Daily Horoscope Sep 29: ಹರ್ಷ ಯೋಗದಿಂದ ಗೌರವ ಹೆಚ್ಚಾಗುವುದು;ಈ ರಾಶಿಯವರಿಗೆ ಅದೃಷ್ಟದ ದಿನ, ದ್ವಾದಶ ರಾಶಿಗಳ ದಿನ ಭವಿಷ್ಯ

Daily Horoscope: ಇಂದು ಅಶ್ವಿನಿ ಮಾಸದ ಕೃಷ್ಣ ಪಕ್ಷದ ತೃತೀಯ ತಿಥಿ ಸಂಜೆ 5.11 ರವರೆಗೆ ಇರುತ್ತದೆ. ನಂತರ ಚತುರ್ಥಿ ತಿಥಿ ಪ್ರಾರಂಭವಾಗುವುದು. ಅಶ್ವಿನಿ ನಕ್ಷತ್ರವು ಬೆಳಿಗ್ಗೆ 9.04 ರವರೆಗೆ ಇರುವುದು. ನಂತರ ಭರಣಿ ನಕ್ಷತ್ರವು ಪ್ರಾರಂಭವಾಗುತ್ತದೆ. ಕೃಷ್ಣ ಪಕ್ಷದ ಮೂರನೇ ದಿನ ಅಶ್ವಿನಿ-ಭರಣಿ ನಕ್ಷತ್ರಗಳು ಮತ್ತು ಹರ್ಷ ಯೋಗದ ಶುಭ ಸಂಯೋಜನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರುವುದು.

ಮೇಷ ರಾಶಿ (Aries)

ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದು. ಉದ್ಯಮಿಗಳಿಗೆ ಇವತ್ತು ಹೊಸ ಅವಕಾಶಗಳು ಸಿಗುವುದು. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶ ಸಿಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಕೊಡಬೇಕಾಗುವುದು. ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುವುದು. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಗೌರವ ಇರುವುದು. ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಆರೋಗ್ಯ ಸಾಮಾನ್ಯವಾಗಿರುವುದು.

Today Rashi Bhavishya September 29 Daily Horoscope Zodiac Predictions Lucky Number Colour of all signs

ವೃಷಭ ರಾಶಿ (Taurus)

ಕುಟುಂಬ ಸದಸ್ಯರೊಂದಿಗಿನ ಭಿನ್ನಾಪ್ರಾಯ ಆತಂಕಕ್ಕೆ ಕಾರಣವಾಗಬಹುದು. ಹಳೆಯ ಸಂಪರ್ಕಗಳು ಮತ್ತು ಗ್ರಾಹಕರಿಂದ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಸಾಮಾನ್ಯ ವಾಗಿರುವುದು. ವೃತ್ತಿಜೀವನದ ಪ್ರಮುಖ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಆರೋಗ್ಯ ಸಾಮಾನ್ಯವಾಗಿರುವುದು. ಮನೆಯ ಖರ್ಚು ಹೆಚ್ಚಾಗುವುದು. ಆದರೂ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು.

ಮಿಥುನ ರಾಶಿ (Gemini)

ಇವತ್ತಿನ ದಿನ ನಿಮಗೆ ಅನುಕೂಲಕರವಾಗಿರುವುದು. ಆದರೂ ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಸ್ನೇಹಿತರು ಮತ್ತು ಹಿರಿಯರ ಸಲಹೆಯನ್ನು ಕೇಳಿ. ಕೆಲಸದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು. ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನಗಳನ್ನು ತರುವುದು. ತಲೆನೋವಿನ ಸಮಸ್ಯೆ ಕಾಡುವುದು. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿರುವುದು.

ಕರ್ಕಾಟಕ ರಾಶಿ (Cancer)

ಮನೆಯಲ್ಲಿ ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳುವುದು. ಮಾತುಕತೆ ಮೂಲಕ ಮೂಲಕ ಪರಿಹಾರ ಮಾಡಿಕೊಳ್ಳಿ. ಭಾವನೆಗೆ ಬಿದ್ದು ಯಾರನ್ನೂ ನಂಬಬೇಡಿ. ಉದ್ಯೋಗಿಗಳಿಗೆ ಹೊಸ ಕೆಲಸ ಸಿಗುವುದು. ಉದ್ಯೋಗಗಳನ್ನು ಬದಲಾಯಿಸುವ ಮೊದಲು, ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುವ ಸಾಧ್ಯತೆಯಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.

ಸಿಂಹ ರಾಶಿ (Leo)

ನಿಮ್ಮ ಗೌರವ ಹೆಚ್ಚಾಗುವುದು. ಸಂಬಂಧಿಕರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಮಾಡುವ ಕೆಲಸಗಳಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಸಿಗುವುದು. ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಗೊಳ್ಳುವರು. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಕನ್ಯಾ ರಾಶಿ (Virgo)

ಕೆಲಸದ ಹೊರೆ ಹೆಚ್ಚಾಗಿ ಮಾನಸಿಕ ಒತ್ತಡ ಉಂಟಾಗುವುದು. ಕೆಲಸಗಳಲ್ಲಿ ಸುಧಾರಣೆ ತರುವ ಅವಕಾಶ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅವಿವಾಹಿತರಿಗೆ ಮನೆಯಲ್ಲಿ ಮದುವೆ ಮಾತುಕತೆ ನಡೆಯಬಹುದು.

ತುಲಾ ರಾಶಿ (Libra)

ಸೂರ್ಯನ ಪ್ರಭಾವವು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹಳೆಯ ತಪ್ಪು ತಿಳುವಳಿಕೆಗಳನ್ನು ಪರಿಹರಿಸಲು ಇದು ಒಳ್ಳೆಯ ಸಮಯ. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗುವುದು. ವಿದ್ಯಾರ್ಥಿಗಳಿಗೆ ಇವತ್ತಿನ ದಿನ ಅನುಕೂಲಕರವಾಗಿರುವುದು. ಆರೋಗ್ಯ ಚೆನ್ನಾಗಿರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು.

ವೃಶ್ಚಿಕ ರಾಶಿ (Scorpio)

ಕುಟುಂಬದಲ್ಲಿ ಸಾಮರಸ್ಯ ನೆಲೆಸುವುದು. ಪ್ರೀತಿಪಾತ್ರರ ಬಗ್ಗೆ ಅತಿಯಾದ ಅನುಮಾನದಿಂದ ವರ್ತಿಸುವುದನ್ನು ನಿಲ್ಲಿಸಿ. ತಾಳ್ಮೆಯಿಂದ ಇರಿ. ವ್ಯವಹಾರ ತಂತ್ರವನ್ನು ಬದಲಾಯಿಸುವುದರಿಂದ ಪ್ರಯೋಜನಗಳಾಗುವುದು. ಅನುಭವಿ ಮತ್ತು ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಸಂಪರ್ಕಗಳು ಭವಿಷ್ಯದಲ್ಲಿ ಪ್ರಯೋಜನ ನೀಡುವುದು. ಹಳೆಯ ಹೂಡಿಕೆಗಳಿಂದ ಲಾಭವಾಗುವುದು.

ಧನು ರಾಶಿ (Sagittarius)

ಕೆಲಸದ ಒತ್ತಡ ಹೆಚ್ಚಾಗುವುದು. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದಕ್ಕೆ ಸಾಧ್ಯವಾಗದೇ ಹೋದರೂ ಕುಟುಂಬದಲ್ಲಿ ಸಾಮರಸ್ಯ ಇರುವುದು. ಖರ್ಚುಗಳು ಹೆಚ್ಚಾಗಬಹುದು. ವ್ಯಾಪಾರ ವಿಸ್ತರಣೆ ಮಾಡುವ ಬಗ್ಗೆ ಯೋಚಿಸಬಹುದು. ಮಾನಸಿಕ ಒತ್ತಡ ಮತ್ತು ಆಯಾಸವನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಏರಿಳಿತವಾಗಬಹುದು.

ಮಕರ ರಾಶಿ (Capricorn)

ತಂದೆ ತಾಯಿಯ ಬೆಂಬಲದಿಂದ ದಿನ ಉತ್ತಮವಾಗಿ ಕಳೆಯುವುದು. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ವ್ಯವಹಾರದಲ್ಲಿನ ಹಳೆಯ ಸಂಪರ್ಕಗಳು ಹೊಸ ವ್ಯಾಪಾರ ಅವಕಾಶಗಳನ್ನು ತರುತ್ತವೆ. ಕಠಿಣ ಪರಿಶ್ರಮದ ಫಲ ಸಿಗುವುದು. ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು.

ಕುಂಭ ರಾಶಿ (Aquarius)

ಮನೆಯಲ್ಲಿ ಸಾಮರಸ್ಯದ ವಾತಾವರಣವಿರುವುದು. ಯಾರ ಮೇಲೂ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಸಹೋದ್ಯೋಗಿಗಳ ನೆರವಿನಿಂದ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ಹೊಸ ವೃತ್ತಿ ಅವಕಾಶಗಳು ಒದಗಿ ಬರುವುದು. ಹಳೆಯ ಹೂಡಿಕೆಗಳು ಕ್ರಮೇಣ ಲಾಭವನ್ನು ತರುವುದು.

ಮೀನ ರಾಶಿ (Pisces)

ಕುಟುಂಬದ ವಾತಾವರಣವು ಸಾಮರಸ್ಯದಿಂದ ಕೂಡಿರುವುದು. ಉದ್ಯಮಿಗಳು ಹೊಸ ಗ್ರಾಹಕರಿಂದ ಪ್ರಯೋಜನ ಪಡೆಯುವರು. ಅಪೂರ್ಣ ಯೋಜನೆಗಳು ಅಥವಾ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಇದು ಒಳ್ಳೆಯ ದಿನ. ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿಯೇ ಇರುವುದು. ಮನೆಯ ಖರ್ಚುಗಳು ಹೆಚ್ಚಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+