• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Deepavali Horoscope 2022: ದೀಪಾವಳಿ ವಾರ್ಷಿಕ ಭವಿಷ್ಯ : ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ ನೋಡಿ

|
Google Oneindia Kannada News

ದೀಪಾವಳಿಯು ವರ್ಷದ ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಅದ್ದೂರಿಯಾಗಿ ಮಾಡುವ ಸಿದ್ಧತೆಗಳು ಪ್ರತಿ ಮನೆಯಲ್ಲೂ ನಡೆಯುತ್ತವೆ. ಈ ವರ್ಷ, ದೀಪಾವಳಿಯನ್ನು ಸೋಮವಾರ, ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಲಕ್ಷ್ಮಿ ಪೂಜೆ ಮುಹೂರ್ತವು ಸಂಜೆ 06:53 ಕ್ಕೆ ಪ್ರಾರಂಭವಾಗಿ 08:16 ಕ್ಕೆ ಮುಗಿಯುತ್ತದೆ. ಪ್ರದೋಷ ಕಾಲವು ಸಂಜೆ 05:43 ರಿಂದ ರಾತ್ರಿ 08:16 ರವರೆಗೆ ಇರುತ್ತದೆ ಮತ್ತು ಅಮಾವಾಸ್ಯೆಯು ಅಕ್ಟೋಬರ್ 24 ರಂದು ಸಂಜೆ 05:27 ರಿಂದ ಅಕ್ಟೋಬರ್ 25 ರ ಸಂಜೆ 04:18 ರವರೆಗೆ ಇರುತ್ತದೆ.

ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಜನರು ಮನೆಯ ಅಂಗಳವನ್ನು ಅಲಂಕರಿಸುತ್ತಾರೆ. ಮನೆಯ ಪ್ರತಿಯೊಂದು ಮೂಲೆಯನ್ನು ಬೆಳಗಿಸುತ್ತಾರೆ, ಇದರಿಂದ ಮಾ ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸುತ್ತಾರೆ ಎಂದು ನಂಬಲಾಗಿದೆ. ದೀಪಾವಳಿ ಎಂದರೆ ದೀಪಗಳ ಹಬ್ಬ. ಹಾಗಾಗಿ ಈ ದಿನದಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ. ಇದು ಮನೆಗೆ ಬಹಳ ಶುಭ ಎನ್ನಲಾಗುತ್ತದೆ.

ಉದ್ಯೋಗಿಗಳಿಗೆ 10 ದಿನಗಳ ದೀಪಾವಳಿ ರಜೆ ನೀಡಿದೆ ಈ ಕಂಪೆನಿ ಉದ್ಯೋಗಿಗಳಿಗೆ 10 ದಿನಗಳ ದೀಪಾವಳಿ ರಜೆ ನೀಡಿದೆ ಈ ಕಂಪೆನಿ

ಮೇಷ: ಬೆಳಕಿನ ಹಬ್ಬಕ್ಕೆ ಬೆಳಗುವುದು ಜೀವನ

ಮೇಷ: ಬೆಳಕಿನ ಹಬ್ಬಕ್ಕೆ ಬೆಳಗುವುದು ಜೀವನ

ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಮೇಷ ರಾಶಿಯವರಿಗೆ ಈ ಹಬ್ಬ ಹೊಸ ಬೆಳಕನ್ನು ತರಲಿದೆ. ಈ ವರ್ಷ ಮೇಷ ರಾಶಿಯವರಿಗೆ ವಿಶೇಷವಾಗಿರಲಿದೆ. ನಿಮ್ಮ ಮನೆ ಸಂತೋಷದಿಂದ ತುಂಬಿರುತ್ತದೆ. ಬಹುತೇಕ ಎಲ್ಲಾ ಮೇಷ ರಾಶಿಯವರು ಪಟಾಕಿಗಳ ದೊಡ್ಡ ಅಭಿಮಾನಿಗಳಾಗಿರುತ್ತಾರೆ. ಈ ಆಚರಣೆಯ ನಡುವೆ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಲು ಸಲಹೆ ನೀಡಲಾಗುತ್ತದೆ.

ಸಾಹಸ ಪ್ರಿಯರಾಗಿರುವ ನೀವು ದೀಪಾವಳಿ ರಜಾದಿನಗಳ ಲಾಭವನ್ನು ಪಡೆದುಕೊಳ್ಳುತ್ತೀರಿ. ಅತ್ಯಾಕರ್ಷಕ ಸಾಹಸ ಪ್ರವಾಸಕ್ಕೆ ಹೋಗಬಹುದು. ಮನೆಯಲ್ಲಿ ತಯಾರಿಸಿದ ಭಕ್ಷ್ಯಗಳ ಹಬ್ಬದ ಜೊತೆಗೆ ಉತ್ತಮವಾದ ದೀಪೋತ್ಸವವನ್ನು ಏರ್ಪಡಿಸುತ್ತೀರಿ. ಈ ರಜಾದಿನಗಳಲ್ಲಿ ಅತ್ಯುತ್ತಮವಾಗಿ ಆನಂದಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುತ್ತೀರಿ. ಮನೆಯಲ್ಲಿ ಇರಲಿ ಅಥವಾ ಹೊರಗೆ ಇರಲಿ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮಿಂದ ಉಡುಗೊರೆಗಳು ಮತ್ತು ಶುಭಾಶಯಗಳನ್ನು ಸ್ವೀಕರಿಸುತ್ತಾರೆ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಈ ದೀಪವಳಿ ಹಬ್ಬ ಬದುಕನ್ನು ಬೆಳಗಿಸುತ್ತದೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಮೇಷ ರಾಶಿಯವರಾಗಿದ್ದಾರೆ: ಅಜಯ್ ದೇವಗನ್, ಅರ್ಷದ್ ವಾರ್ಸಿ, ಇಮ್ರಾನ್ ಹಶ್ಮಿ, ಫಾರೂಕ್ ಶೇಖ್, ಜಯಪ್ರದ, ಜೀತೇಂದ್ರ, ಲಾರಾ ದತ್ತಾ, ಮಧು, ಪ್ರಭುದೇವ, ರಾಣಿ ಮುಖರ್ಜಿ

ವೃಷಭ: ಅಡೆತಡೆ ಜಯಿಸುವ ಶಕ್ತಿ

ವೃಷಭ: ಅಡೆತಡೆ ಜಯಿಸುವ ಶಕ್ತಿ

ಈ ದೀಪಾವಳಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ. ಜೀವನದ ಕಷ್ಟಗಳು ನಿವಾರಣೆಯಾಗಲಿವೆ. ಒಂದು ವೇಳೆ ನಿಮ್ಮ ಹಾದಿಯಲ್ಲಿ ಸಮಸ್ಯೆಗಳು ಎದುರಾದರೂ ಅದನ್ನು ಜಯಿಸುವ ಶಕ್ತಿ ನಿಮಗೆ ಪ್ರಾಪ್ತಿಯಾಗಲಿದೆ. ಮಣ್ಣಿನ, ಸುಂದರವಾದ ಬಣ್ಣಗಳ ಬೃಹತ್ ದೀಪಗಳು ಮತ್ತು ಸುಂದರವಾದ ಹೂವಿನ ರಂಗೋಲಿಯೊಂದಿಗೆ ನಿಮ್ಮ ಹಬ್ಬದ ದಿನ ಆರಂಭವಾಗಲಿದೆ. ಇತ್ತೀಚಿನ ಕೆಲವು ಹಿನ್ನಡೆಗಳು ನಿಮ್ಮಲ್ಲಿ ಕೆಲವರಿಗೆ ಕೀಳರಿಮೆಯನ್ನುಂಟುಮಾಡಬಹುದು. ಆದರೆ ಇದಕ್ಕಾಗಿ ನೀವು ಹಬ್ಬವನ್ನು ಹಾಳು ಮಾಡಲು ಬಯಸುವುದಿಲ್ಲ. ಸ್ವಯಂಪ್ರೇರಿತರಾಗಿ ಹಬ್ಬವನ್ನು ಆನಂದಿಸುತ್ತೀರಿ. ಲಕ್ಷ್ಮಿ ದೇವಿಯ ಆರಾಧನೆಯಿಂದ ಜೀವನದಲ್ಲಿ ಅಂದುಕೊಂಡ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರಲಿವೆ.

ಚಾಕೊಲೇಟ್‌ಗಳು, ಡ್ರೈಫ್ರೂಟ್ ಸಿಹಿತಿಂಡಿಗಳು, ಸಿಹಿ ಖಾದ್ಯಗಳು, ಕೇಕ್‌ಗಳು, ಚಾಟ್‌ಗಳು, ಜ್ಯೂಸ್‌ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಬೇಕರಿ ಸಿಹಿತಿಂಡಿಗಳು ಮತ್ತು ಪಾನೀಯಗಳು ನಿಮ್ಮ ಮನೆಯಲ್ಲಿ ದೀಪಾವಳಿಯ ಅತಿಥಿಯಾಗಿ ಆಗಮಿಸಬಹುದು. ಐಷಾರಾಮಿ ಜೀವನ ಈ ದಿನ ನಿಮ್ಮದಾಗಬಹುದು. ಮನೆಯಲ್ಲಿ ಅಲಂಕಾರ, ಹೊಸ ಬಟ್ಟೆಯೊಂದಿಗೆ ನೀವು ಕಂಗೊಳಿಸಲಿದ್ದೀರಿ. ನೀವು ಹೊರರಾಜ್ಯ ಪ್ರವಾಸಕ್ಕೆ ಹೋಗಬೇಕಾದರೆ, ಅದನ್ನು ಕೈಬಿಡಲು ಪ್ರಯತ್ನಿಸಿ. ಇದರಿಂದ ನೀವು ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ಈ ವಾರದಲ್ಲಿ ನಿಮ್ಮ ಸೃಜನಶೀಲತೆ ಮುಂಚೂಣಿಗೆ ಬರುತ್ತದೆ, ಇದು ನಿಮಗೆ ಉತ್ತಮ ಪ್ರತಿಫಲವನ್ನು ನೀಡುತ್ತದೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ವೃಷಭ ರಾಶಿಯವರಾಗಿದ್ದಾರೆ: ಮಾಧುರಿ ದೀಕ್ಷಿತ್, ಅನುಷ್ಕಾ ಶರ್ಮಾ, ವರುಣ್ ಧವನ್, ಪೂಜಾ ಬೇಡಿ, ಮೌಶುಮಿ ಚಟರ್ಜಿ

ಮಿಥುನ: ಮನೆಗಳಲ್ಲಿ ಬೆಳಗಿಸುವ ದೀಪ ಮನಗಳನ್ನು ಬೆಳಗಿಸುವುದು

ಮಿಥುನ: ಮನೆಗಳಲ್ಲಿ ಬೆಳಗಿಸುವ ದೀಪ ಮನಗಳನ್ನು ಬೆಳಗಿಸುವುದು

ದೀಪಾವಳಿ ಈ ವರ್ಷ ಮಿಥುನ ರಾಶಿಯವರಿಗೆ ಮಂಗಳಕರವಾಗಿದೆ. ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಮನೆಯ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದಲ್ಲಿ ಪರಸ್ಪರ ನಂಬಿಕೆ ಪ್ರೀತಿ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳು ಕೈ ಹಿಡಿಯಲಿವೆ. ಅದೃಷ್ಟ ನಿಮ್ಮ ಕೈ ಬಿಡುವುದಿಲ್ಲ. ಹೀಗಾಗಿ ಸಮಸ್ಯೆಗಳಿಗೆ ಧೈರ್ಯಗುಂದಬೇಡಿ.

ಇತ್ತೀಚಿನ ಎಲ್ಲಾ ಅತಿಯಾದ ಕೆಲಸದಿಂದ ನೀವು ಸ್ವಲ್ಪ ಒತ್ತಡವನ್ನು ಅನುಭವಿಸುತ್ತಿರಬಹುದು, ಬಹುಶಃ ದಣಿದಿರಬಹುದು. ಆದ್ದರಿಂದ ಈ ದೀಪಾವಳಿ ವಾರವು ನಿಮಗೆ ದೈವದತ್ತವಾಗಿದೆ. ದೀಪಾವಳಿ ವೇಳೆ ರಂಗೋಲಿಯಲ್ಲಿ ಹೂವುಗಳ ಮಿಶ್ರಣ ಮಿಥುನ ರಾಶಿಯವರಿಗೆ ಒತ್ತಡ ನಿವಾರಣೆ ಮಾಡಲಿದೆ. ದೀಪಾವಳಿ ವೇಳೆ ನಿಮ್ಮ ಒತ್ತಡ ನಿವಾರಣೆಯಾಗಲಿದೆ. ನಿಮ್ಮ ಜೀವನ ಶಕ್ತಿಯಿಂದ ತುಂಬಿರುತ್ತದೆ. ಈ ದಿನ ಸ್ನೇಹಿತರು ಮತ್ತು ಸಂಬಂಧಿಕರನ್ನು ನೀವು ಭೇಟಿಯಾಗುತ್ತೀರಿ. ಜೊತೆಗೆ ಮನೆಯಿಂದ ದೂರದ ಪ್ರವಾಸಕ್ಕೆ ಹೋಗಬಹುದು. ನೀವು ಪ್ರೀತಿಸುವ ಸ್ನೇಹಿತರೊಂದಿಗೆ ದೀಪಾವಳಿಯನ್ನು ಆಚರಿಸಲು ಈ ರಜಾದಿನಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು. ಅದು ನಿಮ್ಮ ಪ್ರಿಯತಮೆಯಾಗಿದ್ದರೆ, ಇನ್ನಷ್ಟು ಉತ್ತಮವಾಗಿರುತ್ತದೆ. ಇದೆಲ್ಲವೂ ಸಹಜವಾಗಿ, ವೆಚ್ಚದಲ್ಲಿ ಹೆಚ್ಚಳವನ್ನು ಉಂಟುಮಾಡುತ್ತದೆ. ಆದರೂ ನೀವು ಹಬ್ಬದ ಆಚರಣೆಯಿಂದಾಗಿ ಹೆಚ್ಚು ಸಂತೋಷಪಡುತ್ತೀರಿ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಮಿಥುನ ರಾಶಿಯವರಾಗಿದ್ದಾರೆ: ಕರಣ್ ಜೋಹರ್, ಡಿಂಪಲ್ ಕಪಾಡಿಯಾ, ಶಿಲ್ಪಾ ಶೆಟ್ಟಿ, ಆರ್. ಮಾಧವನ್, ಪರೇಶ್ ರಾವಲ್, ಸುನಿಲ್ ದತ್, ಮಿಥುನ್ ಚಕ್ರವರ್ತಿ, ಸೋನಮ್ ಕಪೂರ್, ರಾಜೇಶ್ ರೋಷನ್, ಮುಖೇಶ್ ಭಟ್

ಕರ್ಕಾಟಕ: ಪರೀಕ್ಷೆಯಲ್ಲಿ ಸಾಧನೆ

ಕರ್ಕಾಟಕ: ಪರೀಕ್ಷೆಯಲ್ಲಿ ಸಾಧನೆ

ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಅವಕಾಶವಿದೆ. ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯವನ್ನು ಸೃಷ್ಟಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನರಂಜನೆಗಾಗಿ ಹಣವನ್ನು ಖರ್ಚು ಮಾಡಬಹುದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ನೀವು ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಶತ್ರುಗಳು ನಿಮಗೆ ತೊಂದರೆ ನೀಡಬಹುದು. ಶತ್ರುಗಳ ಬಗ್ಗೆ ಎಚ್ಚರದಿಂದಿರಿ.

ಹಬ್ಬದ ದಿನ ನೀವು ಆಧ್ಯಾತ್ಮಿಕವಾಗಿ ಉತ್ತಮ ಒಲವು ಹೊಂದಿರುವುದರಿಂದ, ಕರ್ಕ ರಾಶಿಯವರು ಪೂಜಾ ಗಂಟೆಯನ್ನು (ಘಂಟಿ) ಬಾರಿಸುವುದನ್ನು, ಮಂತ್ರಗಳನ್ನು ಪಠಿಸುವುದನ್ನು ಮತ್ತು ಲಕ್ಷ್ಮಿ ಪೂಜೆಯ ಸಮಯದಲ್ಲಿ ಸ್ವಸ್ತಿಕ್ ಮಾಡುವಿರಿ. ಈ ವರ್ಷ ನೀವು ತುಂಬಾ ಸೂಕ್ಷ್ಮ ಮತ್ತು ಭಾವನಾತ್ಮಕವಾಗಿರುತ್ತೀರಿ.

ನಿಮ್ಮ ಗಮನ ಸೃಜನಶೀಲ ಕೆಲಸದ ಕಡೆಗೆ ಇರುತ್ತದೆ. ನಿಮ್ಮ ತಿಳುವಳಿಕೆ ಮತ್ತು ಪ್ರಯತ್ನವು ನಿಮ್ಮನ್ನು ಯಶಸ್ಸಿನ ಹಾದಿಗೆ ಕರೆದೊಯ್ಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ವರ್ಷವಾಗಿರುತ್ತದೆ. ಅವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಆದಾಗ್ಯೂ, ಈ ಯಶಸ್ಸನ್ನು ನಿಲ್ಲಿಸಲು ಬಿಡಬೇಡಿ. ಅದರಿಂದ ಸ್ಫೂರ್ತಿ ಪಡೆಯಿರಿ. ಹೆಚ್ಚು ಶ್ರಮಿಸಲು ಸಜ್ಜುಗೊಳಿಸಿ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಕರ್ಕಾಟಕ ರಾಶಿಯವರಾಗಿದ್ದಾರೆ: ಕತ್ರಿನಾ ಕೈಫ್, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ನಾಸಿರುದ್ದೀನ್ ಶಾ, ಅಮರೀಶ್ ಪುರಿ, ಕರಿಷ್ಮಾ ಕಪೂರ್, ರಾಜ್ ಬಬ್ಬರ್

ಸಿಂಹ: ಆತ್ಮವಿಶ್ವಾಸ ಹೆಚ್ಚಳ

ಸಿಂಹ: ಆತ್ಮವಿಶ್ವಾಸ ಹೆಚ್ಚಳ

ಈ ವರ್ಷ ಒಳ್ಳೆಯ ಸುದ್ದಿಯನ್ನು ಪಡೆಯುವ ಸಾಧ್ಯತೆಯಿದೆ. ಸಂಜೆ ನೀವು ಮನೆಯಲ್ಲಿ ರುಚಿಕರವಾದ ಆಹಾರವನ್ನು ಆನಂದಿಸುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದ್ದರಿಂದ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ನಿಮಗೆ ತಿಳಿದಿರುವ ಜನರ ಮೂಲಕ, ನೀವು ಹೊಸ ಆದಾಯದ ಮೂಲಗಳನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಹಳೆಯ ತೊಂದರೆಗಳನ್ನು ಮರೆತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಕಾನೂನು ಸಲಹೆ ಪಡೆಯಲು ಇಂದು ವಕೀಲರನ್ನು ಭೇಟಿ ಮಾಡಿ. ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚುವುದರಿಂದ ಆರ್ಥಿಕ ಬಲವುಂಟಾಗುತ್ತದೆ.

ಈ ವರ್ಷ ನಿಮಗೆ ಅನುಕೂಲಕರವಾಗಿರುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯು ಬಹಳಷ್ಟು ಸುಧಾರಿಸುತ್ತದೆ. ಮನೆಯಲ್ಲಿ ಒಳ್ಳೆ ಕಾರ್ಯಗಳು ನಡೆಯಲಿವೆ. ನಿಮ್ಮ ಹಾಸ್ಯದ ಸ್ವಭಾವವು ಸಾಮಾಜಿಕ ಕೂಟದ ಸ್ಥಳಗಳಲ್ಲಿ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಬಹುಶಃ ಅವಿವಾಹಿತರಿಗೆ ಮದುವೆಯೂ ನಿಶ್ಚಯವಾಗಬಹುದು. ನೀವು ಕುಟುಂಬ ಸದಸ್ಯರೊಂದಿಗೆ ಶಾಪಿಂಗ್ ಹೋಗಬಹುದು. ಅಲ್ಲಿ ನೀವು ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿದೆ.

ಈ ದೀಪಾವಳಿಯನ್ನು ನೀವು ಮನೆಯಲ್ಲಿ ಅಥವಾ ಹೊರಗೆ ನಿಮ್ಮ ಸ್ನೇಹಿತರೊಂದಿಗೆ ಆಚರಿಸುತ್ತೀರಿ. ನೀವು ಈ ದೀಪಾವಳಿಯನ್ನು ನಿಮ್ಮ ಮನಃಪೂರ್ವಕವಾಗಿ ಆನಂದಿಸಲಿದ್ದೀರಿ. ದೀಪಾವಳಿಯ ದಿನದಂದು ಬಾಗಿಲ ಮುಂದೆ ಹೂವುಗಳಿಂದ ಅಲಂಕಾರ ಮಾಡಿ. ಮನೆ ದೊಡ್ಡದು ಅಥವಾ ಚಿಕ್ಕದಾಗಿದೆ ಎಂಬುದು ಮುಖ್ಯವಲ್ಲ, ಅಲ್ಲಿ ಪ್ರೀತಿ, ಶಾಂತಿ, ನೆಮ್ಮದಿ ಇರುವುದು ಮುಖ್ಯ ಎನ್ನುವುದು ಗಮನದಲ್ಲಿಡಿ. ನಿಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿಯನ್ನು ತಕ್ಕ ಮಟ್ಟಿಗೆ ಆಚರಿಸಿ. ಲಕ್ಷ್ಮಿ ದೇವಿ ನಿಮ್ಮನ್ನು ಆಶೀರ್ವದಿಸುತ್ತಾಳೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಸಿಂಹ ರಾಶಿಯವರಾಗಿದ್ದಾರೆ: ಕಾಜೋಲ್, ಡೇವಿಡ್ ಧವನ್, ಜೆನಿಲಿಯಾ ಡಿಸೋಜಾ, ಸೈಫ್ ಅಲಿ ಖಾನ್, ಸಂಜಯ್ ದತ್, ಗುಲ್ಜಾರ್, ಸುನಿಲ್ ಶೆಟ್ಟಿ

ಕನ್ಯಾ: ಉದ್ಯೋಗದಲ್ಲಿ ಹೊಸ ಅವಕಾಶ

ಕನ್ಯಾ: ಉದ್ಯೋಗದಲ್ಲಿ ಹೊಸ ಅವಕಾಶ

ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಸಾಮಾಜಿಕ ಹಬ್ಬಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಇದು ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಅದು ನಿಮಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ. ಕಷ್ಟದ ಸಂದರ್ಭಗಳಲ್ಲಿ ಇಂದು ಯಾರಾದರೂ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಯೋಗ ಮಾಡುವ ಮೊದಲು, ತಾಜಾ ಗಾಳಿಯಲ್ಲಿ ನಡೆಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಈ ವರ್ಷ ಕೊಂಚ ಕಾಳಜಿ ವಹಿಸಿ.

ಕೆಲವು ಹೊಸ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತವೆ. ಇದರಿಂದಾಗಿ ನೀವು ಅವಲಂಬಿತವಾದ ಜೀವನ ದೂರವಾಗಲಿದೆ. ಸ್ವಂತ ವ್ಯವಹಾರ ಮಾಡಲು ನಿರ್ಧರಿಸಬಹುದು. ನೀವು ಹೊಸದನ್ನು ಮಾಡಲು ಪ್ರಯತ್ನಿಸುತ್ತೀರಿ. ಹೊಸ ಕೆಲಸವನ್ನು ಪ್ರಾರಂಭಿಸಲು ನೀವು ತುಂಬಾ ಉತ್ಸುಕರಾಗಿರುತ್ತೀರಿ. ಇದರ ಪರಿಣಾಮ ಕೆಲವರ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಣಕಾಸಿನ ಭಾಗವು ಸ್ವಲ್ಪ ದುರ್ಬಲವಾಗಿರುತ್ತದೆ. ಸ್ನೇಹಿತರ ಸಹಾಯದಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.

ದೀಪಾವಳಿಯ ಸಮಯದಲ್ಲಿ ದೂರದಿಂದ ನಿಮ್ಮ ಮನೆಗೆ ಸಂಬಂಧಿಗಳು ಆಗಮಿಸುತ್ತಾರೆ. ಮನೆಯಲ್ಲಿ ಸಂತೋಷ ನೆಲೆಸಲಿದೆ. ದೀಪಗಳ ಹಬ್ಬಕ್ಕೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ. ಈ ಸಮಯದಲ್ಲಿ ಕುಟುಂಬಸ್ಥರೊಂದಿಗೆ ಸಣ್ಣ ವಿಹಾರಕ್ಕೂ ಹೋಗಬಹುದು. ಒಟ್ಟಿನಲ್ಲಿ ಈ ವರ್ಷ ನೀವು ಅಂದುಕೊಂಡ ಕಾರ್ಯಗಳು ಕೊಂಚ ತಡವಾದರೂ ನೀವು ಅಂದುಕೊಂಡಂತೆ ನಡೆಯಲಿವೆ. ಆತ್ಮವಿಶ್ವಾಸದಿಂದ ಸನ್ಮಾರ್ಗದಲ್ಲಿ ನಡೆದರೆ ಎಲ್ಲಾ ಕಾರ್ಯಗಳೂ ನಿಮ್ಮ ಕೈ ಹಿಡಿಯುತ್ತವೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಕನ್ಯಾ ರಾಶಿಯವರಾಗಿದ್ದಾರೆ: ಆಶಾ ಭೋಂಸ್ಲೆ, ಕರೀನಾ ಕಪೂರ್, ಅಕ್ಷಯ್ ಕುಮಾರ್, ರಾಕೇಶ್ ರೋಷನ್, ಶಬಾನಾ ಅಜ್ಮಿ, ರಿಷಿ ಕಪೂರ್, ಗುಲ್ಶನ್ ಗ್ರೋವರ್, ವಿವೇಕ್ ಒಬೆರಾಯ್

ತುಲಾ: ಸಮಸ್ಯೆಗಳನ್ನು ಸುಲಭವಾಗಿಸುವ ಜಾಣ್ಮೆ

ತುಲಾ: ಸಮಸ್ಯೆಗಳನ್ನು ಸುಲಭವಾಗಿಸುವ ಜಾಣ್ಮೆ

ದೀಪಾವಳಿ ನಿಮ್ಮ ಜೀವನದಲ್ಲಿ ಬಹಳ ಒಳ್ಳೆಯ ದಿನಗಳನ್ನು ತರಲಿದೆ. ನಿಮ್ಮ ಪ್ರತಿಭೆಯನ್ನು ಸರಿಯಾಗಿ ಗುರುತಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ನೀವು ದೊಡ್ಡ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸುತ್ತೀರಿ. ಬದಲಾಗುತ್ತಿರುವ ಹವಾಮಾನದಿಂದಾಗಿ, ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ. ವೈದ್ಯರ ಸಲಹೆಯೊಂದಿಗೆ ಮಾತ್ರ ಮುಂದುವರಿಯಿರಿ. ನಿಮ್ಮ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರಿ ಅಧಿಕಾರಿ ನಿಮಗೆ ಸಹಾಯ ಮಾಡುತ್ತಾರೆ. ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಮಯವಾಗಿರುತ್ತದೆ. ಪಕ್ಷಿಗಳಿಗೆ ಆಹಾರ ನೀಡುವುದರಿಂದ ನಿಮಗೆ ಲಾಭವಾಗುತ್ತದೆ.

ಪ್ರೇಮಿಗಳು ದೀಪಾವಳಿಯನ್ನು ಕಲಾತ್ಮಕ ರೀತಿಯಲ್ಲಿ ಆಚರಿಸುತ್ತಾರೆ. ರಂಗೋಲಿ ವಿನ್ಯಾಸಗಳಂತಹ ಪ್ರಕಾಶಮಾನವಾದ ಭಾವಚಿತ್ರಗಳು, ಅವರ ಪ್ರವೇಶದ್ವಾರವನ್ನು ಅಲಂಕರಿಸುವ ತೋರಣಗಳು, ಬೊಂಬೆಗಳಂತಹ ಸುಂದರವಾದ ಕಲಾಕೃತಿಗಳು ಅಥವಾ ಸೃಜನಾತ್ಮಕವಾಗಿ ಚಿತ್ರಿಸಿದ ತುಳಸಿ ಪಾಟ್ ಕೂಡ ಅವರ ಮನೆಗೆ ಸೌಂದರ್ಯವನ್ನು ವೃದ್ಧಿಸಲಿದೆ. ನಿಮ್ಮ ಸುತ್ತಲಿನ ಜನರನ್ನು ಸಂತೋಷವಾಗಿರಿಸುವುದು ನಿಮಗೆ ಎಲ್ಲಕ್ಕಿಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಪ್ರತಿಯೊಬ್ಬರನ್ನು ನೀವು ಉತ್ತಮ ರೀತಿಯಲ್ಲಿ ಯಾವುದೇ ಭೇದಭಾವವಿಲ್ಲದೆ ಕಾಣುತ್ತೀರಿ. ರಜೆಯ ಸಮಯದಲ್ಲಿ ಬಹಳ ದೂರದ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿದ್ದರೆ, ಎಲ್ಲಾ ರೀತಿಯಿಂದಲೂ ಉತ್ತಮ ಸಮಯ ಇದಾಗಿದೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ತುಲಾ ರಾಶಿಯವರಾಗಿದ್ದಾರೆ: ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ದೇವ್ ಆನಂದ್, ರೇಖಾ, ಹೇಮಾ ಮಾಲಿನಿ, ಮೆಹಮೂದ್, ಸೋಹಾ ಅಲಿ ಖಾನ್

ವೃಶ್ಚಿಕ: ವ್ಯಾಪಾರದಲ್ಲಿ ವೃದ್ಧಿ

ವೃಶ್ಚಿಕ: ವ್ಯಾಪಾರದಲ್ಲಿ ವೃದ್ಧಿ

ಸಂತೋಷ ತುಂಬಿದ ದಿನಗಳನ್ನು ನೀವು ಮುಂದಿನ ದಿನಗಳಲ್ಲಿ ಕಾಣುವಿರಿ. ವ್ಯಾಪಾರದಲ್ಲಿಯೂ ವೃದ್ಧಿಯಾಗುವ ಸಾಧ್ಯತೆಗಳಿವೆ. ಮಹಿಳೆಯರು ಅಂದುಕೊಂಡಂತೆ ಸಾಧನೆ ಮಾಡಲು ಹಲವು ಮಾರ್ಗಗಳು ಸಿಗಲಿವೆ. ಉದ್ಯೋಗಸ್ಥರ ಮಹಿಳೆಯರ ಜೀವನದಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ದಯಪಾಲಿಸಲಿದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುವುದು. ಪೋಷಕರ ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ.

ಈ ದೀಪಾವಳಿಗೆ ಚಿಕ್ಕ ಮಕ್ಕಳು ತಮ್ಮ ತಂದೆಯಿಂದ ಉಡುಗೊರೆಯನ್ನು ಪಡೆಯಬಹುದು. ನೀವು ಕುಟುಂಬ ಸದಸ್ಯರೊಂದಿಗೆ ವಾಕಿಂಗ್‌ಗೆ ಹೋಗಬಹುದು. ಕುಟುಂಬ ಸಮೇತ ಹೊರಗೆ ಹೋಗುವ ಯೋಜನೆ ರೂಪಿಸಿಕೊಳ್ಳಬಹುದು. ಸಂಜೆ ನೀವು ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಬಹುದು. ಪೋಷಕರ ಆಶೀರ್ವಾದದೊಂದಿಗೆ ಮನೆಯಿಂದ ಹೊರಬನ್ನಿ.

ಈ ದೀಪಾವಳಿಯನ್ನು ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಆಚರಣೆ ಮಾಡುವಿರಿ. ಈ ದೀಪಾವಳಿಯನ್ನು ಸುರಕ್ಷಿತ ಮತ್ತು ಸಂತೋಷದಾಯಕ ರೀತಿಯಲ್ಲಿ ಆಚರಿಸುವಿರಿ. ನಿಮ್ಮ ಜೀವನದಲ್ಲಿ ಕೊಂಚ ಅಡೆತಡೆಗಳು ಎದುರಾಗಬಹುದಾದರೂ ಅದನ್ನು ಎದುರಿಸುವ ಹಾಗೂ ಜಯಿಸುವ ಶಕ್ತಿ ನಿಮ್ಮದಾಗಲಿದೆ. ಅತ್ಯಂತ ಶಾಂತತೆಯಿಂದ ವರ್ತಿಸಿ. ಕೋಪ, ಮನಸ್ತಾಪ, ದ್ವೇಷವನ್ನು ಮರೆತುಬಿಡಿ. ನೀಮ್ಮವರನ್ನು ನೀವು ಹೆಚ್ಚು ಪ್ರೀತಿಸುವಿರಿ. ಉದ್ಯೋಗದಲ್ಲಿ ಬೆಳೆಯಲು ಹೆಚ್ಚು ಶ್ರಮ ಜೀವಿಗಳಾಗಿರುವಿರಿ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ವೃಶ್ಚಿಕ ರಾಶಿಯವರಾಗಿದ್ದಾರೆ: ಐಶ್ವರ್ಯಾ ರೈ, ಶಾರುಖ್ ಖಾನ್, ಕಮಲ್ ಹಸನ್, ಸುಶ್ಮಿತಾ ಸೇನ್, ಹೆಲೆನ್, ಜೂಹಿ ಚಾವ್ಲಾ, ಜೀನತ್ ಅಮನ್, ಖಾದರ್ ಖಾನ್, ನಂದಿತಾ ದಾಸ್, ರವೀನಾ ಟಂಡನ್

ಧನು: ಕೆಲಸದಲ್ಲಿ ಯಶಸ್ಸು

ಧನು: ಕೆಲಸದಲ್ಲಿ ಯಶಸ್ಸು

ದೀಪಾವಳಿ ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಮನರಂಜನೆಗಾಗಿ ಹಣವನ್ನು ಖರ್ಚು ಮಾಡಬಹುದು. ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಬಹುದಿನಗಳಿಂದ ಸ್ಥಗಿತವಾಗಿದ್ದ ಕೆಲಸದಲ್ಲಿ ಯಶಸ್ಸು ಸಿಗಬಹುದು. ಕಛೇರಿಯಲ್ಲಿ ಯಾವುದೇ ಕೆಲಸದ ಬಗ್ಗೆ ಆತುರದಿಂದ ವರ್ತಿಸುವುದರಿಂದ ನಿಮಗೆ ಹಾನಿಯಾಗಬಹುದು. ಆದ್ದರಿಂದ ತಾಳ್ಮೆಯಿಂದ ಕೆಲಸ ಮಾಡಿ. ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ. ನಿಮಗೆ ಅಧ್ಯಯನ ಮಾಡಲು ಹಲವು ಅವಕಾಶಗಳು ಸಿಗಲಿವೆ. ನಿತ್ಯ ಗಣೇಶನನ್ನೂ ಪೂಜಿಸಿ.

ಈ ದೀಪಾವಳಿಯ ಆಚರಣೆ ಪ್ರೀತಿ ಮತ್ತು ಪ್ರಣಯಕ್ಕೆ ಉತ್ತಮ ಹಂತವಾಗಲಿದೆ ಎಂದು ಭವಿಷ್ಯವಿದೆ. ಆದ್ದರಿಂದ ಒಂಟಿಗಳು ಪ್ರೀತಿಪಾತ್ರರೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಎದುರುನೋಡಬಹುದು. ನಿಮ್ಮ ಭಾವನೆಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಇದು ನಿಮ್ಮ ಜೀವನ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದ. ನೀವು ಈ ದೀಪಾವಳಿಯನ್ನು ಮನೆಯವರೊಂದಿಗೆ ಚೆನ್ನಾಗಿ ಮಾಡುತ್ತೀರಿ.

ಈ ವರ್ಷ ನಿಮ್ಮ ಮನೆಯಲ್ಲಿ ಅದೃಷ್ಟ ತಾಂಡವವಾಡಲಿದೆ. ಹಣ ಗಳಿಕೆಗೆ ನೂರಾರು ದಾರಿಗಳು ನಿಮ್ಮ ಕಣ್ಣು ಮುಂದೆ ಇರುತ್ತವೆ. ಹೀಗಾಗಿ ಒಳ್ಳೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ. ಸನ್ಮಾರ್ಗದಲ್ಲಿ ನಡೆದರೆ ಅದೃಷ್ಟ ನಿಮ್ಮ ಕೈ ಬಿಡುವುದಿಲ್ಲ. ಆದಷ್ಟು ದುಷ್ಟರಿಂದ ದೂರವಿರಿ. ನಿಮ್ಮ ಕಾರ್ಯಗಳ ನೀವು ಆಗಾಗ ಮೇಲ್ವಿಚಾರಣೆ ಮಾಡುವುದು ಒಳಿತು. ಶತ್ರುಗಳು ನಿಮ್ಮ ಸುತ್ತಲು ಇರುತ್ತಾರೆನ್ನುವುದನ್ನು ಮರೆಯಬೇಡಿ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಧನು ರಾಶಿಯವರಾಗಿದ್ದಾರೆ: ಧರ್ಮೇಂದ್ರ, ದಿಲೀಪ್ ಕುಮಾರ್, ಯಾಮಿ ಗೌತಮ್, ರಿತೇಶ್ ದೇಶಮುಖ್, ಗೋವಿಂದ, ರಜನಿಕಾಂತ್, ಮಹಿ ಗಿಲ್, ಶರ್ಮಿಳಾ ಟ್ಯಾಗೋರ್, ಬೊಮನ್ ಇರಾನಿ, ಸಿಲ್ಕ್ ಸ್ಮಿತಾ, ಕೊಂಕಣ ಸೇನ್ ಶರ್ಮಾ

ಮಕರ: ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯ

ಮಕರ: ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯ

ನೀವು ದೀಪಾವಳಿ ಬಳಿಕ ಉತ್ತಮ ದಿನಗಳನ್ನು ಹೊಂದಿರುತ್ತೀರಿ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಅವಕಾಶವಿದೆ. ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯವನ್ನು ಸೃಷ್ಟಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ವ್ಯಾಪಾರದಲ್ಲಿ ಯಶಸ್ಸನ್ನು ಕಾಣೂವಿರಿ. ಈ ಸಮಯದಲ್ಲಿ ನೀವು ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವಿರಿ. ಅಂದುಕೊಂಡ ಕಾರ್ಯಗಳು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳ್ಳುತ್ತವೆ. ಹೊಸ ಕೋರ್ಸ್‌ಗಳಿಗೆ ಸೇರಲು ನಿಮಗೆ ಸಾರ್ಧಯವಾಗುತ್ತದೆ. ಪಾಲುದಾರರಿಗೆ ಉಡುಗೊರೆಗಳನ್ನು ನೀಡುವಿರಿ. ಕುಟುಂಬದ ಏಳಿಗೆಗೆ ಶಾಂತಿ ಶ್ರಮಿಸುವಿರಿ. ಆರೋಗ್ಯ ಮೊದಲಿಗಿಂತ ಹೆಚ್ಚು ಫಿಟ್ ಆಗಿರುತ್ತದೆ. ನಿತ್ಯ ಗಾಯತ್ರಿ ಮಂತ್ರವನ್ನು ಪಠಿಸಿ.

ಇನ್ನೂ ದೀಪಾವಳಿಯ ಆಚರಣೆಯ ಬಗ್ಗೆ ಮಾತನಾಡುವುದಾದರೆ ಈ ದೀಪಾವಳಿ ವಾರವು ದೂರದ ಪ್ರಯಾಣಗಳಿಗೆ ಮಂಗಳಕರವಾಗಿದೆ. ನೀವು ವಿದೇಶಿ ಪ್ರವಾಸವನ್ನು ಯೋಜಿಸಬಹುದು. ಪ್ರವಾಸವನ್ನು ಬಹಳ ಪ್ರಾಯೋಗಿಕವಾಗಿ ರೂಪಿಸಬೇಕು. ಇಲ್ಲದಿದ್ದರೆ ವಿಷಯಗಳು ಅಸ್ತವ್ಯಸ್ತವಾಗಬಹುದು. ಬಿಡುವಿಲ್ಲದ ವೇಳಾಪಟ್ಟಿಯನ್ನು ನೀವು ಈ ಸಮಯದಲ್ಲಿ ಹೊಂದಿರುತ್ತೀರಿ.

ದೀಪಾವಳಿಯ ಸಮಯದಲ್ಲಿ ಕುಟುಂಬದಲ್ಲಿ ಸುಖ: ಶಾಂತಿ ನೆಲೆಸಲಿದೆ. ಆಚರಣೆಯೂ ನೀವಂದುಕೊಂಡಂತೆ ನಡೆಯಲಿದೆ. ದೀಪಾವಳಿ ರಜೆಯ ಸಮಯದಲ್ಲಿಯೂ ನೀವು ಕೆಲಸದಲ್ಲಿ ನಿರತರಾಗಿರುವುದು ಕುಟುಂಬಸ್ಥರನ್ನು ನಿರಾಶೆಗೊಳಿಸಬಹುದು.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಮಕರ ರಾಶಿಯವರಾಗಿದ್ದಾರೆ: ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಹೃತಿಕ್ ರೋಷನ್, ಜಾವೇದ್ ಅಖ್ತರ್, ರಾಜೇಶ್ ಖನ್ನಾ, ಜಾನಿ ಲಿವರ್, ನಾನಾ ಪಾಟೇಕರ್,

ಕುಂಭ: ಆಸ್ತಿ ಖರೀದಿ ಸಾಧ್ಯ

ಕುಂಭ: ಆಸ್ತಿ ಖರೀದಿ ಸಾಧ್ಯ

ದೀಪಾವಳಿ ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ತರಲಿದೆ. ನೀವು ಯಾವುದೇ ಹೊಸ ಭೂಮಿಗೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಲು ಹೋದರೆ ಅದು ನಿಮ್ಮ ಕೈಗೆಟಕಲಿದೆ. ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುವಾಗ ಸರಿಯಾದ ಭಾಷೆಯನ್ನು ಬಳಸಿ. ಈ ರಾಶಿಯ ವಿವಾಹಿತರಿಗೆ ಉತ್ತಮ ದಿನವಾಗಲಿದೆ. ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಇಬ್ಬರ ನಡುವೆ ಸಾಮರಸ್ಯ ಇರುತ್ತದೆ. ನಿತ್ಯ ಯೋಗ ಮಾಡುವುದರಿಂದ ನಿಮ್ಮ ಆರೋಗ್ಯ ಸದೃಢವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಬರಲಿವೆ. ಮನೆಯಲ್ಲಿ ಹೂವಿನ ಗಿಡ ನೆಡಿ. ಅದು ನಿಮ್ಮ ಮನಸ್ಸು ಹಾಗೂ ಆರೋಗ್ಯ ಎರಡನ್ನೂ ಉತ್ತಮವಾಗಿರಿಸುತ್ತದೆ.

ಕುಟುಂಬಕ್ಕಿಂತ ಹೆಚ್ಚಾಗಿ ಸ್ನೇಹಿತರೊಂದಿಗೆ ಇರಲು ನೀವು ಹೆಚ್ಚು ಇಷ್ಟಪಡುವಿರಿ. ನೀವು ಸಣ್ಣ ಪ್ರವಾಸ ಹೋಗಲು ಯೋಜನೆಗಳನ್ನು ಮಾಡಬಹುದು. ಆದರೂ ಅತಿಯಾದ ಖರ್ಚಿನ ಬಗ್ಗೆ ಎಚ್ಚರವಿರಲಿ. ತುಂಬಾ ಉದಾರವಾಗಿರದಿರುವುದು ಮತ್ತು ನಿಮ್ಮಿಂದಲೇ ಬಿಲ್‌ಗಳನ್ನು ಪಾವತಿಸುವ ವ್ಯಕ್ತಿಗಳಿಂದ ದೂರವಿರಿ. ಗುಂಪಿನ ಎಲ್ಲಾ ಸದಸ್ಯರ ನಡುವೆ ವೆಚ್ಚಗಳನ್ನು ಸಮಾನವಾಗಿ ವಿಭಜಿಸಿ. ನಿಮ್ಮ ಹಾಸ್ಯ ಪ್ರಜ್ಞೆ ಎಲ್ಲರನ್ನು ಸಂತೋಷಗೊಳಿಸುತ್ತದೆ. ಈ ಹಬ್ಬಕ್ಕೆ ಪಟಾಕಿಗಳನ್ನು ಸಿಡಿಸುವ ಯೋಜನೆಯಲ್ಲಿದ್ದರೆ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದನ್ನೂ ತಪ್ಪಿಸಿ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಕುಂಭ ರಾಶಿಯವರಾಗಿದ್ದಾರೆ: ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಪ್ರಾಣ್, ಪ್ರೀತಿ ಜಿಂಟಾ, ರಣಧೀರ್ ಕಪೂರ್, ಸುಭಾಷ್ ಘಾಯ್, ಟೀನಾ ಮುನಿಮ್ ಅಂಬಾನಿ, ವಹೀದಾ ರೆಹಮಾನ್

ಮೀನ: ಆರ್ಥಿಕ ಲಾಭ ಹೆಚ್ಚಳ

ಮೀನ: ಆರ್ಥಿಕ ಲಾಭ ಹೆಚ್ಚಳ

ದೀಪಾವಳಿ ನಿಮಗೆ ಸಂತೋಷದ ದಿನಗಳನ್ನು ನೀಡಲಿದೆ. ಪ್ರವಾಸೋದ್ಯಮ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಬಲವಾಗಿ ಉಳಿಯುತ್ತದೆ. ನೀವು ಸರಿಯಾದ ದಿಕ್ಕಿನಲ್ಲಿ ಶ್ರಮಿಸುತ್ತೀರಿ. ಇದರಿಂದ ಹೆಚ್ಚಿನ ಕೆಲಸ ಮಾಡುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಸಾಮಾಜಿಕ ಕಾರ್ಯಗಳಿಗಾಗಿ ನೆರೆಹೊರೆಯವರು ನಿಮ್ಮನ್ನು ಪ್ರಶಂಸಿಸಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತವೆ.

ಈ ಬಾರಿ ದೀಪಾವಳಿಯನ್ನು ಉತ್ತಮವಾಗಿ ಆಚರಿಸುತ್ತೀರಿ. ತೇಲುವ ದಿಯಾಗಳು, ಮಿನುಗುವ ದೀಪಗಳು ಮತ್ತು ಸುಂದರವಾದ ಹೂವುಗಳಿಂದ ತುಂಬಿದ ನೀರಿನ ದೊಡ್ಡ ಮಣ್ಣಿನ ಅಥವಾ ಲೋಹದ ಮಡಕೆಯನ್ನು ನೀವು ಕಾಣಬಹುದು. ಪಟಾಕಿಗಳನ್ನು ಸಿಡಿಸಬೇಡಿ. ಇದರಿಂದ ಆರೋಗ್ಯ ಹಾಳಾಗಬಹುದು. ಉಡುಗೊರೆಗಳು ಸಿಗಲಿವೆ. ಈ ದೀಪಾವಳಿ ಪ್ರೀತಿಪಾತ್ರರ ಮುಖದ ಮೇಲೆ ಪ್ರಕಾಶಮಾನವಾದ ನಗುವನ್ನು ತರುತ್ತದೆ.

ಈ ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಮೀನ ರಾಶಿಯವರಾಗಿದ್ದಾರೆ: ಅಮೀರ್ ಖಾನ್, ಅನುಪಮ್ ಖೇರ್, ಕಂಗನಾ ರನೌತ್, ಪೂಜಾ ಭಟ್, ಶಶಿ ಕಪೂರ್

English summary
Deepavali 2022 Horoscope in Kannada : Diwali Astrology Predictions for all 12 zodiac signs, know lucky and unlucky zodiac signs. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X