Badra Raja Yoga 2025: ಭದ್ರ ರಾಜಯೋಗ- ಈ ರಾಶಿಯವರ ವೃತ್ತಿಜೀವನದಲ್ಲಿ ಸಾಕಷ್ಟು ಅಭಿವೃದ್ಧಿ
ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿಯಾಗುತ್ತವೆ. ಈ ಯೋಗಗಳು ದ್ವದಾಶಿ ರಾಶಿಗಳ ಮೇಲೆ ಪರಿಣಾಮ ಬೀಳಲಿವೆ. ಜಾತಕದಲ್ಲಿ ಈ ಗ್ರಹಗಳ ಸ್ಥಾನ ಉತ್ತಮವಾಗಿದ್ದರೆ ಉತ್ತಮ ಫಲ ಸಿಗಲಿದೆ. ಜಾತಕದಲ್ಲಿ ಗ್ರಹಗಳ ಸ್ಥಾನ ಅನುಕೂಲಕರವಾಗಿಲ್ಲದೇ ಇದ್ದರೆ ಅಂತವರ ಜೀವನ ಸಮಸ್ಯೆಗಳಿಂದ ಕೂಡಿರುತ್ತದೆ.
ಅಂದಹಾಗೆ ಇದೇ ಜೂನ್ 06, 2025 ರಂದು ಬುಧ ಗ್ರಹದಿಂದ ಭದ್ರ ರಾಜಯೋಗ ರೂಪಗೊಳ್ಳಲಿದೆ. ಒಂಬತ್ತು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾದ ಬುಧನು ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವಾಗಿದೆ. ಅದು ಮಿಥುನ ಮತ್ತು ಕನ್ಯಾರಾಶಿಯ ಅಧಿಪತಿ.

ಬುಧನು ಪ್ರಸ್ತುತ ವೃಷಭ ರಾಶಿಯಲ್ಲಿ ಪ್ರಯಾಣಿಸುತ್ತಿದೆ. ಈ ಸಂದರ್ಭದಲ್ಲಿ ಜೂನ್ 06 ರಂದು ಬುಧನು ತನ್ನದೇ ಆದ ರಾಶಿಯಾದ ಮಿಥುನವನ್ನು ಪ್ರವೇಶಿಸುತ್ತಾನೆ. ಬುಧನು ಮಿಥುನ ರಾಶಿಯನ್ನು ಪ್ರವೇಶಿಸುವುದರಿಂದ ಪ್ರಬಲವಾದ ಭದ್ರ ರಾಜಯೋಗ ಸೃಷ್ಟಿಯಾಗುತ್ತದೆ. ಈ ರಾಜಯೋಗ ಮಹಾಪುರುಷ ರಾಜಯೋಗಗಳಲ್ಲಿ ಒಂದಾಗಿದೆ. ಈ ರಾಜ್ಯಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.
ಇದರಲ್ಲಿ ಕೆಲವು ರಾಶಿಗಳ ಅದೃಷ್ಟ ಹೊಳೆಯುತ್ತದೆ ಮತ್ತು ಬುಧನ ಕೃಪೆಯಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯ ಸಾಧ್ಯತೆಯಿದೆ. ಹಾಗಾದರೆ ಈಗ ಬುಧನಿಂದ ರೂಪಗೊಂಡ ಪ್ರಬಲ ಭದ್ರ ರಾಜಯೋಗದಿಂದಾಗಿ ಯಾವ ರಾಶಿಗಳು ಅದೃಷ್ಟಶಾಲಿಯಾಗಲಿವೆ ಎಂದು ನೋಡೋಣ.
ಸಿಂಹ ರಾಶಿ
ಭದ್ರ ರಾಜಯೋಗ ಸಿಂಹ ರಾಶಿಯವರಿಗೆ ಅನುಕೂಲಕರವಾಗಿದೆ. ಬುಧ ಗ್ರಹ ಸಿಂಹ ರಾಶಿಯ 11ನೇ ಮನೆಗೆ ಸ್ಥಳಾಂತರಗೊಂಡು ಭದ್ರ ರಾಜ ಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಸಿಂಹ ರಾಶಿಯವರ ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ನಿಮಗೆ ಕುಟುಂಬ ಮತ್ತು ಸಂಗಾತಿಯಿಂದ ಉತ್ತಮ ಬೆಂಬಲ ಸಿಗುತ್ತದೆ. ನೀವು ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳ ಆಸೆಗಳು ಈಡೇರುತ್ತವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಭದ್ರ ರಾಜಯೋಗ ಅದ್ಭುತವಾಗಿದೆ. ಬುಧ ಗ್ರಹ ಕನ್ಯಾ ರಾಶಿಯ 10ನೇ ಮನೆಗೆ ಸ್ಥಳಾಂತರಗೊಂಡು ಭದ್ರ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಈ ರಾಶಿಯವರು ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯುತ್ತಾರೆ. ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕಚೇರಿಯಲ್ಲಿ ನೀಡಿದ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಉದ್ಯಮಿಗಳಿಗೆ ಉತ್ತಮ ಆರ್ಥಿಕ ಲಾಭ ಸಿಗುತ್ತದೆ. ಕೆಲವರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳನ್ನು ಪಡೆಯುತ್ತಾರೆ.
ಮೀನ ರಾಶಿ
ಭದ್ರ ರಾಜಯೋಗ ಮೀನ ರಾಶಿಯವರಿಗೆ ಅನುಕೂಲಕರವಾಗಿದೆ. ಬುಧ ಗ್ರಹ ಮೀನ ರಾಶಿಯ 4ನೇ ಮನೆಗೆ ಸ್ಥಳಾಂತರಗೊಂಡು ಭದ್ರ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಈ ರಾಶಿಚಕ್ರದವರಿಗೆ ಉತ್ತಮ ಆರ್ಥಿಕ ಲಾಭಗಳು ದೊರೆಯುತ್ತವೆ. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶಗಳು ಸಿಗುತ್ತವೆ. ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣವನ್ನು ನೀವು ಪಡೆಯುವಿರಿ. ಹೊಸ ಆದಾಯದ ಮೂಲಗಳ ಸಾಧ್ಯತೆ ಇದೆ. ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು ದೊರೆಯಲಿದೆ. ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಉದ್ಯಮಿಗಳು ಉತ್ತಮ ಪ್ರಗತಿಯನ್ನು ಕಾಣುತ್ತಾರೆ.
(ಗಮನಿಸಿ: ಮೇಲಿನ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications