ಭಾರತದ ಕೃಷಿ ವಲಯಕ್ಕೆ ಕಾದಿದೆಯಾ ಕಂಟಕ?: ಬಾಬಾ ವಂಗಾ ಭಾರತದ ಬಗ್ಗೆ ಹೇಳಿದ್ದ ಭವಿಷ್ಯ ಏನು?

ತನ್ನ ಭವಿಷ್ಯವಾಣಿಯಿಂದಲೇ ಜಗತ್ತಿನಾದ್ಯಂತ ಹೆಸರು ಗಳಿಸಿರುವ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅಲಿಯಾಸ್ ಬಾಬಾ ವಂಗಾ ಭಾರತದ ಬಗ್ಗೆ ಹೇಳಿದ್ದ ಭವಿಷ್ಯ ಈಗ ಆತಂಕಕ್ಕೆ ಕಾರಣವಾಗಿದೆ.

ಬಾಬಾವಂಗಾ ಮೃತಪಟ್ಟು 26 ವರ್ಷಗಳು ಕಳೆದಿವೆ. ಆದರೂ ಆಕೆ ಇಡೀ ಜಗತ್ತಿನ ಬೆಳವಣಿಗೆಗಳ ಬಗ್ಗೆ ಬಾಬಾ ವಂಗಾ ಈಗಾಗಲೇ ಭವಿಷ್ಯ ಹೇಳಿ ಹೋಗಿದ್ದಾರೆ. 9/11 ಭಯೋತ್ಪಾದಕ ದಾಳಿ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ಘಟನೆಗಳ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು ಎಂದು ಹೇಳಲಾಗುತ್ತದೆ.

ಭಾರತದ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿ ಜನರನ್ನು ಆತಂಕಕ್ಕೆ ತಳ್ಳಿದೆ. ಆಕೆಯ ಭವಿಷ್ಯವಾಣಿಯ ಪ್ರಕಾರ, ಭಾರತವು 2022 ರಲ್ಲಿ ಕ್ಷಾಮದಂತ ಪರಿಸ್ಥಿತಿಗೆ ಸಾಕ್ಷಿಯಾಗಲಿದೆ. ಮಿಡತೆಗಳ ಹಿಂಡು ಬೆಳೆಗಳು ಮತ್ತು ಕೃಷಿ ಭೂಮಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಭಾರತದಲ್ಲಿ ಈಗಾಗಲೇ ಹಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದ್ದು, ಅಪಾರ ಕ್ಷಾಮ ಉಂಟಾಗುತ್ತದೆ.

 ಭಾರತದ ಮೇಲೆ ಮಿಡತೆಗಳ ದಾಳಿ

ಭಾರತದ ಮೇಲೆ ಮಿಡತೆಗಳ ದಾಳಿ

ಈ ವರ್ಷ ಜಗತ್ತಿನಲ್ಲಿ ತಾಪಮಾನದಲ್ಲಿ ಇಳಿಕೆಯಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದರು, ಇದರಿಂದಾಗಿ ಮಿಡತೆಗಳ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಮೊದಲು, 2020ರಲ್ಲಿ ಮಿಡತೆಗಳ ದೊಡ್ಡ ಹಿಂಡುಗಳು ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೃಷಿ ಬೆಳೆಯನ್ನು ನಾಶ ಮಾಡಿದ್ದವು.

ಭಾರತದಲ್ಲಿ, ತಾಪಮಾನವು 50 ಡಿಗ್ರಿಗಳನ್ನು ತಲುಪುತ್ತದೆ ಮತ್ತು ಮಿಡತೆಗಳು ಬೆಳೆಗಳನ್ನು ಹಾನಿಗೊಳಿಸುತ್ತವೆ ಎಂದು ಹೇಳಲಾಗುತ್ತದೆ. 2022ರ ಬೇಸಿಗೆಯಲ್ಲಿ ಭಾರತದ ರಾಜಸ್ಥಾನದ ಅಲ್ವಾರ್‍‌ನಲ್ಲಿ 50.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

 ಭಾರತದಲ್ಲಿ ಆಹಾರ ಕ್ಷಾಮ ಉಂಟಾಗುತ್ತಾ?

ಭಾರತದಲ್ಲಿ ಆಹಾರ ಕ್ಷಾಮ ಉಂಟಾಗುತ್ತಾ?

ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಭಾರತದ ಗೋಧಿಗೆ ಈಗಾಗಲೇ ಜಾಗತಿಕವಾಗಿ ಬೇಡಿಕೆ ಸೃಷ್ಠಿಯಾಗಿದೆ. ಬೇಸಿಗೆಯಲ್ಲಿ ಶಾಖದ ಅಲೆಗಳ ಕಾರಣದಿಂದಾಗಿ ಈ ಬಾರಿ ಗೋಧಿ ಇಳುವರಿಯಲ್ಲಿ ಕುಸಿತ ಕಂಡುಬಂದಿದೆ. ಭಾರತ ಈಗಾಗಲೇ ಗೋಧಿಯನ್ನು ರಫ್ತು ಮಾಡಲು ನಿರ್ಬಂಧ ವಿಧಿಸಿದೆ.


ಗೋಧಿ ಮಾತ್ರವಲ್ಲದೆ ಗೋಧಿ ಹಿಟ್ಟು, ಹೋಲ್‌ಮೀಲ್ ಅಟ್ಟಾ, ಮೈದಾ, ರವೆಯನ್ನು ರಫ್ತು ಮಾಡುವುದನ್ನು ನಿರ್ಬಂಧಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಗೋಧಿ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಏನದಾರೂ ಮಿಡತೆಗಳು ದಾಳಿ ಮಾಡಿದರೆ ನಿಜಕ್ಕೂ ಭಾರತದ ಆಹಾರಾ ಭದ್ರತೆಗೆ ತೀವ್ರ ಹೊಡೆತ ಬೀಳಲಿದೆ.

 2100ರ ವೇಳೆಗೆ ರಾತ್ರಿ ಎನ್ನುವುದೇ ಇರುವುದಿಲ್ಲ!

2100ರ ವೇಳೆಗೆ ರಾತ್ರಿ ಎನ್ನುವುದೇ ಇರುವುದಿಲ್ಲ!

2023 ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ ಮತ್ತು 2028 ರಲ್ಲಿ ಗಗನಯಾತ್ರಿಗಳು ಶುಕ್ರ ಗ್ರಹಕ್ಕೆ ಪ್ರಯಾಣಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 2046 ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

2100ರ ವೇಳೆಗೆ ರಾತ್ರಿ ಎನ್ನುವುದೇ ಕಣ್ಮರೆಯಾಗುತ್ತದೆ, ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಅವರು ಹೇಳಿದ್ದಾರೆ. 5079 ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಅವಳು ಭವಿಷ್ಯ ನುಡಿದಳು.

 ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಬಾಬಾ ವಂಗಾ

ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಬಾಬಾ ವಂಗಾ

ಬಾಬಾ ವಂಗಾ ಉತ್ತರ ಮೆಸಿಡೋನಿಯಾದ ಸ್ಟ್ರುಮಿಕಾದಲ್ಲಿ 1911 ರಲ್ಲಿ ಜನಿಸಿದರು. ಎಲ್ಲರಂತೆಯೇ ಸಹಜವಾಗಿದ್ದ ಬಾಬಾ ವಂಗಾ ತನ್ನ 12ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಸಮಯದಲ್ಲಿ ತನ್ನ ದೃಷ್ಟಿ ಕಳೆದುಕೊಂಡರು. ಆದರೆ ಯಾವ ಕಾರಣಕ್ಕಾಗಿ ದೃಷ್ಟಿ ಕಳೆದುಕೊಂಡರು ಎನ್ನುವುದು ಇಂದಿಗೂ ನಿಗೂಢವಾಗಿ ಉಳಿದಿದೆ.

ಇದರ ಬಗ್ಗೆ ಬಾಬಾ ವಂಗಾ ಅವರೇ ಹೇಳಿರುವಂತೆ, "ಸುಂಟರಗಾಳಿ ಅವರನ್ನು ನೆಲದಿಂದ ಎತ್ತಿಕೊಂಡು ಹೋಗಿತ್ತು" ನಂತರ ಅವರು ಪತ್ತೆಯಾದರು, ಕಣ್ಣುಗಳು ಮರಳು ಮತ್ತು ಧೂಳಿನಿಂದ ಮುಚ್ಚಲ್ಪಟ್ಟಿದ್ದವು. ವಂಗಾ ದೃಷ್ಟಿಯನ್ನು ಕಳೆದುಕೊಂಡರು, ಭವಿಷ್ಯವನ್ನು ನೋಡುವ ಶಕ್ತಿಯನ್ನು ತನಗೆ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+