Daily Horoscope: ಎರಡು ರಾಶಿಯವರಿಗೆ ಯಶಸ್ಸು ಸಿಗವ ಸುದಿನ, ಹಣದ ಸಮಸ್ಯೆ ನೀಗುವುದು

ಮೇಷ ರಾಶಿ (Aries): ಬೆಳಗ್ಗೆಯಿಂದಲೇ ಉಲ್ಲಾಸದಿಂದ ಇರುವಿರಿ. ಸಂತೀ಼ ಮನೆ ಮಾಡಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಮಾತುಗೆ ವಿಶೇಷ ಮನ್ನಣೆ ಸಿಗುವುದು. ಹೊಸ ವ್ಯವಹಾರ ಆರಂಭಿಸುವ ಬಗ್ಗೆ ಯೋಚನೆ ಇದ್ದರೆ ಮುಂದುವರೆಯಬಹುದು.

ವೃಷಭ ರಾಶಿ (Taurus): ಇದ್ದಕ್ಕಿದ್ದಂತೆ ಹಣ ಗಳಿಸುವ ಅವಕಾಶ ಸಿಗುವುದು. ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಆಸ್ತಿ ಖರೀದಿಸುವ ಬಗ್ಗೆ ಯೋಚಿಸುವಿರಿ. . ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಮನೆಯವರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ.

Daily Horoscope

ಮಿಥುನ ರಾಶಿ (Gemini): ವ್ಯಾಪಾರ ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆಗಳು ಕೊನೆಯಾಗುವುದು. ಲಾಭಕ್ಕೆ ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ನಿಮ್ಮ ನಿರೀಕ್ಷೆಗೂ ಮೀರಿದಂತೆ ಹಣ ಸಿಗುವುದು. ಆದರೂ ಬೇಕಾ ಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ. ಆರೋಗ್ಯವನ್ನು ನೋಡಿಕೊಳ್ಳಿ.

ಕರ್ಕಾಟಕ ರಾಶಿ (Cancer): ಲಾಭದಾಯಕ ದಿನವಾಗಿರುವುದು. ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚಾಗುವುದು. ಕೆಲಸ ಹುಡುಕುತ್ತಿದ್ದವರಿಗೆ ನಿರೀಕ್ಷೆಯಂತೆ ಕೆಲಸ ಸಿಗುವುದು. ವೃತ್ತಿಜೀವನದಲ್ಲಿ ಯಶಸ್ಸಿನ ಆರಂಭವಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ (Leo): ನಿಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರೊಂದಿಗೆ ವಾದ ಉಂಟಾಗಬಹುದು. ಮಾತಿನ ಮೇಲೆ ಹಿಡಿತ ಇದ್ದರೆ ಒಳ್ಳೆಯದು. ಹೊಸ ಉದ್ಯಮ ಆರಂಭಿಸಲು ಇದು ಸರಿಯಾದ ಸಮಯ. ಅನಿರೀಕ್ಷಿತವಾಗಿ ಹಣ ಪಡೆಯುವ ಸಾಧ್ಯತೆಯಿದೆ.

ಕನ್ಯಾ ರಾಶಿ (Virgo): ಅನುಕೂಲಕರ ದಿನವಾಗಿರಲದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಕೆಲಸದ ವಿಷಯವಾಗಿ ವಿದೇಶಕ್ಕೆ ತೆರಳುವ ಅವಕಾಶ ಸಿಗಬಹುದು. ಆಸ್ತಿ ಖರೀದಿ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯ.

ತುಲಾ ರಾಶಿ (Libra): ಬುದ್ಧಿವಂತಿಕೆಯಿಂದ ವರ್ತಿಸಿದರೆ ಇಂದಿನ ದಿನ ಅದೃಷ್ಟ ತರಲಿದೆ. ತುಂಬಾ ಕಷ್ಟಕರವಾದ ಸಮಸ್ಯೆಗಳಿಗೂ ಸುಲಭದಲ್ಲಿ ಪರಿಹಾರ ಸಿಗುವುದು. ವ್ಯವಹಾರದಲ್ಲಿರುವವರಿಗೆ ದಿನ ಲಾಭದಾಯಕವಾಗಿರುವುದು.

ವೃಶ್ಚಿಕ ರಾಶಿ (Scorpio): ಮನಸ್ಸಿನ ಆಸೆ ಈಡೇರುವ ದಿನ. ವಿದ್ಯಾರ್ಥಿಗಳಿಗೂ ಅನುಕೂಲಕರ ದಿನವಾಗಿರಲಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ. ಯಾರೊಂದಿಗೂ ಸುಮ್ಮನೆ ವಾದಕ್ಕೆ ಇಳಿಯಬೇಡಿ. ಸಮಸ್ಯೆಗಳು ಹೆಚ್ಚಾಗಬಹುದು.

ಧನು ರಾಶಿ (Sagitarius): ಮಕ್ಕಳಿಂದ ಸಿಹಿ ಸುದ್ದಿ ಸಿಗುವುದು. ಮಕ್ಕಳ ಸಾಧನೆ ಖುಷಿ ನೀಡುವುದು. ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗಬಹುದು. ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಬ್ಯುಸಿನೆಸ್‌ ಮಾಡುವವರ ಲಾಭ ಹೆಚ್ಚಾಗುವುದು. ವೈವಾಹಿಕ ಜೀವನ ಸುಖಕರವಾಗಿರುವುದು.

ಮಕರ ರಾಶಿ (Capricorn): ಉದ್ಯೋಗದಲ್ಲಿರುವವರಿಗೆ ಈ ದಿನ ಉತ್ತಮವಾಗಿರುವುದು. ಕಚೇರಿ ಕೆಲಸದಲ್ಲಿ ಲಾಭವಾಗುವುದು. ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ಣ ಮಾಡುವಿರಿ. ಹೊಸ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳಿಗೆ ಶುಭ ದಿನ.

ಕುಂಭ ರಾಶಿ (Aquarius): ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಮೋಜಿಗಾಗಿ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಯಾವುದೇ ವಿಚಾರ ಇರಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ಮೀನ ರಾಶಿ (Pisces): ವಿವಾಹಿತರಿಗೆ ಇಂದು ಒಳ್ಳೆಯ ದಿನ. ಸಂಗಾತಿಯಿಂದ ಉಡುಗೊರೆ ಸಿಗಬಹುದು. ಹಣ ಖರ್ಚು ಮಾಡುವ ಮುನ್ನ ಸರಿಯಾಗಿ ಯೋಚಿಸಿ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+