ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಹಾರ ಜ್ಯೋತಿಷ್ಯ: ಚೌಡೇಶ್ವರಿ ದೇವಿಗೆ ಯಾವ ಪೂಜೆ ಮಾಡಿದರೆ ಏನು ಫಲ?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಹಳ್ಳಿ ಆಗಲೀ ಅಥವಾ ಪೇಟೆ ಆಗಿರಲಿ ವಾಸಿಸುವ ಸ್ಥಳ ಯಾವುದೇ ಇರಲಿ, ಅಲ್ಲಿ ಒಂದು ಅಮ್ಮನವರ ದೇಗುಲ ಇರುವ ಸಾಧ್ಯತೆಗಳು ಹೆಚ್ಚು. ಅಂಥ ದೇಗುಲ ನಿಮ್ಮ ವಾಸಸ್ಥಳದ ಹತ್ತಿರ ಇದ್ದು, ಅದು ಚೌಡೇಶ್ವರಿ ದೇವಿಯ ದೇಗುಲ ಆಗಿದ್ದಲ್ಲಿ ನೀವು ಅದೃಷ್ಟವಂತರು ಎಂದೇ ಹೇಳಬೇಕು!

ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಎಂಥ ಜೋಡಿ?ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಎಂಥ ಜೋಡಿ?

ಏಕೆಂದರೆ, ಚೌಡೇಶ್ವರಿ ದೇವಿ ಅಂದರೆ ಮಹಾಕಾಳಿ - ಮಹಾಲಕ್ಷ್ಮಿ - ಮಹಾ ಸರಸ್ವತಿ ಈ ಮೂರು ದೇವಿ ಶಕ್ತಿಗಳ ಸಮಾಗಮ. ಈಕೆ ನಿಮ್ಮ ತಾಯಿಯಂತೆ. ನಿಮ್ಮ ಸಂಪೂರ್ಣ ರಕ್ಷಣೆ ಈ ತಾಯಿಯಿಂದ ಸಾಧ್ಯ. ಈ ಚೌಡೇಶ್ವರಿ ನಿಮ್ಮ ಊರನ್ನು ಹಿಂದಿನಿಂದಲೂ ಕಾಯುತ್ತಾ ಬಂದಿದ್ದಾಳೆ.

ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ

ನಿಮ್ಮ ಊರಿನಲ್ಲಿ ಸಾರ್ವಜನಿಕವಾಗಿ ಎಲ್ಲರಿಗೂ ಆರೋಗ್ಯ ಸಮಸ್ಯೆ ಆದಲ್ಲಿ ಅಥವಾ ಮಳೆ- ಬೆಳೆ ಇಲ್ಲದೇ ನಿಮ್ಮೂರಿನ ರೈತ ಕಷ್ಟ ಪಡುತ್ತಿದ್ದಲ್ಲಿ ಈ ತಾಯಿಗೆ ಮೊರೆ ಹೋದರೆ ಅವಳು ಕಾಪಾಡುತ್ತಿದ್ದಳು. ಆದರೆ ವಿಷಯ ಅಷ್ಟಕ್ಕೇ ಮುಗಿಯುವುದಿಲ್ಲ. ಊರಿನ ಜತೆಗೆ ಜನರನ್ನು ಸಹ ಈ ಚೌಡೇಶ್ವರಿ ಕಾಯುತ್ತಾಳೆ. ನಿಮ್ಮ ಎಲ್ಲ ಕಷ್ಟ, ಸಮಸ್ಯೆಗಳನ್ನು ಬಗೆಹರಿಸುತ್ತಾಳೆ.

ವಿವಿಧ ಸಮಸ್ಯೆಗೆ ವಿವಿಧ ಸೇವೆಯಿಂದ ಪರಿಹಾರ

ವಿವಿಧ ಸಮಸ್ಯೆಗೆ ವಿವಿಧ ಸೇವೆಯಿಂದ ಪರಿಹಾರ

ಭಕ್ತ ಭಕ್ತಿಯಿಂದ ಏನು ಕೊಟ್ಟರೂ ಅದು ಭಗವಂತನಿಗೆ ಪ್ರೀತಿಯೇ. ಅದರಲ್ಲಿ ಸಂಶಯ ಇಲ್ಲ. ಹಾಗಿದ್ದಾಗ ನಾವು ಪ್ರತ್ಯೇಕವಾಗಿ ಇಂಥದ್ದೇ ಬೇಕೆಂದು ಪಟ್ಟು ಹಿಡಿದು ಬೇಡಬಾರದು. ದೇವಿ ಏನು ಕೊಟ್ಟರೆ ಅದನ್ನು ಸ್ವೀಕರಿಸಬೇಕು. ಇಲ್ಲ ಹಾಗಲ್ಲ ನನಗೆ ಇಂಥದ್ದೇ ಸಮಸ್ಯೆ. ಅದಕ್ಕೆ ಸರಿಯಾದ ಪರಿಹಾರ ಬೇಕು ಎಂದು ನಿಮ್ಮ ಬೇಡಿಕೆ ಇದ್ದಲ್ಲಿ ಅದಕ್ಕೆ ತಕ್ಕಂತೆ ಆ ತಾಯಿಗೆ ಸೇವೆ ಸಲ್ಲಿಸಿ.

ಆರೋಗ್ಯ ಬಾಧೆ ನಿವಾರಣೆಗೆ ಬೆಲ್ಲದ ಅನ್ನದ ನೈವೇದ್ಯ

ಆರೋಗ್ಯ ಬಾಧೆ ನಿವಾರಣೆಗೆ ಬೆಲ್ಲದ ಅನ್ನದ ನೈವೇದ್ಯ

ಆರೋಗ್ಯಬಾಧೆ ಇದ್ದಲ್ಲಿ ಚೌಡೇಶ್ವರಿ ದೇವಿಗೆ ಐದು ಶುಕ್ರವಾರಗಳು ಬೆಲ್ಲದ ಅನ್ನವನ್ನು ಪುರೋಹಿತರ ಕಡೆಯಿಂದ ಮಡಿಯಲ್ಲಿ ತಯಾರಿಸಿ, ನೈವೇದ್ಯ ಮಾಡಿಸಿ. ಆ ನಂತರ ದೇಗುಲಕ್ಕೆ ಬಂದ ಭಕ್ತರಿಗೆ ಹಂಚಿ. ತಾಯಿಯಲ್ಲಿ ಹರಕೆ ಮಾಡಿಕೊಂಡಲ್ಲಿ ಆರೋಗ್ಯ ಬಾಧೆ ಸರಿ ಹೋಗುತ್ತದೆ.

ಆರ್ಥಿಕ-ವಿವಾಹ ಸಮಸ್ಯೆಗೂ ಪರಿಹಾರ ಉಂಟು

ಆರ್ಥಿಕ-ವಿವಾಹ ಸಮಸ್ಯೆಗೂ ಪರಿಹಾರ ಉಂಟು

ಇನ್ನು ಆರ್ಥಿಕ ಸಮಸ್ಯೆ ಇರುವವರು ಬೆಲ್ಲದ ಅನ್ನಕ್ಕೆ ಸ್ವಲ್ಪ ಕರಿ ಎಳ್ಳು ಸೇರಿಸಿ, ನೈವೇದ್ಯ ಮಾಡಿಸಿ. ಆ ನಂತರ ಹಂಚಬೇಕು. ಇನ್ನು ವಿವಾಹ ವಿಳಂಬ ಆಗುತ್ತಿರುವವರು ಅಥವಾ ಪರಸ್ಪರ ವೈಮನಸ್ಸು ಇರುವ ದಂಪತಿ ಏಳು ಶುಕ್ರವಾರ ಹಾಲಿನಲ್ಲಿ ಪರಿಶುದ್ಧ ಕೇಸರಿ ಹಾಕಿ ಅನ್ನದ ಪಾಯಸ ಮಾಡಿಸಿ, ನೈವೇದ್ಯ ಮಾಡಿಸಿ- ಹಂಚಿ, ಚೌಡೇಶ್ವರಿಯಲ್ಲಿ ಬೇಡಿದರೆ ದಾಂಪತ್ಯ ವಿರಸ ಶಮನ ಆಗುತ್ತದೆ.

ಸಂತಾನ ಭಾಗ್ಯಕ್ಕೆ ಉಸುಳಿ ನೈವೇದ್ಯ

ಸಂತಾನ ಭಾಗ್ಯಕ್ಕೆ ಉಸುಳಿ ನೈವೇದ್ಯ

ಸಂತಾನ ಭಾಗ್ಯ ಬಯಸುವವರು ಐದು ಮಂಗಳವಾರ ಕಡಲೇ ಉಸುಳಿ (ಈರುಳ್ಳಿ - ಬೆಳ್ಳುಳ್ಳಿ ಹಾಕ ಬಾರದು) ಮಾಡಿಸಿ ನೈವೇದ್ಯ ಮಾಡಿಸಿ, ದಂಪತಿ ಸ್ವತಃ ದೇಗುಲದ ಬಾಗಿಲಿನಲ್ಲಿ ನಿಂತು ಬಂದ ಭಕ್ತರಿಗೆ ಹಂಚಬೇಕು. ಭೂಮಿ ಬಯಸುವವರು ಭೂಮಿಯ ಸಂಬಂಧಿ ಸಮಸ್ಯೆಗಳಲ್ಲಿ ಸಿಲುಕಿರುವವರು ಐದು ಮಂಗಳವಾರ ಚೌಡೆಶ್ವರಿ ದೇವಿಗೆ ತೊಗರಿ ಬೇಳೆ ಕೆಂಪು ವಸ್ತ್ರದಲ್ಲಿ ಸಮರ್ಪಿಸಿ.

ವಾಮಾಚಾರ ಪ್ರಯೋಗದ ಹಿಂಸೆಯಿಂದ ಹೊರಬರಲು ಹೀಗೆ ಮಾಡಿ

ವಾಮಾಚಾರ ಪ್ರಯೋಗದ ಹಿಂಸೆಯಿಂದ ಹೊರಬರಲು ಹೀಗೆ ಮಾಡಿ

ನ್ಯಾಯಾಲದ ವ್ಯಾಜ್ಯಗಳಲ್ಲಿ ಸಿಲುಕಿದವರು ಬೂದಿ ಬಣ್ಣದ ವಸ್ತ್ರದಲ್ಲಿ ಉದ್ದಿನ ಬೇಳೆಯನ್ನು ದೇವಿಗೆ ಉಡಿಯಾಗಿ ಸಮರ್ಪಿಸಿ. ಇನ್ನು ಮನೆಯಲ್ಲಿ ಮಾಟ- ಮಂತ್ರ, ಪೀಡೆ- ಪಿಶಾಚಿ ಬಾಧೆ ಇದ್ದಲ್ಲಿ ದುರ್ಗಾ ಕುಂಕುಮಾರ್ಚನೆ ಮಾಡಿ ಅಭಿಮಂತ್ರಿಸಿದ ಎರಡು ನಿಂಬೆಹಣ್ಣು ತಂದು ದೇವರ ಮನೆಯಲ್ಲಿ ಇಟ್ಟರೆ ಸಾಕು..

ವಿಶೇಷ ಶಕ್ತಿ ಚಂಡಿಕಾ ಪಾರಾಯಣ

ವಿಶೇಷ ಶಕ್ತಿ ಚಂಡಿಕಾ ಪಾರಾಯಣ

ಇನ್ನು ಪುರೋಹಿತರ ಮೂಲಕ ಸಪ್ತಶತೀ ಚಂಡಿಕಾ ಪಾರಾಯಣ ಮಾಡಿಸುವ ಒಂದು ವಿಶೇಷ ಸೇವೆ ಇದೆ. ಆ ಪಾರಾಯಣವನ್ನು ಸಹ ಮೂರು ವಿಧಾನದಲ್ಲಿ ಮಾಡುತ್ತಾರೆ. ಮೊದಲನೆಯದು ಸಾದಾ ಪಾರಾಯಣ. ಎರಡನೆಯದು ಪಲ್ಲವ ವಿಧಾನದಲ್ಲಿ ಪಾರಾಯಣ. ಮೂರನೇಯದು ಸಂಪುಟಿ ವಿಧಾನದಲ್ಲಿ ಚಂಡಿಕಾ ಪಾರಾಯಣ.

ಭಕ್ತರ ಬೇಡಿಕೆಗೆ ಅನುಸಾರ ಪೂಜೆ

ಭಕ್ತರ ಬೇಡಿಕೆಗೆ ಅನುಸಾರ ಪೂಜೆ

ಪಲ್ಲವ ಅಥವಾ ಸಂಪುಟಿ ವಿಧಾನದಲ್ಲಿ ಚಂಡಿಕಾ ಪಾರಾಯಣವನ್ನು ಭಕ್ತರ ಸಮಸ್ಯೆಗಳಿಗೆ ಅನುಸಾರವಾಗಿ ಮಾಡಲಾಗುತ್ತದೆ. ಉದಾಹರಣೆಗೆ ಸಂತಾನ ಭಾಗ್ಯ ಬೇಕಾದವರು ಪುತ್ರಾಂ ದೇಹಿ ಎನ್ನುವ ಸಂಪೂರ್ಣ ಶ್ಲೋಕದಿಂದ ಪಲ್ಲವ ಅಥವಾ ಸಂಪುಟಿ ವಿಧಾನದಲ್ಲಿ ಚಂಡಿಕಾ ಪಾರಾಯಣ ಮಾಡಿಸಬಹುದು.

ಹಾಗೆಯೇ ಉತ್ತಮ ವಧು ಸಿಕ್ಕು ವಿವಾಹ ಭಾಗ್ಯ ಬೇಡುವ ವರ ಪತ್ನೀಂ ಮನೋರಮಾಂ ದೇಹಿ ... ಎನ್ನುವ ಶ್ಲೋಕ ಬಳಸಬಹುದು. ಆರೋಗ್ಯ ಭಾಗ್ಯ ಬಯಸುವವರು ರೋಗಾನಶೇಷಾನ್ ಎಂಬ ಪೂರ್ಣ ಶ್ಲೋಕ ಬಳಸಬಹುದು. ಶತ್ರು ಬಾಧೆ ಹೆಚ್ಚು ಇರುವವರು ಸರ್ವಾ ಬಾಧಾ ಪ್ರಶಮನಂ ಈ ಶ್ಲೋಕವನ್ನು ಬಳಸಿ ಸಪ್ತಶತಿ ಚಂಡಿಕಾ ಪಾರಾಯಣ ಮಾಡಿಸಿ.

ಆಚಾರ್ಯ ಶ್ರೀ ವಿಠ್ಠಲ ಭಟ್ಟರು, ಕೆಕ್ಕಾರು ಸಂಪರ್ಕ ಸಂಖ್ಯೆ 9845682380.

English summary
Goddess Chowdeshwari worship is solution for various problems. How to perform pooja, on what days, how many days...complete details of worship explain by Oneindia Kannada astrologer Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X