Daily Horoscope June 8: ಈ ರಾಶಿಯವರಿಗೆ ಧನ ಲಾಭ, ಸಮಸ್ಯೆಗಳಿಗೆ ಮುಕ್ತಿ: ದಿನ ಭವಿಷ್ಯ ಇಲ್ಲಿದೆ

Horoscope June 8: ಸೋಮವಾರ 12 ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಒಟ್ಟು ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿರಲಿದೆ? ನಿಮಗಾಗುವ ಒಳಿತು, ಶುಭ ಮತ್ತು ಅಶುಭ ಫಲಗಳ ಸಂಪೂರ್ಣ ಮಾಹಿತಿ ತಿಳಿಯಿರಿ.

ಮೇಷ ರಾಶಿ (Aries):

ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಶಕ್ತಿ ಪ್ರವೇಶಿಸಲಿದೆ. ಪ್ರೇಮ ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಆರೋಗ್ಯ ವಿಷಯಗಳಲ್ಲಿ ಸ್ವಲ್ಪ ಗಮನ ಅಗತ್ಯ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ದೊಡ್ಡ ಹೂಡಿಕೆಗಳನ್ನು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಉತ್ತಮ.

Daily Horoscope June 8

ವೃಷಭ ರಾಶಿ (Taurus):

ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.

Daily Horoscope: ಈ ರಾಶಿಯವರ ಕಠಿಣ ಪರಿಶ್ರಮಕ್ಕೆ ಸಿಗುವುದು ತಕ್ಕ ಫಲ, ಸಮಸ್ಯೆಗಳಿಗೆ ಸಿಗುವುದು ಪರಿಹಾರ
Daily Horoscope: ಈ ರಾಶಿಯವರ ಕಠಿಣ ಪರಿಶ್ರಮಕ್ಕೆ ಸಿಗುವುದು ತಕ್ಕ ಫಲ, ಸಮಸ್ಯೆಗಳಿಗೆ ಸಿಗುವುದು ಪರಿಹಾರ

ಮಿಥುನ ರಾಶಿ (Gemini):

ಎದುರಾಗುವ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸುವಿರಿ. ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಬಾಂಧವ್ಯ ಹೆಚ್ಚಾಗುತ್ತದೆ. ಪೂರ್ವಜರ ಆಸ್ತಿಯಿಂದ ಪ್ರಯೋಜನವಾಗುವುದು. ಆರೋಗ್ಯದಲ್ಲಿ ಏರುಪೇರಾಗುವುದು. ವಿಶ್ರಾಂತಿ ಬಹಳ ಮುಖ್ಯ.

ಕರ್ಕಾಟಕ ರಾಶಿ (cancer):

ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಕೈಯಲ್ಲಿ ಹಣವಿದೆ ಎಂದು ಸುಖಾ ಸುಮ್ಮನೆ ವ್ಯಯಿಸಲು ಹೋಗಬೇಡಿ.ಖರ್ಚಿಗೆ ಕಡಿವಾಣ ಹಾಕುವ ಅಗತ್ಯವಿದೆ. ಹೊಸ ಜನರ ಭೇಟಿ ಆರ್ಥಿಕ ಲಾಭವನ್ನು ನೀಡುವುದು.

ಸಿಂಹ ರಾಶಿ (Leo):

ಈ ದಿನ ನಿಮಗೆ ಅದೃಷ್ಟವನ್ನು ನೀಡುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮನಸ್ಸಿನ ಮಾತುಗಳನ್ನು ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಸಾಧ್ಯವಾಗುವುದು. ಈ ಮೂಲಕ ಮಾನಸಿಕ ಒತ್ತಡ ಕೊನೆಯಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ನೆರವು ಸಿಗುವುದು.

ಕನ್ಯಾ ರಾಶಿ (Virgo) :

ಹೊಸ ಅವಕಾಶಗಳು ಒಲಿದು ಬರುವುದು. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯುವುದು ಸಾಧ್ಯವಾಗುವುದು. ಖರ್ಚು ಮತ್ತು ಉಳಿತಾಯದತ್ತ ಗಮನ ಹರಿಸುವುದು ಒಳ್ಳೆಯದು. ಆರೋಗ್ಯದ ಕಡೆಗೆ ನಿಗಾ ಇರಲಿ.

ತುಲಾ ರಾಶಿ (Libra):

ನಿಮ್ಮ ಪ್ರತಿಭೆಗೆ ವಿಶೇಷ ಮನ್ನಣೆ ಸಿಗುವುದು. ವೃತ್ತಿ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ತಾಳ್ಮೆ ಇರಲಿ. ವೈಯಕ್ತಿಕ ಸಂಬಂಧಗಳಲ್ಲಿ ಸಂತೋಷ ಹೆಚ್ಚಾಗುತ್ತದೆ. ನೀವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಕುಟುಂಬ ಸದಸ್ಯರ ಬೆಂಬಲ ಸಿಗುವುದು.

ವೃಶ್ಚಿಕ ರಾಶಿ (Scorpio):

ಅಭಿವೃದ್ಧಿ ಮತ್ತು ಹೊಸ ಆರಂಭಗಳಿಗೆ ಅನುಕೂಲಕರವಾಗುವುದು. ಹಳೆಯ ಸ್ನೇಹಿತರ ಭೇಟಿ ಹೊಸ ಹುರುಪು ಮತ್ತು ನೆಮ್ಮದಿ ನೀಡುವುದು. ಆರೋಗ್ಯವು ಉತ್ತಮವಾಗಿರುತ್ತದೆ, ಆದರೂ ಕಾಲು ನೋವಿನ ಸಮಸ್ಯೆ ಕಾಡಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ನೆಮ್ಮದಿ ಹೆಚ್ಚಾಗುವುದು.

ಧನು ರಾಶಿ (Sagittarius):

ಕಚೇರಿಯಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗುವುದು. ಕೆಲಸದಲ್ಲಿ ಹೊಸ ಅವಕಾಶಗಳು ಸಿಗುವುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುವುದು. ಆತುರಪಟ್ಟು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವಿಶ್ರಾಂತಿ ಮೂಲಕ ಮಾನಸಿಕ ಶಾಂತಿಯತ್ತ ಗಮನ ಹರಿಸಿ.

ಮಕರ ರಾಶಿ (capricorn):

ಹಳೆಯ ಯೋಜನೆಗೆ ಮತ್ತೆ ಜೀವ ಬರಬಹುದು. ಇದರಿಂದ ಲಾಭವೂ ಆಗುವುದು. ತಾಳ್ಮೆಯಿಂದ ಮುಂದುವರಿದರೆ ದೊಡ್ಡಮಟ್ಟದ ಲಾಭವಾಗುವುದು. ಮಕ್ಕಳಿಂದ ಸಂತೋಷದ ಸುದ್ದಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ ರಾಶಿ (Aquarius):

ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಸ್ನೇಹಿತರಿಗಾಗಿ ಹಣ ಖರ್ಚು ಮಾಡುವ ಮುನ್ನ ಆಲೋಚಿಸಿ. ನಿಮಗೆ ಗೊತ್ತಿಲ್ಲದ ಮೂಲದಿಂದ ಹಣ ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಉತ್ತಮವಾಗಿರುವುದು.

ಮೀನ ರಾಶಿ (Pisces) :

ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಸಂಗಾತಿಯೊಂದಿಗೆ ಮನಸ್ತಾಪ ಮೂಡುವುದು. ಹೊಸ ಸ್ನೇಹಿತರು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವರು. ಆದಾಯ ಹೆಚ್ಚಾಗುವುದು, ಆದರೂ ಖರ್ಚುಗಳನ್ನು ನಿಯಂತ್ರಿಸಿ.

(ಬರಹ: ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+