Horoscope Today: ದಿನ ಭವಿಷ್ಯ ಜನವರಿ 16; ಈ ರಾಶಿಗೆ ಗುರು ರಾಯರ ಆಶೀರ್ವಾದದಿಂದ ಸಂಪತ್ತು ವೃದ್ಧಿ
ಜನವರಿ 16 ಕೆಲವು ರಾಶಿಗಳಿಗೆ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ಗ್ರಹಗಳು ಮತ್ತು ನಕ್ಷತ್ರಗಳ ಬದಲಾವಣೆ ಕೆಲ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಲ, ವೃತ್ತಿಜೀವನದಲ್ಲಿ ಯಶಸ್ಸು ಹಾಗೂ ಕುಟುಂಬದಲ್ಲಿ ಸಂತೋಷ ಕಂಡುಬರಲಿದೆ. ಈ ದಿನ ಗುರು ರಾಯರು ಹಾಗೂ ವಿಷ್ಣು ದೇವನನ್ನು ಪೂಜಿಸಲಾಗುವುದು. ಹಾಗಾದರೆ ಈ ದಿನ ವಿಷ್ಣುವಿನ ಕೃಪೆಗೆ ಪಾತ್ರರಾಗುವ ರಾಶಿಗಳು ಯಾವುವು? 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಜನವರಿ 16 ಗುರುವಾರ ಮೇಷ ರಾಶಿಯವರಿಗೆ ವಿಶೇಷವಾಗಿ ಗುರುರಾಯರ ಆಶೀರ್ವಾದ ಸಿಗಲಿದೆ. ಇಂದು ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ನೀವು ಮಾಡಿದ ಪುಣ್ಯ ಕಾರ್ಯಗಳ ಫಲವನ್ನು ಇಂದು ನೀವು ಪಡೆಯುವಿರಿ. ನಿಮ್ಮ ವೃತ್ತಿಜೀವನದಲ್ಲಿ ಕೆಲವು ಹೊಸ ಉದ್ಯೋಗ ಅವಕಾಶಗಳನ್ನು ನೀವು ಪಡೆಯುವಿರಿ. ಪ್ರಮೋಷನ್ ಕೂಡ ಸಿಗಲಿದೆ. ವಿದೇಶಕ್ಕೆ ಹೋಗುವಿರಿ. ಅದನ್ನು ಸರಿಯಾಗಿ ಬಳಸಿಕೊಂಡರೆ ಹಣಕಾಸಿನ ಲಾಭವೂ ಇದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಲಕ್ಕಿ ದಿನ. ಈ ದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ವಿಷ್ಣುವಿನ ಮಂತ್ರವನ್ನು ಪಠಿಸಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಜನವರಿ 16 ಅದೃಷ್ಟದ ದಿನವಾಗಿದೆ. ವೃಷಭ ರಾಶಿಯ ಜನರಿಗೆ ಇಂದು ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವಿರಿ. ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಇದು ಕುಟುಂಬದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ನೀವು ಮೊದಲು ಎಲ್ಲೋ ಹೂಡಿಕೆ ಮಾಡಿದ್ದರೆ, ನಿಮಗೆ ಉತ್ತಮ ಲಾಭ ಸಿಗಬಹುದು. ಈ ದಿನ ಮಾಡಿದ ಕಾರ್ಯಗಳು ನಿಮ್ಮ ಕೈ ಹಿಡಿಯುತ್ತವೆ. ಜೀವನದಲ್ಲಿ ಯಾವುದೇ ಕಾರಣಕ್ಕೂ ಹತಾಶರಾಗಬೇಡಿ. ಈ ದಿನ ಜೀವನದಲ್ಲಿ ಬರುವ ಅಡೆತಡೆಗಳ ನಿವಾರಣೆಗಾಗಿ ಗುರು ರಾಯರ ಆರಾಧನೆ ಮಾಡಿ.
ಮಿಥುನ ರಾಶಿ
ಈ ದಿನ ಮಿಥುನ ರಾಶಿಯವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ವ್ಯವಹಾರದಲ್ಲಿ ಬೆಳವಣಿಗೆಗೆ ಅವಕಾಶಗಳಿವೆ. ನಿಮ್ಮ ಮಾತನ್ನು ನಿಯಂತ್ರಿಸಿ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರ ಯೋಜನೆಗಳು ನಿಮ್ಮ ಜೀವನಕ್ಕೆ ಹೊಸ ಚೈತನ್ಯವನ್ನು ತರುತ್ತವೆ. ಮಕ್ಕಳ ಜವಾಬ್ದಾರಿ ನೆಮ್ಮದಿ ನೀಡಲಿದೆ. ಬೆಳಿಗ್ಗೆ ವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಬಡವರಿಗೆ ದಾನ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.
ಕರ್ಕಾಟಕ ರಾಶಿ
ಗುರುವಾರ ಜನವರಿ 16ರಂದು ಕಟಕ ರಾಶಿಯವರ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ಆರ್ಥಿಕ ಸ್ಥಿತಿ, ಆತ್ಮವಿಶ್ವಾಸ ಬಲಗೊಳ್ಳಲಿದೆ. ವಾದ ವಿವಾದಗಳಿಂದ ದೂರವಿರಿ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಉಂಟಾಗಬಹುದು. ಯಾವುದೇ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸುವುದು ಉತ್ತಮ. ನಿಮ್ಮ ಜೀವನ ಸಾಕಷ್ಟು ಗೊಂದಲದಿಂದ ಕೂಡಿರುತ್ತದೆ. ಆದರೆ ಅದರಿಂದ ತಿದ್ದಿಕೊಳ್ಳುವುದು ತುಂಬಾ ಇದೆ ಎನ್ನುವುದನ್ನು ಮರೆಬೇಡಿ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಂದ ದೂರವಾಗಲು ಅಗತ್ಯ ಇರುವವರಿಗೆ ಬಿಳಿ ವಸ್ತ್ರವನ್ನು ದಾನ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಿದೆ. ಗುರು ರಾಯರ ಆಶೀರ್ವಾದದಿಂದ ದಿನವಿಡೀ ಸಕಾರಾತ್ಮಕ ಶಕ್ತಿಯು ನಿಮ್ಮೊಳಗೆ ಉಳಿಯುತ್ತದೆ. ನೀವು ಒಂದು ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದರಲ್ಲಿ ಯಶಸ್ಸು ಪಡೆಯುವ ಸಾಧ್ಯತೆಯಿದೆ. ಆರ್ಥಿಕ ಲಾಭಗಳು ಉಂಟಾಗುತ್ತವೆ. ಸಮಾಜದಲ್ಲಿ ಗೌರವ, ಆತ್ಮವಿಶ್ವಾಸ, ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮನೆ ದೇವರಿಗೆ ಪೂಜೆ ಮಾಡಿ, ಹಸಿದ ಪ್ರಾಣಿಗಳಿಗೆ ಆಹಾರ ನೀಡಿ. ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ಕನ್ಯಾ ರಾಶಿ
ಈ ದಿನ ವಿಷ್ಣುವಿನ ಆಶೀರ್ವಾದದಿಂದ ಕೆಲಸದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ವ್ಯವಹಾರದಲ್ಲಿ ಬೆಳವಣಿಗೆಗೆ ಅವಕಾಶಗಳು ಇವೆ. ಆದರೆ ಸಂಬಂಧಗಳಲ್ಲಿ ಆತ್ಮೀಯತೆ ಇದ್ದರೂ ನೀವು ವೈವಾಹಿಕ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ವಿಷಯಗಳು ಸುಧಾರಿಸಲಿವೆ. ಬೆಳಿಗ್ಗೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸಿ, ಬಡವರಿಗೆ ಬಿಳಿ ಬಟ್ಟೆ ದಾನ ಮಾಡುವುದರಿಂದ ಶತ್ರುಗಳ ಕಾಟ ದೂರವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಅದ್ಭುತವಾಗಿರುತ್ತದೆ. ಗುರು ರಾಯರ ಆಶೀರ್ವಾದಿಂದ ನೀವಂದುಕೊಂಡಂತೆ ದಿನ ಇರಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಣದ ಸ್ಥಿತಿ ಸುಧಾರಿಸುತ್ತವೆ. ನಿಮ್ಮ ಕುಟುಂಬದೊಂದಿಗೆ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ಬೆಳಿಗ್ಗೆ ಬಡವರಿಗೆ ಅನ್ನದಾನ ಮಾಡಿ. ಬಟ್ಟೆಗಳನ್ನು ದಾನ ಮಾಡಿ. ಇದು ದೇವರನ್ನು ಮೆಚ್ಚಿಸುತ್ತದೆ. ಈ ಪುಣ್ಯದ ಫಲಗಳಿಂದಾಗಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ವೃಶ್ಚಿಕ ರಾಶಿ
ಗುರುವಾರ ಜನವರಿ 16ರಂದು ವೃಶ್ಚಿಕ ರಾಶಿಯವರಿಗೆ ಹೊಸ ಆರಂಭಕ್ಕೆ ಶುಭ ದಿನ. ನೀವು ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ಇದು ಭವಿಷ್ಯದಲ್ಲಿ ನಿಮಗೆ ದೊಡ್ಡ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕೆಲವು ಕೆಲಸಗಳು ಬಹಳ ದಿನಗಳಿಂದ ಬಾಕಿ ಉಳಿದಿದ್ದರೆ, ಇಂದು ಅವು ಪೂರ್ಣಗೊಳ್ಳಬಹುದು. ಸ್ನೇಹಿತರು ಮತ್ತು ಆಪ್ತರಿಂದ ಸಹಾಯ ಪಡೆಯುವುದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ, ಹಸುವಿಗೆ ಆಹಾರ ನೀಡಿದರೆ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ.
ಧನು ರಾಶಿ
ಧನು ರಾಶಿಯವರಿಗೆ ಗುರುವಾರ ಮಿಶ್ರ ದಿನವಾಗಿರುತ್ತದೆ. ಈ ದಿನ ಧನು ರಾಶಿಯವರ ಸಂಪತ್ತು, ಖ್ಯಾತಿ ವಿಷ್ಣುವಿನ ಆಶೀರ್ವಾದಿಂದ ಹೆಚ್ಚಳವಾಗುತ್ತದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ನಿಮ್ಮ ಸಹೋದರ ಸಹೋದರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಬೆಳಿಗ್ಗೆ ಗುರುವಿನ ಮಂತ್ರವನ್ನು ಪಠಿಸಿ, ಹಸುವಿಗೆ ಆಹಾರ ನೀಡಿ. ಇದು ತುಂಬಾ ಶುಭ ಫಲಗಳನ್ನು ನೀಡುತ್ತದೆ.
ಮಕರ ರಾಶಿ
ಮಕರ ರಾಶಿಯವರಿಗೆ ಗುರುವಾರ ಉತ್ತಮವಾಗಿಲ್ಲ. ಸ್ನೇಹ, ವೈವಾಹಿಕ ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಆದರೆ ಸೃಜನಶೀಲ ಕೆಲಸಗಳಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವಿರಿ. ಪ್ರಯತ್ನಗಳು ಫಲ ನೀಡುವುದಿಲ್ಲ. ಉದ್ಯೋಗದ ಕ್ಷೇತ್ರದಲ್ಲಿ ಪ್ರಗತಿ ಇರುವುದಿಲ್ಲ. ಬೆಳಿಗ್ಗೆ ಶನಿದೇವನ ಮಂತ್ರವನ್ನು ಪಠಿಸಿ ಮತ್ತು ಸೂರ್ಯನಿಗೆ ನೀರನ್ನು ಅರ್ಪಿಸಿ ಪೂಜಿಸಿ. ನಾಯಿಗೆ ಆಹಾರ ನೀಡಿ. ಇದರಿಂದ ನಿಮ್ಮ ಆರ್ಥಿಕ ತೊಂದರೆಗಳು ದೂರವಾಗುತ್ತವೆ.
ಕುಂಭ ರಾಶಿ
ಜನವರಿ 16 ಕುಂಭ ರಾಶಿಯವರ ಜೀವನ ಸುಂದರವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಶಾಂತಿ ನೆಲೆಸಲಿದೆ. ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಮಾಡಿದ ಕೆಲಸದಿಂದ ಸಾಕಷ್ಟು ಹಣ ಸಂಪಾದನೆ ಮಾಡುವಿರಿ. ಆದರೂ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ಭಾವನಾತ್ಮಕವಾಗಿ ಅಥವಾ ಕೋಪದಿಂದ ಏನನ್ನೂ ಮಾಡಬೇಡಿ. ನಿಮ್ಮ ಮನಸ್ಸು ಯಾವುದೋ ವಿಷಯದ ಬಗ್ಗೆ ಅಸಮಾಧಾನಗೊಂಡಿರುತ್ತದೆ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ, ಮನೆ ದೇವರಿಗೆ ಭೇಟಿ ನೀಡಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಸಂತೋಷದಿಂದ ತುಂಬಿದ ದಿನವಾಗಿರುತ್ತದೆ. ವಿಷ್ಣುವಿನ ಆಶೀರ್ವಾದ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಬಲಗಳುವ ಸಮಯ. ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಕೆಲವು ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬರಬಹುದು. ಆದರೆ ನೀವು ಅವುಗಳನ್ನು ಚೆನ್ನಾಗಿ ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ದಿನ ಗುರು ರಾಯರನ್ನು ಪೂಜಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications