ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ
Recommended Video

ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸುಗಳನ್ನು ಸಹ ನಂಬುವ, ಅದರಲ್ಲಿ ಮುನ್ಸೂಚನೆ ದೊರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಕೆಲವು ಕನಸುಗಳು ಬಿಡದೆ ಕಾಡಿ, ನೆಮ್ಮದಿಯನ್ನೇ ಹಾಳು ಮಾಡಿವೆ ಎಂದು ಗೋಳು ಹೇಳಿಕೊಳ್ಳುವವರು ಸಹ ಇದ್ದಾರೆ. ಆದರೆ ಕನಸು ಬಿದ್ದ ಹಿನ್ನೆಲೆಯನ್ನು ತಿಳಿಯದೆ ಹಾಗೇ ಅದರ ಫಲಿತಾಂಶವನ್ನು ಹೇಳಬಾರದು.
ಅದು ಹೇಗೆಂದರೆ, ನಿದ್ರಿಸುವ ಮುನ್ನ ಯಾವುದೋ ಒಂದು ನಿರ್ದಿಷ್ಟ ವಿಚಾರ, ವಿಷಯ, ವಸ್ತು, ವ್ಯಕ್ತಿಗಳ ಬಗ್ಗೆ ತುಂಬ ಆಲೋಚನೆ ಮಾಡಿದ್ದರೆ, ಕನಸಿನಲ್ಲಿ ಅದು ಮರುಕಳಿಸಬಹುದು. ಆಗ ಕನಸನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆದರೆ ಅಂಥ ಯಾವ ಆಲೋಚನೆ ಇಲ್ಲದಿದ್ದಾಗಲೂ ಕಂಡಂಥ ಕನಸಿಗೆ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಇಂದಿನ ಲೇಖನದಲ್ಲಿ ಜ್ಯೋತಿಷ್ಯ ರೀತಿಯಾಗಿ ಕನಸುಗಳಿಗೆ ಯಾವ ಫಲ ಹೇಳಲಾಗಿದೆ ಎಂಬುದನ್ನು ತಿಳಿಸಲಾಗುವುದು. ಇನ್ನೊಂದು ಅಂಶ ನೆನಪಿಡಿ, ಕನಸಿನಲ್ಲಿ ಕಂಡ ಘಟನೆಗೆ ಉಲ್ಟಾ ಫಲಿತ ಹೇಳುವ ಪದ್ಧತಿಯೂ ಇದೆ. ಉದಾಹರಣೆಗೆ ಸತ್ತು ಹೋದಂತೆ ಕನಸಿನಲ್ಲಿ ಕಂಡರೆ ಆಯುಷ್ಯ ವೃದ್ಧಿ ಎಂಬ ಅಭಿಪ್ರಾಯ ಇದೆ. ಆದರೆ ಇವೆಲ್ಲವನ್ನೂ ತಿಳಿದವರಿಂದ ಕೇಳಿ ಮಾಹಿತಿ ಪಡೆಯಬೇಕು.

ಬಹಳ ಹಣ, ಐಶ್ವರ್ಯ ಬರಬಾರದು
ಕನಸಿನಲ್ಲಿ ತುಂಬ ದುಡ್ಡು, ಐಶ್ವರ್ಯ ಬರಬಾರದು. ಹಾವುಗಳು ಕನಸಿನಲ್ಲಿ ಬಂದರೆ ಸರ್ಪ ದೋಷ ಇರುವ ಸಾಧ್ಯತೆ ಇರುತ್ತದೆ. ಇನ್ನು ಕನಸಿನಲ್ಲಿ ಹಾವು ಕಡಿದು, ರಕ್ತ ಬಂದರೆ ಒಳ್ಳೆಯದು. ಆದರೆ ಕನಸಿನಲ್ಲಿ ಪದೇ ಪದೇ ಹಾವು ಅಟ್ಟಿಸಿಕೊಂಡು ಬರುತ್ತಿದೆ ಅಂದರೆ ಪ್ರಬಲವಾದ ಸರ್ಪ ದೋಷ ಇದೆ ಎಂಬ ಸೂಚನೆ ಅದು.

ಗುರು ಬಲ ಹೋಗುತ್ತಿರುವ ಸೂಚನೆ
ಕನಸಿನಲ್ಲಿ ನಾಯಿ ಕಡಿದ ಹಾಗೆ ಕಂಡರೆ ಗುರು ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆ ಇದೆ. ಗುರು ಬಲ ಹೋಗುತ್ತಿದೆ ಎಂಬುದರ ಸೂಚನೆ ಅದು. ಇನ್ನು ಶಕ್ತಿ ದೇವತೆಗಳ ಆರಾಧನೆ ಮಾಡುವವರಿಗೆ, ಕನಸಿನ ಮೂಲಕ ಕೆಲವು ಪ್ರೇರಣೆ ನೀಡುತ್ತವೆ. ಅಂದರೆ ದೈವಕ್ಕೆ ಸಂಬಂಧಿಸಿದಂತೆ ಸಮಸ್ಯೆ ಆಗಿದ್ದಲ್ಲಿ ಅಥವಾ ಏನಾದರೂ ಕೆಲಸ ಮಾಡಬೇಕಾದಲ್ಲಿ ಸೂಚನೆ ಸಿಗುತ್ತದೆ.

ಋಣ ಬಾಧೆ ಸೂಚಿಸುತ್ತದೆ
ಹಣ ತೆಗೆದುಕೊಂಡ ಹಾಗೆ ಕಂಡರೆ, ಉಪ್ಪು ಕಂಡರೆ ಋಣ ಬಾಧೆ ಬಾಕಿ ಇದೆ ಎಂದರ್ಥ. ನಿರ್ದಿಷ್ಟವಾಗಿ ಒಂದೇ ದೇವರು ಅಥವಾ ದೇವತೆ ಪದೇಪದೇ ಬರುತ್ತಾ ಇದ್ದರೆ ಹರಕೆ ಹೊತ್ತು, ಅದನ್ನು ಪೂರೈಸದೆ ಉಳಿಸಿರುವುದರ ಸೂಚನೆ ಅದು. ಹರಕೆ ಹೊತ್ತು, ಆ ನಂತರ ಮರೆತಿದ್ದರೆ ಹೀಗೆ ಆಗುತ್ತದೆ.

ಶನಿ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆ
ಕನಸಿನಲ್ಲಿ ಕಾಗೆ ಇತರ ಪ್ರಾಣಿಗಳು ಕಂಡರೆ ಶನಿ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸೂಚಿಸುತ್ತದೆ. ಕೋಣ-ಎಮ್ಮೆ ಕಂಡರೆ ಅಪಮೃತ್ಯು ಸಮಸ್ಯೆಯನ್ನು ಸೂಚಿಸುತ್ತದೆ. ಅಂದರೆ ಈ ರೀತಿಯ ಕನಸು ಪದೇಪದೇ ಬರುತ್ತಿದ್ದರೆ ಮಾತ್ರ ಖಂಡಿತಾ ಪರಿಹಾರದ ಬಗ್ಗೆ ಯೋಚನೆ ಮಾಡಲೇ ಬೇಕು.

ದೂರಪ್ರಯಾಣದ ಸೂಚನೆ
ವಾಹನಗಳಾದ ಬಸ್, ರೈಲು, ಜೋಡೆತ್ತು ಕಂಡರೆ ದೂರ ಪ್ರಯಾಣವನ್ನು ಸೂಚಿಸುತ್ತದೆ. ಇನ್ನು ಕನಸಿನಲ್ಲಿ ಕೆಟ್ಟ ಮುಖಗಳು ಕಂಡು ಬಂದರೆ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿರುವ ಸ್ಥಳದಲ್ಲಿ ಸಂಚಾರ ಮಾಡಿದ್ದರೆ ನಿಮ್ಮ್ ಮೇಲೆ ಆ ಶಕ್ತಿಯ ಪ್ರಭಾವ ಆಗಿದ್ದರೆ ಅಥವಾ ವಾಮಾಚಾರ ಪ್ರಯೋಗ ಆಗಿದ್ದರೆ ಇಂಥ ಸೂಚನೆ ಸಿಗುತ್ತದೆ. ಕೆಲವು ದೈವ ಭಕ್ತರಿಗೆ, ಅನುಷ್ಠಾನ ಇಟ್ಟುಕೊಂಡವರಿಗೆ ತಮ್ಮ ಮೇಲೆ ಪ್ರಯೋಗ ಮಾಡಿದವರು ಯಾರು, ಹೇಗೆ ಮಾಡಿದ್ದಾರೆ ಎಂಬುದು ಕೂಡ ಕನಸಿನಲ್ಲೇ ತಿಳಿದುಹೋಗುತ್ತದೆ.೪

ಪ್ರಯಾಣ ಮಾಡಬೇಡಿ
ಬೆಳಗಿನ ಜಾವದಲ್ಲಿ ವಾಹನದಿಂದ ಬಿದ್ದಂತೆ, ಗಾಯ ಮಾಡಿಕೊಂಡಂತೆ ಕನಸು ಬಿದ್ದಲ್ಲಿ ಅಂದು ಪ್ರಯಾಣ ಮಾಡದಿರುವುದು ಉತ್ತಮ. ಏಕೆಂದರೆ ಇಂಥ ಕನಸು ಭವಿಷ್ಯವನ್ನು ಸೂಚಿಸುತ್ತದೆ. ಆದ್ದರಿಂದ ನಿರ್ಲಕ್ಷ್ಯ ಮಾಡದೆ ಅಂದು ಪ್ರಯಾಣದ ನಿರ್ಧಾರ ಮುಂದಕ್ಕೆ ಹಾಕುವುದೇ ಉತ್ತಮ.

ಪರಿಹಾರ ಏನು?
ಕೆಟ್ಟ ಕನಸು ಯಾವುದು ಎಂದು ತಿಳಿಸಿಕೊಟ್ಟಾಗಿದೆ. ಆದರೆ ಇದಕ್ಕೆ ಪರಿಹಾರವನ್ನು ಪ್ರಶ್ನ ಶಾಸ್ತ್ರದಲ್ಲಿ ಕೇಳಿ ತಿಳಿದುಕೊಳ್ಳಬೇಕು. ಅದಕ್ಕೂ ಮುನ್ನ ತಾತ್ಕಾಲಿಕ ಪರಿಹಾರ ಅಂದರೆ ತಲೆಗೆ ಸ್ನಾ ಮಾಡಿ, ಮಣ್ಣಿನ ಹಣತೆಯೊಂದನ್ನು ತಂದು, ತುಪ್ಪದ ದೀಪವನ್ನು ದೇವರ ಮುಂದೆ ಹಚ್ಚಬೇಕು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications