ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ
ಸಾಡೇಸಾತಿಯಲ್ಲಿ ಕಷ್ಟನಷ್ಟ ಅನುಭವಿಸಿದ ವೃಶ್ಚಿಕ ರಾಶಿಯವರಿಗೆ ಕಡೆಗೂ ಗುರುಬಲ ಬಂದಿದೆ. ಗುರುಬಲ ಬಂದಿರುವುದು ಒಂದು ವರ್ಷದವರೆಗೂ ಇರುವುದರಿಂದ ಮುಖ್ಯವಾದ ಕೆಲಸಗಳನ್ನು ಮಾಡಿಟ್ಟುಕೊಳ್ಳಲು ಈಗಿನಿಂದಲೇ ಆರಂಭಿಸಬೇಕು. ಈ ಸಮಯದಲ್ಲಿ ಸಿಕ್ಕಾಪಟ್ಟೆ ಹಣ ದುಡಿಯುವ ಅವಕಾಶಗಳು ಬರುತ್ತವೆ.
ಹೀಗಾಗಿ ದಿನ 24 ಗಂಟೆಯಲ್ಲಿ ಅತೀ ಹೆಚ್ಚಿನ ಸಮಯವನ್ನು ಕಷ್ಟಪಟ್ಟು ದುಡಿಯಲಾರಂಭಿಸಬೇಕು. ಶನಿಸಾಡೇಸಾತಿಯಲ್ಲಿ ಸ್ವಲ್ಪ ಆಲಸ್ಯತನ ಮೈಗೂಡಿರುತ್ತದೆ. ಆದರೆ ಮೈ ಕೊಡವಿ ಮೇಲೆದ್ದು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ನ್ಯಾಯವಾಗಿ ಮಾಡಿದರೆ ಗುರುಫಲ ಸಾಕಷ್ಟು ಆಗುತ್ತದೆ.
ಹಣದ ವಿಷಯವಷ್ಟೇ ಏಕೆ? ಕೌಟುಂಬಿಕ ಸಂತಸವೂ ಇಮ್ಮಡಿಗೊಳ್ಳುತ್ತದೆ. ಕೆಲವರಿಗೆ ಮದುವೆಯೋಗ ಬಂದರೆ, ಸಂತಾನಾಪೇಕ್ಷಿಗಳು ಫೇಡೆ ಹಂಚುವ ಸಮಯ ಬರುತ್ತದೆ. ಆಸ್ತಿಪಾಸ್ತಿ, ಇಷ್ಟಪಟ್ಟ ವಾಹನ, ಮನೆ ಮತ್ತಿತರೆ ವಸ್ತುಗಳನ್ನು ಖರೀದಿಸಲು ಹಣದ ಲಭ್ಯತೆಯಾಗುವುದರಿಂದ ಮುಖ್ಯ ಮತ್ತು ಅವಶ್ಯಕ ವಸ್ತುಗಳನ್ನು ಮಾತ್ರ ಖರೀದಿಸಿ. ಬರೀ ತೋರಿಕೆ ಐಷಾರಾಮಿ ವಸ್ತುಗಳನ್ನು ಖರೀದಿಸುವುದು ಬೇಡ. ಗುರುಬಲವಿದೆ, ಹಣದ ಹರಿವು ಚೆನ್ನಾಗಿದೆ ಎಂದುಕೊಂಡು ಸಿಕ್ಕಾಪಟ್ಟೆ ಸಾಲ ಸೋಲ ಮಾಡುವಂಗಿಲ್ಲ. ಮಾಡಿದರೆ ತೀರಿಸಲು ಒಂದೊತ್ತು ಊಟ ಬಿಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಬರಲಿದೆ ನೆನಪಿರಲಿ. [ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]

ಮೊದಲೇ ಸಿಟ್ಟು ಮತ್ತು ಅವಸರದ ಪ್ರವೃತ್ತಿಯವರಾದ ವೃಶ್ಚಿಕ ರಾಶಿಯವರು ಸ್ವಲ್ಪ ಮಾನಸಿಕ ಕಠೋರ ಸ್ವಭಾವವನ್ನೂ ಹೊಂದಿರುತ್ತಾರೆ. ಹೀಗಾಗಿ ಗುರುಬಲ ಬಂದಿರುವ ಈ ಸಮಯದಲ್ಲಿ ಆದಷ್ಟು ಆಸ್ತಿಕರಾಗಿ ದೈವಕೃಪೆಗೆ ದಿನವೂ ಒಂದಿಷ್ಟು ಸಮಯ ಮೀಸಲಿಡಲೇಬೇಕು.
ಹೊರ ದೇಶಗಳಿಗೆ ಅಥವಾ ಪರ ಊರುಗಳಿಗೆ ಕೆಲಸದ ನಿಮಿತ್ತ ಹೋಗುವ ಪ್ರಮೇಯ ಬಂದರೆ ಮೊದಲು ಎಸ್ ಎನ್ನಬೇಕು. ಏಕೆಂದರೆ ಇದರಿಂದಲೇ ಕೆಲವೊಂದು ರೀತಿಯ ಲಾಭಗಳನ್ನು ಕಾಣಬಹುದು. ಹೊಸದಾಗಿ ವ್ಯಾಪಾರ ಮತ್ತು ಹೊಸ ಯೋಜನೆಗಳನ್ನು ಆರಂಭಿಸಬೇಕೆನ್ನುವವರಿಗೆ ಈಗ ಗೋಲ್ಡನ್ ಟೈಮ್. ಹನ್ನೊಂದನೇ ಸ್ಥಾನದಲ್ಲಿ ಬಂದಿರುವ ಗುರು ಬರೀ ಲಾಭವನ್ನೇ ನೀಡುವದರಿಂದ ಬಂದಿದ್ದು ಪಡೆದುಕೊಂಡು ಸಾರ್ಥಕವಾಗಿಸಿಕೊಳ್ಳಬೇಕು ಜೀವನವನ್ನು.
ಆದರೆ, ಮೇಲೆ ಹೇಳಿದಂತೆ ಸಾಡೇಸಾತಿಗೆ ಸಂಬಂಧಪಟ್ಟಂತೆ ಪರಿಹಾರ ಮಾಡಿಕೊಂಡಲ್ಲಿ ವೃಶ್ಚಿಕ ರಾಶಿಯವರು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಯೂ ಲಾಭ ಗಳಿಸಬಹುದು. ಏಕೆಂದರೆ ಸುಲಭದಲ್ಲಿ ಕಷ್ಟವಿಲ್ಲದೇ ಹಣ ಬರುವ ದಾರಿ ಅದೊಂದೇ ಎಂಬುದು ನೆನಪಿಟ್ಟುಕೊಳ್ಳಿ. ಸ್ವಲ್ಪ ಶ್ರಮಪಟ್ಟು ನಂಬಿಕೆ ವಿಶ್ವಾಸವಿದ್ದವರಲ್ಲಿ ವ್ಯವಹಾರ ಮಾಡಿದರೆ ಲಾಭದ ನೋಟುಗಳನ್ನು ಕಣ್ತುಂಬ ನೋಡಬಹುದು. [ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]

ಇನ್ನು, ಈ ರಾಶಿಯ ಹೆಂಗಸರು ಮಾತ್ರ ದೈಹಿಕ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಏಕೆಂದರೆ ಹೆಂಗಸರಿಗೆ ಮಧುಮೇಹ ಬರುವುದು ಹೆಚ್ಚಿನ ಪ್ರಮಾಣದಲ್ಲಿ ಚಿಂತೆ ಮಾಡುವುದರಿಂದ. ಆದ್ದರಿಂದ 40 ವರ್ಷದ ಅಕ್ಕಪಕ್ಕ ಇರುವವರು ಒಮ್ಮೆ ಶುಗರ್ ಗಾಗಿ ರಕ್ತ ಮತ್ತು ಬಿಪಿಯನ್ನು ಚೆಕ್ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉದ್ಭವಿಸುವುದರಿಂದ ನಿತ್ಯ ವ್ಯಾಯಾಮ ಮಾಡುವುದು ಉತ್ತಮ.
ಒಟ್ಟಿನಲ್ಲಿ ಗುರುಬಲದಿಂದ ಸ್ವಲ್ಪ ತಲೆ ಎತ್ತಿ ಓಡಾಡುವಂತಾಗಿರುವ ವೃಶ್ಚಿಕ ರಾಶಿಯವರು ಹಣವನ್ನು ದುಂದುವೆಚ್ಚ ಮಾಡದೇ ಖುಷಿಯಾಗಿದ್ದು ದೈವಬಲವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಸಾಧ್ಯವಿದ್ದಲ್ಲಿ ಗುರು ರಾಯರ ಮಠಕ್ಕೆ ಪ್ರತಿ ಗುರುವಾರ ಹೋಗಿ ಬಂದರೆ ಶುಭಫಲ ಹೆಚ್ಚುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications