ಗಜಕೇಸರಿ ರಾಜಯೋಗದಿಂದ ಬೆಳಗುವುದು ಈ ಐದು ರಾಶಿಯವರ ಅದೃಷ್ಟ : ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ ಇದು
Gajakesari Rajayoga Date and Effect: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 21 ರಂದು ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದೆ. ಈ ಗಜಕೇಸರಿ ಯೋಗವು ಮಿಥುನ, ಸಿಂಹ ಮತ್ತು ಕನ್ಯಾ ಸೇರಿದಂತೆ ಐದು ರಾಶಿಯವರ ಜೀವನದಲ್ಲಿ ಹೊಸ ಬೆಳಕು ಮೂಡಿಸಲಿದೆ. ಇಲ್ಲಿಂದ ಇವರ ಬದುಕಿನ ದಿಕ್ಕೇ ಬದಲಾಗಲಿದೆ. ಪ್ರತಿ ಹಂತದಲ್ಲಿಯೂ ಗೆಲುವುದು ಸಿಗುವುದು.
ಯಾವ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಗಜಕೇಸರಿ ರಾಜಯೋಗ ?:
ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಬಾರಿ ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆಯಾದಾಗಲೂ ಶುಭ ಮತ್ತು ರಾಜ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳು ರಾಶಿಗನುಗುಣವಾಗಿ ಜೀವನದಲ್ಲಿ ಸಂತೋಷ, ಸಮೃದ್ಧಿ, ಗೌರವ, ಪ್ರತಿಷ್ಠೆಯನ್ನು ತಂದು ಕೊಡುತ್ತದೆ. ಈ ಗಜಕೇಸರಿ ರಾಜ ಯೋಗ ಎನ್ನುವುದು ಜ್ಯೋತಿಷ್ಯದಲ್ಲಿ ಬರುವ ಪ್ರಬಲ ಯೋಗಗಳಲ್ಲಿ ಒಂದು. ಯಾವಾಗ ಗುರು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸೇರುತ್ತಾರೆಯೋ ಆ ಸಮಯದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಬಾರಿ ಏಪ್ರಿಲ್ 21 ರಂದು ಮಿಥುನ ರಾಶಿಯಲ್ಲಿ ಈ ಪ್ರಬಲ ರಾಜ ಯೋಗ ನಿರ್ಮಾಣವಾಗುತ್ತಿದೆ.
ಏಪ್ರಿಲ್ 21 ರಂದು ಚಂದ್ರನು ಮಿಥುನ ರಾಶಿಗೆ ಕಾಲಿಡುತ್ತಿದ್ದಾನೆ. ಗುರುವಿನ ಸಂಚಾರ ಈಗಾಗಲೇ ಮಿಥುನ ರಾಶಿಯಲ್ಲಿಯೇ ಆಗುತ್ತಿದ್ದು, ಆ ದಿನ ಗುರು ಮತ್ತು ಚಂದ್ರರ ಸಂಯೋಗ ಮಿಥುನ ರಾಶಿಯಲ್ಲಿ ನಡೆಯಲಿದೆ. ಈ ಮೂಲಕ ರುಪುಗೊಳ್ಳುವ ಗಜಕೇಸರಿ ಯೋಗದಿಂದ ಐದು ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿಯೇ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿರುವುದರಿಂದ ಇದು ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ವೇಳೆಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಬಾಕಿ ಇರುವ ಕೆಲಸ ಕಾರ್ಯಗಳು ಈ ರಾಜಯೋಗದ ಪ್ರಭಾವದಿಂದಾಗಿ ಪೂರ್ಣಗೊಳ್ಳುವುದು.

ಸಿಂಹ ರಾಶಿ: ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವುದು. ಆದಾಯದಲ್ಲಿ ಏರಿಕೆಯಾಗುವುದು. ಇದರ ಪರಿಣಾಮವಾಗಿ ಹೊಸ ಮತ್ತು ಬಲವಾದ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹೂಡಿಕೆ ಮಾಡಲು ಇದು ಸರಿಯಾದ ಸಮಯ ಎಂದೇ ಹೇಳಬಹುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.

ಕನ್ಯಾರಾಶಿ: ನೀವು ಮಾಡುವ ಪ್ರತಿಯೊಂದು ಕೆಲಸದ ಮೇಲೆ ಗಜಕೇಸರಿ ರಾಜಯೋಗ ನೇರವಾಗಿ ಪರಿಣಾಮ ಬೀರುವುದು. ಉದ್ಯೋಗಿಗಳಿಗೆ ಬಡ್ತಿ ಸಿಗುವುದು. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಉದ್ಯಮಿಗಳು ಅಥವಾ ವ್ಯಾಪಾರಿಗಳು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಪ್ರಮುಖ ಡೀಲ್ ಅನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ಗೌರವ ಮತ್ತು ಖ್ಯಾತಿ ಪಡೆಯುವಿರಿ.

ಧನು ರಾಶಿ: ಧನು ರಾಶಿಯ ಅಧಿಪತಿ ಗುರು. ಗುರುವಿನ ಕಾರಣದಿಂದಲೇ ಈ ರಾಜಯೋಗ ನಿರ್ಮಾಣವಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ರಾಜಯೋಗದ ಪ್ರಭಾವವು ಪ್ರಮುಖವಾಗಿ ವೈವಾಹಿಕ ಜೀವನದ ಮೇಲೆ ಬೀರುವುದು. ವೈವಾಹಿಕ ಜೀವನದ ಆನಂದ ಹೆಚ್ಚಾಗುವುದು. ಪಾಲುದಾರಿಕೆ ಉದ್ಯಮದಲ್ಲಿ ಯಶಸ್ಸು ಸಿಗುವುದು. ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವುದು.

ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಈ ಸಮಯ ಶುಭವಾಗಿರುವುದು.ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುವುದು. ಜೀವನದಲ್ಲಿ ಸುಖ ಸಮೃದ್ದಿ ಹೆಚ್ಚಾಗುವುದು. ಹೊಸ ಮನೆ ಅಥವಾ ವಾಹನ ಖರೀದಿ ಸಾಧ್ಯವಾಗುವುದು. ನಿಮ್ಮ ಮನಸ್ಸಿನ ಆಸೆ ಈಡೇರುವುದು.

(ಬರಹ: ರಂಜಿತಾ ಆರ್.ಕೆ.)












Click it and Unblock the Notifications