Daily Horoscope: ಪರಿವರ್ತಿನಿ ಏಕಾದಶಿಯಿಂದ ಈ ರಾಶಿಯವರಿಗೆ ಭರ್ಜರಿ ಲಾಭ: ಹಣಕಾಸಿನ ತೊಂದರೆ ದೂರ, ಪ್ರಗತಿಗೆ ಹೊಸ ದಾರಿ!

Daily Horoscope: ಇಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ. ದಶಮಿ ತಿಥಿ ರಾತ್ರಿ 9.43 ರವರೆಗೆ ಇರುವುದು. ನಂತರ ಏಕಾದಶಿ ತಿಥಿ ಪ್ರಾರಂಭವಾಗುವುದು. ಶುಕ್ಲ ಪಕ್ಷದ ಏಕಾದಶಿ ತಿಥಿಯು ಆಧ್ಯಾತ್ಮಿಕ ಅಭ್ಯಾಸ, ಉಪವಾಸ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಸಂಬಂಧಿಸಿದ್ದಾಗಿದೆ. ಇಂದು ದ್ವಾದಶ ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೋಣ.

ಮೇಷ ರಾಶಿ (Aries)

ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುವುದು.ಆರೋಗ್ಯವು ಸಾಮಾನ್ಯವಾಗಿರುವುದು. ಹೊಸ ಉದ್ಯಮವನ್ನು ಆರಂಭಿಸಬಹುದು. ಕೆಲಸದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗುವುದು. ಆದಾಯ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು.

Daily Horoscope Today Rashi Bhavishya September 22 Zodiac Predictions Lucky Number Colour of all signs

ವೃಷಭ ರಾಶಿ (Taurus)

ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ವ್ಯವಹಾರದಲ್ಲಿ ಯಾವುದೇ ರಿಸ್ಕ್‌ ತೆಗೆದುಕೊಳ್ಳಬೇಡಿ. ಪೂರ್ವಜರ ಆಸ್ತಿಯಿಂದ ಉತ್ತಮ ಲಾಭವಾಗುವುದು. ಮಗನ ಶಿಕ್ಷಣದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಹಣಕಾಸಿನ ಸಮಸ್ಯೆ ಇರುವುದಿಲ್ಲ.

ಮಿಥುನ ರಾಶಿ (Gemini)

ನಿಮ್ಮ ಹೆತ್ತವರ ಆಶೀರ್ವಾದದಿಂದ, ಬಾಕಿ ಕೆಲಸ ಪೂರ್ಣವಾಗುವುದು. ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಿಂದ ಪರಿಹಾರ ಸಿಗುವುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ, ತಮ್ಮ ದಿನಚರಿಯತ್ತಲೂ ಗಮನ ಹರಿಸಬೇಕಾಗುವುದು.

ಕರ್ಕಾಟಕ ರಾಶಿ (Cancer)

ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವುದು. ಹೆತ್ತವರಿಂದ ಗಿಫ್ಟ್‌ ಸಿಗುವುದು. ಶಕ್ತಿ ಮತ್ತು ಉತ್ಸಾಹ ಹೆಚ್ಚಾಗುವುದು. ಸರಿಯಾದ ಯೋಜನೆಯೊಂದಿಗೆ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಹಣಕಾಸಿನ ವಿಷಯಗಳು ಸಾಮಾನ್ಯವಾಗಿಯೇ ಇರುವುದು. ಪ್ರಮುಖ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ಪರಿಗಣಿಸಿ.

ಸಿಂಹ ರಾಶಿ (Leo)

ತಂದೆಯೊಂದಿಗೆ ಮನಸ್ತಾಪ ಮೂಡಬಹುದು. ವಿದ್ಯಾರ್ಥಿಗಳ ಮಾನಸಿಕ ಒತ್ತಡದಿಂದ ಮುಕ್ತರಾಗುವರು. ಪ್ರಗತಿಗೆ ಇರುವ ಅಡೆತಡೆಗಳು ದೂರವಾಗುತ್ತವೆ. ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಮೂಲಕ ಆರ್ಥಿಕ ಲಾಭವಾಗುವುದು. ಪ್ರಗತಿಗೆ ಅವಕಾಶಗಳು ಸಿಗುವುದು.

ಕನ್ಯಾ ರಾಶಿ (Virgo)

ಕೌಟುಂಬಿಕ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಅತಿಯಾದ ಕೆಲಸವು ಒತ್ತಡಕ್ಕೆ ಕಾರಣವಾಗಬಹುದು. ಉದ್ಯೋಗಗಳನ್ನು ಬದಲಾಯಿಸುವ ನಿಮ್ಮ ನಿರ್ಧಾರವು ಒಳ್ಳೆಯದಾಗಿರಬಹುದು. ಹೆಚ್ಚುತ್ತಿರುವ ವೆಚ್ಚಗಳು ಸಮಸ್ಯೆಗಳನ್ನು ಉಂಟುಮಾಡಬಹುದು.ವಿದ್ಯಾರ್ಥಿಗಳು ಅಧ್ಯಯನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ನೇಹಿತರಿಂದ ಸಹಾಯ ಪಡೆಯಬಹುದು.

ತುಲಾ ರಾಶಿ (Libra)

ಕುಟುಂಬ ಸದಸ್ಯರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವಿರಿ. ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಆರೋಗ್ಯವು ಸಾಮಾನ್ಯವಾಗಿರುವುದು. ದಿನವಿಡೀ ಉತ್ಸಾಹದಿಂದ ಕೂಡಿರುವುದು. ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಎಲ್ಲೋ ಸಿಲುಕಿಕೊಂಡಿದ್ದ ಹಣ ಮರಳಿ ಸಿಗಬಹುದು. ಆರ್ಥಿಕ ಪರಿಸ್ಥಿತಿ ಸದೃಢವಾಗುವುದು. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುವರು.

ವೃಶ್ಚಿಕ ರಾಶಿ (Scorpio)

ಸಂಯಮದಿಂದ ವರ್ತಿಸುವುದು ಉತ್ತಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿರ್ಲಕ್ಷ್ಯ ವಹಿಸಬೇಡಿ. ಆತುರಕ್ಕೆ ಬಿದ್ದು ತೆಗೆದುಕೊಳ್ಳುವ ನಿರ್ಧಾರ ನಷ್ಟಕ್ಕೆ ಕಾರಣವಾಗುವುದು. ದೊಡ್ಡ ಖರ್ಚು ಮಾಡುವಾಗ ಜಾಗರೂಕರಾಗಿರಿ.
ತಾಳ್ಮೆ ಬಹಳ ಮುಖ್ಯವಾಗುವುದು. ಕಠಿಣ ಪರಿಶ್ರಮದ ಅಗತ್ಯವಿದೆ.

ಧನು ರಾಶಿ (Sagittarius)

ನಿಮ್ಮ ಕುಟುಂಬ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕಾಗುವುದು.

ಮಕರ ರಾಶಿ (Capricorn)

ತಾಯಿಯಿಂದ ಉಡುಗೊರೆ ಸಿಗಬಹುದು. ಅನಗತ್ಯ ವಿವಾದಗಳಿಂದ ದೂರವಿರಿ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಯೋಜಿತ ರೀತಿಯಲ್ಲಿ ಕೆಲಸ ಮಾಡುವುದು ಪ್ರಯೋಜನಕಾರಿ. ಕೆಲವು ಯೋಜನೆಗಳಿಂದ ಉತ್ತಮ ಹಣ ಪಡೆಯುವ ಸಾಧ್ಯತೆಗಳಿವೆ. ಸಂಬಂಧಗಳಲ್ಲಿನ ನಂಬಿಕೆಯನ್ನು ಉಳಿಸಿಕೊಳ್ಳಿ.

ಕುಂಭ ರಾಶಿ (Aquarius)

ಬಾಕಿ ಇರುವ ಯಾವುದೇ ಕೆಲಸ ಪೂರ್ಣಗೊಳ್ಳುವುದು. ಹಳೆಯ ಸ್ನೇಹಿತರನ್ನು ಸಹ ಭೇಟಿಯಾಗಬಹುದು. ಕೆಲಸದ ಒತ್ತಡದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಕೆಲಸದ ಸ್ಥಳದಲ್ಲಿ ಬದಲಾವಣೆಗಳು ಸಮಸ್ಯೆಗಳನ್ನು ಉಂಟುಮಾಡಬಹುದು. ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವುದನ್ನು ಕಲಿಯಿರಿ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ಮೀನ ರಾಶಿ (pisces)

ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಎಲ್ಲರ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕೆಲಸದ ಒತ್ತಡದ ನಡುವೆ ವಿಶ್ರಾಂತಿಗೆ ಗಮನ ಕೊಡಿ. ನೀವು ನಿರೀಕ್ಷಿಸದೇ ಇದ್ದ ಹಣ ಇದ್ದಕ್ಕಿದ್ದಂತೆ ನಿಮ್ಮ ಕೈ ಸೇರುವುದು. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗ ಇರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+