Diwali 2023: ಈ ಬಣ್ಣದ ಬಟ್ಟೆ ನಿಮ್ಮ ಬಳಿ ಇದಿಯಾ? ಇಲ್ಲದಿದ್ದರೆ ಹುಡ್ಕಾಡ್ಕೊಂಡು ತಗೊಳಿ, ದೀಪಾವಳಿಗೆ ಇದನ್ನು ಧರಿಸಿದರೆ ಏನಾಗುತ್
ದೀಪಾವಳಿ ಜೀವನದಲ್ಲಿ ಸಂತೋಷ ಮತ್ತು ಬೆಳಕನ್ನು ತರುವ ಹಬ್ಬವಾಗಿದೆ. ಸಾಮಾನ್ಯವಾಗಿ ಈ ಹಬ್ಬದಂದು ಹೊಸ ಬಟ್ಟೆ ಧರಿಸುವುದು ರೂಢಿ. ಆದರೆ ಈ ದಿನ ನೀವು ಧರಿಸುವ ಬಟ್ಟೆಯ ಬಣ್ಣ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದೀಪಾವಳಿಯಂದು ನಿಮ್ಮ ರಾಶಿಗನುಗುಣವಾಗಿ ಬಟ್ಟೆಯನ್ನು ಧರಿಸಿ. ಈ ದೀಪಾವಳಿಗೆ ಈ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಹಾಗಾದರೆ ನಿಮ್ಮ ಜನ್ಮ ರಾಶಿಯ ಆಧಾರದ ಮೇಲೆ ಈ ದೀಪಾವಳಿಗೆ ನೀವು ಯಾವ ಬಣ್ಣದ ಬಟ್ಟೆಗಳನ್ನು ಆರಿಸಬೇಕು ಎಂಬುದನ್ನು ಈಗ ತಿಳಿಯೋಣ. ಜೊತೆಗೆ ಜ್ಯೋತಿಷ್ಯದ ಪ್ರಕಾರ ಇದು ಯಾವ ಫಲಿತಾಂಶವನ್ನು ನಿಮಗೆ ನೀಡಲಿದೆ ಅನ್ನೋದರ ಮಾಹಿತಿ ಇಲ್ಲಿದೆ.

ಮೇಷ ರಾಶಿ
ಮೇಷ ರಾಶಿಯವರು ಈ ದೀಪಾವಳಿಗೆ ಹೊಸ ಬಟ್ಟೆಯನ್ನು ಖರೀದಿಸುತ್ತಿದ್ದರೆ ಕೆಂಪು ಬಣ್ಣದ ಬಟ್ಟೆಯನ್ನು ಖರೀದಿ ಮಾಡಿ. ಈ ಬಣ್ಣವು ನಿಮಗೆ ಆಕರ್ಷಕ ನೋಟವನ್ನು ನೀಡುತ್ತದೆ. ಜೊತೆಗೆ ನಿಮ್ಮ ಕಡೆಗೆ ಎಲ್ಲಾ ಗಮನವನ್ನು ಸೆಳೆಯುವಂತೆ ಮಾಡುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮಾತ್ರವಲ್ಲದೆ ತಕ್ಷಣವೇ ನಿಮ್ಮನ್ನು ಹುರಿದುಂಬಿಸುತ್ತದೆ. ಹೀಗಾಗಿ ಈ ದೀಪಾವಳಿಯಲ್ಲಿ ನೀವು ಬಟ್ಟೆಗಳನ್ನು ಖರೀದಿಸುವಾಗ ಕೆಂಪು ಬಣ್ಣವನ್ನು ಖರೀದಿಸಲು ಮರೆಯಬೇಡಿ.

ವೃಷಭ ರಾಶಿ
ನೀಲಿ ಬಣ್ಣ ತಟಸ್ಥ ಬಣ್ಣವಾಗಿದ್ದು ಅದು ವೃಷಭ ರಾಶಿಯವರಿಗೆ ಹೆಚ್ಚು ಸೂಕ್ತವಾಗಿದೆ. ಈ ದೀಪಾವಳಿಗೆ ನೀವು ನೀಲಿ ಬಣ್ಣದ ಉಡುಪನ್ನು ಧರಿಸಲು ಆಯ್ಕೆ ಮಾಡಬಹುದು. ಇದರಿಂದ ನಿಮ್ಮ ಮನೆ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯನ್ನು ನೀವು ಕಾಣುವಿರಿ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದೀಪಾವಳಿಗೆ ಕಿತ್ತಳೆ ಬಣ್ಣದ ಉಡುಪನ್ನು ಧರಿಸುವುದು ತುಂಬಾ ಒಳ್ಳೆಯದು. ನಿಮ್ಮ ಹರ್ಷಚಿತ್ತದಿಂದ ಕೂಡಿದ ವ್ಯಕ್ತಿತ್ವವನ್ನು ಹೊರತರಲು ದೀಪಾವಳಿಗೆ ಮಿನುಗುವ ಕಿತ್ತಳೆ ಬಣ್ಣದ ಉಡುಪುಗಳನ್ನು ನೀವು ಧರಿಸಿದರೆ ತುಂಬಾ ಒಳ್ಳೆಯದು.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತುಂಬಾ ಭಾವುಕ ಸ್ವಭಾವದರಾಗಿರುತ್ತಾರೆ. ಆದ್ದರಿಂದ ಅವರು ಅರ್ಥಪೂರ್ಣವಾದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಹಸಿರು ಎಂದರೆ ಪ್ರಕೃತಿ ಎಂದರ್ಥ. ಹೀಗಾಗಿ ಸಂತೋಷವನ್ನು ಪ್ರತಿನಿಧಿಸುವ ಈ ಹಬ್ಬದಂದು ನೀವು ಹಸಿರು ಬಣ್ಣದ ಉಡುಪನ್ನು ಧರಿಸುವುದು ಒಳ್ಳೆಯದು.

ಸಿಂಹ ರಾಶಿ
ಸಾಮಾನ್ಯವಾಗಿ ಸಿಂಹ ರಾಶಿಯವರು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಅವರು ಉಡುಪು ಕೂಡ ಅವರ ಆತ್ಮವಿಶ್ವಾಸವನ್ನು ಹೊರಸೂಚಿಸುವಂತಿರುತ್ತದೆ. ಅವರ ಉಡುಪಿನ ಆಯ್ಕೆಯೂ ಸುಂದರವಾಗಿರುತ್ತದೆ. ಈ ಬಾರಿ ದೀಪಾವಳಿಗೆ ನೀವು ಹೊಸ ಬಟ್ಟೆಯನ್ನು ಖರೀದಿ ಮಾಡಲು ಯೋಚಿಸಿದ್ದರೆ ಕಂದು ಬಣ್ಣದ ಬಟ್ಟೆ ನಿಮಗೆ ಮಂಗಳಕರವಾಗಿದೆ.

ಕನ್ಯಾ ರಾಶಿ
ವಿನಮ್ರ ರಾಶಿಯವರಾದ ಕನ್ಯಾ ರಾಶಿಯವರು ಯಾವಾಗಲು ಸಾಮರಸ್ಯವನ್ನು ಹೊರಹಾಕಲು ಇಷ್ಟಪಡುತ್ತಾರೆ. ಆದ್ದರಿಂದ ಈ ದೀಪಾವಳಿಯಲ್ಲಿ ಕನ್ಯಾ ರಾಶಿಯವರು ಬಿಳಿ ಬಣ್ಣದ ಉಡುಪು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದು ಶಾಂತಿಯ ಸಂಕೇತವಾಗಿದೆ. ಬೆಳಕಿನ ಹಬ್ಬದಲ್ಲಿ ಶಾಂತಿಯ ಸಂಕೇತವಾಗಿರುವ ಬಿಳಿ ಬಣ್ಣದ ಉಡುಪು ನಿಮ್ಮ ಜೀವನದಲ್ಲಿನ ಅಶಾಂತಿಯನ್ನು ಹೋಗಲಾಡಿಸಿ ನೆಮ್ಮದಿಯ ಜೀವನವನ್ನು ನೀಡುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ಈ ದೀಪಾವಳಿಗೆ ಹಳದಿ ಬರ್ನಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಈ ಬಣ್ಣದ ಬಟ್ಟೆ ದೀಪಾವಳಿಯಂದು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಆ ಲಕ್ಷ್ಮಿ ದೇವಿ ಕರುಣಿಸುತ್ತಾಳೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಐಷಾರಾಮಿ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಈ ದೀಪಾವಳಿಯಲ್ಲಿ ಅವರಿಗೆ ಮರೂನ್ ಬಣ್ಣದ ಉಡುಪುಗಳು ಸೂಕ್ತವಾಗಿರುತ್ತದೆ. ಹೀಗಾಗಿ ಈ ಬಣ್ಣದ ಬಟ್ಟೆ ನಿಮಗೆ ಹೆಚ್ಚು ಸೂಕ್ತವಾಗಿದ್ದು ಹೆಚ್ಚು ಶುಭಫಲಿತಾಂಶವನ್ನು ನೀಡುತ್ತದೆ.

ಧನು ರಾಶಿ
ಧನು ರಾಶಿಯವರು ಕ್ಲಾಸಿ ಬಣ್ಣದ ಉಡುಪನ್ನು ಧರಿಸಲು ಇಟ್ಟಪಡುತ್ತಾರೆ. ಈ ರಾಶಿಯವರು ದೀಪಾವಳಿಯಂದು ನೇರಳೆ ಬಣ್ಣದ ಉಡುಪುಗಳನ್ನು ಧರಿಸುವುದು ಹೆಚ್ಚು ಸೂಕ್ತವಾಗಿದೆ. ನೇರಳೆ ಬಣ್ಣದ ಉಡುಪನ್ನು ಧರಿಸಿ ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ನೀವಂದುಕೊಂಡ ಕೆಲಸಗಳು ಪೂರ್ಣಗೊಂಡು ಆರ್ಥಿಕ ಸ್ಥಿತಿ ಉತ್ತಮವಾಗುವ ಆಶೀರ್ವಾದ ಸಿಗಲಿದೆ.

ಮಕರ ರಾಶಿ
ಕಪ್ಪು ಬಣ್ಣವನ್ನು ಸಾಮಾನ್ಯವಾಗಿ ದೀಪಾವಳಿಯ ಸಮಯದಲ್ಲಿ ತಪ್ಪಿಸಬೇಕಾದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ಮಕರ ರಾಶಿಯವರಿಗೆ ಈ ಬಣ್ಣ ದೀಪಾವಳಿಯಂದು ಶುಭತರಲಿದೆ. ಹೀಗಾಗಿ ಈ ದಿನ ಕಪ್ಪು ಬಟ್ಟೆಯನ್ನು ಧರಿಸಲು ಹಿಂಜರಿಕೆ ಬೇಡ.

ಕುಂಭ ರಾಶಿ
ಕುಂಭ ರಾಶಿಯವರು ಬಹಳ ಬುದ್ಧಿವಂತರು ಮತ್ತು ವಾಸ್ತವಿಕರು. ಬೂದು ಬಣ್ಣವು ಇವರಿಗೆ ಹೆಚ್ಚು ಸೂಕ್ತವಾಗಿದೆ. ಈ ದೀಪಾವಳಿಯಲ್ಲಿ ಬೂದು ಬಣ್ಣ ಉತ್ತಮ ಆಯ್ಕೆಯಾಗಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ದೀಪಾವಳಿಯಂದು ಗುಲಾಬಿ ಬಣ್ಣ ಹೆಚ್ಚು ಸೂಕ್ತವಾಗಿದೆ. ಈ ಬಣ್ಣ ಗಮನ ಸೆಳೆಯುವ ಬಣ್ಣವಾಗಿದ್ದು ಮೀನು ರಾಶಿಯವರಿಗೆ ಹೆಚ್ಚು ಸೂಕ್ತವಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications