Diwali 2024 Horoscope: 2024 ದೀಪಾವಳಿಯಿಂದ 2025ರವರೆಗೆ ಈ ರಾಶಿಗೆ ಅದೃಷ್ಟದ ಹೊಳೆ, ಕಂಡರಿಯದ ಸಂಪತ್ತು ಪ್ರಾಪ್ತಿ
2024 ದೀಪಾವಳಿಯಿಂದ 2025 ದೀಪಾವಳಿಯವರೆಗೆ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ? ಕ್ರೋಧಿ ನಾಮ ಸಂವತ್ಸರದ ದೀಪಾವಳಿಯಿಂದ ವಿಶ್ವಾವಸು ನಾಮ ಸಂನತ್ಸರದ ದೀಪಾವಳಿವರೆಗೆ ದ್ವಾದಶ ರಾಶಿಗಳ ಗೋಚಾರಫಲವನ್ನು ತಿಳಿಯಿರಿ.

ಮೇಷರಾಶಿ: ಈಗ ಮೇಷರಾಶಿಗೆ ಗುರುಬಲ ಇದ್ದು ಎಲ್ಲ ಕೆಲಸಗಳೂ ಸುಲಭವಾಗಿ ನಡೆಯುತ್ತದೆ, ಶನಿ ಕೂಡ ಮುಂದಿನ ಯುಗಾದಿಯ ವರೆಗೆ ಲಾಭಸ್ಥಾನದಲ್ಲಿ ಇರುವುದರಿಂದ ಹಣದ ಹರಿವೂ ಉತ್ತಮವಾಗಿದೆ. ಈಗ ಕೇತು ಕೂಡ ಆರನೇ ಮನೆಯಲ್ಲಿ ಇದ್ದು ನಿಮಗೆ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಮುಂದಿನ ಮಾರ್ಚ್ ನಂತರ ಶನಿಯ 12ನೇ ಮನೆಯ ಪ್ರವೇಶದಿಂದ ನಿಮಗೆ ಸಾಡೆಸಾತಿಯ ಪ್ರಭಾವ ದೊರೆಯುವುದರಿಂದ ಕೊಂಚ ಜಾಗರೂಕತೆ ಅವಶ್ಯ. ಹಣಕಾಸಿನ ಏರುಪೇರು ಆಗಬಹುದು. ಮುಂದಿನ ಮೇ 2025 ಕ್ಕೆ ರಾಹು ನಿಮ್ಮ ರಾಶಿಯಿಂದ ಹನ್ನೊದನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಧನಲಾಭ ಅನುಕೂಲ ದೊರೆಯುತ್ತದೆ.

ವೃಷಭರಾಶಿ: ಈಗ ನಿಮಗೆ ರಾಹುವಿನ ಬಲ ಇದೆ. ರಾಹು ಲಾಭಸ್ಥಾನದಲ್ಲಿ ಧನಲಾಭ ನಿರಂತರವಾಗಿ ಕೊಡುತ್ತಾನೆ. ಮುಂದೆ 2025 ಏಪ್ರಿಲ್ ಸಮಯಕ್ಕೆ ಗುರುಬಲವೂ ಹಾಗೂ ಶನಿಬಲವೂ ಸಿಗಲಿದೆ. ಶನಿ ಲಾಭಸ್ಥಾನಕ್ಕೆ ಪ್ರವೇಶ ಮಾಡಿ ನಿಮಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ಗುರು ಕೂಡ ಎರಡನೇ ಮನೆಗೆ ಪ್ರವೇಶವಾಗಿ ಸಕಲ ಕಲ್ಯಾಣವನ್ನೂ ಮಾಡುತ್ತಾನೆ. ಒಳ್ಳೆಯ ಕೀರ್ತಿ ಅಭಿವೃದ್ಧಿ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಹಣದ ಹರಿವು ಉತ್ತಮವಾಗುತ್ತದೆ.

ಮಿಥುನರಾಶಿ: ಈಗ ನಿಮಗೆ ಗುರುಬಲ ಶನಿಬಲ ಎರಡೂ ಇಲ್ಲ. ಮುಂದೆ ಶನಿ ಹತ್ತನೇ ಮನೆಗೆ ಪ್ರವೇಶವಾದಾಗಲೂ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅನುಕೂಲವೂ ಕಡಿಮೆ. ಗುರು ನಿಮ್ಮ ರಾಶಿಗೇ ಬರುತ್ತಾನೆ. ಇದು ಕೊಂಚ ಒತ್ತಡಗಳನ್ನು ಕೊಡುತ್ತದೆ. ಆದರೆ ಮೇ ೨೦೨೫ ಹೊತ್ತಿಗೆ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚನ ಧನಲಾಭ ಅನುಕೂಲ ಇದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ.

ಕಟಕರಾಶಿ: ಈಗ ನಿಮಗೆ ಗುರು ಒಂಬತ್ತನೇ ಮನೆಯಲ್ಲಿ ಇದ್ದು ಭಾಗ್ಯಗಳನ್ನು ಕೊಡುತ್ತಾನೆ. ನೀವು ಮಾಡುವ ಕೆಲಸಕ್ಕೆ ಗುರುವಿನ ಅನುಗ್ರಹ ದೊರೆಯುತ್ತದೆ. ಮುಂದೆ ೨೦೨೫ ಏಪ್ರಿಲ್ ಸಮಯಕ್ಕೆ ಅಷ್ಟಮ ಶನಿಯಿಂದ ಸಂಪೂರ್ಣ ಬಿಡುಗಡೆ ದೊರೆತು ನೀವು ಸಂಕಟಗಳಿಂದ ಹೊರಬರುತ್ತೀರಿ. ಮನಸ್ಸಿಗೆ ಆಹ್ಲಾದತೆ ದೊರೆಯುತ್ತದೆ. ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಆದರೆ 2025 ಮೇ ಸಮಯಕ್ಕೆ ಗುರುಬಲ ಕಡಿಮೆಯಾಗಿ ಕೊಂಚ ಒತ್ತಡಗಳು ಸೃಷ್ಟಿಯಾಗಬಹುದು. ರಾಹುವಿನ ಎಂಟನೇ ಮನೆ ಪ್ರವೇಶದಿಂದ ಅನಾರೋಗ್ಯ ಆಗಬಹುದು. ಜಾಗ್ರತೆ ವಹಿಸಿ.

ಸಿಂಹರಾಶಿ: ನಿಮಗೆ ಈ ದೀಪಾವಳಿಯಿಂದ ಮುಂದಿನ ದೀಪಾವಳಿಯ ವರೆಗೆ ಕೊಂಚ ಆತಂಕದ ವಾತಾವರಣ ಇರುತ್ತದೆ. ಮುಂದಿನ ಏಪ್ರಿಲ್ ಸಮಯಕ್ಕೆ ಶನಿ ಅಷ್ಟಮ ಸ್ಥಾನ ಪ್ರವೇಶ ಮಾಡಲಿದ್ದು ಹಣಕಾಸು ಆರೋಗ್ಯ ಕುಟುಂಬಸೌಖ್ಯ ವೃತ್ತಿ ಎಲ್ಲದಕ್ಕೂ ಒತ್ತಡ ಬೀಳಲಿದೆ. ಬಹಳ ಜವಾಬ್ದಾರಿಯಿಂದ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಮೇ ೨೦೨೫ ಸಮಯಕ್ಕೆ ಗುರುಬಲ ಬಂದರೂ ಅಷ್ಟಮ ಶನಿಯ ಪ್ರಭಾವವೇ ಮೇಲುಗೈ ಆಗಿರುತ್ತದೆ. ನಿಮ್ಮ ರಾಶಿಗೇ ಕೇತು ಪ್ರವೇಶ ಹಾಗೂ ರಾಹು ಏಳನೇ ಮನೆಗೆ ಪ್ರವೇಶ ಅಷ್ಟು ಹಿತ ಕೊಡುವುದಿಲ್ಲ. ಮನೆ ದೇವರ ಪ್ರಾರ್ಥನೆ ಪೂಜೆ ಅವಶ್ಯ. ಸುಬ್ರಹ್ಮಣ್ಯನನ್ನು ಆರಾಧಿಸಿ.

ಕನ್ಯಾರಾಶಿ: ಈಗ ನಿಮಗೆ ಗುರುಬಲ ಶನಿಬಲ ಎಲ್ಲವೂ ಇದೆ. ಈಗ ಸಮಯ ಆಹ್ಲಾದಕರವಾಗಿದೆ, ಆದರೆ ರಾಹು ಕೇತುಗಳ ಪ್ರಭಾವ ನಿಮ್ಮ ರಾಶಿಯ ಮೇಲೆ ಇರುವುದರಿಂದ ಅನಾರೋಗ್ಯ ಕಾಡುತ್ತದೆ. ಮುಂದಿನ ಏಪ್ರಿಲ್ ಸಮಯಕ್ಕೆ ಶನಿ ಏಳನೇ ಮನೆಗೆ ಪ್ರವೇಶವಾಗುತಾನೆ. ಗುರು ಹತ್ತನೇ ಮನೆಗ ಪ್ರವೇಶವಾಗುತ್ತಾನೆ. ಇವೆರಡೂ ಗ್ರಹ ಬದಲಾವಣೆ ನಿಮಗೆ ಹಿತ ಕೊಡುವುದಿಲ್ಲ. ಅಧಿಕಾರದಿಂದ ಕೆಳಗಿಳಿಯುವುದು, ಹಣಕಾಸಿನ ಒತ್ತಡ ಮುಂತಾದ ಅಹಿತಕರ ಸಂಗತಿಗಳು ಇರುತ್ತದೆ. ಮೇ ನಂತರ ರಾಹು ಆರನೇ ಮನೆಗೆ ಪ್ರವೇಶವಾದಾಗ ಕೊಂಚ ವಾತಾವರಣ ತಿಳಿಯಾಗುತ್ತದೆ. ಜೀವನ ಹಗುರ ಎನಿಸುತ್ತದೆ.

ತುಲಾರಾಶಿ: ಈಗ ನಿಮಗೆ ಗುರು ಅಷ್ಟಮದಲ್ಲಿ ಹಾಗೂ ಶನಿ ಪಂಚಮದಲ್ಲಿ ಇರುವುದು ಬಹಳ ತ್ರಾಸದಾಯಕವಾಗಿದೆ. ಮಾನಸಿಕ ಅಶಾಂತಿ, ಗೃಹಶಾಂತಿಗೆ ಧಕ್ಕೆ ಬಂದಿದೆ. ಬಹಳ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದೀರಿ. ಆದರೆ ಮುಂದಿನ ಏಪ್ರಿಲ್ ಸಮಯಕ್ಕೆ ಪಂಚಮ ಶನಿಯಿಂದ ಮುಕ್ತಿ ದೊರೆತು ಹಗುರವಾಗುತ್ತೀರಿ. ಹಾಗೂ ಗುರುವಿನ ಭಾಗ್ಯಸ್ಥಾನ ಪ್ರವೇಶದಿಂದ ಸಕಲ ವಿಷಯದಲ್ಲೂ ಶುಭಫಲಗಳು ಸಿಗಲಿದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಕಾರ್ಯಸಿದ್ದಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಅಧಿಕಾರ ಪ್ರಾಪ್ತಿ, ಆಸ್ತಿ ಕೊಳ್ಳುವುದು ಮುಂತಾದ ಶುಭಫಲಗಳು ದೊರೆಯಲಿದೆ.

ವೃಶ್ಚಿಕರಾಶಿ: ಈಗ ನಿಮಗೆ ಏಳರಲ್ಲಿ ಗುರು ಹಾಗೂ ಲಾಭಸ್ಥಾನದಲ್ಲಿ ಕೇತು ಇದ್ದು ಬಹಳಷ್ಟು ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಹಣದ ಹರಿವು ಉತ್ತಮವಿದೆ. ನಿಮ್ಮ ಕೆಲಸಕಾರ್ಯಗಳು ಉತ್ತಮ ಫಲ ನೀಡುತ್ತಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇದೆ. ಆದರೆ ಮುಂದೆ ಏಪ್ರಿಲ್ ನಂತರ ಶನಿ ಪಂಚಮ ಸ್ಥಾನಕ್ಕೂ ಗುರು ಅಷ್ಠಮ ಸ್ಥಾನಕ್ಕೂ ಪ್ರವೇಶವಾಗುತ್ತಾನೆ. ಆಗ ಕೊಂಚ ಒತ್ತಡಗಳು ಇರುತ್ತದೆ. ಹಣಕಾಸಿನ ಅಡಚಣೆ, ಮುಂತಾದ ವ್ಯವಹಾರದಲ್ಲಿ ನಷ್ಟ ನಿಧಾನ ಪ್ರಗತಿ ಇರುತ್ತದೆ. ನೀವು ಮುಂದಿನ ದೀಪಾವಳಿಯ ವರೆಗೆ ಎಚ್ಚರಿಕೆಯಿಂದ ಇರಬೇಕು. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದೆ ವಿವೇಚನೆಯಿಂದ ವರ್ತಿಸಬೇಕು. ಹಿನ್ನಡೆಗಳನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಬೇಕು.

ಧನಸ್ಸುರಾಶಿ: ಈಗ ನಿಮಗೆ ಶನಿ ಮೂರನೇ ಮನೆಯಲ್ಲಿ, ಗುರು ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಗುರುಬಲ ಈಗ ಸಧ್ಯಕ್ಕೆ ಇಲ್ಲ. ಆದ್ದರಿಂದ ಒತ್ತಡಗಳು ಇರುತ್ತದೆ. ಆದರೆ ೨೦೨೫ ಏಪ್ರಿಲ್ ಸಮಯಕ್ಕೆ ಗುರು ಏಳನೇ ಪ್ರವೇಶವಾಗುತ್ತಾನೆ ಹಾಗೂ ರಾಹು ಮೂರನೇ ಪ್ರವೇಶವಾಗುತ್ತಾನೆ ಮತ್ತು ಶನಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಶನಿಯ ಬಲ ಕಡಿಮೆಯಾದರೂ ರಾಹು ಗುರುವಿನ ಬಲ ನಿಮಗೆ ವರ್ಷಪೂರ್ತಿ ಕಾಪಾಡುತ್ತದೆ. ಧನ ಸಂಗ್ರಹ ಚೆನ್ನಾಗಿದೆ. ಗುರುವಿನ ಅನುಗಹ್ರದಿಂದ ನಿಮಗೆ ಎಲ್ಲ ವಿಧದಲ್ಲೂ ಶುಭಫಲಗಳು ದೊರೆಯುತ್ತದೆ.

ಮಕರರಾಶಿ: ಈಗ ಗುರುಬಲ ರಾಹು ಬಲ ಚೆನ್ನಾಗಿದೆ. ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಮುಂದಿನ ಏಪ್ರಿಲ್ ಹೊತ್ತಿಗೆ ಶನಿ ಸಹ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶವಾಗಿ ಇನ್ನೂ ಹೆಚ್ಚಿ ಶಕ್ತಿ ಸಾಮರ್ಥ್ಯ ಕೊಟ್ಟು ಕಾಪಾಡುತ್ತಾನೆ. ಸಾಡೆಸಾತಿಯಿಂದ ಮುಕ್ತರಾಗುತ್ತೀರಿ. ಶನಿ ನಿಮ್ಮ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ದೂರ ಮಾಡುತ್ತಾನೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಅವಕಾಶಗಳು ನಿಮ್ಮಬಳಿ ಅರಸಿ ಬರುತ್ತದೆ.

ಕುಂಭರಾಶಿ: ಈಗ ನಿಮಗೆ ಚತುರ್ಥದಲ್ಲಿ ಇರುವ ಗುರು, ನಿಮ್ಮ ರಾಶಿಯಲ್ಲೇ ಇರುವ ಶನಿಯಿಂದ ಬರೀ ಅಡೆತಡೆಗಳು ನಕಾರಾತ್ಮಕ ಸಂಗತಿಗಳೇ ಕಾಣುತ್ತಿವೆ. ಯಾವ ಕೆಲಸಕ್ಕೆ ಕೈಹಾಕಿದರೂ ಮುಂದುವರೆಯುವುದಿಲ್ಲ. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮಾನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳು ನಡೆಯುತ್ತಿವೆ. ಆದರೆ ಮುಂದೆ ೨೦೨೫ ಏಪರಿಲ್ ಹೊತ್ತಿಗೆ ಗುರುಬಲ ಬಂದು ಪರಿಸ್ಥಿತಿಗಳು ತಿಳಿಯಾಗುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆ. ಶನಿ ಕೂಡ ನಿಮ್ಮ ರಾಶಿಯಿಂದ ಮುಂದಿನ ರಾಶೀಗೆ ಚಲಿಸುತ್ತಾನೆ. ಆಗ ನೀವು ಸಾಡೆಸಾತಿ ಶನಿಯ ಎರಡನೇ ಭಾಗದಿಂದ ಮೂರನೇ ಭಾಗಕ್ಕೆ ಹೋಗುತ್ತೀರಿ. ಮೂರನೇ ಭಾಗದಲ್ಲಿ ಹೆಚ್ಚು ತೊಂದರೆಗಳು ಇರುವುದಿಲ್ಲ. ಆದರೆ ರಾಹು ಆಗ ನಿಮ್ಮ ರಾಶಿಗೇ ಬರುವುದರಿಂದ ಅನಾರೋಗ್ಯ ಕಾಡಬಹುದು. ಎಚ್ಚರಿಕೆ ವಹಿಸಿ.

ಮೀನರಾಶಿ: ಈಗ ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದು ಬಹಳ ಕಷ್ಟನಷ್ಟ ಅನುಭವಿಸುತ್ತಿದ್ದೀರಿ. ಗುರುಬಲವೂ ಇಲ್ಲ. ಮುಂದಿನ ವರ್ಷ ಸಹ ಗುರುಬಲ ಬರುವುದಿಲ್ಲ. ಈಗ ಮೂರನೇ ಮನೆಯಲ್ಲಿ ಇರುವ ಗುರು ಮುಂದಿನ ಏಪ್ರಿಲ್ ಗೆ ನಾಲ್ಕನೇ ಮನೆ ಪ್ರವೇಶವಾಗುತ್ತಾನೆ. ಇದು ಕೂಡ ನಿಮಗೆ ಹೆಚ್ಚಿನ ಅನುಕೂಲ ಕೊಡುವುದಿಲ್ಲ. ಕೌಟುಂಬಿಕ ಜೀವನ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ಕೇತು ಏಪ್ರಿಲ್ ನಂತರ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಏನೇ ಆದರೂ ಕೊಂಚ ಯೋಚಿಸಿ ವಿವೇಚಿಸಿ ಮುಂದಡಿ ಇಡಿ. ಯಾವುದೇ ನಿರ್ಧಾರಗಳನ್ನು ಪರಾಮರ್ಷಿಸಿ ತೆಗೆದುಕೊಳ್ಳಿ. ಮನೆದೇವರ ದರ್ಶನ ಮಾಡಿಬನ್ನಿ. ಸವಾಲುಗಳನ್ನು ದೈರ್ಯದಿಂದ ಎದುರಿಸಿ.
ಶುಭಮಸ್ತು












Click it and Unblock the Notifications