April 16 Horoscope: ಇಂದು ಈ ರಾಶಿಯವರಿಗೆ ಆಗುವುದು ಧನಲಾಭ: ದ್ವಾದಶ ರಾಶಿಗಳ ನಿತ್ಯ ಭವಿಷ್ಯ ಹೀಗಿದೆ
Horoscope April 16: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ಸಾಮಾನ್ಯವಾಗಿ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. ಏಪ್ರಿಲ್ 15 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ: ಇಂದು ನೀವು ಚಿಂತನಾಶೀಲರಾಗಿರುತ್ತೀರಿ. ಮಾಡುವ ಕೆಲಸಕ್ಕೆ ಹೊಸ ಆಯಾಮ ನೀಡುವಿರಿ.ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಅಂತರವಿರಲಿ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಬದಲು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ಅನಿಶ್ಚಿತತೆ ಉಂಟಾಗಬಹುದು.

ವೃಷಭ ರಾಶಿ: ನಿರ್ಧಾರ ತೆಗೆದುಕೊಳ್ಳುವಲ್ಲಿ ಉಂಟಾಗುವ ಗೊಂದಲವು ಪ್ರಗತಿಯನ್ನು ನಿಧಾನಗೊಳಿಸಬಹುದು. ಹೂಡಿಕೆ ಮತ್ತು ಖರ್ಚಿನ ಬಗ್ಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಬೇರೆಯವರೊಂದಿಗೆ ಮಾತುಕತೆ ನಡೆಸುವ ವೇಳೆ ಇರಲಿ ಎಚ್ಚರ.
ಮಿಥುನ ರಾಶಿ: ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವಿರಿ.ನೀವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುವುದು.ದೀರ್ಘಾವಧಿಯ ಯೋಜನೆ ಮತ್ತು ಅಪಾಯಕಾರಿ ಹೂಡಿಕೆಗಳಿಂದ ದೂರವಿರುವುದು ಒಳ್ಳೆಯದು.
ಕರ್ಕಾಟಕ ರಾಶಿ: ಆಧ್ಯಾತ್ಮಕ್ಕೆ ಹೆಚ್ಚಿನ ಒತ್ತು ನೀಡುವಿರಿ. ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳವಾಗ ಜಾಗರೂಕರಾಗಿರಿ. ನೀವು ಮಾಡುವ ಕೆಲಸದಲ್ಲಿ ಹೊಸ ಆತ್ಮವಿಶ್ವಾಸ ಮೂಡುವುದು. ಉತ್ತಮ ಆರೋಗ್ಯಕ್ಕಾಗಿ ಮಾನಸಿಕ ವಿಶ್ರಾಂತಿ ಪಡೆಯುವುದು ಸೂಕ್ತ.
ಸಿಂಹ ರಾಶಿ: ಕೆಲಸದ ಸ್ಥಳದಲ್ಲಿ ಹಠಾತ್ ಬದಲಾವಣೆಯಾಗುವುದು. ತಾಳ್ಮೆ ಮತ್ತು ಹೊಂದಾಣಿಕೆಯಿಂದ ಮುಂದುವರಿಯುವುದು ಒಳ್ಳೆಯದು. ಹಣಕಾಸಿನ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿರಿ. ಯಾವುದೇ ಕೆಲಸ ಮಾಡಿದರೂ ಶಿಸ್ತು ಮುಖ್ಯವಾಗಿರಲಿ.
ಕನ್ಯಾ ರಾಶಿ: ವೃತ್ತಿಯಲ್ಲಿ ಪ್ರಗತಿಯ ಸಂಭವವಿದೆ. ನೀವು ಮಾಡುವ ಕೆಲಸಗಳಿಗೆ ಮೇಲಾಧಿಕಾರಿಗಳ ಬೆಂಬಲ ಇರುವುದು. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಗಳಿಂದಾಗಿ ಸಮಸ್ಯೆ ಎದುರಾಗಬಹುದು. ಮದುವೆ ಮಾತುಕತೆ ನಡೆಯಬಹುದು.
ತುಲಾ ರಾಶಿ: ಹೆಚ್ಚಿದ ಜವಾಬ್ದಾರಿಗಳು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಸಂಬಂಧಗಳಲ್ಲಿ ಸಾಮರಸ್ಯ ಮೂಡುವುದು. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ.
ವೃಶ್ಚಿಕ ರಾಶಿ: ಕೆಲಸದ ಒತ್ತಡ ಹೆಚ್ಚಾಗುವುದು. ನೀವು ಮಾಡಿರುವ ಕೆಲಸಕ್ಕೆ ಯಶಸ್ಸು ಸಿಗುವುದು.ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಧನು ರಾಶಿ: ವೃತ್ತಿಗೆ ಸಂಬಂಧಿಸಿದಂತೆ ಹೊಸ ಅವಕಾಶಗಳು ಒಲಿದು ಬರುವುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದತ್ತಲೂ ಗಮನ ನೀಡಿ. ಇಂದಿನ ದಿನ ಸಂತೋಷದಿಂದಲೇ ಸಾಗುವುದು.
ಮಕರ ರಾಶಿ: ನಿಮ್ಮ ಮಾತೇ ನಿಮಗೆ ವರವಾಗಬಹುದು. ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಮಾನಸಿಕ ಶಾಂತಿ ವೃದ್ದಿಯಾಗುವುದು.ಆದರೆ ನೆನಪಿರಲಿ ತಾಳ್ಮೆ ಸಂಯಮ ಇರಲಿ.
ಕುಂಭ ರಾಶಿ: ಹಣಕಾಸಿನ ವ್ಯವಹಾರಕ್ಕೆ ಕೈ ಹಾಕಬೇಡಿ.ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ.ಮಾನಸಿಕ ಒತ್ತಡ ಹೆಚ್ಚಾಗಬಹುದು. ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಇರಲಿ ಎಚ್ಚರ.
ಮೀನ ರಾಶಿ: ಆತ್ಮವಿಶ್ವಾಸದಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಆದಾಯ ಹೆಚ್ಚಾಗುವುದಕ್ಕೆ ಕಾರಣವಾಗಬಹುದು. ನಿಮ್ಮ ಮನಸ್ಸಿನ ಮಾತಿನಂತೆ ನಡೆದರೆ ಯಶಸ್ಸು ಸಿಗುವುದು.
(ಬರಹ : ರಂಜಿತಾ ಆರ್.ಕೆ)












Click it and Unblock the Notifications