ಳುವುದು ಕ್ಷೇಮ. ಇಲ್ಲದಿದ್ದರೆ ಆ ನಂತರ ಚಿಂತೆ ಮಾಡಬೇಕಾದೀತು.

ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಸೂಕ್ತ ಸಮಯ

ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಸೂಕ್ತ ಸಮಯ

ಇನ್ನು ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಕೇಳುವ ಯೋಗವಿದೆ. ಅಕೌಂಟೆನ್ಸಿ, ಎಂಜಿನಿಯರಿಂಗ್, ಬ್ಯೂಟಿಷಿಯನ್, ವೈದ್ಯರು, ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಹುದ್ದೆ ನಿಭಾಯಿಸುತ್ತಿರುವವರಿಗೆ ವಿದೇಶದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ. ಆದರೆ ಹಾಗೆ ಪ್ರಯತ್ನ ಅಥವಾ ನಿರ್ಧಾರ ಮಾಡುವ ಮುನ್ನ ನಿಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿಕೊಳ್ಳುವುದು ಕಡ್ಡಾಯ. ಈ ಹಿಂದೆ ಯಾವಾಗಲೋ ಅರ್ಜಿ ಹಾಕಿಕೊಂಡಿದ್ದ ಉದ್ಯೋಗದ ಬಗ್ಗೆ ಈಗ ಮಾಹಿತಿ ದೊರೆಯಬಹುದು. ವರ್ಗಾವಣೆ, ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಶುಭ ಫಲಗಳು ಸಹ ನಿರೀಕ್ಷೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+