Horoscope Today: ದಿನ ಭವಿಷ್ಯ ಜನವರಿ 25- ಆಂಜನೇಯನ ಆಶೀರ್ವಾದದಿಂದ ಈ ರಾಶಿಗೆ ಗೋಲ್ಡನ್ ಟೈಮ್ ಶುರು

ನವಗ್ರಹಗಳ ಸಂಚಾರ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳ ಸ್ಥಾನದಿಂದ ಜನವರಿ 25 ಶನಿವಾರ ಕೆಲ ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ. ಇಂದು ಕೆಲ ರಾಶಿಯವರಿಗೆ ಜೀವನದಲ್ಲಿ ಏಳಿಗೆ, ಕೆಲಸದಲ್ಲಿ ಪ್ರಗತಿ, ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ ಸಂಪತ್ತು ಹೆಚ್ಚಾಗುವುದು. ಹಾಗಾದರೆ ಜನವರಿ 25 ಶನಿವಾರ ಯಾವ ರಾಶಿಯವರ ಮೇಲೆ ಆಂಜನೇಯನ ಆಶೀರ್ವಾದ ಇರಲಿದೆ ಹಾಗೂ ಈ ದಿನ ಯಾವ ರಾಶಿ ಅದೃಷ್ಟ ರಾಶಿಯಾಗಿದೆ ಜೊತೆಗೆ 12 ರಾಶಿಗಳ ಇಂದಿನ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ

ಜನವರಿ 25 ಮೇಷ ರಾಶಿಯವರಿಗೆ ಉತ್ತಮವಾಗಿಲ್ಲ. ಈ ದಿನ ಯಾವುದೇ ಹೊಸ ಕೆಲಸವನ್ನು ಆರಂಭಿಸಬೇಡಿ. ವಿಶ್ರಾಂತಿಗೆ ಈ ದಿನ ಸೂಕ್ತ ಎಂದು ಹೇಳಬಹುದು. ಅನಗತ್ಯ ಪ್ರಯಾಣವನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊರಗಿನ ಆಹಾರ ಸಂಪೂರ್ಣವಾಗಿ ತ್ಯಜಿಸಿದರೆ ಒಳ್ಳೆಯದು. ಜೀವನದಲ್ಲಿ ಬರುವ ಅಡೆತಡೆಗಳ ನಿವಾರಣೆಗೆ ಈ ದಿನ ಶನಿ ದೇವರನ್ನು ಪೂಜಿಸಿ, ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚಿ.

Horoscope today january 25 these zodiac signs golden time will begin with the blessings of anjaneya

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ನಿಮ್ಮ ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಬರಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಂಪತ್ತು, ಖ್ಯಾತಿ ನಿರೀಕ್ಷೆಗೂ ಮೀರಿ ಬೆಳೆಯುತ್ತದೆ. ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ಇಂದು ವ್ಯವಹಾರ ಮತ್ತು ವೈಯಕ್ತಿಕ ಕೆಲಸಕ್ಕೆ ಒಳ್ಳೆಯ ದಿನವಾಗಿರುತ್ತದೆ. ಬೆಳಿಗ್ಗೆ ಬಿಳಿ ಬಟ್ಟೆಗಳನ್ನು ದಾನ ಮಾಡಿ. ಶನಿಯ ಮಂತ್ರವನ್ನು ಪಠಿಸಿ.

ಮಿಥುನ ರಾಶಿ

ಮಿಥುನ ರಾಶಿಯವರು ಜನವರಿ 25ರ ಅದೃಷ್ಟ ರಾಶಿಯವರಾಗಿದ್ದಾರೆ. ಶನಿವಾರ ಆಂಜನೇಯನ ಆಶೀರ್ವಾದದೊಂದಿಗೆ ನೀವು ಮಾಡಿದ ಕಾರ್ಯಗಳು ಉತ್ತಮ ಫಲವನ್ನು ನಿಮಗೆ ನೀಡಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಬೆಳೆಯುವುದು. ವ್ಯವಹಾರದಲ್ಲಿ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳನ್ನು ಮಾಡಲು ಇದು ಉತ್ತಮ ಸಮಯ. ಧರ್ಮದ ಬಗ್ಗೆ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

ಕರ್ಕಾಟಕ ರಾಶಿ

ಜನವರಿ 25 ಕಟಕ ರಾಶಿಯವರಿಗೆ ಉತ್ತಮವಾಗಿಲ್ಲ. ಈ ದಿನ ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ನಿಮ್ಮ ಒಡಹುಟ್ಟಿದವರಿಂದ ನೀವು ಒತ್ತಡವನ್ನು ಅನುಭವಿಸುವಿರಿ. ಪ್ರಯಾಣ ಮತ್ತು ಪ್ರವಾಸ ಆಹ್ಲಾದಕರ ಅನುಭವ ನೀಡುತ್ತವೆ. ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಸಮಸ್ಯೆಗಳು ದೂರವಾಗಲು ಬಡವರಿಗೆ ದಾನ ಮಾಡಿ. ಶನಿ ಮಂತ್ರವನ್ನು ಪಠಿಸಿ.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಅದೃಷ್ಟ ರಾಶಿಗಳಲ್ಲಿ ಒಬ್ಬರು. ಈ ಸಮಯ ನಿಮಗೆ ಉತ್ತಮವಾಗಿದೆ. ನಿಮ್ಮ ಆತ್ಮವಿಶ್ವಾಸ ಮೊದಲಿಗಿಂತ ಹೆಚ್ಚಾಗಿರುತ್ತದೆ. ಮನಸ್ಸು ಪ್ರಸನ್ನವಾಗಿರುವುದು. ಸಾಮಾಜಿಕ ಜೀವನದಲ್ಲಿ ಬದಲಾವಣೆಗಳಾಗಲಿವೆ. ನೀವು ಎಲ್ಲೋ ಪ್ರವಾಸಕ್ಕೆ ಹೋಗಬಹುದು. ಉದ್ಯೋಗದಲ್ಲಿರುವವರಿಗೆ ಸಮಯ ಅದ್ಭುತವಾಗಿದೆ. ನಿಮಗೆ ಬೇಕಾದುದನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ. ಶೀಘ್ರದಲ್ಲೇ ಹಣ ಮತ್ತು ಬಡ್ತಿ ವಿಷಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

ಕನ್ಯಾರಾಶಿ

ಜನವರಿ 25 ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿ ದಿನವಾಗಿದೆ. ಈ ದಿನ ಆಂಜನೇಯನ ಆಶೀರ್ವಾದದಿಂದ ಸಾಕಷ್ಟು ಲಾಭ ಸಿಗುವುದು. ನೀವು ಯಾವುದಾದರೂ ವಿಷಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಆ ಸಮಸ್ಯೆಯಿಂದ ಪರಿಹಾರ ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಸಂಪತ್ತು ಹೆಚ್ಚಾಗುವ ಸುಸಂದರ್ಭ ಇದಾಗಿದೆ. ಉದ್ಯಮಿಗಳ ಪ್ರಗತಿ ಹೆಚ್ಚಾಗುವುದು. ಉದ್ಯೋಗಿಗಳಿಗೂ ಸಮಯ ಉತ್ತಮವಾಗಿದೆ. ಪಾಲುದಾರರ ಬೆಂಬಲದಿಂದ ಕೆಲಸ ಪೂರ್ಣಗೊಳ್ಳುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ಇಂದು ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡಬಹುದು. ದೇವಸ್ಥಾನಗಳಿಗೆ ಭೇಟಿ ಮಾಡಿವಿರಿ. ಧಾರ್ಮಿಕ ಕಾರ್ಯಗಳನ್ನು ಮನೆಯಲ್ಲಿ ಆಯೋಜಿಸುವಿರಿ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ನೀವು ಬಡವರಿಗೆ ದಾನ ಮಾಡಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಎಲ್ಲಾ ತೊಂದರೆಗಳು ಶನಿ ದೇವನ ಕೃಪೆಯಿಂದ ದೂರವಾಗುತ್ತವೆ.

ವೃಶ್ಚಿಕ ರಾಶಿ

ಈ ದಿನ ವೃಶ್ಚಿಕ ರಾಶಿಯವರಿಗೆ ಉತ್ತಮವಾಗಿರುವುದಿಲ್ಲ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ. ನಿಮ್ಮ ಸಂಗಾತಿಯಿಂದ ಒತ್ತಡವನ್ನು ಎದುರಿಸಬೇಕಾಗಬಹುದು. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಈ ದಿನ ಹನುಮಾನ್ ಚಾಲೀಸಾವನ್ನೂ ಪಠಿಸಿ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಶುಭ ದಿನವಾಗಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ಆತ್ಮವಿಶ್ವಾಸದ ಕೊರತೆ ಇರಬಹುದು. ಮನಸ್ಸು ಪ್ರಸನ್ನವಾಗಿರುತ್ತದೆ. ಇಂದು ನ್ಯಾಯಾಂಗ ಪ್ರಕ್ರಿಯೆಗಳಿಗೆ ಶುಭ ದಿನ. ಬೆಳಿಗ್ಗೆ ಶನಿದೇವನ ಮಂತ್ರವನ್ನು ಪಠಿಸಿ. ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ಸಮಯ ಚೆನ್ನಾಗಿದೆ. ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಂಪತ್ತು ವೃದ್ಧಿಯಾಗುವುದು. ಉದ್ಯೋಗ ಮತ್ತು ವ್ಯವಹಾರ ಮಾಡುವ ಜನರಿಗೆ ಲಾಭ ಸಿಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು.

ಕುಂಭ ರಾಶಿ

ಈ ದಿನ ನಿಮ್ಮ ಒಡಹುಟ್ಟಿದವರ ಬಗ್ಗೆ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಸಂಬಂಧಿಕರಿಂದ ಲಾಭ ಪಡೆಯುವಿರಿ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಂದು ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿ.

ಮೀನ ರಾಶಿ

ಜನವರಿ 25 ಮೀನ ರಾಶಿಯವರಿಗೆ ಫಲಪ್ರದ ದಿನವಾಗಿದೆ. ವ್ಯವಹಾರದಲ್ಲಿ ಬೆಳವಣಿಗೆ ಕಂಡುಬರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನೀವು ಯಾವುದೇ ಕೆಲಸ ಮಾಡಲು ನಿರ್ಧರಿಸಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಜೀವನದಲ್ಲಿ ಸಂತೋಷ ಇರುವುದು. ನಿಮ್ಮ ವ್ಯವಹಾರವನ್ನು ವಿಸ್ತರಿಸುವಿರಿ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+